ಬೀರೇಶ್ವರ ದೇಗುಲದ ಬಳಿ‌ ಸಿಕ್ಕಿದ ಮುದ್ದಾದ ಹೆಣ್ಣು‌ ಮಗು ಅಮ್ಮಾ ಎಲ್ಲಿರುವೆ ಅಂತಿದೆ? ಆದರೆ ಹೆತ್ತೊಡಲಿಗೆ ಅದು ಕೇಳಿಸುತಿಲ್ಲ!

ಬಾಗಲಕೋಟೆ ದತ್ತು ಕೇಂದ್ರದ ಹೊರಗೆ ತೊಟ್ಟಿಲು ಇದ್ದು, ಅಲ್ಲಿ‌ ಮಗುವನ್ನು ಇಟ್ಟು ಬೆಲ್ ಬಾರಿಸಿ‌ ಹೋದರೆ ದತ್ತು ಕೇಂದ್ರದ ಸಿಬ್ಬಂದಿಯೇ ಬಂದು ಮಗುವನ್ನು ಸಾಕಿ ಸಲುಹುತ್ತಾರೆ. ಇದೀಗ ಸಿಕ್ಕ ಮಗುವನ್ನು ಸಂಬಂಧಪಟ್ಟವರು ಪಡೆಯಲು 60 ದಿನಗಳ‌ ಕಾಲ ಸಮಯವಿದ್ದು ಸಂಪರ್ಕಿಸಬಹುದು ಅಂತಾನೂ ದತ್ತು ಕೇಂದ್ರ ಸಿಬ್ಬಂದಿ‌ ಕರೆ ನೀಡಿದರು.

ಬೀರೇಶ್ವರ ದೇಗುಲದ ಬಳಿ‌ ಸಿಕ್ಕಿದ ಮುದ್ದಾದ ಹೆಣ್ಣು‌ ಮಗು ಅಮ್ಮಾ ಎಲ್ಲಿರುವೆ ಅಂತಿದೆ? ಆದರೆ ಹೆತ್ತೊಡಲಿಗೆ ಅದು ಕೇಳಿಸುತಿಲ್ಲ!
ಬೀರೇಶ್ವರ ದೇಗುಲದ ಬಳಿ‌ ಸಿಕ್ಕಿದ ಮುದ್ದಾದ ಹೆಣ್ಣು‌ ಮಗು ಅಮ್ಮಾ ಎಲ್ಲಿರುವೆ ಅಂತಿದೆ?
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on: Nov 09, 2023 | 12:40 PM

ಎಷ್ಟೊ ದಂಪತಿಗಳು ಮಕ್ಕಳಿಲ್ಲದೆ ಹತ್ತಾರು ಆಸ್ಪತ್ರೆಗಳಿಗೆ ಅಲೆಯುತ್ತಾರೆ. ಹಲವಾರು ದೇವರಿಗೆ ಹರಕೆ ಹೊತ್ತುಕೊಳ್ಳುತ್ತಾರೆ. ಮಕ್ಕಳಿಲ್ಲ ಅಂತ ಕೊರಗಿ ಕಣ್ಣೀರು ಹಾಕ್ತಾರೆ. ಆದರೆ ಹೆತ್ತ ತಾಯಿಯೇ ಹಸುಗೂಸನ್ನು ಬಿಟ್ಟು ನಾಪತ್ತೆಯಾಗಿದ್ದಾಳೆ.ಮುದ್ದಾದ ಹೆಣ್ಣು‌ ಮಗು (neonatal) ಅಮ್ಮಾ ಎಲ್ಲಿರುವೆ ಅಂತಿದೆ.. ಮುದ್ದಾದ ಹಸುಗೂಸು ಅದು. ಸುಕೋಮಲ ಸುಂದರ ಮುಖ.ಮಗುವನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿರುವ ಮಹಿಳೆ. ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆಯ ಸರ್ಚ್ ದತ್ತು ಕೇಂದ್ರದಲ್ಲಿ (Hunagunda, Bagalkot).

ಅಂದ ಹಾಗೆ ಇಲ್ಲಿ ಇಷ್ಟೊಂದು ಪ್ರೀತಿಯಿಂದ ಹೆಣ್ಣು ಮಗುವನ್ನು ಆರೈಕೆ‌ ಮಾಡುತ್ತಿರುವವರು ಇವರ ತಾಯಿಯಲ್ಲ.ಆದರೆ ತಮ್ಮ ಮಕ್ಕಳಂತೆ ಇವರು ಮಗುವನ್ನು ಸಲುಹುತ್ತಿದ್ದಾರೆ‌.ಹೌದು ಈ ಮಗುವನ್ನು ನೋಡಿದರೆ ಯಾರಿಗೆ ತಾನೆ ಪ್ರೀತಿ ಬರೋದಿಲ್ಲ ಹೇಳಿ.ಇಂತಹ ಸುಂದರ ಮಗುವನ್ನು ಹೆತ್ತಮ್ಮ ಬಿಟ್ಟು ಹೋಗಿದ್ದಾಳೆ.ಹೆತ್ತ ತಾಯಿಯ ಪ್ರೀತಿ ಪಡೆಯದ ಮಗು ಅಮ್ಮಾ ಎಲ್ಲಿರುವೆ.ನಾನೇನು ತಪ್ಪು ಮಾಡಿದ್ದೆ,ನನ್ನೇಕೆ ಈ ರೀತಿ ಅನಾಥ ಮಾಡಿದೆ ಅಮ್ಮಾ ಎಲ್ಲಿರುವೆ ಎಂದು ಕೇಳುತ್ತಿದೆ.

