ಸಿದ್ದರಾಮಯ್ಯರನ್ನೂ ಸೇರಿ ಕಾಂಗ್ರೆಸ್ ನಾಯಕರನ್ನು ಪಾಕಿಸ್ತಾನಕ್ಕೆ ಕಳಿಸುವಂತೆ ಕರೆ ನೀಡಿದ ಶ್ರೀರಾಮಸೇನಾ ಮುಖಂಡ
ಸಿದ್ಧರಾಮಯ್ಯನವರ ಬೆಂಬಲಿಗರು ಕರೆ ಮಾಡಿ ಧಮ್ಕಿ ಹಾಕುತ್ತಿದ್ದಾರೆ. ಜೀವ ಬೆದರಿಕೆ ಹಾಕುತ್ತಿದ್ದಾರೆ. ಅವರನ್ನು ಪಾಕಿಸ್ತಾನಕ್ಕೆ ಕಳಿಸಿದರೆ ಇಲ್ಲಿ ಶ್ರೀರಾಮ, ಲಕ್ಷ್ಮಣ ಆಂಜನೇಯ,ಮೂನ್ನೂರು ಕೋಟಿ ದೇವತೆಗಳು ಇರುತ್ತಾರೆ ಎಂದು ಶ್ರೀರಾಮಸೇನಾ ಬಳ್ಳಾರಿ ವಿಭಾಗದ ಅಧ್ಯಕ್ಷ ಸಂಜೀವ ಮರಡಿ ಜರೆ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆ: ಮಾಜಿ ಸಿಎಂ ಸಿದ್ಧರಾಮಯ್ಯನವರನ್ನೂ ಒಳಗೊಂಡಂತೆ ಕಾಂಗ್ರೆಸ್ ನಾಯಕರನ್ನು ಪಾಕಿಸ್ತಾನಕ್ಕೆ ಕಳುಹಿಸುವಂತೆ ಶ್ರೀರಾಮಸೇನಾ ಬಳ್ಳಾರಿ ವಿಭಾಗದ ಅಧ್ಯಕ್ಷ ಸಂಜೀವ ಮರಡಿ ಕರೆ ಕೊಟ್ಟಿದ್ದಾರೆ. ಬಾದಾಮಿಯಲ್ಲಿನ ಪುರಾತನ ದೇವಾಲಯಗಳ ತೆರವು ವಿಚಾರವಾಗಿ ವಾಗ್ವಾದ ನಡೆಸಿದ ಅವರು, ಶಾಸಕರ ಕುಮ್ಮಕ್ಕಿನಿಂದ ದೇಗುಲ ಸ್ಥಳಾಂತರಗೊಳಿಸಲು ಪ್ರಯತ್ನ ನಡೆದಿದೆ. ಸಿದ್ಧರಾಮಯ್ಯನವರೇ, ನಿಮಗೆ ತಾಕತ್ತಿದ್ದರೆ ದೇಗುಲ ಸ್ಥಳಾಂತರಿಸಿ ಎಂದು ಬಾದಾಮಿಯಲ್ಲಿ ಮಾತನಾಡಿದ್ದೆ. ಪ್ರಮೋದ ಮುತಾಲಿಕ್ ಅವರ ನೇತೃತ್ವದಲ್ಲಿ ಹೋರಾಟ ಮಾಡುವುದಾಗಿ ಹೇಳಿದ್ದೆ. ಆದರೆ ಈಗ ಸಿದ್ಧರಾಮಯ್ಯನವರ ಬೆಂಬಲಿಗರು ಕರೆ ಮಾಡಿ ಧಮ್ಕಿ ಹಾಕುತ್ತಿದ್ದಾರೆ. ಜೀವ ಬೆದರಿಕೆ ಹಾಕುತ್ತಿದ್ದಾರೆ. ಅವರನ್ನು ಪಾಕಿಸ್ತಾನಕ್ಕೆ ಕಳಿಸಿದರೆ ಇಲ್ಲಿ ಶ್ರೀರಾಮ, ಲಕ್ಷ್ಮಣ ಆಂಜನೇಯ,ಮೂನ್ನೂರು ಕೋಟಿ ದೇವತೆಗಳು ಇರುತ್ತಾರೆ ಎಂದು ಶ್ರೀರಾಮಸೇನಾ ಬಳ್ಳಾರಿ ವಿಭಾಗದ ಅಧ್ಯಕ್ಷ ಸಂಜೀವ ಮರಡಿ ಜರೆ ವಾಗ್ದಾಳಿ ನಡೆಸಿದ್ದಾರೆ.
ಕಾರ್ಕಳದ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ರಾಮಚಂದ್ರಪ್ಪ ಎಂಬ ವ್ಯಕ್ತಿ ಪಾಕಿಸ್ತಾನದ ಪರವಾಗಿ ಮಾತನಾಡಿದ್ದ. ಆ ವ್ಯಕ್ತಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಬೆಂಬಲಿಸಿ ಟ್ವೀಟ್ ಮಾಡಿದ್ದರು. ಆತ ಕಾಂಗ್ರೆಸ್ ಬೆಂಬಲಿಗ ಅಂದರು. ಸಿದ್ಧರಾಮಯ್ಯನವರನ್ನೂ ಸೇರಿಸಿ ಅಂತಹ ಕಾಂಗ್ರೆಸ್ ಮುಖಂಡರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಶ್ರೀರಾಮಸೇನಾ ಬಳ್ಳಾರಿ ವಿಭಾಗದ ಅಧ್ಯಕ್ಷ ಸಂಜೀವ ಮರಡಿ ಜರೆ ಹೇಳಿದ್ದಾರೆ.
ಮುಂದುವರೆದ ಮಾತನಾಡಿದ ಅವರು, ಬಾದಾಮಿಯಲ್ಲಿರುವ ಎಲ್ಲ ಪುರಾತನ ದೇವಾಲಯಗಳನ್ನೂ ಉತ್ಖನನ ಮಾಡಬೇಕು. ರಾಜಕಾರಣದ ಕಾರಣಗಳನ್ನು ತ್ಯಜಿಸಿ ಎಲ್ಲ ಹಿಂದೂ ದೇಗುಲಗಳ ಪುನರುತ್ಥಾನ ನಡೆಸಬೆಕು ಎಂದು ಬಾದಾಮಿ ಶಾಸಕರೂ ಆದ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಇದನ್ನೂ ಓದಿ:
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ: ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಸ್ತಾಪಿಸಿ ಸಿದ್ದರಾಮಯ್ಯ ಟೀಕೆ
ಬಾಗಲಕೋಟೆ: ಬಾರ್ ಅಂಡ್ ರೆಸ್ಟೋರೆಂಟ್ ತೆರವುಗೊಳಿಸಲು ಆಗ್ರಹ; ಬಾರ್ ಮುಂದೆ ಮಹಿಳೆಯರಿಂದ ಪ್ರತಿಭಟನೆ
(Bagalkot Sri Ram Sena president Sanjeev says Siddaramaiah and Congress leaders to be sent to Pakistan)
Published On - 4:22 pm, Fri, 27 August 21