ಬಾಗಲಕೋಟೆ: ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯ ತ್ರಿವರ್ಣಧ್ವಜ ಹಾರಿಸಿದ ಶತಾಯುಷಿ ಅಜ್ಜಿ

ದೇಶಾದ್ಯಂತ 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ತುಂಬೆಲ್ಲ ಸಂಭ್ರಮ ಮನೆಮಾಡಿದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿದೆ. ಹೀಗೆಯೇ ಶಸ್ತ್ರಚಿಕಿತ್ಸೆಗೆ ಬಂದಿದ್ದ ಶತಾಯುಷಿ ಮಹಿಳೆಯೊಬ್ಬರು ಗುಣಮುಖರಾಗಿ ಆಸ್ಪತ್ರೆಯಲ್ಲಿ ಧ್ವಜಾರೋಹಣ ನೆರೆವೇರಿಸಿದ ಅಪರೂಪದ ಘಟನೆ ನಗರದ ವಾಸನದ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ. ಕಾಶಮ್ಮ ಹಿರೇಮಠ (103) ಧ್ವಜಾರೋಹಣ ನೆರವೇರಿಸಿದವರು.

ಬಾಗಲಕೋಟೆ: ಶಸ್ತ್ರಚಿಕಿತ್ಸೆಯ ನಂತರ ಆಸ್ಪತ್ರೆಯ ತ್ರಿವರ್ಣಧ್ವಜ ಹಾರಿಸಿದ ಶತಾಯುಷಿ ಅಜ್ಜಿ
ಧ್ವಜಾರೋಹಣ ನೆರವೇರಿಸಿದ ಶತಾಯುಶ ಅಜ್ಜಿ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ವಿವೇಕ ಬಿರಾದಾರ

Updated on: Aug 15, 2023 | 2:58 PM

ಬಾಗಲಕೋಟೆ: ಶಸ್ತ್ರಚಿಕಿತ್ಸೆಗೆ ಬಂದಿದ್ದ ಶತಾಯುಷಿ ಅಜ್ಜಿಯೊಬ್ಬರು ಗುಣಮುಖರಾಗಿ ಆಸ್ಪತ್ರೆಯಲ್ಲಿ (Hospital) ಧ್ವಜಾರೋಹಣ ನೆರೆವೇರಿಸಿದ ಅಪರೂಪದ ಘಟನೆ ನಗರದ ವಾಸನದ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ. ಕಾಶಮ್ಮ ಹಿರೇಮಠ (103) ಧ್ವಜಾರೋಹಣ ನೆರವೇರಿಸಿದವರು. ಬಾಗಲಕೋಟೆ (Bagalkot) ತಾಲೂಕಿನ ತಳಗಿಹಾಳ ಗ್ರಾಮದ ಇವರು ಕೆಲವು ದಿನಗಳ ಹಿಂದೆ ಆಯತಪ್ಪಿ ಬಿದ್ದಿದ್ದರು. ಇದರಿಂದ ಎಡ ಭಾಗದ ಚಪ್ಪೆ ಮುರಿದಿತ್ತು. ಆಸ್ಪತ್ರೆಗೆ ಬಂದಾಗ ಅಜ್ಜಿಯ ಹೆಮೊಗ್ಲೋಬಿನ್ ಕಡಿಮೆ ಇದ್ದದ್ದರಿಂದ ಎರಡು ಪಾಯಿಂಟ್ ರಕ್ತ ನೀಡಿಲಾಯಿತು. ನಂತರ ಆ.10ರಂದು ಆಸ್ಪತ್ರೆಯ ಎಲುಬು ಕೀಲು ತಜ್ಞ ಡಾ.ಗಿರೀಶ ವಾಸನದ ಶಸ್ತ್ರಚಿಕಿತ್ಸೆ ಮಾಡಿದರು. ಸದ್ಯ ಅಜ್ಜಿ ಚೇತರಿಸಿಕೊಂಡಿದ್ದು ವಾಲ್ಕೆರ್ಸ್ ಸಹಾಯದಿಂದ ಆಸ್ಪತ್ರೆಯಲ್ಲಿ ನಡೆದಾಡುತ್ತಿದ್ದಾರೆ.

