ಬಾಗಲಕೋಟೆ, (ಏಪ್ರಿಲ್ 15): ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ(bagalkot Loksabha Congress Candidate ) ಸಂಯುಕ್ತಾ ಪಾಟೀಲ್ (Samyukta Patil) ನಾಮಪತ್ರ ಸಲ್ಲಿಕೆ ಮಾಡಿದರು. ಇಂದು(ಏಪ್ರಿಲ್ 15) ಬೆಳಗ್ಗೆ ಬನಶಂಕರಿ ದೇವರ ದರ್ಶನ ಪಡೆದು ಹೆಗಲಿಗೆ ಕಂಬಳಿ ಹಾಕಿಕೊಂಡು ಹೋಗಿ ನಾಮಪತ್ರ ಸಲ್ಲಿಸಿದರು. ಇನ್ನು ಸಂಯುಕ್ತ ಪಾಟೀಲ್ ಅವರು ತಮ್ಮ ನಾಮಪತ್ರದಲ್ಲಿ ಆಸ್ತಿ ವಿವರ ಸಲ್ಲಿಸಿದ್ದು, ಅವರ ಪತಿಗಿಂತ ಅವರೇ ಶ್ರೀಮಂತರಾಗಿರುವುದು ವಿಶೇಷ. ಸಂಯುಕ್ತಾ ಪಾಟೀಲ್ ಚರಾಸ್ಥಿ ಒಟ್ಟು 93,66,574.74 ರೂ ಮೌಲ್ಯದಾಗಿದ್ದು, ಸ್ಥಿರಾಸ್ತಿ 1,12,77,550 ರೂ. ಇದೆ. ಇದರೊಂದಿಗೆ ಸಂಯುಕ್ತ ಪಾಟೀಲ್ ಅವರ ಒಟ್ಟು ಆಸ್ತಿ ಮೌಲ್ಯ 2 ಕೋಟಿ 6 ಲಕ್ಷದ 44 ಸಾವಿರದ 124 ರೂ. ಇದೆ ಎಂದು ಅಫಿಡೆವಿಟ್ನಲ್ಲಿ ಘೋಷಿಸಿಕೊಂಡಿದ್ದಾರೆ.
ಇನ್ನು ಸಂಯುಕ್ತ ಪಾಟೀಲ್ ಅವರ ಪತಿ ಶಿವಕುಮಾರ್ ಅವರ ಬಳಿ ಸ್ಥಿರಾಸ್ತಿ ಇಲ್ಲ. 1 ಕೋಟಿ 4 ಲಕ್ಷ 33 ಸಾವಿರ ರೂ. ಮೌಲ್ಯದ ಚರಾಸ್ತಿ ಮಾತ್ರ ಹೊಂದಿದ್ದಾರೆ. ಹಾಗೇ ಸಂಯುಕ್ತ ಪಾಟೀಲ್ ಮತ್ತು ಶಿವಕುಮಾರ್ ವಿವಿಧ ಬ್ಯಾಂಕ್ಗಳಲ್ಲಿ ಸಾಲ ಮಾಡಿಕೊಂಡಿದ್ದಾರೆ. ಸಂಯುಕ್ತಾ ಪಾಟೀಲ್ ಹೆಸರಲ್ಲಿ 3 ಲಕ್ಷ 95 ಸಾವಿರ ಸಾಲ ಇದ್ದರೆ, ಪತಿ ಶಿವಕುಮಾರ್ ಶಿವಕುಮಾರ್ ಅವರು 59 ಲಕ್ಷದ 95 ಸಾವಿರದ 185 ರೂ ಸಾಲ ಹೊಂದಿದ್ದಾರೆ. ಇದರಲ್ಲಿ ಶಿವಕುಮಾರ್ ಅವರ ಶೈಕ್ಷಣಿಕ ಸಾಲ- 8 ಲಕ್ಷದ 95 ಸಾವಿರದ 180 ರೂ. ಇದೆ.
ಇದನ್ನೂ ಓದಿ: ಮಗಳು ಸಂಯುಕ್ತ ಪರ ತಂದೆ, ಮಗ ಬಿಜೆಪಿಯ ಆಕ್ಟೀವ್ ಕಾರ್ಯಕರ್ತ! ಬಾಗಲಕೋಟೆಯಲ್ಲಿ ತಂದೆ-ಮಕ್ಕಳ ಜುಗಲಬಂದಿ
ಸಂಯುಕ್ತಾ ಪಾಟೀಲ್ ಅವರ ಬಳಿ 500ಗ್ರಾಂ ಅಂದರೆ ಅರ್ಧ ಕೆಜಿ ಚಿನ್ನ ಮತ್ತು 5 ಕೆಜಿ ಬೆಳ್ಳಿ ಇದ್ದರೆ, ಪತಿ ಶಿವಕುಮಾರ್ ಅವರು 510 ಗ್ರಾಂ ಚಿನ್ನ ಹೊಂದಿದ್ದಾರೆ. ಇಷ್ಟೇ ಅಲ್ಲದೇ ಸಂಯುಕ್ತ ಪಾಟೀಲ್ ಸುಮಾರು 47 ಎಕರೆ ಭೂ ಒಡತಿಯಾಗಿದ್ದಾರೆ.
ಸಂಯುಕ್ತಾ ಪಾಟೀಲ್ 2 ಲಕ್ಷ 39 ಸಾವಿರ ನಗದು ಹಣ ಇದೆ. ಇನ್ನು ವಿವಿಧ ಬ್ಯಾಂಕ್ ಖಾತೆಯಲ್ಲಿ 57 ಲಕ್ಷದ 27 ಸಾವಿರದ 573 ರೂ. ಇದೆ. ಇನ್ನು ಪತಿ ಶಿವಕುಮಾರ್ ಕೈಯಲ್ಲಿ 1 ಲಕ್ಷದ 72 ಸಾವಿರ ರೂ.ನಗದು ಹಣ ಇದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ 42 ಲಕ್ಷದ 49 ಸಾವಿರದ 270 ರೂ. ಇದೆ ಎಂದು ಅಫಿಡೆವಿಟ್ನಲ್ಲಿ ಮಾಹಿತಿ ನೀಡಿದ್ದಾರೆ.
ಪತಿ ಶಿವಕುಮಾರ್ ಕಡೆಯಿಂದ 3 ಲಕ್ಷ 95 ಸಾವಿರ ಸಾಲ ಪಡೆದುಕೊಂಡಿರುವ ಸಂಯುಕ್ತಾ ಪಾಟೀಲ್, ಬಳಿ ಯಾವುದೇ ವಾಹನಗಳಿಲ್ಲ. ಅಲ್ಲದೇ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:18 pm, Mon, 15 April 24