ಹೌದು ಈ ಮಗು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಸುಳಿಬಾವಿ ಗ್ರಾಮದ ಬೀರೇಶ್ವರ ದೇಗುಲದ ಬಳಿ‌ (Bireshwar temple) ಸಿಕ್ಕಿದೆ.ಮಗುವಿನ ಕಿರುಚಾಟ ಕೇಳಿದ ಜನರು ಸ್ಥಳಕ್ಕೆ ಹೋಗಿ ಮಗುವನ್ನು ರಕ್ಷಣೆ ಮಾಡಿದ್ದಾರೆ.ನಂತರ ಹುನಗುಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮಗುವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಸರ್ಚ್ ದತ್ತು ಕೇಂದ್ರದಲ್ಲಿ ಬಿಟ್ಟಿದ್ದಾರೆ.ದತ್ತು ಕೇಂದ್ರ ಸಿಬ್ಬಂದಿ ತಮ್ಮ‌ಸ್ವಂತ ಮಗುವಿನಂತೆ ಹೆಣ್ಣು ಮಗುವನ್ನು ಆರೈಕೆ ಮಾಡುತ್ತಿದ್ದಾರೆ.ಯಾರೂ ಕೂಡ ಮಕ್ಕಳನ್ನು ಈ ರೀತಿ ಬಿಡಬೇಡಿ.ನಿಮಗೆ ಸಾಕಲು ಆಗದಿದ್ದರೆ ನಮಗೆ ತಂದು ಕೊಡಿ.ಸರಕಾರಕ್ಕೆ ಒಪ್ಪಿಸಿ ಆದರೆ ಪ್ರಾಣಿಗಳ ಪಾಲು ಮಾಡಬೇಡಿ ಅಂತ ಮನವಿ ಮಾಡುತ್ತಿದ್ದಾರೆ.

ನವಜಾತ ಹೆಣ್ಣು ಶಿಶುಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.ಮಗು ಸಂಪೂರ್ಣ ಆರೋಗ್ಯವಾಗಿದೆ.ದತ್ತು ಕೇಂದ್ರದಲ್ಲಿ ಸಿಬ್ಬಂದಿಯ ಮಮತೆಯಲ್ಲಿ ಬೆಳೆಯುತ್ತಿದೆ.ಆದರೆ ಎಷ್ಟೇ ಪ್ರೀತಿ ತೋರಿದರೂ ನೈಜ ತಾಯಿ ಪ್ರೀತಿ ಸಿಗೋಕೆ ಸಾಧ್ಯನಾ?ಎದೆ ಹಾಲು ಸಿಗೋಕೆ ಸಾಧ್ಯನಾ ಖಂಡಿತ ಇಲ್ಲ.ಮಹಿಳಾ ಮಕ್ಕಳ‌ ಕಲ್ಯಾಣ ಇಲಾಖೆ ಮೂಲಕ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮೇರೆಗೆ ಸರ್ಚ್ ದತ್ತು ಕೇಂದ್ರದಲ್ಲಿ ಮಗು ಬೆಳೆಯುತ್ತಿದೆ.

ಬಾಗಲಕೋಟೆಯ ಈ ದತ್ತು ಕೇಂದ್ರದಲ್ಲಿ ೨೦೧೦ ರಿಂದ ಈ ವರೆಗೆ ೧೧೮ ಮಕ್ಕಳು ಬಂದಿದ್ದು ಅದರಲ್ಲಿ ೧೦೮ ಮಕ್ಕಳನ್ನು ದತ್ತು ಕೊಡಲಾಗಿದೆ. ಐದು ಮಕ್ಕಳು ಅಮೇರಿಕ,ಯುರೋಪ್ ಪ್ರಾನ್ಸ್ ಗೆ ದತ್ತು ಹೋಗಿವೆ.ಇಲ್ಲಿ ಮಕ್ಕಳು ಹೆತ್ತು ನೇರವಾಗಿ ತಂದು ಕೊಡಲು ಮುಜುಗರ ಆದರೆ ಅದಕ್ಕೂ ಒಂದು ಸೌಲಭ್ಯ ಇದೆ.ದತ್ತು ಕೇಂದ್ರದ ಹೊರಗೆ ತೊಟ್ಟಿಲು ಇದ್ದು,ಅಲ್ಲಿ‌ ಮಗುವನ್ನು ಇಟ್ಟು ಬೆಲ್ ಬಾರಿಸಿ‌ ಹೋದರೆ ದತ್ತು ಕೇಂದ್ರದ ಸಿಬ್ಬಂದಿಯೇ ಬಂದು ಮಗುವನ್ನು ಸಾಕಿ ಸಲುಹುತ್ತಾರೆ.ಇದೀಗ ಸಿಕ್ಕ ಮಗುವನ್ನು ಸಂಬಂಧಪಟ್ಟವರು ಪಡೆಯಲು ೬೦ ದಿನಗಳ‌ಕಾಲ ಸಮಯವಿದ್ದು ಸಂಪರ್ಕಿಸಬಹುದು ಅಂತಾನೂ ದತ್ತು ಕೇಂದ್ರ ಸಿಬ್ಬಂದಿ‌ ಕರೆ ನೀಡಿದರು..

ಮಗು ದೇವರು ಇದ್ದಂತೆ ಕರುಳಿನ ಕುಡಿ. ಅಂತಹ ಮಗುವನ್ನು ಬಿಟ್ಟು‌ ಹೋಗುವ ತಾಯಂದಿರದ್ದು ಕಲ್ಲು ಹೃದಯ.ತಮ್ಮ ತಪ್ಪಿನಿಂದ ಹೆತ್ತ‌ ಮಗುವನ್ನು ಬೀದಿ ಪಾಲು ಮಾಡುತ್ತಿರೋದು ತಾಯಿ ಹೃದಯಕ್ಕೆ ಅವಮಾನ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