ಅಕ್ಷರದಾಸೋಹ ಅಕ್ಕಿ ಕಳ್ಳತನ ಆರೋಪಿ ಶಿಕ್ಷಕ ಶಾಲೆಗೆ ವಾಪಸ್ ಬರೋದು ಬೇಡ ಎನ್ನುತ್ತಿರುವ ಪೋಷಕರು, ಬಾಗಲಕೋಟೆ ವಿದ್ಯಾಧಿಕಾರಿಗಳ ತೀರ್ಮಾನವೇನು?

ಒಂದು ಕಡೆ ಪೋಷಕರು ಇಂತಹ ಶಿಕ್ಷಕ ನಮಗೆ ಬೇಡ ಅಂತಾ ಪ್ರತಿಭಟನೆ ಹಾದಿ ಹಿಡಿದಿದ್ದಾರೆ.ಇನ್ನೊಂದು ಕಡೆ ಮುಖ್ಯ ಶಿಕ್ಷಕ ತನ್ನದೇನ್ನೂ ತಪ್ಪಿರಲಿಲ್ಲ, ಅದನ್ನೆಲ್ಲ ಗಮನಿಸಿಯೇ ಕೆಎಟಿ ಅಮಾನತು ರದ್ದು ಮಾಡಿದೆ, ಹಾಗಾಗಿ ನಾನು ಕರ್ತವ್ಯಕ್ಕೆ ಹಾಜರಾಗಿದ್ದೇನೆ ಅಂತಿದ್ದಾರೆ. ಮೇಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಇದನ್ನು ಸರಿಪಡಿಸಬೇಕಾಗಿದೆ.

ಅಕ್ಷರದಾಸೋಹ ಅಕ್ಕಿ ಕಳ್ಳತನ ಆರೋಪಿ ಶಿಕ್ಷಕ ಶಾಲೆಗೆ ವಾಪಸ್ ಬರೋದು ಬೇಡ ಎನ್ನುತ್ತಿರುವ ಪೋಷಕರು,   ಬಾಗಲಕೋಟೆ ವಿದ್ಯಾಧಿಕಾರಿಗಳ ತೀರ್ಮಾನವೇನು?
ಅಕ್ಷರದಾಸೋಹ ಅಕ್ಕಿ ಕಳ್ಳಸಾಗಾಣಿಕೆ ಆರೋಪಿ ಶಿಕ್ಷಕ ಬಗ್ಗೆ ಬಾಗಲಕೋಟೆ ವಿದ್ಯಾಧಿಕಾರಿಗಳ ತೀರ್ಮಾನವೇನು?
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಸಾಧು ಶ್ರೀನಾಥ್​

Updated on: Nov 28, 2023 | 11:20 AM

ಸರಕಾರಿ ಶಾಲೆಯಲ್ಲಿ ಅಕ್ಷರ ದಾಸೋಹದ (Akshardasoh) ಮೂಲಕ ಸರಕಾರ ವಿದ್ಯಾರ್ಥಿಗಳ ಹಸಿವನ್ನು ನೀಗಿಸುವ ಕಾರ್ಯ ಮಾಡುತ್ತಿದೆ.ಆದರೆ ಅಂತಹ ಅಕ್ಷರದಾಸೋಹ ಅಕ್ಕಿ ಕಳ್ಳ ಸಾಗಾಣಿಕೆ ಆರೋಪದ ಮೇರೆಗೆ ಆ ಮುಖ್ಯ ಶಿಕ್ಷಕ ಅಮಾನತ್ತಾಗಿದ್ದ.ಇದೀಗ ಕೆಎಟಿ ಮೂಲಕ ಅಮಾನತು ರದ್ದು ಆದೇಶ ತಂದು ಕರ್ತವ್ಯಕ್ಕೆ ಹಾಜರಾಗಿದ್ದಾನೆ. ಆದರೆ ಇಂತಹ ಕಳ್ಳ ಶಿಕ್ಷಕ ನಮಗೆ ಬೇಡ ಎಂದು ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಶಾಲಾ ಕೊಠಡಿಯಲ್ಲಿ ಪಾಠ ಆಲಿಸುತ್ತಿರುವ ಮಕ್ಕಳು.ಇನ್ನೊಂದು ಕಡೆ ಕಚೇರಿಯಲ್ಲಿ ಕೂತು ತನಗೆ ಕೆ ಎಟಿ ನೀಡಿರುವ ಆದೇಶ ಕಾಪಿ, ಡಿಡಿಪಿಐ ಆದೇಶ ಕಾಫಿ ತೋರಿಸುತ್ತಾ ಕೂತಿರುವ ಮುಖ್ಯ ಶಿಕ್ಷಕ ಹೊರಗಡೆ ಮೈದಾನದಲ್ಲಿ ಕಳ್ಳ ಶಿಕ್ಷಕ ( teacher) ನಮಗೆ ಬೇಡ ಎಂದು ಪ್ರತಿಭಟನೆ ಮಾಡುತ್ತಿರುವ ಪೋಷಕರು (parents). ಅಂದ ಹಾಗೆ ಈ ದೃಶ್ಯ ಕಂಡುಬಂದಿದ್ದು ಬಾಗಲಕೋಟೆಯ ವಿದ್ಯಾಗಿರಿಯ ಬಿಟಿಡಿಎ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (education authorities in bagalkot).

