ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರಾಗಿ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಆಯ್ಕೆ
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದಲ್ಲಿ 5 ತಿಂಗಳ ಹಿಂದೆ ಸಂಗನಬಸವ ಸ್ವಾಮೀಜಿ ಲಿಂಗೈಕ್ಯರಾಗಿದ್ದರು. ಹೀಗಾಗಿ ತೆರವಾಗಿದ್ದ ಸ್ಥಾನಕ್ಕೆ ವೀರಶೈವ ಲಿಂಗಾಯತ ಮಠಾಧೀಶರು, ಟ್ರಸ್ಟಿಗಳ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕ ಮಾಡಲಾಗಿದೆ.
ಬಾಗಲಕೋಟೆ: ಬಾದಾಮಿ ತಾಲೂಕಿನ ಶಿವಯೋಗಮಂದಿರ ಸಂಸ್ಥೆಯ ಅಧ್ಯಕ್ಷರಾಗಿ ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಆಯ್ಕೆ ಆಗಿದ್ದಾರೆ. ಹಾಗೂ ಉಪಾಧ್ಯಕ್ಷರಾಗಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಆಯ್ಕೆ ಆಗಿದ್ದಾರೆ. ಶಿವಯೋಗಮಂದಿರದಲ್ಲಿ ವಿವಿಧ ವೀರಶೈವ ಲಿಂಗಾಯತ ಮಠಾಧೀಶರು, ಟ್ರಸ್ಟಿಗಳ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರದಲ್ಲಿ 5 ತಿಂಗಳ ಹಿಂದೆ ಸಂಗನಬಸವ ಸ್ವಾಮೀಜಿ ಲಿಂಗೈಕ್ಯರಾಗಿದ್ದರು. ಹೀಗಾಗಿ ತೆರವಾಗಿದ್ದ ಸ್ಥಾನಕ್ಕೆ ವೀರಶೈವ ಲಿಂಗಾಯತ ಮಠಾಧೀಶರು, ಟ್ರಸ್ಟಿಗಳ ಸಭೆಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕ ಮಾಡಲಾಗಿದೆ. ಹಾನಗಲ್ ಕುಮಾರೇಶ್ವರಶ್ರೀಗಳು ಸ್ಥಾಪಿಸಿದ್ದ ಶಿವಯೋಗಮಂದಿರ ವೀರಶೈವ ಲಿಂಗಾಯತ ಶ್ರದ್ದಾಕೇಂದ್ರ. ಇದಕ್ಕೆ 110 ವರ್ಷಗಳ ಇತಿಹಾಸವಿದೆ. ಇದು ವೀರಶೈವ ಲಿಂಗಾಯತ ಮಠಗಳಿಗೆ ಶ್ರೀಗಳನ್ನು ತಯಾರಿಸುವ ಕೇಂದ್ರ. ವಟುಗಳ ವಿಶ್ವವಿದ್ಯಾಲಯವೆಂದು ಶಿವಯೋಗಮಂದಿರ ಹೆಸರಾಗಿದೆ. ವಟುಗಳಿಗೆ ತರಬೇತಿ, ಸಂಸ್ಕೃತ ಪಾಠ ಪ್ರವಚನ, ಧಾರ್ಮಿಕ ಸಂಸ್ಕಾರ ದೀಕ್ಷೆ ನೀಡಿ ಶ್ರೀಗಳನ್ನು ತಯಾರಿಸುವ ಕೇಂದ್ರವಿದು.
ಅಲ್ಲದೆ ಶುದ್ಧ ವಿಭೂತಿ ತಯಾರಿಕೆಗೆಗೂ ಧಾರ್ಮಿಕ ಕೇಂದ್ರ ಹೆಸರಾಗಿದೆ. ಸಭೆಯಲ್ಲಿ ಕೋಡಿಮಠದ ಪೂಜ್ಯರು, ಇಳಕಲ್ ಮಹಾಂತಶ್ರೀ, ನಂದವಾಡಗಿ ಪಟ್ಟದ ದೇವರು, ಶಾಸಕ ವೀರಣ್ಣ ಚರಂತಿಮಠ, ಮಾಜಿ ಶಾಸಕ ಜಿ.ಎಸ್.ಪಾಟೀಲ್, ಶಿವಯೋಗ ಮಂದಿರದ ಟ್ರಸ್ಟಿ ಎಂ.ಬಿ.ಹಂಗರಗಿ, ಎಂ.ಡಿ.ಯಲಿಗಾರ, ಶರಣಗೌಡ ಪಾಟೀಲ ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು. ಶಿವಯೋಗಮಂದಿರದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ಸ್ವಾಮೀಜಿಗಳು ಟ್ರಸ್ಟಿಗಳ ಹೊರತುಪಡಿಸಿ ಸಭೆಯಲ್ಲಿ ಇತರರಿಗೆ ಅವಕಾಶ ಇರಲಿಲ್ಲ.
ಇದನ್ನೂ ಓದಿ: Autism Spectrum Disorder: ಆಟಿಸಂ ಸಮಸ್ಯೆಯಿದೆ ಎಂದು ಹೇಳಿಕೊಂಡಿದ್ದ ಎಲಾನ್ ಮಸ್ಕ್; ಏನಿದು? ಪರಿಹಾರ ಹೇಗೆ?
ರೇವಣ್ಣನಂತೆ ಬಾಬೂರಾವ್ ಚಿಂಚನಸೂರ ಸಹ ಅಧಿಕಾರಿಯ ಮೇಲೆ ಕೂಗಾಡಿದ ಪ್ರಸಂಗ ಯಾದಗಿರಿಯಲ್ಲಿ!