Sign In

By signing in or creating an account, you agree with Associated Broadcasting Company's Terms & Conditions and Privacy Policy.

7 Star Sultan: ‘ಟಗರು ಪಲ್ಯ’ ಚಿತ್ರದಲ್ಲಿ ನಟಿಸಿದ ‘7 ಸ್ಟಾರ್​ ಸುಲ್ತಾನ್​’ ಕುರುಬಾನಿಗೆ ಸೋಶಿಯಲ್​ ಮೀಡಿಯಾದಲ್ಲಿ ವಿರೋಧ

Tagaru Palya Kannada Movie: ಬಕ್ರೀದ್​ಗೆ ಈ ಟಗರನ್ನು ಬಲಿ ಕೊಡುತ್ತಾರೆ ಎಂಬ ಸುದ್ದಿ ಹಬ್ಬಿದೆ. ಇದರ ಜೀವ ಉಳಿಸಬೇಕು ಎಂದು ಜನರು ಪ್ರಯತ್ನಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ‘7 ಸ್ಟಾರ್​ ಸುಲ್ತಾನ್​’ನ ಅನೇಕ ವಿಡಿಯೋಗಳು ವೈರಲ್ ಆಗಿವೆ.

7 Star Sultan: ‘ಟಗರು ಪಲ್ಯ’ ಚಿತ್ರದಲ್ಲಿ ನಟಿಸಿದ ‘7 ಸ್ಟಾರ್​ ಸುಲ್ತಾನ್​’ ಕುರುಬಾನಿಗೆ ಸೋಶಿಯಲ್​ ಮೀಡಿಯಾದಲ್ಲಿ ವಿರೋಧ
7 ಸ್ಟಾರ್​ ಸುಲ್ತಾನ್​
Follow us
ಮದನ್​ ಕುಮಾರ್​
|

Updated on: Jun 25, 2023 | 3:23 PM

ಪ್ರಾಣಿಗಳ ಮೇಲೆ ಕೆಲವರಿಗೆ ವಿಪರೀತ ಪ್ರೀತಿ ಇರುತ್ತದೆ. ವಿಶೇಷವಾಗಿ ಗುರುತಿಸಿಕೊಂಡ ಪ್ರಾಣಿಗಳನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಲಾಗುತ್ತದೆ. ಅದಕ್ಕೆ ಹೊಸ ಉದಾಹರಣೆ ಎಂದರೆ ‘7 ಸ್ಟಾರ್​ ಸುಲ್ತಾನ್​’ (7 Star Sultan) ಎಂಬ ಟಗರು. ಟಗರು ಕಾಳಗದಲ್ಲಿ ಕಾದಾಡಿ ಅನೇಕ ಬಹುಮಾನ ಗೆದ್ದಿರುವ ಈ ಟಗರಿನ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಒಂದು ಅಭಿಯಾನ ಶುರುವಾಗಿದೆ. ಬಕ್ರೀದ್​ (Bakrid 2023) ಹಬ್ಬಕ್ಕೆ ಈ ಟಗರನ್ನು ಬಲಿ ಕೊಡುತ್ತಾರೆ ಎಂಬ ಸುದ್ದಿ ಹಬ್ಬಿರುವ ಬೆನ್ನಲ್ಲೇ ಅದನ್ನು ಉಳಿಸಿಕೊಳ್ಳಬೇಕು ಎಂದು ಜನರು ಪ್ರಯತ್ನಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ‘7 ಸ್ಟಾರ್​ ಸುಲ್ತಾನ್​’ ಬಗ್ಗೆ ಅನೇಕ ಬಗೆಯ ವಿಡಿಯೋಗಳು ವೈರಲ್ ಆಗಿವೆ. ಡಾಲಿ ಧನಂಜಯ್​ ನಿರ್ಮಾಣದ ಟಗರು ಪಲ್ಯ’ (Tagaru Palya Movie) ಸಿನಿಮಾದಲ್ಲೂ ಈ ಟಗರು ನಟಿಸಿದೆ ಎಂಬುದು ವಿಶೇಷ.

‘7 ಸ್ಟಾರ್​ ಸುಲ್ತಾನ್​’ ಹಿನ್ನೆಲೆ:

ಬಕ್ರೀದ್​ ಹಬ್ಬಕ್ಕೆ ಕುರುಬಾನಿ ನೀಡಬೇಕು ಎಂಬ ಉದ್ದೇಶದಿಂದ ಮುಸ್ಲಿಂ ಕುಟುಂಬವೊಂದು ಪುಟ್ಟ ಟಗರಿನ ಮರಿಯನ್ನು ತಂದು ಸಾಕಿತ್ತು. ಅದು ಸ್ವಲ್ಪ ದೊಡ್ಡದಾಗುತ್ತಿದ್ದಂತೆಯೇ ಅದನ್ನು ಮೊದಲ ಬಾರಿ ಟಗರು ಕಾಳಗಕ್ಕೆ ಇಳಿಸಲಾಯಿತು. ಮೊದಲ ಪಂದ್ಯದಲ್ಲೇ ಬಹುಮಾನ ಗೆದ್ದು ಎಲ್ಲರಿಗೂ ಆಶ್ಚರ್ಯ ಮೂಡಿಸಿತು ಆ ಟಗರು. ಕೇವಲ 8 ತಿಂಗಳಲ್ಲಿ ಹಲವು ಕಡೆಗಳಲ್ಲಿ ನಡೆದ ಟಗರು ಕಾಳಗದಲ್ಲಿ ಅನೇಕ ಪ್ರಶಸ್ತಿಗಳನ್ನು ಇದು ಪಡೆದುಕೊಂಡಿತು. ನಂತರ ‘7 ಸ್ಟಾರ್​ ಸುಲ್ತಾನ್​’ ಎಂದೇ ಅದು ಫೇಮಸ್​ ಆಯಿತು. ಇಡೀ ಬಾಗಲಕೋಟೆ ಜಿಲ್ಲೆಯಲ್ಲಿ ಇದು ಮನೆಮಾತಾಯಿತು. ಮಾಲೀಕರಿಗೆ ಇದರಿಂದ ಸಾಕಷ್ಟು ಹಣ, ಬಹುಮಾನ ಹರಿದುಬಂತು.

