Bagalkote: ಶತಮಾನಗಳು ಉರುಳಿದರು ಒಂದು ಸಾರಿಯೂ ಬತ್ತದ ಬಾವಿ: ಏನಿದರ ರಹಸ್ಯ?
ಇಳಕಲ್ ವಿಜಯಮಹಾಂತೇಶ್ವರ ಮಠದ ಶಾಖಾ ಮಠವಾದ ಮಹಾಂತ ತೀರ್ಥವನ್ನು ಡಾ ಬಸವಲಿಂಗ ಸ್ವಾಮೀಜಿ ನೈಸರ್ಗಿಕ ಕಾಡನ್ನಾಗಿ ಬದಲಿಸಿದ್ದಾರೆ. ಇಲ್ಲಿ ಎಂಟು ಎಕರೆ ನಾಲ್ಕು ಗುಂಟೆ ಜಾಗದಲ್ಲಿ ನೂರಾರು ತಳಿ ಗಿಡಗಳು, ಔಷಧಿ ಸಸ್ಯವನ್ನು ಬೆಳೆದಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ನೂರಾರು ವರ್ಷ ಹಳೆಯದಾದ ಒಂದು ಬಾವಿಗಳಿವೆ. ಶತಮಾನಗಳಿಂದಲೂ ಎಷ್ಟೇ ಸಾರಿ ಬರಗಾಲ ಬಂದರೂ ಇದು ಒಂದೇ ಒಂದು ಸಾರಿ ಬರಿದಾಗಿಲ್ಲ.
ಬಾಗಲಕೋಟೆ, ಅಕ್ಟೋಬರ್ 27: ಈಗ ಎಲ್ಲ ಕಡೆ ಬರದ ಛಾಯೆ ಆವರಿಸಿದೆ. ನದಿಗಳು ಹಳ್ಳಕೊಳ್ಳಗಳು ಕೆರೆಕಟ್ಟೆಗಳು ಖಾಲಿ ಖಾಲಿಯಾಗಿವೆ. ಅಂತರ್ಜಲ ಕಡಿಮೆಯಾಗಿ ಬೋರವೆಲ್ಗಳು ಬತ್ತುತ್ತಿವೆ. ಆದರೆ ಅದೊಂದು ಬಾವಿ (well) ಮಾತ್ರ ನಾಡಿನಲ್ಲಿ ಎಷ್ಟು ಸಾರಿ ಬರ ಬಂದರೂ ಬತ್ತಿಲ್ಲ. ನೂರಾರು ವರ್ಷದಿಂದ ಎಂದೂ ಕೂಡ ಆ ಬಾವಿ ಖಾಲಿಯಾಗಿಲ್ಲ. ಆ ಬಾವಿಯ ನೀರನ್ನು ತೀರ್ಥ ಎಂದೇ ಜನರು ಭಾವಿಸುತ್ತಾರೆ. ಬಾಗಲಕೋಟೆ ತಾಲ್ಲೂಕಿನ ಶಿರೂರು ಗ್ರಾಮದ ವ್ಯಾಪ್ತಿಯಲ್ಲಿನ ಮಹಾಂತತೀರ್ಥದಲ್ಲಿ ಅಂತಹದೊಂದು ಬಾವಿ ಇದೆ.
ಇಳಕಲ್ ವಿಜಯಮಹಾಂತೇಶ್ವರ ಮಠದ ಶಾಖಾ ಮಠವಾದ ಮಹಾಂತ ತೀರ್ಥವನ್ನು ಡಾ ಬಸವಲಿಂಗ ಸ್ವಾಮೀಜಿ ನೈಸರ್ಗಿಕ ಕಾಡನ್ನಾಗಿ ಬದಲಿಸಿದ್ದಾರೆ. ಇಲ್ಲಿ ಎಂಟು ಎಕರೆ ನಾಲ್ಕು ಗುಂಟೆ ಜಾಗದಲ್ಲಿ ನೂರಾರು ತಳಿ ಗಿಡಗಳು, ಔಷಧಿ ಸಸ್ಯವನ್ನು ಬೆಳೆದಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ನೂರಾರು ವರ್ಷ ಹಳೆಯದಾದ ಒಂದು ಬಾವಿಗಳಿವೆ. ಶತಮಾನಗಳಿಂದಲೂ ಎಷ್ಟೇ ಸಾರಿ ಬರಗಾಲ ಬಂದರೂ ಇದು ಒಂದೇ ಒಂದು ಸಾರಿ ಬರಿದಾಗಿಲ್ಲ.
