ಪಿಎಸ್‌ಐ ಮರುಪರೀಕ್ಷೆ: ಬಡತನದಲ್ಲಿ ಓದಿ ಪಾಸಾದ ಬಾಗಲಕೋಟೆಯ ಈ ಯುವತಿ ಕಷ್ಟ ಕೇಳೋರು ಯಾರು?

| Updated By: ಸಾಧು ಶ್ರೀನಾಥ್​

Updated on: Apr 29, 2022 | 9:05 PM

PSI Recruitment Scam: ಬಡತನದಲ್ಲಿ ಓದಿ ಪಾಸಾದವರು ನಾವು. ನಮ್ಮ ಪರಿಸ್ಥಿತಿ ಯಾರಿಗೂ ಮುಖ ತೋರಿಸಲಾಗದ ಹಾಗಾಗಿದೆ. ಈಗಾಗಲೇ ಅನೇಕರ ವಯಸ್ಸಿನ ಮಿತಿ ಮೀರುತ್ತಿದೆ. ನಮಗೆ ಏನು ಮಾಡಬೇಕೆಂಬ ದಿಕ್ಕು ತೋಚುತ್ತಿಲ್ಲ. ದಯವಿಟ್ಟು ಪ್ರಾಮಾಣಿಕರಿಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ ರೇಣುಕಾ ವಡ್ಡರ್.

ಪಿಎಸ್‌ಐ ಮರುಪರೀಕ್ಷೆ: ಬಡತನದಲ್ಲಿ ಓದಿ ಪಾಸಾದ ಬಾಗಲಕೋಟೆಯ ಈ ಯುವತಿ ಕಷ್ಟ ಕೇಳೋರು ಯಾರು?
ಪಿಎಸ್‌ಐ ಮರುಪರೀಕ್ಷೆ: ಬಡತನದಲ್ಲಿ ಓದಿ ಪಾಸಾದ ಬಾಗಲಕೋಟೆಯ ಈ ಯುವತಿ ಕಷ್ಟ ಕೇಳೋರು ಯಾರು?
Follow us on

ಬಾಗಲಕೋಟೆ: ಪಿಎಸ್‌ಐ ಹುದ್ದೆಗೆ ಮರುಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ. ಈ ಮಧ್ಯೆ, ಪರೀಕ್ಷೆ ಬರೆದಿದ್ದ ಅನೇಕ ಅಭ್ಯರ್ಥಿಗಳು ಮತ್ತೆ ಪರೀಕ್ಷೆ ಬರೆಯುವುದಕ್ಕೆ ಅಪಸ್ವರ ಎತ್ತಿದ್ದಾರೆ. ಬಾಗಲಕೋಟೆಯಲ್ಲಿ PSI ಅಭ್ಯರ್ಥಿ ರೇಣುಕಾ ವಡ್ಡರ್ ಅವರ ಅಳಲು ಮನಕಲುಕುವಂತಿದೆ. ಭ್ರಷ್ಟ ವ್ಯವಸ್ಥೆಯಲ್ಲಿ ಸಿಕ್ಕಿಹಾಕಿಕೊಂಡು ಮತ್ತೆ ಪರೀಕ್ಷೆ ಬರೆಯುವುದು ಅನಿವಾರ್ಯವಾಗಿದೆ. ಸುಪ್ರೀಂ ಕೋರ್ಟ್ ಸಹ ಮರುಪರೀಕ್ಷೆಯೇ ಇದಕ್ಕೆ ಪರಿಹಾರ ಎಂದು ಕಳೆದ ವರ್ಷವಷ್ಟೇ ಹೇಳಿದೆ. ಆದರೆ ಕೆಲವರ ಭ್ರಷ್ಟಾಚಾರ ಹಾಗೂ ತಪ್ಪಿನಿಂದ ಪ್ರಾಮಾಣಿಕರಿಗೆ ಶಿಕ್ಷೆಯಾಗುವಂತಿದೆ (PSI Recruitment Scam).

