ಪುನೀತ್ ಬಿಟ್ಟು ಹೋದ ದ್ವಿತ್ವ ಮತ್ತೆ ಶುರುವಾಗೋದು ಯಾವಾಗ? ಪವನ್ ಕೊಟ್ಟರು ಉತ್ತರ

Dvitva: ಪುನೀತ್ ರಾಜ್​ಕುಮಾರ್ ನಟಿಸಬೇಕಿದ್ದ ದ್ವಿತ್ವ ಸಿನಿಮಾವನ್ನು ಯಾವಾಗ ಶುರು ಮಾಡುತ್ತಾರೆ ಪವನ್ ಕುಮಾರ್?

ಪುನೀತ್ ಬಿಟ್ಟು ಹೋದ ದ್ವಿತ್ವ ಮತ್ತೆ ಶುರುವಾಗೋದು ಯಾವಾಗ? ಪವನ್ ಕೊಟ್ಟರು ಉತ್ತರ
ಪವನ್-ಪುನೀತ್-ದ್ವಿತ್ವ
Follow us
ಮಂಜುನಾಥ ಸಿ.
|

Updated on: Jun 21, 2023 | 8:07 PM

ಪುನೀತ್ ರಾಜ್​ಕುಮಾರ್ (Puneeth Rajkumar) ಅಗಲಿ ವರ್ಷದ ಮೇಲಾಯ್ತು. ಆದರೆ ಅವರ ನೆನಪು ಇಂದಿಗೂ ತುಸುವೂ ಮಾಸಿಲ್ಲ. ಹಲವು ಸುಂದರ ನೆನಪುಗಳು ಹಾಗೂ ಸಿನಿಮಾಗಳನ್ನು ಪುನೀತ್ ರಾಜ್​ಕುಮಾರ್ ಬಿಟ್ಟು ಹೋಗಿದ್ದಾರೆ. ಪುನೀತ್ ತಮ್ಮ ವೃತ್ತಿ ಜೀವನದಲ್ಲಿ ಹೊಳವು ದಾರಿಯಲ್ಲಿ ಇರುವಾಗಲೇ ಹೋಗಿಬಿಟ್ಟರಲ್ಲ ಎಂಬ ಬೇಸರ ಸಿನಿಮಾ ಪ್ರೇಮಿಗಳನ್ನು ಬಹುವಾಗಿ ಕಾಡಿತ್ತು ಈಗಲೂ ಕಾಡುತ್ತಿದೆ. ಸಿದ್ಧ ಮಾದರಿಯ ಮಾಸ್ ಸಿನಿಮಾಗಳಿಂದ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳತ್ತ ಹೊರಳುವ ಸಮಯದಲ್ಲಿಯೇ ಪುನೀತ್ ಅಗಲಿಬಿಟ್ಟರು. ಅವರು ದ್ವಿತ್ವ (Dvitva)  ಸಿನಿಮಾವನ್ನು ಒಪ್ಪಿಕೊಂಡಾಗ ಸಿನಿಮಾ ಪ್ರೇಮಿಗಳು ಹಾಗೂ ಅಪ್ಪು ಅಭಿಮಾನಿಗಳಿಬ್ಬರೂ ಖುಷಿ ವ್ಯಕ್ತಪಡಿಸಿದ್ದರು. ಆದರೆ ಆ ಸಿನಿಮಾ ಸೆಟ್ಟೇರುವ ಮುನ್ನವೇ ಅಪ್ಪು ಹೋಗಿಬಿಟ್ಟರು. ಈಗ ಆ ಸಿನಿಮಾ ಏನಾಗಿದೆ? ಮತ್ತೆ ಯಾವಾಗ ಶುರುವಾಗುತ್ತದೆ? ನಿರ್ದೇಶಕ ಪವನ್ (Pawan Kumar) ಆ ಬಗ್ಗೆ ಮಾತನಾಡಿದ್ದಾರೆ.

ತಮ್ಮ ಹೊಸ ಸಿನಿಮಾ ಧೂಮಂನ ಕುರಿತಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ರಾಜ್​ಕುಮಾರ್ ಜೊತೆಗೆ ಮಾಡಬೇಕಿದ್ದ ದ್ವಿತ್ವ ಸಿನಿಮಾ ಬಗ್ಗೆ ಮಾತನಾಡಿದ ಪವನ್, ”ದ್ವಿತ್ವ ಸಿನಿಮಾವನ್ನು ಹತ್ತಿರದಲ್ಲಿ ಕೈಗೆತ್ತಿಕೊಳ್ಳುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ತಾವೇಕೆ ಈಗ ದ್ವಿತ್ವ ಸಿನಿಮಾ ಮಾಡುತ್ತಿಲ್ಲ ಎಂಬುದಕ್ಕೆ ಎರಡು ಕಾರಣಗಳನ್ನು ಪವನ್ ಕುಮಾರ್ ನೀಡಿದ್ದಾರೆ.

