Bagalkot News: ಬಾಗಲಕೋಟೆಯಲ್ಲಿ ಭಾರೀ ಮಳೆ; ಮುಧೋಳ ಬಿಕೆ ಆಲಗುಂಡಿ ಬಳಿ ಸಿಡಿಲು ಬಡಿದು ರೈತ ಸಾವು, ಮತ್ತೊಬ್ಬರಿಗೆ ಗಾಯ

|

Updated on: Jun 24, 2023 | 5:48 PM

ಘಟನೆ ವೇಳೆ ಇಬ್ಬರು ಮುಧೋಳ ತಾಲೂಕಿನ ಬಿಕೆ ಅಳಗುಂಡಿ ಗ್ರಾಮದ ತಮ್ಮ ಜಮೀನಿನಲ್ಲಿ ಬೋರ್‌ವೆಲ್‌ನ ವಿದ್ಯುತ್ ಮೋಟರ್ ಆನ್ ಮಾಡಲು ಹೋಗಿದ್ದರು. ಬಸಪ್ಪ ಸ್ಥಳದಲ್ಲೇ ಮೃತಪಟ್ಟರೆ, ವಿಠ್ಠಲ ಗಾಯಗೊಂಡಿದ್ದಾರೆ.

Bagalkot News: ಬಾಗಲಕೋಟೆಯಲ್ಲಿ ಭಾರೀ ಮಳೆ; ಮುಧೋಳ ಬಿಕೆ ಆಲಗುಂಡಿ ಬಳಿ ಸಿಡಿಲು ಬಡಿದು ರೈತ ಸಾವು, ಮತ್ತೊಬ್ಬರಿಗೆ ಗಾಯ
ಸಾಂದರ್ಭಿಕ ಚಿತ್ರ
Follow us on

ಬಾಗಲಕೋಟೆ: ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಶನಿವಾರ ಗುಡುಗು, ಸಿಡಿಲಿನೊಂದಿಗೆ ಭಾರಿ (Heavy Rain) ಮಳೆಯಾಗಿದೆ. ಇದೇ ವೇಳೆ, ಸಿಡಿಲು ಬಡಿದು ಯುವ ರೈತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುಧೋಳ (Mudhol) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಬಸಪ್ಪ ಮಾದರ (35) ಎಂದು ಗುರುತಿಸಲಾಗಿದೆ. ಮತ್ತೊಬ್ಬ ರೈತ ವಿಠ್ಠಲ ಮಾದರ ಸಿಡಿಲು ಬಡಿದು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ವೇಳೆ ಇಬ್ಬರು ಮುಧೋಳ ತಾಲೂಕಿನ ಬಿಕೆ ಅಳಗುಂಡಿ ಗ್ರಾಮದ ತಮ್ಮ ಜಮೀನಿನಲ್ಲಿ ಬೋರ್‌ವೆಲ್‌ನ ವಿದ್ಯುತ್ ಮೋಟರ್ ಆನ್ ಮಾಡಲು ಹೋಗಿದ್ದರು. ಬಸಪ್ಪ ಸ್ಥಳದಲ್ಲೇ ಮೃತಪಟ್ಟರೆ, ವಿಠ್ಠಲ ಗಾಯಗೊಂಡಿದ್ದಾರೆ.

ಕಳೆದ ತಿಂಗಳು, ರಾಜ್ಯದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಸಿಡಿಲು ಬಡಿದು ಕನಿಷ್ಠ ಮೂರು ಜನ ಸಾವನ್ನಪ್ಪಿದರು.

ಇದನ್ನೂ ಓದಿ: Explainer: ಸಿಡಿಲು, ಮಿಂಚು ಎಂದರೇನು? ಸಿಡಿಲು ಬಡಿದು ಸಾವು ಸಂಭವಿಸುವ ಸಾಧ್ಯತೆ ಎಷ್ಟಿರುತ್ತದೆ? ಇಲ್ಲಿದೆ ವಿವರ

ಈ ಮಧ್ಯೆ, ಜೂನ್ 28 ರವರೆಗೆ ಕರಾವಳಿ ಕರ್ನಾಟಕ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Sat, 24 June 23