103 ವರ್ಷದಲ್ಲೂ ಅಷ್ಟೆ ಆತ್ಮವಿಶ್ವಾಸದಿಂದ ಶಸ್ತ್ರಚಿಕಿತ್ಸೆಗೆ ಸಹಕರಿಸಿದರು. ಇಳಿ ವಯಸ್ಸಿನಲ್ಲೂ ಸ್ವಾವಲಂಬಿಯಾಗಿ ನಡೆದಾಡಬೇಕು ಎಂಬ ಛಲವಿರುವ ಶತಾಯುಷಿಯನ್ನು ಕಂಡು ಹೆಮ್ಮೆ ಎನಿಸಿತು. ಆದ್ದರಿಂದ ಅವರಿಂದಲೇ ನಮ್ಮ ಆಸ್ಪತ್ರೆಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ನಮ್ಮ ಆಸ್ಪತ್ರೆಗೆ ರೋಗಿಯಾಗಿ ಬಂದು ಶಸ್ತ್ರಚಿಕಿತ್ಸೆ ಪಡೆದ ನಂತರ ಅಜ್ಜಿ ಮುಖ್ಯ ಅತಿಥಿಯಾಗಿ ಧ್ವಜಾರೋಹಣ ನೆರವೇರಿಸಿ ಮರಳುತ್ತಿದ್ದಾರೆ. ಈ ದಾರಿ ನಮ್ಮ ಆಸತ್ರೆಯ ಸ್ವಾತಂತ್ರೋತ್ಸವಕ್ಕೆ ಹೊಸ ಮೆರಗು ತಂದಿದ್ದಾರೆ ಎಂದು ಡಾ.ವಾಸನದ ತಿಳಿಸಿದ್ದಾರೆ.

ಎಲುಬು ಕೀಲು ತಜ್ಞ ಡಾ.ಹರ್ಷಾ ಕ್ಯಾಲಕೊಂಡ, ಅರಿವಳಿಕೆ ತಜ್ಞೆ ಡಾ.ಶಿಲಾ ಮಾಸೂರ, ಹೃದಯರೋಗ ತಜ್ಞ ಡಾ.ಎಂ.ಜಿ.ಹೆರಕಲ್, ಡಾ.ರವೀಂದ್ರ ಕುಲಕರ್ಣಿ, ಶುಶೂಷಕರಾದ ಮೋಹನ್ ಜೋಶಿ, ಪರಶುರಾಮ ದೊಡ್ಡಮನಿ, ರೇಣುಕಾ ಕರಬಾನಿ, ಸತೀಶ ಸಿಂಗದ, ಮಂಜುನಾಥ ಹಾಗೂ ಇತರರು ಶಸ್ತ್ರಚಿಕಿತ್ಸೆಗೆ ಸಹಕರಿಸಿದ್ದಾರೆ.

ಇದನ್ನೂ ಓದಿ: Independence Day 2023: ಭಾರತದ ಸ್ವಾತಂತ್ರ್ಯ ದಿನಾಚರಣೆ ಇತಿಹಾಸ, ಮಹತ್ವ ಮತ್ತು ಈ ಬಾರಿಯ ಥೀಮ್

ಚಪ್ಪೆ ಮುರಿತದ ಸಮಸ್ಯೆಯನ್ನು ವೈದ್ಯಕೀಯ ಭಾಷೆಯಲ್ಲಿ ಫ್ಯಾಕ್ಟರ್ ನೆಕ್ ಆಫ್ ಥೀಮರ್‌ ಎನ್ನುತ್ತಾರೆ. ಅಜ್ಜಿಗೆ 103 ವರ್ಷಗಳಾಗಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸುವುದು ಸವಾಲಿನ ಕೆಲಸವಾಗಿತ್ತು, ಬಿದ್ದ ನಂತರ ಮನೆಯಲ್ಲಿ ಒಂದೆರಡು ದಿನ ಅವರು ಓಡಾಡದೆ ಒಂದೇ ಕಡೆ ಮಲಗಿದ್ದರಿಂದ ಗಾಯ (ಬೆಡ್ ಸೋರ್) ಕೂಡ ಆಗಿದ್ದವು. ಎಲ್ಲ ಕೆಲಸಕ್ಕೂ ಇನ್ನೊಬ್ಬರನ್ನು ಅವಲಂಬಿಸುವಂತಾಯಿತು ಎಂದು ಆಜ್ಜಿ ಕುಗ್ಗಿದ್ದರು. ನಾನು ಮತ್ತೆ ಮೊದಲಿನಂತೆ ನಡೆದಾಡುಬೇಕು ಎಂದು ಆತ್ಮವಿಶ್ವಾಸ ತೋರಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಸದ್ಯ ಗಾಯವೂ ವಾಸಿಯಾಗಿ ಗುಣಮುಖರಾಗಿದ್ದಾರೆ. 60 ವರ್ಷ ಮೇಲ್ಪಟ್ಟವರು ಆಯತಪ್ಪಿ ಬಿದ್ದು ಮೂಳೆ ಮುರಿತಕ್ಕೆ ಒಳಗಾಗುವುದು ಸಾಮಾನ್ಯ, ಆದರೆ ಗಾಯಾಳು ಅಥವಾ ಅವರ ಸಂಬಂಧಿಕರು ಧೈರ್ಯ ಕಳೆದುಕೊಳ್ಳದೆ ಆಸ್ಪತ್ರೆಗೆ ಬಂದರೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯ ಎಂದು ಎಲುಬು ಕೀಲು ತಜ್ಞ ಡಾ.ಗಿರೀಶ ವಾಸನದ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