AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ ಅಜ್ಜಿ ಸಾವಿಗೆ ಬಿಗ್ ಟ್ವಿಸ್ಟ್: 7 ತಿಂಗಳ ಬಳಿಕ ಮಗ, ಸೊಸೆಯ ಕೃತ್ಯ ಬಯಲು

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದ್ದ 65 ವರ್ಷದ ಅಜ್ಜಿಯ ಕೊಲೆ ಪ್ರಕರಣಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಏಳು ತಿಂಗಳ ಬಳಿ ಪೊಲೀಸರು ಕೊಲೆ ರಹಸ್ಯ ಬಯಲು ಮಾಡಿದ್ದಾರೆ. ಆ ಮೂಲಕ ಪ್ರಕರಣವನ್ನು ಭೇದಿಸಿದ್ದು, ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಹಾಗಾದರೆ ನಡೆದಿದ್ದೇನು, ತಂತ್ರಜ್ಞಾನದ ಮೂಲಕ ಆರೋಪಿಗಳನ್ನ ಪತ್ತೆ ಮಾಡಿದ್ದು ಹೇಗೆ ಎಂಬ ರೋಚಕ ಮಾಹಿತಿ ಇಲ್ಲಿದೆ.

ಬಾಗಲಕೋಟೆ ಅಜ್ಜಿ ಸಾವಿಗೆ ಬಿಗ್ ಟ್ವಿಸ್ಟ್: 7 ತಿಂಗಳ ಬಳಿಕ ಮಗ, ಸೊಸೆಯ ಕೃತ್ಯ ಬಯಲು
ಕೊಲೆಯಾದ ಅಜ್ಜಿ, ಬಂಧಿತರು
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on:Oct 22, 2026 | 7:44 PM

Share

ಮುಖ್ಯಾಂಶಗಳು

  • ಬೀಳಗಿಯಲ್ಲಿ ಅಜ್ಜಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್
  • ಏಳು ತಿಂಗಳ ಬಳಿಕ ಕೊಲೆ ರಹಸ್ಯ ಬಯಲು ಮಾಡಿದ ಪೊಲೀಸರು
  • ಮಗ, ಸೊಸೆ ಸೇರಿ ಮೂವರ ಬಂಧನ

ಬಾಗಲಕೋಟೆ, ಅಕ್ಟೋಬರ್​​ 22: ಕಳೆದ ಏಳು ತಿಂಗಳ ಹಿಂದೆ ಬೀಳಗಿಯಲ್ಲಿ 65 ವರ್ಷದ ಅಜ್ಜಿಯ ಕೊಲೆಯಾಗಿತ್ತು. ಕೊಲೆ ನಡೆದಿದ್ದು ಏಕೆ ಮತ್ತು ಮಾಡಿದ್ದು ಯಾರು ಎಂಬುವುದು ಮಾತ್ರ ನಿಗೂಢವಾಗಿತ್ತು. ಆದರೆ ಸತತ ಪ್ರಯತ್ನಗಳ ಬಳಿಕ ಏಳು ತಿಂಗಳ ನಂತರ ಅಜ್ಜಿ ಕೊಲೆಯ ರಹಸ್ಯ ಬಯಲಾಗಿದೆ. ಆ ಮೂಲಕ ಬಾಗಲಕೋಟೆ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವ್ವ ಅವರ ಕಿರಿಯ ಮಗ ಪಡಿಯಪ್ಪ, ಹಿರಿ ಮಗನ ಪತ್ನಿ ಶಾಂತವ್ವ ಹಾಗೂ ಶಾಂತವ್ವಳ ಸಹೋದರಿಯ ಮಗ ಶಂಕರ್​ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ನಡೆದಿದ್ದೇನು?