ಇದನ್ನೂ ಓದಿ: ಮಂಗಗಳ ದಾಳಿಗೆ ಈರುಳ್ಳಿ ಬೆಳೆ ನಾಶ: ಬರಗಾಲದಲ್ಲಿ ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ
ಇಲ್ಲಿಗೆ ಬರುವ ಭಕ್ತರು ಈ ಬಾವಿಯ ನೀರನ್ನು ತೀರ್ಥ ಎಂದು ಕರೆಯುತ್ತಾರೆ. ಬಾವಿಯಲ್ಲಿ ಇಳಿದು ನೀರನ್ನು ಮೈ ಮೇಲೆ ಹಾಕಿಕೊಂಡು ಕುಡಿದು ಪುನೀತರಾಗುತ್ತಾರೆ. ತಮ್ಮ ತಮ್ಮ ಊರುಗಳಿಗೆ ಈ ನೀರನ್ನು ತೀರ್ಥ ಎಂದು ತೆಗೆದುಕೊಂಡು ಹೋಗುತ್ತಾರೆ. ಈ ನೀರನ್ನು ರ್ತೀಥ ಎಂದು ಸೇವಿಸುವ ಭಕ್ತರು ಇದು ಕೇವಲ ನೀರಲ್ಲ ವಿಜಯಮಹಾಂತೇಶ್ವರ ಸ್ವಾಮೀಜಿ ಅವರ ತೀರ್ಥ ಪ್ರಸಾದ ಅಂತಿದ್ದಾರೆ.
ಅದು ಕೇವಲ ಹತ್ತರಿಂದ ಹದಿನೈದು ಅಡಿ ಬಾವಿ. ಕಲ್ಲಿನಿಂದ ಬಾವಿ ಕಟ್ಟಿಸಿ ನೂರಾರು ವರ್ಷಗಳು ಕಳೆದಿವೆ. ಆದರೆ ಇಂದಿಗೂ ಈ ಬಾವಿಯಲ್ಲಿನ ನೀರು ಮಾತ್ರ ಕಡಿಮೆಯಾಗಿಲ್ಲ. ಈಗ ಎಲ್ಲ ಕಡೆ ಬರ ಬಿದ್ದು ನದಿ ಕರೆಗಳು, ಹಳ್ಳಕೊಳ್ಳಗಳು ಎಲ್ಲ ಖಾಲಿಯಾದರೂ ಈ ಬಾವಿ ಮಾತ್ರ ಬತ್ತಿಲ್ಲ. ಇದಕ್ಕೆ ಕಾರಣ ವಿಜಯಮಹಾಂತೇಶ್ವರ ಸ್ವಾಮೀಜಿ ಅವರ ಪವಾಡ. ಅವರ ಅಮೃತಹಸ್ತದ ಆಸಿರ್ವಾದದಿಂದ ಇದು ನಿರ್ಮಾಣವಾಗಿರೋದು.
ಇಗ ಎಲ್ಲ ಕಡೆ ನೀರಿಲ್ಲದ ಕಾರಣ ಸುತ್ತಮುತ್ತಲಿನ ಜನರು ದನಕರುಗಳು ಕುರಿಮೇಕೆಗಳು ನೀರು ಕುಡಿಯೋದಕ್ಕೆ ಈ ಬಾವಿಯನ್ನೇ ಅವಲಂಭಿಸಿದ್ದಾರೆ. ಇದೇ ಬಾವಿಯ ನೀರೇ ಇದೀಗ ಜನ ಜಾನುವಾರುಗಳಿಗೆ ಆಸರೆಯಾಗಿದೆ. ಈ ಬಾವಿಗೆ ಮಹತ್ವದ ಹಿನ್ನೆಲೆ ಇದೆ.