”ದ್ವಿತ್ವ ಸಿನಿಮಾ ಬಗ್ಗೆ ನಾನು ಯೋಚಿಸಿದಾಗೆಲ್ಲ ನನಗೆ ಪುನೀತ್ ರಾಜ್​ಕುಮಾರ್ ಅವರೇ ಕಣ್ಣ ಮುಂದೆ ಬರುತ್ತಾರೆ. ನಾನು ಆ ಕತೆಯನ್ನು ಕಲ್ಪಿಸಿಕೊಂಡಿದ್ದೇ ಪುನೀತ್ ರಾಜ್​ಕುಮಾರ್ ಅವರ ಮೂಲಕ ಹಾಗಾಗಿ ನನಗೆ ಆ ನೆನಪಿನಿಂದ ಹೊರಗೆ ಬರಲು ಇನ್ನೂ ಆಗಿಲ್ಲ. ಆ ಪಾತ್ರಕ್ಕೆ ಬೇರೆಯವರನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಾಗುತ್ತಿಲ್ಲ. ಆ ನೆನಪುಗಳಿಂದ ಹೊರಬರಲೆಂದು ಆ ಸಿನಿಮಾವನ್ನು ಸದ್ಯಕ್ಕೆ ಪಕ್ಕಕ್ಕೆ ಇಟ್ಟಿದ್ದೀವಿ” ಎಂದಿದ್ದಾರೆ.

”ಆ ದುರ್ಘಟನೆ ನಡೆದಾಗ ಚಿತ್ರೀಕರಣದಿಂದ ಕೇವಲ ಎರಡು ವಾರ ನಾವು ದೂರವಿದ್ದೆವು. ಎಲ್ಲ ತಯಾರಿಯೂ ಆಗಿಬಿಟ್ಟಿತ್ತು. ಘಟನೆ ನಡೆದ ಕೆಲವು ದಿನಗಳ ಬಳಿಕ ಹೊಂಬಾಳೆಯವರು ಸಹ ಆ ಸಿನಿಮಾವನ್ನು ಸದ್ಯಕ್ಕೆ ಪಕ್ಕಕ್ಕಿಡೋಣ ಎಂದರು. ನನಗೂ ಸಹ ಹಾಗೆಯೇ ಅನ್ನಿಸುತ್ತಿದ್ದು, ಆ ಪಾತ್ರಕ್ಕೆ ಬೇರೆಯವರನ್ನು ಕಲ್ಪಿಸಿಕೊಳ್ಳಲು ಸಾಧ್ಯವವಾಗುವವರೆಗೆ ಆ ಸಿನಿಮಾವನ್ನು ಕೈಗೆತ್ತಿಕೊಳ್ಳುವುದು ಕಷ್ಟ” ಎಂದಿದ್ದಾರೆ ಪವನ್.

ಇದನ್ನೂ ಓದಿ:ಧೂಮಂ ಕನ್ನಡ ಡಬ್ಬಿಂಗ್ ಬಗ್ಗೆ ಸ್ಪಷ್ಟನೆ ಕೊಟ್ಟ ಪವನ್ ಕುಮಾರ್

”ಅಲ್ಲದೆ, ಈಗ ಸತತವಾಗಿ ಥ್ರಿಲ್ಲರ್ ಅಂಶಗಳಿರುವ ಸಿನಿಮಾಗಳನ್ನೆ ಮಾಡುತ್ತಾ ಬಂದಿದ್ದೇನೆ. ಲೂಸಿಯಾ ಬಳಿಕ ಯೂ-ಟರ್ನ್ ಇದೀಗ ಧೂಮಂ ಎಲ್ಲವೂ ಥ್ರಿಲ್ಲರ್ ಅಂಶಗಳುಳ್ಳ ಸಿನಿಮಾಗಳೇ ಆಗಿವೆ. ದ್ವಿತ್ವ ಸಹ ಸ್ವಲ್ಪ ಅದೇ ಜಾನರ್​ಗೆ ಸೇರಿದ ಸಿನಿಮಾ. ಹಾಗಾಗಿ ಒಂದರ ಹಿಂದೊಂದು ಥ್ರಿಲ್ಲರ್ ಬೇಡ ಅನಿಸುತ್ತಿದೆ. ಫೀಲ್ ಗುಡ್ ಮಾದರಿಯ ಅಥವಾ ನಿಜ ಜೀವನದಿಂದ ಇನ್​ಸ್ಪೈರ್ ಆಗಿರುವ ಪ್ರೇಮಕತೆ ಅಥವಾ ಬೇರೆ ರೀತಿಯ ಕತೆಯನ್ನು ಸಿನಿಮಾ ಮಾಡುವ ಆಲೋಚನೆಯೂ ಇದೆ. ಹಾಗಾಗಿ ಈ ಸದ್ಯಕ್ಕೆ ದ್ವಿತ್ವ ಸಿನಿಮಾವನ್ನು ಕೈಗೆತ್ತಿಕೊಳ್ಳುವುದಿಲ್ಲ” ಎಂದಿದ್ದಾರೆ ಪವನ್ ಕುಮಾರ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