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಕಟಕರ ಓಣಿಯ ಬೀರದೇವರ ದೇವಸ್ಥಾನದಲ್ಲಿ ಮಾರ್ಚ್ 18 ಮತ್ತು 19ರ ರಾತ್ರಿ 1:30ಕ್ಕೆ ಕಲ್ಲು ಎತ್ತಿ ಹಾಕಿ ಗೌರವ್ವ ಕೊಡೆಕಲ್​​ ಅವರ ಕೊಲೆ ಮಾಡಲಾಗಿತ್ತು. ತಿಂಗಳು ಕಳೆದರೂ ಆರೋಪಿಗಳ ಸುಳಿವು ಪತ್ತೆಯಾಗಿರಲಿಲ್ಲ. ಹೀಗಾಗಿ ಬಾಗಲಕೋಟೆ ಡಿವೈಎಸ್​​ಪಿ ಗಜಾನನ ಸುತಾರ ನೇತೃತ್ವದಲ್ಲಿ, ಬೀಳಗಿ CPI ಹನುಮಂತ ಸಣ್ಣಮನಿ, PSI ಚಂದ್ರು ಹೆರಕಲ್ ಅವರನ್ನೊಳಗೊಂಡ 10 ಜನರ ವಿಶೇಷ ತಂಡ ರಚನೆ ಮಾಡಲಾಗಿತ್ತು‌.

ಕೊಲೆಗಾರನ ಪತ್ತೆಗೆ ರೇಖಾಚಿತ್ರ; ಎಐ ತಂತ್ರಜ್ಞಾನದ ಬಳಕೆ

ಕೊಲೆಗಾರನ ಪತ್ತೆಗೆ ರೇಖಾಚಿತ್ರ ಮತ್ತು AI ಟೆಕ್ನಾಲಜಿ ಮೂಲಕ ಫೋಟೋ ರಚಿಸಿ ಇಡೀ ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಜನರ ID ಪರಿಶೀಲನೆ ಮಾಡಲಾಗಿತ್ತು. ಹೀಗಿದ್ದರೂ ಕೊಲೆಗಾರರ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಆದರೆ ಸ್ಥಳೀಯರ ಮಾಹಿತಿ ಮೇರೆಗೆ ಕುಟುಂಬದ ಮೇಲೆ ಪೊಲೀಸರಿಗೆ ಸಂಶಯ ಬಂದಿದೆ. ಮಂಪರು, ಲೈ ಡಿಟೆಕ್ಷನ್ ಪರೀಕ್ಷೆ ನಡೆಸಲು ಮುಂದಾದಾಗ ಮಗ, ಸೊಸೆ ಮತ್ತು ಮೊಮ್ಮಗ ನಿರಾಕರಿಸಿದ್ದಾರೆ. ಹೀಗಾಗಿ ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಪಡಿಯಪ್ಪ, ಸದಾಶಿವನ ಪತ್ನಿ ಶಾಂತವ್ವ, ಶಾಂತವ್ವಳ ಸಹೋದರಿಯ ಮಗ ಶಂಕಗರ್​​ ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ‌.

LIVE TV

ಕೊಲೆಗೆ ಕಾರಣ ಏನು?

ಗೌರವ್ವ ಕೊಡೆಕಲ್​​ ಅವರನ್ನ ಕೊಲೆ ಮಾಡಲು ಎರಡು ಕಾರಣಗಳಿವೆ. ಐದು ಎಕರೆ ಆಸ್ತಿ ಗೌರವ್ವ ಹೆಸರಿನಲ್ಲಿತ್ತು. ಅದನ್ನು ತಮ್ಮ ಹೆಸರಿಗೆ ಮಾಡಿಕೊಡುವಂತೆ ಮಗ, ಸೊಸೆ ಪ್ರತಿನಿತ್ಯ ಪೀಡಿಸುತ್ತಿದ್ದರು. ಎರಡನೇಯದು, ಸೊಸೆ ಶಾಂತವ್ವ ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಅಜ್ಜಿಗೆ ಗೊತ್ತಾಗಿ ಬೈದಿದ್ದರು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿರುವುದಲ್ಲದೆ, ಎಲ್ಲರೆದುರು ಹೇಳಿ ಅವಮಾನ ಮಾಡುತ್ತಿದ್ದಾರೆ ಎಂಬ ಸೇಡು ಶಾಂತವ್ವಗಿತ್ತು.