ಇದನ್ನೂ ಓದಿ: ಅಮೃತಾ ಪ್ರೇಮ್ ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು ‘ಟಗರು ಪಲ್ಯ’ ಚಿತ್ರದ ಹೊಸ ಪೋಸ್ಟರ್

ಈ ವರ್ಷದ ಬಕ್ರೀದ್​ಗೆ ಕುರುಬಾನಿ?

‘7 ಸ್ಟಾರ್​ ಸುಲ್ತಾನ್​’ ಎಂಬ ಟಗರು ಸಿಕ್ಕಾಪಟ್ಟೆ ಫೇಮಸ್​ ಆಗಿದೆ. ಭಾರಿ ಜನಮೆಚ್ಚುಗೆ ಗಳಿಸಿದೆ ಎಂಬುದು ನಿಜ. ಆದರೆ ಅದನ್ನು ಆ ಮುಸ್ಲಿಂ ಕುಟುಂಬದವರು ತಂದಿದ್ದು ಕುರುಬಾನಿ ನೀಡುವ ಸಲುವಾಗಿ. ಹಾಗಾಗಿ ಈ ವರ್ಷದ ಬಕ್ರೀದ್​ಗೆ ಈ ಟಗರನ್ನು ಕುರುಬಾನಿ ನೀಡಲಾಗುವುದು ಎಂಬ ಸುದ್ದಿ ಹಬ್ಬಿದೆ. ಅನೇಕ ಜನರ ಪ್ರೀತಿ ಗಳಿಸಿರುವ ಈ ಟಗರನ್ನು ಸಾಯಿಸಬಾರದು ಎಂದು ಸೋಶಿಯಲ್​ ಮೀಡಿಯಾದಲ್ಲಿ ಅಭಿಯಾನ ಮಾಡಲಾಗುತ್ತಿದೆ. ಅದಕ್ಕೆ ಅನೇಕರು ಬೆಂಬಲ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ‘ಶೂಟಿಂಗ್ ಮುಗಿದಿದೆ, ಸದ್ಯದಲ್ಲೇ ನಿಮ್ಮ ಮುಂದೆ ಬರ್ತೀವಿ’; ‘ಟಗರು ಪಲ್ಯ’ ಚಿತ್ರದ ಬಗ್ಗೆ ಅಪ್​ಡೇಟ್ ನೀಡಿದ ಧನಂಜಯ್

ಬಿಳಿ ಬಣ್ಣದ ‘7 ಸ್ಟಾರ್​ ಸುಲ್ತಾನ್​’ಗೆ ದೊಡ್ಡ ಅಭಿಮಾನಿ ಬಳಗ ಇದೆ. ಇದರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿವೆ. ಸಿನಿಮಾಗಳ ಮಾಸ್​ ಡೈಲಾಗ್​ಗಳನ್ನು ಅಳವಡಿಸಿ ಈ ಟಗರಿನ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ‘ಸುಲ್ತಾನ್​ ಟಗರಿನಿಂದ ಅದರ ಮಾಲೀಕರು ಕೂಡ ಫೇಮಸ್​ ಆಗಿದ್ದಾರೆ. ದಯವಿಟ್ಟು ಬಕ್ರೀದ್​ಗೆ ಕೊಲ್ಲಬೇಡಿ. ಅದರ ಬದಲು ಬೇರೆ ಮರಿಯನ್ನು ಕಡಿಯಿರಿ. ಅದನ್ನು ಕಳೆದುಕೊಂಡರೆ ನೀವು ತುಂಬ ಪಶ್ಚಾತ್ತಾಪ ಪಡುತ್ತೀರಿ. ಅದರ ಪ್ರೀತಿ ಕಳೆದುಕೊಂಡು ಕೊರಗುತ್ತೀರಿ. ದಯವಿಟ್ಟು ಈ ಟಗರನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಅದು ಎಷ್ಟು ದಿನ ನಿಮ್ಮ ಜೊತೆ ಇರುತ್ತದೋ ಅಲ್ಲಿಯವರೆಗೂ ನಿಮಗೆ ಗೌರವ ಹೆಚ್ಚುತ್ತದೆ’ ಎಂದು ಅಭಿಮಾನಿಯೊಬ್ಬರು ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
ಮೊಯ್ಲಿ ಹೇಳಿಕೆಗೆ ಹೈಕಮಾಂಡ್ ಪ್ರತಿಕ್ರಿಯಿಸುತ್ತದೆ: ಎಂಬಿ ಪಾಟೀಲ್
ಮೊಯ್ಲಿ ಹೇಳಿಕೆಗೆ ಹೈಕಮಾಂಡ್ ಪ್ರತಿಕ್ರಿಯಿಸುತ್ತದೆ: ಎಂಬಿ ಪಾಟೀಲ್
ಮಂತ್ರಾಲಯದಲ್ಲಿ 6 ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ ಗುರು ವೈಭವೋತ್ಸವ
ಮಂತ್ರಾಲಯದಲ್ಲಿ 6 ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ ಗುರು ವೈಭವೋತ್ಸವ