ಧೂಮಂ ಕನ್ನಡ ಡಬ್ಬಿಂಗ್ ಬಗ್ಗೆ ಸ್ಪಷ್ಟನೆ ಕೊಟ್ಟ ಪವನ್ ಕುಮಾರ್

Pawan Kumar: ಪವನ್ ಕುಮಾರ್ ನಿರ್ದೇಶಿಸಿ, ಹೊಂಬಾಳೆ ನಿರ್ಮಿಸಿರುವ ಧೂಮಂ ಮಲಯಾಳಂ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಮಾದ ಕನ್ನಡ ಡಬ್ಬಿಂಗ್ ಬಗ್ಗೆ ಪವನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಧೂಮಂ ಕನ್ನಡ ಡಬ್ಬಿಂಗ್ ಬಗ್ಗೆ ಸ್ಪಷ್ಟನೆ ಕೊಟ್ಟ ಪವನ್ ಕುಮಾರ್
ಪವನ್-ಧೂಮಂ
Follow us
ಮಂಜುನಾಥ ಸಿ.
|

Updated on: Jun 21, 2023 | 5:53 PM

ಹೊಂಬಾಳೆ ಫಿಲಮ್ಸ್ (Hombale Films) ನಿರ್ಮಿಸಿ, ಕನ್ನಡದ ಪವನ್ ಕುಮಾರ್ (Pawan Kumar) ನಿರ್ದೇಶನ ಮಾಡಿರುವ ಮಲಯಾಳಂ ಸಿನಿಮಾ ಧೂಮಮ್ ಇದೇ ಶುಕ್ರವಾರ ಬಿಡುಗಡೆ ಆಗಲಿದೆ. ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಫಹಾದ್ ಫಾಸಿಲ್ ನಟಿಸಿರುವ ಈ ಸಿನಿಮಾವನ್ನು ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿಯೂ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೆ ಸಿನಿಮಾದ ಟ್ರೈಲರ್ ಕನ್ನಡದಲ್ಲಿಯೂ ಬಿಡುಗಡೆ ಆಗಿತ್ತು. ಆದರೆ ಡಬ್ಬಿಂಗ್ ಸರಿಯಿಲ್ಲವೆಂಬ ಟೀಕೆ ಸಿನಿಪ್ರೇಮಿಗಳಿಂದ ವ್ಯಕ್ತವಾಗಿತ್ತು. ಬಿಡುಗಡೆಗೆ ಇನ್ನೆರಡು ದಿನ ಇರುವಂತೆ ಈ ಬಗ್ಗೆ ನಿರ್ದೇಶಕ ಪವನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಫೇಸ್​ಬುಕ್ ಲೈವ್​ನಲ್ಲಿ ಈ ಬಗ್ಗೆ ಮಾತನಾಡಿರುವ ಪವನ್ ಕುಮಾರ್, ಒಬ್ಬ ಸಿನಿಮಾ ಕರ್ಮಿಯಾಗಿ ನನಗೆ ಯಾವುದೇ ಸಿನಿಮಾಗಳನ್ನು ಅದರ ಮೂಲಭಾಷೆಯಲ್ಲಿಯೇ ನೋಡಲು ಇಷ್ಟ. ಹಾಗಾಗಿಯೇ ನಾನು ಧೂಮಂ ಸಿನಿಮಾದ ಮಲಯಾಳಂ ಆವೃತ್ತಿಯನ್ನೇ ಪ್ರಮೋಟ್ ಮಾಡುತ್ತಿದ್ದೆ. ಆದರೆ ಡಬ್ಬಿಂಗ್ ನೋಡುವ ಅಭ್ಯಾಸ ಇರುವವರನ್ನು ನಿರಾಸೆಪಡಿಸಬಾರದೆಂಬ ಕಾರಣಕ್ಕೆ ಸಿನಿಮಾದ ಕನ್ನಡ, ತೆಲುಗು, ತಮಿಳು ಡಬ್ಬಿಂಗ್ ಆವೃತ್ತಿಯನ್ನೂ ಬಿಡುಗಡೆ ಮಾಡುತ್ತಿದ್ದೇವೆ” ಎಂದಿದ್ದಾರೆ.

