AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಬ್​​ ಇನ್ಸ್​​​ಪೆಕ್ಟರ್​​​ ಹುದ್ದೆಗಳಿಗೆ ಮರು ಪರೀಕ್ಷೆ ಘೋಷಿಸಿರುವ ಗೃಹ ಸಚಿವರೇ ಈ ಅಭ್ಯರ್ಥಿಯ ಅಳಲನ್ನು ಒಮ್ಮೆ ಆಲಿಸಿ!

Home Minister Araga Jnanendra: ಹೋಮ್ ಮಿನಿಸ್ಟರ್ ಆದೇಶದಿಂದ ನಮಗೆ ನೋವಾಗಿದೆ. 2016 ರಿಂದ ನಾನು UPSC ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದೇನೆ. ನಮ್ಮ ತಂದೆಯವರ ಸಾವಿನ ನಡುವೆ ನಾನು ಎಕ್ಸಾಂ ಪಾಸ್ ಆಗಿದ್ದೆ. ಇದೀಗ ನಮಗೆ ಅನ್ಯಾಯವಾಗಿದೆ. ಹೋಮ್ ಮಿನಿಸ್ಟರ್ ನಿರ್ಧಾರ ತಪ್ಪು ಅನಿಸುತ್ತಿದೆ. ಅಕ್ರಮವಾಗಿ ಬಂದವರನ್ನ ತಗೆದು ಹಾಕಿ, ನಮಗೆ ನ್ಯಾಯ ಕೊಡಿಸಿ - ನೊಂದ ಅಭ್ಯರ್ಥಿ ಗಂಗಾವತಿಯ ಚೈತನ್ಯ

ಸಬ್​​ ಇನ್ಸ್​​​ಪೆಕ್ಟರ್​​​ ಹುದ್ದೆಗಳಿಗೆ ಮರು ಪರೀಕ್ಷೆ ಘೋಷಿಸಿರುವ ಗೃಹ ಸಚಿವರೇ ಈ ಅಭ್ಯರ್ಥಿಯ ಅಳಲನ್ನು ಒಮ್ಮೆ ಆಲಿಸಿ!
545 ಪಿಎಸ್​ಐ ಹುದ್ದೆಗಳಿಗೆ ನೇಮಕಾತಿ ಮರು ಪರೀಕ್ಷೆ ಘೋಷಿಸಿರುವ ಗೃಹ ಸಚಿವರೇ ಈ ಅಭ್ಯರ್ಥಿಯ ಅಳನ್ನು ಒಮ್ಮೆ ಆಲಿಸಿ!
TV9 Web
| Updated By: ಸಾಧು ಶ್ರೀನಾಥ್​|

