ಬಾಗಲಕೋಟೆ: 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ನಿಧನ

ಜಮಖಂಡಿ ತಾಲ್ಲೂಕಿನ ಇನಾಮ ಹಂಚಿನಾಳ ಗ್ರಾಮದ ರಾಹುಲ್ ಕೋಲಕಾರ (15) ಪರೀಕ್ಷೆ ಬರೆಯುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಬಾಗಲಕೋಟೆ: 9ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ನಿಧನ
ಮೃತ ಬಾಲಕ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ವಿವೇಕ ಬಿರಾದಾರ

Updated on: Sep 30, 2023 | 3:16 PM

ಬಾಗಲಕೋಟೆ ಸೆ.30: ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಬಾಲಕರು ಹೃದಯಾಘಾತದಿಂದ (Heart Attack) ಸಾವೀಗಿಡಾಗುತ್ತಿದ್ದಾರೆ. ಇದು ಪೋಷಕರನ್ನು ಚಿಂತೆಗೆ ಹಚ್ಚಿದೆ. ಯುವಕರು ಮತ್ತು ಬಾಲಕರು ಹೃದಯಾಘಾತದಿಂದ ಏಕೆ ನಿಧರಾಗುತ್ತಿದ್ದಾರೆ ಎಂಬುವುದಕ್ಕೆ ವೈದ್ಯರು ಸಂಶೋಧನೆ ನಡೆಸುತ್ತಿದ್ದಾರೆ. ಮತ್ತು ಇದರಿಂದ ದೂರವಾಗಲು ಪೋಷಕರಿಗೆ ಹಲವು ಸಲಹೆಗಳನ್ನು ನೀಡುತ್ತಿದ್ದಾರೆ. ಇದೀಗ ಹೃದಯಾಘಾತಕ್ಕೆ ಓರ್ವ ಬಾಲಕ ನಿಧನ ಹೊಂದಿದ್ದಾನೆ. ಹೌದು ಜಮಖಂಡಿ (Jamkhandi) ತಾಲ್ಲೂಕಿನ ಇನಾಮ ಹಂಚಿನಾಳ ಗ್ರಾಮದ ರಾಹುಲ್ ಕೋಲಕಾರ (15) ಪರೀಕ್ಷೆ ಬರೆಯುವ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ರಾಹುಲ್ ಹುಲ್ಯಾಳ ಗ್ರಾಮದ ಶಂಭುಲಿಂಗೇಶ್ವರ ಮಾದ್ಯಮಿಕ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದನು. ಶುಕ್ರವಾರ ಅರ್ಧವಾರ್ಷಿಕದ ಪರೀಕ್ಷೆ ಬರೆಯುತ್ತಿರುವ ವೇಳೆ ಹೃದಯಾಘಾತವಾಗಿದೆ. ಕೂಡಲೆ ಶಿಕ್ಷಕರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣ ಬಿಟ್ಟಿದ್ದಾನೆ. ವಿದ್ಯಾರ್ಥಿಗೆ ಹೃದಯಸಂಧಿ ಖಾಯಿಲೆ ಇತ್ತು ಎಂಬ ಮಾಹಿತಿ ವೈದ್ಯರು ನೀಡಿದ್ದಾರೆ.

ಇದನ್ನೂ ಓದಿ: ಗರ್ಬಾ ನೃತ್ಯದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ 19 ವರ್ಷದ ಬಾಲಕ

ಹೊಟ್ಟೆ ನೋವು ತಾಳಲಾರದೆ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ಮೈಸೂರು: ಹೊಟ್ಟೆ ನೋವು ತಾಳಲಾರದೆ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಗೋಳೂರು ಗ್ರಾಮದಲ್ಲಿ ನಡೆದಿದೆ. ರೇಣುಕಾ (17) ಮೃತ ವಿದ್ಯಾರ್ಥಿನಿ. ನಂಜನಗೂಡು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿದ್ದ ರೇಣುಕಾ ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ನೋವು ತಾಳಲಾರದೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