ಕಲ್ಲು ಎತ್ತಿ ಹಾಕಿ ಕೊಲೆ

ಈ ಎರಡು ವಿಚಾರಕ್ಕೆ ಜಗಳವಾಗಿ ಅಜ್ಜಿ ಮನೆ ಬಿಟ್ಟು ದೇವಸ್ಥಾನದಲ್ಲಿ ವಾಸವಿದ್ದರು. ಮಾರ್ಚ್ 18 ಮತ್ತು 19 ರ ರಾತ್ರಿ 1.30ಕ್ಕೆ ದೇವಸ್ಥಾನದಲ್ಲಿ ಮಲಗಿದ್ದಾಗ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಕೊಲೆಗೆ ಸೊಸೆಯ ಸಹೋದರಿಯ ಮಗ ಶಂಕರ್ ಸಾಥ್ ನೀಡಿದ್ದ. ಕೊಲೆ ಮಾಡಿ ಕುಡುಕರು ಮಾಡಿರಬಹುದು ಎಂದು ದಾರಿ ತಪ್ಪಿಸಲು ಯತ್ನಿಸಿದ್ದರು. ಮಗನೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ಕಣ್ಣೀರು ಹಾಕಿ ನಾಟಕವಾಡಿದ್ದ.

ಇದನ್ನೂ ಓದಿ: ಹಣದ ವಿಚಾರಕ್ಕೆ ಕುಚಿಕು ಗೆಳೆಯನನ್ನೇ ಕೊಂದ ಕಿರಾತಕ: ಕೊಲೆ ಬಳಿಕ ಆತನ ಮನೆಗೇ ತೆರಳಿ ಉಪ್ಪಿಟ್ಟು ಸವಿದಿದ್ದ ಆರೋಪಿ!

ಗೌರವ್ವ ಕೊಡೆಕಲ್ ಇಬ್ಬರು ಮಕ್ಕಳನ್ನು ಬಹಳ ಕಷ್ಟಪಟ್ಟು ದುಡಿದು ಬೆಳೆಸಿದ್ದರು. ಮದುವೆಯಾದ ಮೇಲೆ ಹೆಂಡತಿಯರ ಮಾತು ಕೇಳಿ ಮಕ್ಕಳು ಪ್ರತಿನಿತ್ಯ ಅಜ್ಜಿಗೆ ಕಿರುಕುಳ ನೀಡುತ್ತಿದ್ದರು. ಅಜ್ಜಿ ಹೆಸರಲ್ಲಿದ್ದ ಐದು ಎಕರೆ ಆಸ್ತಿ ತಮ್ಮ ಹೆಸರಿಗೆ ಮಾಡುವಂತೆ ನಿತ್ಯ ಕಾಟ ಕಾಡುತ್ತಿದ್ದರು. ಮನೆಗೆ ಬಂದರೆ ಹಲ್ಲೆ ಮಾಡುತ್ತಿದ್ದರು. ಹೀಗಾಗಿ ಅಜ್ಜಿ ಬೇರೆ ಬೇರೆ ದೇವಸ್ಥಾನಗಳಲ್ಲಿ ಕಸಗೂಡಿಸುತ್ತಿದ್ದಳು. ಕಳೆದ ಎಂಟು ವರ್ಷದಿಂದ ಬೀರದೇವರ ದೇವಸ್ಥಾನದಲ್ಲೇ ಮಲಗುತ್ತಿದ್ದಳು. ಹೀಗಿರುವಾಗ ಅಜ್ಜಿಯನ್ನು ಮಗ, ಸೊಸೆ ಕೊಲೆ ಮಾಡಿರುವುದು ಬೇಸರ ತರಿಸಿದೆ. ಅವರಿಗೆ ಕಠಿಣ ಶಿಕ್ಷೆ ಆಗಬೇಕು, ಆಗ ಮಾತ್ರ ಅಜ್ಜಿ ಆತ್ಮಕ್ಕೆ ಶಾಂತಿ ಸಿಗಲಿದೆ. ಅವರನ್ನು ಯಾವುದೇ ಕಾರಣಕ್ಕೂ ಹೊರಗೆ ಬಿಡಬಾರದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:39 pm, Thu, 22 October 26

Follow Us
ರವಿ ಹೆಚ್ ಮೂಕಿ, ಕಲಘಟಗಿ
ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಕಿರೀಟ ಕದಿಯಲು ಸಖತ್ ಪ್ಲ್ಯಾನ್ ಮಾಡಿದ ಸೌಂದರ್ಯಾ: ವಿಡಿಯೋ
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಗ್ರಾಹಕನಂತೆ ಬಂದು ಚಿನ್ನ ಕದ್ದೊಯ್ದ: ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ!
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್