ಬ್ಯಾಂಕ್ಗಳ ರಾಬರಿ ಪ್ರಕರಣ: ಅಂತಾರಾಜ್ಯ ಕಳ್ಳರು ಅಂದರ್; ಹಣ, ಬಂಗಾರ ಸೀಜ್
ಬಾಗಲಕೋಟೆ ಜಿಲ್ಲೆಯಲ್ಲಿ ನಡೆದ ಎಸ್ಬಿಐ ಕಾಕನೂರು ಮತ್ತು ಕುಳಗೇರಿ ವೀರಪುಲಿಕೇಶಿ ಬ್ಯಾಂಕ್ ದರೋಡೆ ಪ್ರಕರಣಗಳ ಸಂಬಂಧ ಬಾಗಲಕೋಟೆ ಜಿಲ್ಲಾ ಪೊಲೀಸರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದ್ದು, ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಬಾಗಲಕೋಟೆ/ ಬೆಂಗಳೂರು, ನವೆಂಬರ್ 25: ಕಾಕನೂರು ಗ್ರಾಮದಲ್ಲಿ ಎಸ್ಬಿಐ ದರೋಡೆ ಮತ್ತು ಕುಳಗೇರಿ ವೀರಪುಲಿಕೇಶಿ ಬ್ಯಾಂಕ್ ಕಳ್ಳತನ ಪ್ರಕರಣ ಸಂಬಂಧ ಬಾಗಲಕೋಟೆ ಜಿಲ್ಲಾ ಪೊಲೀಸರು ಅಂತಾರಾಜ್ಯ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ. ಉತ್ತರ ಪ್ರದೇಶದ ಕಕ್ರಾಳ ಗ್ರಾಮದ ಮಹಮ್ಮದ ನವಾನ್ ಹಾಗೂ ಕಮರುಲ್‌ಖಾನ್ ಬಂಧಿತ ಆರೋಪಿಗಳಾಗಿದ್ದು, ಹಣ ಮತ್ತು ಆಭರಣವನ್ನು ಜಪ್ತಿ ಮಾಡಲಾಗಿದೆ.
2025ರ ಸೆಪ್ಟಂಬರ್ 2ರಂದು ಕಾಕನೂರು ಗ್ರಾಮದಲ್ಲಿನ ಎಸ್ಬಿಐ ದರೋಡೆ ನಡೆದಿತ್ತು.ಗ್ಯಾಸ್ ಕಟರನಿಂದ ಲಾಕರ್ ಮುರಿದು, ಚಿನ್ನಾಭರಣ ಕದ್ದು ಊವರ ಗ್ಯಾಂಗ್ ಎಸ್ಕೇಪ್ ಆಗಿತ್ತು. ಸಿಸಿ ಕ್ಯಾಮರಾಗಳಿಗೆ ಬ್ಲ್ಯಾಕ್ ಸ್ಪ್ರೇ ಹೊಡೆದು, ವೈರ್ ಕಟ್ ಮಾಡಿ ಆರೋಪಿಗಳು ಚಾಲಾಕಿತನ ಮೆರೆದಿದ್ದರು. ಕುಳಗೇರಿಯ ವೀರಪುಲಿಕೇಶಿ ಬ್ಯಾಂಕ್ನಲ್ಲೂ ದರೋಡೆ ನಡೆದಿತ್ತು. ಪ್ರಕರಣಗಳ ಸಂಬಂಧ 1,55,000 ರೂ. ನಗದು ಸೇರಿ ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಾಗಲಕೋಟೆ ಎಸ್ಪಿ ಸಿದ್ಧಾರ್ಥ ಗೋಯಲ್ ಮಾರ್ಗದರ್ಶನದಲ್ಲಿ ಬಾದಾಮಿ ಹಾಗೂ ಕೆರೂರು ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.
ಇದನ್ನೂ ಓದಿ: ಬೆಂಗಳೂರಲ್ಲಿ 7.11 ಕೋಟಿ ದರೋಡೆ ಕೇಸ್; ಮತ್ತೆ 42 ಲಕ್ಷ ರೂ. ಜಪ್ತಿ, ಈವರೆಗೆರಿ ಕವರಿಯಾದ ಹಣವೆಷ್ಟು?
23 ಕೆಜಿ ಬೆಳ್ಳಿ ಕದ್ದ ಕಳ್ಳ ಒಂದೇ ಗಂಟೆಯಲ್ಲಿ ಅರೆಸ್ಟ್

ಆಯಾಜಿ ಚೌಧರಿ
23 ಕೆಜಿ ಬೆಳ್ಳಿ ಕದ್ದಿದ್ದ ಖತರ್ನಾಕ್ ಕಳ್ಳನನ್ನು ಒಂದು ಗಂಟೆಯಲ್ಲಿಯೇ ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಆಯಾಜಿ ಚೌಧರಿ (43) ಬಂಧಿತ ಆರೋಪಿಯಾಗಿದ್ದು, ನವೆಂಬರ್ 23ರ ಸಂಜೆ 7 ಗಂಟೆ ಸುಮಾರಿಗೆ ಕಳ್ಳತನ ನಡೆದಿತ್ತು. ಕೆಲಸಗಾರ ಆ್ಯಕ್ಟೀವಾದಲ್ಲಿ ಬೆಳ್ಳಿ ತರುತ್ತಿದ್ದ ವೇಳೆ ಆರೋಪಿ ಬೆಳ್ಳಿ ಕದ್ದು ಎಸ್ಕೇಪ್ ಆಗಿದ್ದ. ಸಿಬ್ಬಂದಿ ಆ್ಯಕ್ಟೀವಾ ಡಿಕ್ಕಿಯಲ್ಲಿ ಮತ್ತು ಮುಂಭಾಗ ಇಟ್ಟಿದ್ದ ಬ್ಯಾಗ್ಗಳ ಪೈಕಿ ಮುಂಭಾಗವಿದ್ದ ಬ್ಯಾಗ್ನಲ್ಲಿದ್ದ 36 ಲಕ್ಷ ಮೌಲ್ಯದ 23 ಕೆ.ಜಿ. ಬೆಳ್ಳಿ ಕದ್ದು ಆಜಿಯಾ ಪರಾರಿಯಾಗಿದ್ದ. ವಿಚಾರಣೆ ವೇಳೆ ಆರೋಪಿ ಕಾಟನ್ ಪೇಟೆ ಠಾಣೆ ರೌಡಿಶೀಟರ್, ಈತನ ಮೇಲೆ 50 ಪ್ರಕರಣಗಳಿವೆ ಅನ್ನೋದು ಗೊತ್ತಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:37 pm, Tue, 25 November 25