ಇದನ್ನೂ ಓದಿ: ಭೀಕರ ಬರಕ್ಕೆ ಗದಗ ಜಿಲ್ಲೆಯ ಜನ ವಿಲವಿಲ: ಹಿಂಗಾರು, ಮುಂಗಾರು ಬೆಳೆಯೂ ಇಲ್ಲದೇ ಕಂಗಾಲು
ಬಾವಿಯ ಅಕ್ಕಪಕ್ಕದಲ್ಲಿ ಗುಡ್ಡಗಳಿದ್ದು, ನೂರಾರು ವರ್ಷಗಳ ಹಿಂದೆ ಗುಡ್ಡದಲ್ಲಿ ಕೆಲಸ ಮಾಡುತ್ತಿದ್ದ ಕಲ್ಲು ಕಟೆಯುವ ಕಾರ್ಮಿಕರು ನೀರಡಿಕೆಯಾಗಿ ಮಲಪ್ರಭಾ ನದಿ ಕಡೆ ಹೊರಟಿದ್ದರಂತೆ. ಆದರೆ ಅದು ಇಲ್ಲಿಂದ ಐದಾರು ಕಿಮೀ ದೂರವಿತ್ತು. ಆಗ ಸ್ಥಳಕ್ಕೆ ಬಂದಿದ್ದ ಚಿತ್ತರಗಿ ವಿಜಯಮಹಾಂತೇಶ ಮಠದ 16 ನೇ ಪೀಠಾಧಿಪತಿ ಗಡ್ಡದ ವಿಜಯಮಹಾಂತೇಶ್ವರ ಸ್ವಾಮೀಜಿಗಳು ಅಲ್ಲೇಕೆ ಹೋಗುತ್ತೀರಿ. ಇಲ್ಲೆ ಗಂಗೆ ಇದಾಳೆ ಎಂದು ಬೆತ್ತದಿಂದ ಗುರುತು ಹಾಕಿ ಅಗೆಯಿರಿ ಎಂದಾಗ ನೆಲ ಅಗೆಯಲಾಗಿ ಕೇವಲ ನಾಲ್ಕೈದು ಅಡಿಗೆ ನೀರು ಚಿಮ್ಮಿತ್ತಂತೆ. ಆಗ ಕಾರ್ಮಿಕರು ಚಿಮ್ಮದಿ ನೀರನ್ನು ಮಹಾಂತ ತೀರ್ಥ ಎಂದು ಕುಡಿದು ಸ್ವಾಮೀಜಿಗೆಳ ಕಾಲಿಗೆರಗುತ್ತಾರೆ. ಅಂದಿನಿಂದ ಇಂದಿನವರೆಗೂ ಈ ಬಾವಿ ಬತ್ತಿಲ್ಲ.ಇದಕ್ಕೊಂದು ದೈವಿಕ ಹಿನ್ನೆಲೆ ಇದ್ದು ಇಂದಿಗೂ ಜೀವಜಲ ಬಾವಿಯಲ್ಲಿ ಉಕ್ಕುತ್ತಿದೆ.
ಎಲ್ಲ ಕಡೆ ಬರದ ಛಾಯೆ ಮಧ್ಯೆ ಈ ಬಾವಿ ಮಾತ್ರ ಎಂದಿಗೂ ಬತ್ತದೇ ಎಲ್ಲರ ಗಮನ ಸೆಳೆದಿದೆ. ಬರಗಾಲದಲ್ಲಿ ಜನಜಾನುವಾರುಗಳ ದಾಹ ನೀಗಿಸೋದರ ಜೊತೆಗೆ ತೀರ್ಥದ ಮೂಲಕ ಮಠದ ಭಕ್ತರ ಪಾಲಿಗೆ ಪ್ರಸಾದವಾಗಿ ಪವಾದ ಸದೃಶ್ಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.