AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧೂಮಂ’ಗೆ ನೆಗೆಟಿವ್ ವಿಮರ್ಶೆ, ವಿಡಿಯೋ ಮೂಲಕ ಮನವಿ ಮಾಡಿದ ಪವನ್ ಕುಮಾರ್

Dhoomam: ಪವನ್ ಕುಮಾರ್ ನಿರ್ದೇಶನದ ಧೂಮಂ ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳು ಕೇಳಿಬರುತ್ತಿವೆ. ಈ ಬಗ್ಗೆ ನಿರ್ದೇಶಕ ಪವನ್ ಕುಮಾರ್ ಮಾತನಾಡಿದ್ದಾರೆ. ಪ್ರೇಕ್ಷಕರಲ್ಲಿ ಮನವಿಯೊಂದನ್ನು ಮಾಡಿದ್ದಾರೆ.

'ಧೂಮಂ'ಗೆ ನೆಗೆಟಿವ್ ವಿಮರ್ಶೆ, ವಿಡಿಯೋ ಮೂಲಕ ಮನವಿ ಮಾಡಿದ ಪವನ್ ಕುಮಾರ್
ಧೂಮಂ
ಮಂಜುನಾಥ ಸಿ.
|

Updated on:Jun 26, 2023 | 2:29 AM

Share

ಲೂಸಿಯಾ (Lucia) ಖ್ಯಾತಿಯ ಪವನ್ ಕುಮಾರ್ (Pawan Kumar), ಯೂ-ಟರ್ನ್ (U Turn) ಸಿನಿಮಾ ನಿರ್ದೇಶಿಸಿ ಬರೋಬ್ಬರಿ ಏಳು ವರ್ಷದ ಬಳಿಕ ಧೂಮಮ್ (Dhoomam) ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಶುಕ್ರವಾರವಷ್ಟೆ ಬಿಡುಗಡೆ ಆಗಿದ್ದು ಸಿನಿಮಾಕ್ಕೆ ಋಣಾತ್ಮಕ ವಿಮರ್ಶೆಗಳು ಕೇಳಿ ಬರುತ್ತಿವೆ. ಫಹಾದ್ ಫಾಸಿಲ್ ನಟಿಸಿರುವ ಧೂಮಂ ಸಿನಿಮಾ ಮೂಲತಃ ಮಲಯಾಳಂ ಸಿನಿಮಾ ಆಗಿದ್ದು ಈ ಸಿನಿಮಾದ ಕನ್ನಡ ಡಬ್ಬಿಂಗ್ ಆವೃತ್ತಿಯನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಋಣಾತ್ಮಕ ವಿಮರ್ಶೆಗಳು ಹರಿದಾಡುತ್ತಿವೆ. ಈ ಬಗ್ಗೆ ಪವನ್ ಕುಮಾರ್ ವಿಡಿಯೋ ಮೂಲಕ ಪ್ರೇಕ್ಷಕರಲ್ಲಿ ಮನವಿಯೊಂದನ್ನು ಮಾಡಿದ್ದಾರೆ.

ನಾನು ಬಹಳ ವರ್ಷಗಳ ಬಳಿಕ ಈ ಸಿನಿಮಾ ಮಾಡಿದ್ದೇನೆ, ಏಳು ವರ್ಷಗಳ ಹಿಂದೆಯ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಈಗ ವಿಮರ್ಶೆಗಳ ಹಾವಳಿ ಬಹಳ ಹೆಚ್ಚಾಗಿದೆ. ಎಷ್ಟು ಬೇಗ ವಿಮರ್ಶೆಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುತ್ತಿದ್ದಾರೆಂದರೆ ಸಿನಿಮಾ ಬಗ್ಗೆ ಯೋಚಿಸಿ ವಿಮರ್ಶೆ ನೀಡುವ ಸಮಯವನ್ನೂ ಸಹ ಅವರು ತೆಗೆದುಕೊಳ್ಳುತ್ತಿಲ್ಲ. ಧಾವಂತದಲ್ಲಿ ನಾ-ಮುಂದು ತಾ ಮುಂದು ಎಂದು ಅಪ್​ಲೋಡ್ ಮಾಡುತ್ತಾರೆ. ಆದಷ್ಟು ಬೇಗ ಜನರನ್ನು ಸಿನಿಮಾ ಬಗ್ಗೆ ಇನ್​ಫ್ಲುಯೆನ್ಸ್ ಮಾಡಬೇಕು ಎಂದು ಅಪೇಕ್ಷಿಸುತ್ತಿದ್ದಾರೆ ಎಂದಿದ್ದಾರೆ.