ಮರುಪರೀಕ್ಷೆ ಆದೇಶ ಕೇಳಿ ನಮಗೆ ತೀವ್ರ ಆಘಾತವಾಗಿದೆ. ಇದೀಗ ಏಕಾಏಕಿ ಮರುಪರೀಕ್ಷೆ ಅಂದರೆ ಹೇಗೆ? ಮರುಪರೀಕ್ಷೆ ಅಂದ್ರೆ ಯಾವ ಮನಸ್ಥಿತಿಯಿಂದ ಓದಬೇಕು. ನಾವು ಬಡತನದಲ್ಲಿ ಓದಿ ಪಾಸಾದವರು ಎಂದು ಅಳಲು ತೋಡಿಕೊಂಡಿದ್ದಾರೆ. ಯಾರೋ ಮಾಡಿದ ತಪ್ಪಿಗೆ ನಮಗೆ ಯಾಕೆ ಶಿಕ್ಷೆ ಎಂದು PSI ಅಭ್ಯರ್ಥಿ ರೇಣುಕಾ ವಡ್ಡರ್ ಪ್ರಶ್ನಿಸಿದ್ದಾರೆ . ಅಂದಹಾಗೆ ರೇಣುಕಾ ಅವರ ತಾಯಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾರೆ. ಸಹೋದರರು ಗೌಂಡಿ ಕೆಲಸ ಮಾಡಿ ಪಿಎಸ್ಐ ಓದಿಸಿದ್ದರು. ಬಡತನದಲ್ಲಿ ಕಷ್ಟಪಟ್ಟು ಓದಿ ಪಾಸಾಗಿದ್ದ ರೇಣುಕಾ ವಡ್ಡರ್ ಪರಿಸ್ಥಿತಿ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ನಾವು ಪಿಎಸ್ಐ ಆಗಿ ಆಯ್ಕೆಯಾದಾಗ ಬಹಳ ಖುಷಿಯಾಗಿತ್ತು. ಮನೆಯವರಿಗೂ ಬಹಳ ಖುಷಿಯಾಗಿತ್ತು. ಸಂಬಂಧಿಕರೂ ಖುಷಿಯಾಗಿದ್ದರು. ಬೆಳಿಗ್ಗೆ ಗೃಹ ಸಚಿವರ ಮರು ಪರೀಕ್ಷೆ ಹೇಳಿಕೆ ಕೇಳಿ ಬಹಳ ಆಘಾತವಾಯಿತು. ಸಡನ್ಲಿ ಮರು ಪರೀಕ್ಷೆ ಅಂದರೆ ಹೇಗೆ? ಎಂದು ಪಿಎಸ್ಐ ಅಭ್ಯರ್ಥಿ ಬಾಗಲಕೋಟೆಯ ರೇಣುಕಾ ವಡ್ಡರ್ ಆಕ್ರೋಶ ಹೊರಹಾಕಿದ್ದಾರೆ.

ಬಡತನದಲ್ಲಿ ಓದಿ ಪಾಸಾದವರು ನಾವು. ನಮ್ಮ ಪರಿಸ್ಥಿತಿ ಯಾರಿಗೂ ಮುಖ ತೋರಿಸಲಾಗದ ಹಾಗಾಗಿದೆ. ಈಗಾಗಲೇ ಅನೇಕರ ವಯಸ್ಸಿನ ಮಿತಿ ಮೀರುತ್ತಿದೆ. ನಮಗೆ ಏನು ಮಾಡಬೇಕೆಂಬ ದಿಕ್ಕು ತೋಚುತ್ತಿಲ್ಲ. ದಯವಿಟ್ಟು ಪ್ರಾಮಾಣಿಕರಿಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ ರೇಣುಕಾ ವಡ್ಡರ್.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಇದೂ ಓದಿ:
ಸಬ್​​ ಇನ್ಸ್​​​ಪೆಕ್ಟರ್​​​ ಹುದ್ದೆಗಳಿಗೆ ಮರು ಪರೀಕ್ಷೆ ಘೋಷಿಸಿರುವ ಗೃಹ ಸಚಿವರೇ ಈ ಅಭ್ಯರ್ಥಿಯ ಅಳಲನ್ನು ಒಮ್ಮೆ ಆಲಿಸಿ!

ಇದೂ ಓದಿ:
PSI Recruitment Scam: ಸಿಐಡಿಯಿಂದ ತಪ್ಪಿಸಿಕೊಳ್ಳಲು ದೇಗುಲಗಳಿಗೆ ಸುತ್ತಾಡುತ್ತಿದ್ದ ದಿವ್ಯಾ ಭಾರೀ ಶ್ರೀಮಂತೆಯೂ ಹೌದು

Published On - 8:30 pm, Fri, 29 April 22