Updated on:Apr 29, 2022 | 7:42 PM

Share

ಕೊಪ್ಪಳ: ಇತ್ತೀಚೆಗೆ 500 ಕ್ಕೂ ಹೆಚ್ಚು ಪೊಲೀಸ್​ ಸಬ್​​​ ಇನ್ಸ್​ ಪೆಕ್ಟರ್​ (ಪಿಎಸ್​ಐ) ಹುದ್ದೆಗಳಿಗೆ ನಡೆದಿರುವ ನೇಮಕಾತಿ ಅಕ್ರಮ ಪ್ರಕರಣದಲ್ಲಿ (PSI Recruitment Scam) ಪ್ರಮುಖ ಆರೋಪಿ ದಿವ್ಯಾ ಹಾಗರಗಿ (Divya Hagaragi) ಸಿಐಡಿ ತನಿಖಾ ತಂಡಕ್ಕೆ (CID) ಕೊನೆಗೂ ಸಿಕ್ಕಿಬೀಳುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು (Home Minister Araga Jnanendra) ಇಡೀ ನೇಮಕಾತಿ ಪ್ರಕ್ರಿಯೆಯನ್ನು ಕ್ಯಾನ್ಸಲ್ ಮಾಡಿ, ಹೊಸದಾಗಿ ಪರೀಕ್ಷೆ ನಡೆಸುವುದಾಗಿ ಘೋಷಿಸಿದ್ದಾರೆ. ಅಲ್ಲಿಗೆ ಈ ಹಗರಣ ಬಹುತೇಕ ಒಂದು ಹಂತಕ್ಕೆ ಬಂದು ನಿಂತಾಗಿದೆ. ಆದರೆ ಮುಂದಿರುವುದೇ ಹಿಮಾಲಯದಷ್ಟು ಬೃಹದಾಕಾರ ಕಷ್ಟಕೋಟಲೆ! ಅಸಲಿ ಪ್ರಕರಣದಲ್ಲಿ ನಡೆದಿರುವ ಅಕ್ರಮವನ್ನು ಇಂಚಿಂಚೂ ಅಗೆದು ಯಾರೆಲ್ಲಾ ತಪ್ಪಿತಸ್ಥರು, ಅಸಲಿಗೆ ಇದರ ಮೂಲ ಎಲ್ಲಿಯದು ಎಂದು ಹುಡುಕಾಡುವುದ ಜೊತೆಗೆ ಭವಿಷ್ಯದಲ್ಲಿ ಇಂತಹ ಅಕ್ರಮ ನಡೆಯದಿರುವಂತೆ ವ್ಯವಸ್ಥೆಯನ್ನು ಸುಸ್ಥಿರಗೊಳಿಸುವುದು ಹೇಗೆ ಎಂಬುದರ ಬಗ್ಗೆಯೂ ಕೂಲಂಕಶ ಅಧ್ಯಯನ ನಡೆಸಬೇಕಿದೆ. ಇದು ಸರ್ಕಾರಿ ಮಟ್ಟದಲ್ಲಿ ಆಗಬೇಕಿರುವುದಾದರೂ… ಅಸಲಿಗೆ ಹಿಮಾಲಯದಾಕಾರದ ಕಷ್ಟಕೋಟಲೆ ಎಂದು ಹೇಳಿದ್ದು ಸರ್ಕಾರಿ ವ್ಯವಸ್ಥೆಗೆ ಅಲ್ಲ, ಅಸಲೀ ಅಭ್ಯರ್ಥಿಗಳ ಬಗ್ಗೆ ಇಲ್ಲಿ ಚಿಂತನೆ ನಡೆಸಬೇಕಿದೆ. ಅರ್ಹ-ಪ್ರಮಾಣಿಕ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯ ಆಗುವುದಿಲ್ಲವೇ? ಲೋಪ ಸರ್ಕಾರದ ಮಟ್ಟದಲ್ಲಿ ಇಟ್ಟುಕೊಂಡು ಮತ್ತೆ ಅವರಿಗೆ ಪರೀಕ್ಷೆ ಬರೆಯಿರಿ ಎಂದು ಏಕಾಏಕಿ, ಏಕಮುಖವಾಗಿ ನಿರ್ಣಯ ತೆಗೆದುಕೊಳ್ಳುವುದು ಎಷ್ಟು ಸಮಂಜಸ? ಇಂದು ರಾಜ್ಯದಲ್ಲಿ ಪ್ರಮುಖವಾಗಿ ಇದೇ ವಿಷಯಗಳು ತೀವ್ರ ಚರ್ಚೆಯಾಗುತ್ತಿರುವುದು: ಒಂದು ದಿವ್ಯಾಹಾಗರಗಿ ಸಿಕ್ಕಿಬಿದ್ದಿರುವುದು, ಎರಡು ಮರುಪರೀಕ್ಷೆಗೆ ಸರ್ಕಾರ ನಿರ್ಧರಿಸಿರುವುದು ಮತ್ತು ಮೂರನೆಯ ಆದರೆ ಪ್ರಧಾನ ಅಂಶವಾದ ಅರ್ಹ ಅಭ್ಯರ್ಥಿಗಳ ಗತಿಯೇನು? ಎಂಬುದು.