ಸಿನಿಮಾ ವಿಮರ್ಶೆ ಮಾಡುವವರು ಸಿನಿಮಾವನ್ನು ಅರ್ಥ ಮಾಡಿಕೊಳ್ಳಲು ಸಮಯವನ್ನು ತೆಗೆದುಕೊಳ್ಳುತ್ತಿಲ್ಲ. ಮಾತ್ರವಲ್ಲ ಸಿನಿಮಾಕ್ಕೆ ಒಂದು ಅವಕಾಶವನ್ನು, ಸಣ್ಣ ಕಾಲಾವಕಾಶವನ್ನೂ ಕೊಡದೆ ಸಿನಿಮಾದ ವಿರುದ್ಧ ವಿಮರ್ಶೆಗಳನ್ನು ಪ್ರಕಟಿಸುತ್ತಿದ್ದಾರೆ. ಅವರ ಮಾತುಗಳನ್ನು ಕೇಳಬೇಡಿ, ನಿಮ್ಮ ನಿರ್ಣಯವನ್ನು ನೀವು ಮಾಡಿ. ಒಬ್ಬರಿಗೆ ಇಷ್ಟವಾದ ಸಿನಿಮಾ ಇನ್ನೊಬ್ಬರಿಗೆ ಇಷ್ಟವಾಗದೇ ಹೋಗಬಹುದು. ಸಿನಿಮಾದ ಟ್ರೈಲರ್, ಪೋಸ್ಟರ್​ಗಳ ಮೇಲೆ ಸಿನಿಮಾ ನೋಡುವ ನಿರ್ಣಯ ಮಾಡಿ, ವಿಮರ್ಶೆಗಳ ಆಧಾರದಲ್ಲಿ ಸಿನಿಮಾ ನೋಡುವುದೋ ಬೇಡವೋ ಎಂಬ ಬಗ್ಗೆ ನಿರ್ಣಯ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Dhoomam First Half Review: ಪವನ್​ ಕುಮಾರ್​ ನಿರ್ದೇಶನದ ‘ಧೂಮಂ’ ಸಿನಿಮಾ ಹೇಗಿದೆ? ಇಲ್ಲಿದೆ ಫಸ್ಟ್​ ಹಾಫ್​ ರಿಪೋರ್ಟ್​

”ಕೆಲವು ತಿಂಗಳ ಹಿಂದೆ ಬಿಡುಗಡೆ ಆದ ಒಂದು ದೊಡ್ಡ ಸೂಪರ್ ಹಿಟ್ ಸಿನಿಮಾ ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಆ ಸಿನಮಾ ಆಸ್ಕರ್​ಗೆ ಸಹ ಹೋಯಿತು ಆದರೆ ಆ ಸಿನಿಮಾ ನೋಡಿದ ಮೇಲೆ ನನಗೆ ಇಷ್ಟವಾಗಿರಲಿಲ್ಲ. ಅದಕ್ಕೆ ನನಗಿರುವ ವ್ಯಕ್ತಿತ್ವ, ನಾನು ಬೆಳೆದು ಬಂದ ಪ್ರಪಂಚ ಕಾರಣ ಆಗಿರಬಹುದು. ಹಾಗೆಯೇ ಪ್ರತಿ ಸಿನಿಮಾಗಳು ಪ್ರತಿಯೊಬ್ಬರಿಗೂ ಬೇರೆ-ಬೇರೆ ರೀತಿಯಲ್ಲಿ ತಟ್ಟುತ್ತವೆ, ಬೇರೆ-ಬೇರೆ ರೀತಿಯಲ್ಲಿ ಅರ್ಥವಾಗುತ್ತವೆ. ಹಾಗಾಗಿ ಬೇರೆಯವರ ಅಭಿಪ್ರಾಯದ ಮೇಲೆ ನಿರ್ಭರವಾಗದೆ ನೀವೇ ಹೋಗಿ ಸಿನಿಮಾ ನೋಡಿ ನಿಮ್ಮದೇ ಅಭಿಪ್ರಾಯ ರೂಪಿಸಿಕೊಳ್ಳಿ” ಎಂದಿದ್ದಾರೆ ಪವನ್ ಕುಮಾರ್.

ಪವನ್ ಕುಮಾರ್ ನಿರ್ದೇಶಿಸಿರುವ ಧೂಮಂ ಸಿನಿಮಾವು ಸಿಗರೇಟು ಚಟ ಅದರ ದುಷ್ಪರಿಣಾಮಗಳ ಕುರಿತಾದದ್ದಾಗಿದೆ. ಈ ಸಿನಿಮಾವನ್ನು ಹತ್ತು ವರ್ಷಕ್ಕೂ ಹಿಂದೆಯೇ ಪವನ್ ಕುಮಾರ್ ಬರೆದುಕೊಂಡಿದ್ದರು. ಸಿನಿಮಾದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್, ನಟಿ ಅಪರ್ಣಾ ಬಾಲಮುರಳಿ, ರೋಶ್ಯೂ ಮ್ಯಾಥ್ಯು, ಅಚ್ಯುತ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:32 pm, Sun, 25 June 23

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