ಈ ವಾರ ಥಿಯೇಟರ್ ಹಾಗೂ ಒಟಿಟಿಯಲ್ಲಿ ಹಬ್ಬ; ರಿಲೀಸ್ ಆಗುತ್ತಿವೆ ಮಸ್ತ್ ಸಿನಿಮಾಗಳು
ಈ ವಾರ ಥಿಯೇಟರ್ ಹಾಗೂ ಒಟಿಟಿಯಲ್ಲಿ ಹಲವು ಸಿನಿಮಾಗಳು ರಿಲೀಸ್ಗೆ ರೆಡಿ ಇವೆ. ಈ ವಾರದ ರಿಲೀಸ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕಳೆದ ವಾರ ರಿಲೀಸ್ ಆದ ‘ಆದಿಪುರುಷ್’ ಸಿನಿಮಾ (Adipurush Movie) ಕನಿಷ್ಠ ಒಂದು ತಿಂಗಳವಾದರೂ ಅಬ್ಬರಿಸಲಿದೆ ಎಂಬುದು ಅನೇಕರ ಊಹೆ ಆಗಿತ್ತು. ಈ ಕಾರಣಕ್ಕೆ ಈ ವಾರ (ಜೂನ್ 23) ಸಿನಿಮಾ ರಿಲೀಸ್ ಮಾಡಲು ಹಿಂದೇಟು ಹಾಕಿದ್ದರು. ಆದರೆ, ‘ಆದಿಪುರುಷ್’ ಸಿನಿಮಾ ನೆಗೆಟಿವ್ ವಿಮರ್ಶೆ ಪಡೆದಿದೆ. ದಿನ ಕಳೆದಂತೆ ಥಿಯೇಟರ್ಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಈ ವಾರ ಹೊಸ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿವೆ. ಥಿಯೇಟರ್ ಹಾಗೂ ಒಟಿಟಿಯಲ್ಲಿ ಹಲವು ಸಿನಿಮಾಗಳು ರಿಲೀಸ್ಗೆ ರೆಡಿ ಇವೆ. ಈ ವಾರದ ರಿಲೀಸ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಧೂಮಂ
‘ಧೂಮಂ’ ಚಿತ್ರಕ್ಕೆ ಪವನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಫಹಾದ್ ಫಾಸಿಲ್, ಅಚ್ಯುತ್ ಕುಮಾರ್ ಮೊದಲಾದವರು ಮುಖ್ಯಭೂಮಿಕೆಯಲ್ಲಿದ್ದಾರೆ. ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ರಿಲೀಸ್ ಆದ ಟ್ರೇಲರ್ ಎಲ್ಲರ ಗಮನ ಸೆಳೆದಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಈ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗೋದು ವಿಳಂಬ ಆಗಲಿದೆ ಎನ್ನಲಾಗಿತ್ತು. ಆದರೆ, ಇದು ಸುಳ್ಳಾಗಿದೆ. ಜೂನ್ 23ರಂದು ಮಲಯಾಳಂ ಹಾಗೂ ಕನ್ನಡದಲ್ಲಿ ಈ ಸಿನಿಮಾ ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿದೆ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿತ್ತು. ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿರುವುದರಿಂದ ನಿರೀಕ್ಷೆ ಹೆಚ್ಚಿದೆ.
‘ಅಗ್ರಸೇನಾ’
ಅಮರ್ ವಿರಾಜ್, ಅಗಸ್ತ್ಯ ಬಾಳ್ಗೆರೆ, ರಚನಾ ದಶರಥ್, ನೀರ್ನಳ್ಳಿ ರಾಮಕೃಷ್ಣ ಮೊದಲಾದವರು ನಟಿಸಿರುವ ‘ಅಗ್ರಸೇನಾ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಕನ್ನಡದ ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಕನ್ನಡದಲ್ಲಿ ‘ಮೊದಲ ಮಳೆ’, ‘ರೋಡ್ ಕಿಂಗ್’ ಚಿತ್ರಗಳೂ ತೆರೆಗೆ ಬರುತ್ತಿವೆ.
1920: ಹಾರರ್ಸ್ ಆಫ್ ಹಾರ್ಟ್
ಹಾರರ್ ಸಿನಿಮಾಗಳನ್ನು ಇಷ್ಟ ಪಡುವ ಒಂದು ವರ್ಗ ಇದೆ. ಅವರಿಗೋಸ್ಕರ ರೆಡಿ ಆಗಿದೆ ‘1920: ಹಾರರ್ಸ್ ಆಫ್ ಹಾರ್ಟ್’ ಸಿನಿಮಾ. ಕೃಷ್ಣ ಭಟ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ವಿಕ್ರಮ್ ಭಟ್ ನಿರ್ಮಾಣ ಮಾಡಿದ್ದಾರೆ. ಅವಿಕಾ ಗೋರ್, ರಾಹುಲ್ ದೇವ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಜೋರಾಗಿದೆ. ಹಿಂದಿಯಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ.
ಮನು ಚರಿತ್ರಾ
ತೆಲುಗಿನಲ್ಲಿ ಮನು ಚರಿತ್ರಾ ಹೆಸರಿನ ಸಿನಿಮಾ ರಿಲೀಸ್ ಆಗುತ್ತಿದೆ. ಭರತ್ ಪೆಡಗನಿ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಶಿವ ಕಂಡುಕುರಿ, ಮೇಘಾ ಆಕಾಶ್ ಮೊದಲಾದವರು ನಟಿಸಿದ್ದಾರೆ.
ಇದನ್ನೂ ಓದಿ: Salman Khan: ಸಲ್ಮಾನ್ ಖಾನ್ಗೆ ಬಂತು ಮದುವೆ ಪ್ರಪೋಸಲ್; ಶಾರುಖ್ ಖಾನ್ ಹೆಸರು ಹೇಳಿ ತಪ್ಪಿಸಿಕೊಂಡ ನಟ
ಒಟಿಟಿ ರಿಲೀಸ್ಗಳು
ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಥಿಯೇಟರ್ನಲ್ಲಿ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆಯಿತು. ಜೀ5 ಮೂಲಕ ಈ ಚಿತ್ರ ಪ್ರಸಾರ ಕಾಣಲಿದೆ. ಅಖಿಲ್ ಅಕ್ಕಿನೇನಿ ‘ಏಜೆಂಟ್’ ಸಿನಿಮಾ ಸೋನಿ ಲಿವ್ನಲ್ಲಿ ರಿಲೀಸ್ ಆಗಲಿದೆ. ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದ ‘ದಿ ಕೇರಳ ಸ್ಟೋರಿ’ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ. ‘ಕೇರಳ ಕ್ರೈಮ್ ಫೈಲ್ಸ್’, ‘ಟೀಕು ವೆಡ್ಸ್ ಶೇರ್’ ಸಿನಿಮಾಗಳು ಅನುಕ್ರಮವಾಗಿ ಹಾಟ್ಸ್ಟಾರ್ ಹಾಗೂ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಬಿಡುಗಡೆ ಆಗಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