ಇದಕ್ಕೆಲ್ಲಾ ಇಂಬು ಕೊಡುವಂತೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಚೈತನ್ಯ ಎಂಬ ಅಭ್ಯರ್ಥಿ ಅದಾಗಲೇ ಶುರುವಚ್ಚಿಕೊಂಡಿದ್ದಾರೆ. ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿರುವ ಚೈತನ್ಯ ಅವರದ್ದು ನಿಜಕ್ಕೂ ಮನಕಲಕುವ ಸಂಗತಿ. ಆತ ತಮ್ಮ ತಂದೆಯವರ ಸಾವಿನ ನಡುವೆಯೂ ಓದಿ, ಪರೀಕ್ಷೆ ಬರೆದು PSI ಆಗಿ ಸೆಲೆಕ್ಟ್ ಸಹ ಆಗಿದ್ದಾರಂತೆ. ಆದರೆ ಈಗ ಮತ್ತೊಮ್ಮೆ ಪರೀಕ್ಷೆ ಬರೆಯಪ್ಪಾ ಎಂದು ಸರ್ಕಾರ ಸರಾಗವಾಗಿ ಹೇಳಿಬಿಟ್ಟರೆ ಆತನ ಪರಿಸ್ಥಿತಿ ಏನಾಗಬೇಡ? ನಿಜಕ್ಕೂ ಆತನ ಚೈತನ್ಯವೇ ಉಡುಗಿಹೋದಂತೆ ಆಗುವುದಿಲ್ಲವೇ? ಸರ್ಕಾರ ಇಂತಹ ಅಪ್ಪಟ ಪ್ರತಿಭೆಗಳ ಬಗ್ಗೆ ಮರುಯೋಚಿಸುವುದು ಉಚಿತ ಅಲ್ಲ ಅಲ್ಲವೇ?

ಗಂಗಾವತಿಯ ಚೈತನ್ಯ ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸಾರಾಂಶ ಹೀಗಿದೆ: ಇದೀಗ ಹೋಮ್ ಮಿನಿಸ್ಟರ್ ಆದೇಶದಿಂದ ನಮಗೆ ನೋವಾಗಿದೆ. 2016 ರಿಂದ ನಾನು UPSC ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದೇನೆ. ನಮ್ಮ ತಂದೆಯವರ ಸಾವಿನ ನಡುವೆ ನಾನು ಎಕ್ಸಾಂ ಪಾಸ್ ಆಗಿದ್ದೆ. ಇದೀಗ ನಮಗೆ ಅನ್ಯಾಯವಾಗಿದೆ. ಹೋಮ್ ಮಿನಿಸ್ಟರ್ ನಿರ್ಧಾರ ತಪ್ಪು ಅನಿಸುತ್ತಿದೆ. ಅಕ್ರಮವಾಗಿ ಬಂದವರನ್ನ ತಗೆದು ಹಾಕಿ, ನಮಗೆ ನ್ಯಾಯ ಕೊಡಿಸಿ. ಇದೀಗ ಎಕ್ಸಾಂ ಮತ್ತೆ ಬರೆದ್ರೆ ನಾವು ಪಾಸ್ ಆಗಲ್ಲ ಅಂತಲ್ಲ. ಆದರೂ… ಎಂದು ನೋವು ತೋಡಿಕೊಂಡಿದ್ದಾರೆ. ಅಂದಹಾಗೆ 545 PSI ನೇಮಕಾತಿಯಲ್ಲಿ ಹೈದ್ರಾಬಾದ್ ಕರ್ಣಾಟಕ ಕೋಟಾದಡಿ 23 ನೇ ರ್ಯಾಂಕ್ ಪಡೆದಿದ್ದಾರೆ ಈ ಚೈತನ್ಯ. ವ್ಯವಸ್ಥೆಯೇ ಹೀಗಿದೆ ಕ್ಷಮಿಸಿಬಿಡು ಚೈತನ್ಯ ಎನ್ನೋಣವಾ ಅಥವಾ ಅವರಿಗೆ ನ್ಯಾಯ ಕಲ್ಪಿಸೋಣವಾ… ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು.

ಈ ಮಧ್ಯೆ, ಚೈತನ್ಯರಂತಹ ಅಪ್ಪಟ ಪ್ರತಿಭೆಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ನೊಂದ‌ ಅಭ್ಯರ್ಥಿಗಳು ಕೆಎಟಿ ಗೆ ಅರ್ಜಿ ಸಲ್ಲಿಸಬಹುದು … ಪರೀಕ್ಷೆ ರದ್ದು ಆದೇಶವನ್ನು ಪ್ರಶ್ನಿಸಬಹುದು …. ಸರ್ಕಾರದ ಕ್ರಮಕ್ಕೆ ತಡೆ ನೀಡುವಂತೆ ಪ್ರಶ್ನಿಸಬಹುದು … ಆದರೆ ಇದಕ್ಕೆ ಪ್ರತಿಯಾಗಿ ಸರ್ಕಾರದ ಕಡೆಯಿಂದ ಈ ವಾದವೂ ಕೇಳಿಬರಬಹುದು, ಗಮನಿಸಿ.

