ಬಾಗಲಕೋಟೆ: ಸಂವಿಧಾನ ಜಾಗೃತಿ ಜಾಥಾ: ಅಧ್ಯಕ್ಷೆ ಪುತ್ರನನ್ನ ವೇದಿಕೆಗೆ ಆಹ್ವಾನಿಸದ್ದಕ್ಕೆ ಹೊಡೆದಾಟ

ಹುನಗುಂದ (Hunagunda) ತಾಲ್ಲೂಕಿನ ಧನ್ನೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಬಿಜೆಪಿ ಬೆಂಬಲಿತ ಗ್ರಾ.ಪಂ ಸದಸ್ಯನೊರ್ವ ಇದೇ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಮಗನಿಗೆ ವೇದಿಕೆ ಮೇಲೆ ಕರೆಯದ ಹಿನ್ನೆಲೆ ವಾಗ್ವಾದ ನಡೆದಿದ್ದು, ಇಂದು ಅಧ್ಯಕ್ಷೆಯ ಮಗ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾನೆ.

ಬಾಗಲಕೋಟೆ: ಸಂವಿಧಾನ ಜಾಗೃತಿ ಜಾಥಾ: ಅಧ್ಯಕ್ಷೆ ಪುತ್ರನನ್ನ ವೇದಿಕೆಗೆ ಆಹ್ವಾನಿಸದ್ದಕ್ಕೆ ಹೊಡೆದಾಟ
ಸಂವಿಧಾನ ಜಾಗೃತಿ ಜಾಥಾ:ಅಧ್ಯಕ್ಷೆ ಪುತ್ರನವೇದಿಕೆಗೆ ಕರಿಲಿಲ್ಲವೆಂದು ಹೊಡೆದಾಟ
Updated By: ಕಿರಣ್ ಹನುಮಂತ್​ ಮಾದಾರ್

Updated on: Feb 16, 2024 | 5:32 PM

ಬಾಗಲಕೋಟೆ, ಫೆ.16: ಜಿಲ್ಲೆಯ ಹುನಗುಂದ(Hunagunda) ತಾಲ್ಲೂಕಿನ ಧನ್ನೂರು ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಇದೇ ಗ್ರಾಮ ಪಂಚಾಯತಿ ಅಧ್ಯಕ್ಷೆಯ ಮಗನಿಗೆ ವೇದಿಕೆ ಮೇಲೆ ಕರೆಯದ ಹಿನ್ನೆಲೆ ಬಿಜೆಪಿ ಬೆಂಬಲಿತ ಗ್ರಾ.ಪಂ ಸದಸ್ಯ ಸುರೇಶ್ ತಳವಾರ ಎಂಬುವವರ ಜೊತೆ ಅಧ್ಯಕ್ಷೆಯ ಮಗ ಆನಂದ ಶಿರಹಟ್ಟಿ ಎಂಬಾತ ತಕರಾರು ತೆಗೆದಿದ್ದಾನೆ. ಈ ವೇಳೆ ಸ್ಥಳದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಸುರೇಶ್ ತಳವಾರ ಪೊಲೀಸ್​ಗೆ ದೂರು ಕೊಡಲು ಹೋಗಿದ್ದಾರೆ. ದೂರು ಕೊಡಲು ಹೋದ ಹಿನ್ನೆಲೆ ಆಕ್ರೋಶ ವ್ಯಕ್ತವಾಗಿದ್ದು, ಇಂದು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ.

ಅಧ್ಯಕ್ಷೆಯ ಮಗ ಸೇರಿದಂತೆ 20 ಜನರಿಂದ ಹಲ್ಲೆ

ನಿನ್ನೆ(ಫೆ.15) ನಡೆದ ಘಟನೆಯ ಹಿನ್ನಲೆ ಇಂದು ಆಗಮಿಸಿದ ಅಧ್ಯಕ್ಷೆಯ ಮಗ ಆನಂದ ಶಿರಹಟ್ಟಿ, ಸಂಗಪ್ಪ ಯಡಳ್ಳಿ, ದೊಡ್ಡನಗೌಡ ಯಡಳ್ಳಿ, ಮಾಂತೇಶ್ ಯಡಳ್ಳಿ, ಶ್ರೀಕಾಂತ ಯಡಳ್ಳಿ, ಸಂತೋಷ ಯಡಳ್ಳಿ ಸೇರಿದಂತೆ 20 ಜನರು ಕಟ್ಟಿಗೆ ಕೋಲಿನಿಂದ ಹೊಡೆದಾಡಿಕೊಂಡಿದ್ದು, ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯ ಸುರೇಶ್ ತಳವಾರ ಹಾಗೂ ಅವರ ಕುಟುಂಬಸ್ಥರಾದ ಸಂಜಯ್ ತಳವಾರ, ಸುನಂದಾ ತಳವಾರ, ಈರಮ್ಮ ತಳವಾರ ಮತ್ತು ಬಸವರಾಜ ತಳವಾರ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದವರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ:ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಗನ್​ ಹಿಡಿದು ಸದಸ್ಯನಿಂದ ಬೆದರಿಕೆ; ವಿಡಿಯೋ ವೈರಲ್​

ಆಕಸ್ಮಿಕ ಬೆಂಕಿ, ಹೊತ್ತಿ ಉರಿದ ಮನೆ

ಮಂಡ್ಯ: ಆಕಸ್ಮಿಕ ಬೆಂಕಿ ತಗುಲಿ ಮನೆಯೊಂದು ಹೊತ್ತಿ ಉರಿದ ಘಟನೆ ಮಂಡ್ಯದ ಚಾಮುಂಡೇಶ್ವರಿ ನಗರದ 9ನೇ ಕ್ರಾಸ್​ನಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಭಾರೀ ದುರಂತ ತಪ್ಪಿದೆ. ಲಕ್ಷ್ಮೀಕಾಂತ್ ಎಂಬುವರಿಗೆ ಸೇರಿದ ಶೀಟ್ ಮನೆ ಇದಾಗಿದ್ದು, ಮಧ್ಯಾಹ್ನ ಏಕಾಏಕಿ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ ಗ್ಯಾಸ್ ಸಿಲಿಂಡರ್​ ಸ್ಫೋಟವಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮವಾಗಿದೆ. ಇನ್ನು ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದ್ದಾರೆ. ದೇವರ ಫೋಟೋ ಮುಂದೆ ಹಚ್ಟಿದ್ದ ದೀಪದಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:27 pm, Fri, 16 February 24