ಇಲ್ಲಿ ಕೂತಿರುವ ಇವರ ಹೆಸರು ಶರಣಪ್ಪ ಬೇವೂರ. ಇದೇ ಶಾಲೆಯ ಮುಖ್ಯ ಶಿಕ್ಷಕರು .ಅದರೆ ಇವರು ಕಳೆದ ಎಪ್ರಿಲ್ 2023 ರಲ್ಲಿ ಇವರ ಮೇಲೆ ಶಾಲೆಯಲ್ಲಿನ ಅಕ್ಕಿ ಕಳ್ಳಸಾಗಾಣಿಕೆ ಆರೋಪ ಬಂದಿತ್ತು.ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಆಗೋದಲ್ಲದೆ ಇಲಾಖೆಯಿಂದ ಇವರನ್ನು ಅಮಾನತ್ತು ಮಾಡಲಾಗಿತ್ತು.ಆದರೆ ಮುಖ್ಯ ಶಿಕ್ಷಕ ಶರಣಪ್ಪ ಬೇವೂರ ಅವರು ಅಮಾನತು ಪ್ರಶ್ನಿಸಿ ಕೆ ಎ ಟಿ ಮೊರೆ ಹೋಗಿದ್ದರು.

ಈಗ ಕೆಎಟಿಯಲ್ಲಿ ಅಮಾನತು ಆದೇಶ ರದ್ದು ಮಾಡಿ ಆದೇಶ ಹೊರಡಿಸಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಆದರೆ ಮುಖ್ಯ ಶಿಕ್ಷಕ ಶಾಲೆಗೆ ಬಂದಿರೋದನ್ನು ವಿರೋಧಿಸಿ ಕೆಲ ಪೋಷಕರು ಇಂದು ಪ್ರತಿಭಟನೆ ಮಾಡಿದರು.ಮಕ್ಕಳ ಅಕ್ಕಿ ಕದ್ದ ಕಳ್ಳಶಿಕ್ಷಕ ನಮಗೆ ಬೇಡ ಇಂತಹವರ ಕೈಯಲ್ಲಿ ನಮ್ಮ ಮಕ್ಕಳು ಏನು ಕಲಿತಾರೆ.ಇವರನ್ನು ನಾಲ್ಕು ದಿನದಲ್ಲಿ ಬೇರೆ ಕಡೆ ವರ್ಗಾವಣೆ ಮಾಡಿ, ಇಲ್ಲದಿದ್ದರೆ ಡಿಸಿ ಕಚೇರಿ ಡಿಡಿಪಿಐ ಕಚೇರಿ ಎದುರು ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.