ಪರೀಕ್ಷೆ ಅಕ್ರಮಗಳ ಹಿನ್ನೆಲೆಯಲ್ಲಿ ರದ್ದು ಸಮರ್ಥಿಸಿಕೊಂಡು ಇನ್ನೂ ಅಂತಿಮ ನೇಮಕಾತಿ ಆದೇಶ ನೀಡದ ಹಿನ್ನೆಲೆ … ಯಾವುದೇ ಅಭ್ಯರ್ಥಿ ಹಕ್ಕಿಗೆ ಧಕ್ಕೆಯಾಗಲ್ಲವೆಂದು ಹೇಳುತ್ತಾ… ಮರು ಪರೀಕ್ಷೆ ನ್ಯಾಯಸಮ್ಮತವೆಂದು ಸರ್ಕಾರ ವಾದಿಸಬಹುದು…

ಸುಪ್ರೀಂ ಕೋರ್ಟ್ ತೀರ್ಪು ಏನು ಹೇಳುತ್ತದೆ: ಸರ್ಕಾರದ ಕ್ರಮ ಪ್ರಶ್ನಿಸಿದರೂ ಯಶಸ್ಸು ಸಿಗುವ ಸಾಧ್ಯತೆ ಕಡಿಮೆಯಿದೆ. ದೆಹಲಿಯಲ್ಲಿ 2016 ರ ಹೆಡ್ ಕ್ಲರ್ಕ್ ಹುದ್ದೆಯ ಪರೀಕ್ಷೆಯಲ್ಲಿ ನಡೆದಿದ್ದ ಅಕ್ರಮದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಪಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ನೊಂದ ಅಭ್ಯರ್ಥಿಗಳು ಕೋರ್ಟ್ ಮೆಟ್ಟಿಲೇರಿದ್ದರು. ಅಂತಿಮವಾಗಿ ಪರೀಕ್ಷೆ ರದ್ದು ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ಸಾರ್ವಜನಿಕ ಸೇವೆಗೆ ಆಯ್ಕೆ ಪ್ರಕ್ರಿಯೆ ವಿಶ್ವಾಸ ವೃದ್ದಿಸುವಂತಿರಬೇಕು. ಪರೀಕ್ಷೆ ರದ್ದಿನಿಂದ ಕೆಲ‌ ಅಭ್ಯರ್ಥಿಗಳಿಗೆ ತೊಂದರೆಯಾಗಬಹುದು. ಆದರೆ ಆ ಕಾರಣಕ್ಕೆ ತಪ್ಪಾಗಿ ನಡೆದ ಪರೀಕ್ಷೆಯನ್ನು ಸಮರ್ಥಿಸಲಾಗದು ಎಂದು ನ್ಯಾ. ಡಿ.ವೈ. ಚಂದ್ರಚೂಡ್, ನ್ಯಾ. ಎಂ.ಆರ್. ಶಾ ಅವರ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ‌ಕಳೇದ ವರ್ಷವಷ್ಟೇ ಅಂದರೆ 2021 ರಲ್ಲಿ ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಾಗಿ ಪ್ರಸ್ತುತ ಕರ್ನಾಟಕ ಸರ್ಕಾರದ ಮರು ಪರೀಕ್ಷೆ ಕ್ರಮ ರದ್ದುಗೊಳಿಸುವ ಸಾಧ್ಯತೆ ಕಡಿಮೆಯಾಗಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Also Read: Acid Attack: ಆ್ಯಸಿಡ್ ದಾಳಿಗೆ ಪ್ರೇಮ ವೈಫಲ್ಯ, ಸೆಕ್ಸ್ ನಿರಾಕರಣೆ ಕಾರಣ -ಸುಪ್ರೀಂ ಕೋರ್ಟ್ ಏನು ಹೇಳುತ್ತದೆ?

Also Read: JDS ಅಧಿಕಾರಕ್ಕೆ ಬಾರದಿದ್ದರೆ ವಿಸರ್ಜನೆ ಮಾಡುವ ಮಾತನ್ನು ಒತ್ತಿ ಒತ್ತಿ ಹೇಳಿದ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ

Published On - 2:58 pm, Fri, 29 April 22

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!