ಹೆದ್ದಾರಿ ಪಕ್ಕದಲ್ಲಿ ಅಪರಿಚಿತ ಯುವತಿ ಶವ ಪತ್ತೆ ಪ್ರಕರಣ; ಇದುವರೆಗೂ ಪೊಲೀಸರಿಗೆ ಸಿಗದ ಸುಳಿವು

| Updated By: ಕಿರಣ್ ಹನುಮಂತ್​ ಮಾದಾರ್

Updated on: May 28, 2024 | 10:27 PM

ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 218 ರ ಪಕ್ಕದ ಜಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಅದೊಂದು ಶವ ಬಿದ್ದಿತ್ತು. ಸ್ಥಳೀಯರಲ್ಲಿ ಕೆಲವರು ನೋಡಿದರೂ ಪೊಲೀಸರು ಸುಮ್ಮನೆ ‌ವಿಚಾರಣೆ ಅಂತ ಓಡಾಡಿಸುತ್ತಾರೆ ಎಂದು ಹೇಳಿರಲಿಲ್ಲ. ನಿನ್ನೆ (ಮೇ.27) ದಿನ ಕೊನೆಗೂ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ಶವ ಯುವತಿಯದ್ದಾಗಿದ್ದು, ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ಇದರಿಂದ ಯುವತಿ ಗುರುತು ಪತ್ತೆ ಹಚ್ಚೋದೆ ಪೊಲೀಸರಿಗೆ ಸವಾಲಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಹೆದ್ದಾರಿ ಪಕ್ಕದಲ್ಲಿ ಅಪರಿಚಿತ ಯುವತಿ ಶವ ಪತ್ತೆ ಪ್ರಕರಣ; ಇದುವರೆಗೂ ಪೊಲೀಸರಿಗೆ ಸಿಗದ ಸುಳಿವು
ಬಾಗಲಕೋಟೆ ಎಸ್ಪಿ
Follow us on

ಬಾಗಲಕೋಟೆ, ಮೇ.28: ಬೀಳಗಿ(Bilgi) ತಾಲ್ಲೂಕಿನ ಹಳೆ ಟಕ್ಕಳಕಿ ಗ್ರಾಮದ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ 218 ರ ಪಕ್ಕದ ಜಾಗದಲ್ಲಿಅಂದಾಜು 20 ರಿಂದ 25 ರ ವಯಸ್ಸಿನ ಅಪರಿಚಿತ ಯುವತಿಯ ಶವ(Dead Body) ಪತ್ತೆಯಾಗಿತ್ತು. ಇಡೀ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದು, ಅಕ್ಕ-ಪಕ್ಕದ ಜಮೀನು ಹೊಂದಿದ ರೈತರು ಹಾಗೂ ಸ್ಥಳೀಯರಿಗೆ ಭಯ ಹುಟ್ಟಿಸಿದೆ. ಕಪ್ಪು ಜೀನ್ಸ್ ಪ್ಯಾಂಟ್, ಸ್ಮೈಲ್‌ ಎಂಬ ಬರಹದ ಪಿಂಕ್ ಟಿ ಶರ್ಟ್, ಬಲಗಾಲಲ್ಲಿ ಗೆಜ್ಜೆ , ಕಪ್ಪು ದಾರವಿದೆ. ಇಂತಹ ಸ್ಥಿತಿಯಲ್ಲಿ‌ ಶವ ನೋಡಿದ ಜನರು ಹೊಲಕ್ಕೆ ಬರಲು ಭಯ ಪಡುವಂತಾಗಿದ್ದು, ಆದಷ್ಟು ಬೇಗ ಈ ಪ್ರಕರಣ ಭೇದಿಸಬೇಕು ಎನ್ನುತ್ತಿದ್ದಾರೆ. ಆದರೆ, ಇದುವರೆಗೂ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ.

ಯುವತಿ ಧರಿಸಿರುವ ಉಡುಪು ನೋಡಿದರೆ ಯುವತಿ ಕಾಲೇಜು ವಿದ್ಯಾರ್ಥಿನಿ ಆಗಿರಬಹುದು. ಇಲ್ಲವೇ ಹೈಪ್ರೊಫೈಲ್ ಕುಟುಂಬದವಳು ಎಂದು ಅನಿಸುತ್ತದೆ. ಯಾರೋ ಕೊಲೆ ಮಾಡಿ ಈ‌ ಜಾಗದಲ್ಲಿ ಶವ ಬಿಸಾಕಿರುವ ಶಂಕೆ‌ ಇದೆ. ಆದರೆ, ಸದ್ಯಕ್ಕೆ ಯಾವುದು ಕೂಡ ಸ್ಪಷ್ಟವಾಗಿಲ್ಲ. ಇನ್ನು ಶವ ಪತ್ತೆಯಾದ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ. ಯುವತಿಯ ಶವ, ಬಟ್ಟೆ, ಸ್ಥಳದಲ್ಲಿ ಸಿಕ್ಕ ಕುರುಹುಗಳು ಎಲ್ಲವನ್ನು ಫೋಟೋ ಸಮೇತ ಮಾಹಿತಿಯನ್ನು ಬಾಗಲಕೋಟೆ ಜಿಲ್ಲೆ ಹಾಗೂ ಅಕ್ಕ-ಪಕ್ಕದ ಜಿಲ್ಲೆಯ ವಿವಿಧ ಠಾಣೆಗೆ ರವಾನಿಸಿದ್ದಾರೆ.

ಇದನ್ನೂ ಓದಿ:ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲವೆಂದು ಸಂಗಾತಿಯ ಶವವನ್ನು ರಸ್ತೆ ಬದಿ ಎಸೆದು ಬಂದ ವ್ಯಕ್ತಿ

ಆಯಾ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜೊತೆಗೆ ಮಾದ್ಯಮ ಹಾಗೂ ಸಾಮಾಜಿಕ‌ ಜಾಲತಾಣದ ಮೂಲಕವೂ ಪೊಲೀಸರು ಗುರುತು ಪತ್ತೆಗೆ ಪ್ರಯತ್ನ ನಡೆಸಿದ್ದಾರೆ. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಾಗದಲ್ಲಿ ಕಂಡ ಶವ ಗುರುತು ಪತ್ತೆ ಸವಾಲಾಗಿದೆ. ಪೊಲೀಸರು ನಿರಂತರ ಪರಿಶೀಲನೆ ಮುಂದುವರೆಸಿದ್ದು, ತನಿಖೆ ನಂತರವೇ ಸತ್ಯಾಂಶ ಹೊರಬೀಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:26 pm, Tue, 28 May 24