ಟ್ರೈಲರ್ ಬಿಡುಗಡೆ ಆದಾಗ ಕನ್ನಡ ಡಬ್ಬಿಂಗ್ ಸರಿಯಿಲ್ಲ, ಫಹಾದ್ ಫಾಸಿಲ್ ಧ್ವನಿ ಮ್ಯಾಚ್ ಆಗಿಲ್ಲ ಎಂದು ಹೇಳಿದರು. ಟ್ರೈಲರ್ ಬಿಡುಗಡೆಗೆ ಮುನ್ನ ನನಗೂ ಅದು ಹೌದೆನ್ನಿಸಿತ್ತು. ಆದರೆ ಟ್ರೈಲರ್ ಬಿಡುಗಡೆ ಬಳಿಕ ಬೇರೆ ಡಬ್ಬಿಂಗ್ ಕಲಾವಿದರನ್ನು ಕರೆತಂದು ಹೊಸದಾಗಿ ಡಬ್ಬಿಂಗ್ ಮಾಡಿಸಿದ್ದೇವೆ. ಹಾಗಿದ್ದರೂ ಸಹ ನನಗೆ ಅಷ್ಟು ಭರವಸೆ ಡಬ್ಬಿಂಗ್ ಮೇಲೆ ಇರಲಿಲ್ಲ. ಆದರೆ ನಿನ್ನೆಯಷ್ಟೆ (ಜೂನ್ 20) ನಾನು ಕನ್ನಡ ಡಬ್ಬಿಂಗ್ ಆವೃತ್ತಿಯನ್ನು ನೋಡಿದೆ. ನನಗೆ ಬಹಳ ಇಷ್ಟವಾಯಿತು. ಮಲಯಾಳಂ ಆವೃತ್ತಿಯಂತೆಯೇ ಸ್ಪಷ್ಟವಾಗಿದೆ ಎನಿಸಿತು” ಎಂದಿದ್ದಾರೆ ಪವನ್.

ಇದನ್ನೂ ಓದಿ:ದ್ವಿತ್ವಗೆ ಮಾತ್ರವಲ್ಲ ಧೂಮಂಗೂ ಅಪ್ಪು ನಾಯಕರಾಗಬೇಕಿತ್ತು, ಆಗಲಿಲ್ಲ ಏಕೆ?

ಸಿನಿಮಾದ ನಿರ್ಮಾಪಕರಾದ ವಿಜಯ್ ಕಿರಗಂದೂರು ಅವರೂ ಸಹ ಕನ್ನಡ ಡಬ್ಬಿಂಗ್ ನೋಡಿ ಖುಷಿ ಪಟ್ಟರು. ನನಗೂ ಸಹ ಬಹಳ ಖುಷಿಯಾಯಿತು. ಹಾಗಾಗಿ ಈ ಸಿನಿಮಾವನ್ನು ಕನ್ನಡ ಡಬ್ಬಿಂಗ್ ಸಿನಿಮಾ ಎಂಬ ಕಾರಣಕ್ಕೆ ನಿರಾಕರಿಸಬೇಡಿ, ಒಮ್ಮೆ ಹೋಗಿ ನೋಡಿ. ಟ್ರೈಲರ್​ನಲ್ಲಿ ಇದ್ದ ಡಬ್ಬಿಂಗ್​ಗೂ ಈಗ ಬಿಡುಗಡೆ ಆಗುತ್ತಿರುವ ಡಬ್ಬಿಂಗ್​ಗೂ ಬಹಳಷ್ಟು ವ್ಯತ್ಯಾಸವಿದೆ ಹಾಗಾಗಿ ಸಿನಿಮಾವನ್ನು ತಪ್ಪದೆ ನೋಡಿ ಎಂದು ಪವನ್ ಕುಮಾರ್ ಮನವಿ ಮಾಡಿದ್ದಾರೆ.

ಡಬ್ಬಿಂಗ್ ವಿಷಯವಾಗಿಯೇ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪವನ್ ಕುಮಾರ್, ಕೆಜಿಎಫ್ ಸಿನಿಮಾದ ಬಳಿಕವಷ್ಟೆ ಕನ್ನಡ ಸಿನಿಮಾ ರಂಗವು ಡಬ್ಬಿಂಗ್​ಗೆ ಹೆಚ್ಚು ತೆರೆದುಕೊಂಡಿದೆ. ಆದರೆ ಬೇರೆ ಚಿತ್ರರಂಗಗಳಲ್ಲಿ ಡಬ್ಬಿಂಗ್​ಗೆ ಪ್ರತ್ಯೇಕ ವಿಭಾಗವೇ ಇದೆ. ಅವರು ನಿಪುಣರಾಗಿದ್ದಾರೆ ಆದರೆ ನಮಗೆ ಡಬ್ಬಿಂಗ್ ಹೊಸದಾದ್ದರಿಂದ ನಾವು ಇನ್ನೂ ಕಲಿಯಬೇಕಿದೆ. ಹಾಗಾಗಿ ನಮ್ಮ ಟ್ರೈಲರ್​ನಲ್ಲಿ ಡಬ್ಬಿಂಗ್ ಗುಣಮಟ್ಟ ಕಡಿಮೆ ಇದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದರು. ಅದೇ ಸಂದರ್ಶನದಲ್ಲಿ ಕನ್ನಡ ಡಬ್ಬಿಂಗ್ ಅನ್ನು ಸರಿಮಾಡುತ್ತಿದ್ದೇವೆ ಎಂದು ಸಹ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್