ಬಿಟಿಡಿಎ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಧ್ಯೆಗೆ ಸ್ವಚ್ಚತೆಗೆ ಹೆಸರಾದ ಶಾಲೆ.ಇಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡೋದರ ಜೊತೆಗೆ ಯಾವುದೇ ಖಾಸಗಿ ಶಾಲೆಗೂ ಕಮ್ಮಿಯಿಲ್ಲದಂತೆ ಶಾಲೆಯನ್ನು ಅಚ್ಚುಕಟ್ಟಾಗಿ ಇಟ್ಟಕೊಳ್ಳಲಾಗಿದೆ.ಶಾಲೆ ಸುಧಾರಣಾ ಸಮಿತಿ ಕೂಡ ಮುಖ್ಯ ಶಿಕ್ಷಕರ ಈ ಶಾಲೆಗೆ ಪುನಃ ಬಂದಿದ್ದನ್ನು ವಿರೋಧ ವ್ಯಕ್ತಪಡಿಸುತ್ತಿದೆ.ಅವರು ಈ ಶಾಲೆಗೆ ಬೇಡ ಬೇರೆ ಎಲ್ಲಿಗೆ ಅದರೂ ಹೋಗಲಿ ಎಂದು ಎಸ್ ಡಿ ಎಮ್ ಸಿ ಅಧ್ಯಕ್ಷರು ಹೇಳುತ್ತಿದ್ದಾರೆ.

ಇದನ್ನೂ ಓದಿ: ವಿತರಕರಿಂದ ಅಕ್ಕಿ ಸತ್ಯಾಗ್ರಹ: ನ.10 ರಿಂದ ಪಡಿತರ ಅಂಗಡಿಗಳು ಕ್ಲೋಸ್ ಆಗುವುದು ಗ್ಯಾರಂಟಿ, ಫ್ರೀಡಂ ಪಾರ್ಕಿನಲ್ಲಿ ಹೋರಾಟ

ಕಳೆದ ಎಪ್ರಿಲ್ ತಿಂಗಳು ಒಂದು ದಿನ ರವಿವಾರ ಈ ಶಾಲೆಯಲ್ಲಿ ಅಕ್ಕಿಯನ್ನು ಬೇರೆ ಕಡೆ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು.ಇದನ್ನು ಸ್ಥಳೀಯರು ಹಿಡಿದಾಗ ಅದರಲ್ಲಿ ಹೆಸರು ಕೇಳಿ ಬಂದಿದ್ದು ಮುಖ್ಯ ಶಿಕ್ಷಕ ಶರಣಪ್ಪ ಬೇವೂರು ಅವರದ್ದು.ಇದೇ ಹಿನ್ನೆಲೆ ಅಮಾನತ್ತಾಗಿದ್ದು ಇವರು,ಈಗ ಕೆಎಟಿ ಕೃಪಾಶೀರ್ವಾದದ ಮೂಲಕ ವಾಪಸ್ ಬಂದಿದ್ದಾರೆ.ಆದರೆ ಇದಕ್ಕೆ ಪೋಷಕರು ವಿರೋಧ ಮಾಡುತ್ತಿದ್ದಾರೆ.

ಇನ್ನು ಈ ಬಗ್ಗೆ ಮುಖ್ಯ ಶಿಕ್ಷಕ ಶರಣಪ್ಪ ಅವರನ್ನು ಕೇಳಿದರೆ ಅಕ್ಕಿ ಸಾಗಾಣಿಕೆ ವೇಳೆ ನಾನು ಸ್ಥಳದಲ್ಲಿ ಇರಲೇ ಇಲ್ಲ.ಶಾಲೆಯಲ್ಲಿ ಜಾತಿ ರಾಜಕಾರಣ ನಡೆಯುತ್ತಿದೆ.ನಾನು ಎಸ್ ಸಿ ಆಗಿದ್ದರಿಂದ ನನ್ನನ್ನು ತುಳಿಯುವ ಕೆಲಸ ಕೆಲವರು ಮಾಡುತ್ತಿದ್ದಾರೆ.ನನ್ನ ಮೇಲೆ ಬಂದ ಆರೋಪ ಎಲ್ಲ ಸುಳ್ಳು ಎಂದು ಕೆ ಎಟಿ ಆ ಕೇಸನ್ನು ಕ್ವಾಶ್ ಮಾಡಿದೆ.ಅದು ಆಧಾರರಹಿತ ಎಂದು ಹೇಲಿ ಪುನಃ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ನೀಡಿದೆ. ಆ ಪ್ರಕಾರ ನಾನು ಕರ್ತವ್ಯಕ್ಕೆ ಹಾಜರಾಗಿದ್ದೇನೆ,ನಾನು ಪ್ರತಿಭಟನೆ ಮಾಡುವವರ ಮೇಲೆ ಯಾವ ಅಪವಾದವನ್ನು ಮಾಡೋದಿಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