ಬಾಗಲಕೋಟೆ, ಮೇ.03: ಬಾಗಲಕೋಟೆ ಲೋಕಸಭೆ(Bagalkote Lok Sabha) ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ. ಚುನಾವಣೆಗೆ ದಿನಗಣನೆ ಶುರುವಾಗಿದೆ. ಆದ್ದರಿಂದ ಕಣದಲ್ಲಿನ ಕಲಿಗಳು ಬಿಡುವಿಲ್ಲದೇ ಪ್ರಚಾರ ಶುರು ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ(PC Gaddigoudar) ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್(Samyuktha Patil) ಮಧ್ಯೆ ನೇರಾನೇರ ಹಣಾಹಣಿ ನಡೆದಿದೆ. ಪಿಸಿ ಗದ್ದಿಗೌಡರ ಕೇಸರಿ ಪಡೆ ಕಟ್ಟಿಕೊಂಡು ಶ್ರೀರಾಮ, ಹಿಂದು, ಮತ್ತೊಮ್ಮೆ ಮೋದಿ ಎಂದು ಜನರ ಬಳಿ ಮತ ಕೇಳುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಐದು ಗ್ಯಾರಂಟಿ, ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕೆಲಸಗಳು, ನಾಲ್ಕು ಬಾರಿ ಸಂಸದರಾದರೂ ಗದ್ದಿಗೌಡರ ಯಾವ ಅಭಿವೃದ್ಧಿ ಕಾರ್ಯ ಮಾಡಿಲ್ಲ, ಮೋದಿ ಅವರು ಕೊಟ್ಟ ಭರವಸೆ ಈಡೇರಿಸಿಲ್ಲ. ನಮ್ಮ ಸರಕಾರ ನುಡಿದಂತೆ ನಡೆದಿದೆ ಎಂದು ಗ್ಯಾರಂಟಿಗಳನ್ನ ಎಲ್ಲ ಕಡೆ ಉದಾಹರಣೆ ನೀಡುತ್ತಾ ಈ ವಿಚಾರಗಳನ್ನು ಮುಂದಿಟ್ಟುಕೊಂಡು ಮತಭೇಟೆ ಶುರು ಮಾಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಬಾಗಲಕೋಟೆ, ಬೀಳಗಿ, ಮುಧೋಳ, ಜಮಖಂಡಿ, ತೇರದಾಳ, ಬಾದಾಮಿ, ಹುನಗುಂದ, ಗದಗ ಜಿಲ್ಲೆಯ ನರಗುಂದ ವಿಧಾನಸಭೆ ಕ್ಷೇತ್ರ ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರ ಒಳಗೊಂಡಿದೆ. ಒಟ್ಟು 17,81,912 ಲಕ್ಷ ಮತದಾರರಿದ್ದು, ಅದರಲ್ಲಿ 8,84,194 ಲಕ್ಷ ಪುರುಷರು, ಮಹಿಳಾ ಮತದಾರರು 8,97,622 ಲಕ್ಷ ಇದ್ದಾರೆ. ಒಟ್ಟು 1726 ಮತಗಟ್ಟೆ ಇದ್ದಾವೆ.
ಇದನ್ನೂ ಓದಿ:ಲೋಕಸಭೆ ಚುನಾವಣೆ: ಕರ್ನಾಟಕದಲ್ಲಿ ಮತದಾನದಲ್ಲಿಯೂ ಮಹಿಳೆಯರದ್ದೇ ಮೇಲುಗೈ
ಲಿಂಗಾಯತ 6.50 ಲಕ್ಷ
ಕುರುಬ 2.44 ಲಕ್ಷ .
ದಲಿತ- 2 ಲಕ್ಷ
ಮುಸ್ಲಿಂ 1.70 ಲಕ್ಷ
ವಾಲ್ಮೀಕಿ 1.18 ಲಕ್ಷ
ಜೈನ : 25,566
ನೇಕಾರ-60
ಕ್ಷತ್ರಿಯರ ಒಳಪಂಗಡ ಸೇರಿ 1 ಲಕ್ಷ.
ಬ್ರಾಹ್ಮಣ 21793
ಇತರೆ 2 ಲಕ್ಷ 86 ಸಾವಿರ ಇದ್ದಾರೆ.
ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಸತತ ನಾಲ್ಕು ಬಾರಿ ಬಾಗಲಕೋಟೆ ಸಂಸದರು, ಮೂಲತಃ ಕೃಷಿ ಕುಟುಂಬಸ್ಥರು,
ಎಲ್ ಎಲ್ ಬಿ ಮಾಡಿ ವಕೀಲಿ ವೃತ್ತಿ ಮಾಡಿದವರು. ಹಿಂದು-ಗಾಣಿಗ, ಬಾದಾಮಿ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದವರು.
ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ವಿರುದ್ದ 1 ಲಕ್ಷ 68 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಮೂಲತಃ ವಿಜಯಪುರ ಜಿಲ್ಲೆಯವರಾದ ಇವರು, ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಶಾಸಕ ಹಾಗೂ ಸದ್ಯದ ಜವಳಿ ಖಾತೆ ಸಚಿವ ಶಿವಾನಂದ ಪಾಟೀಲ್ ಅವರ ಪುತ್ರಿ ಸಂಯುಕ್ತಾ ಪಾಟೀಲ್ ರಾಜಕೀಯ ಕುಟುಂಬದಿಂದ ಬಂದವರು. ವಿಜಯಪುರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಹಾಗೂ ಪಿಕೆಪಿಎಸ್ ಬ್ಯಾಂಕಿನಲ್ಲಿ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕರ್ನಾಟಕ ರಾಜ್ಯದ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ:ಲೋಕಸಭೆ ಚುನಾವಣೆ: ಮತದಾನದ ವೇಳೆ ಕೆಲವೆಡೆ ಗದ್ದಲ, ಗೊಂದಲ, ಎಲ್ಲೆಲ್ಲಿ ಏನೇನನಾಯ್ತು? ಇಲ್ಲಿದೆ ವಿವರ
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಪ್ಲಸ್ ಪಾಯಿಂಟ್ಸ್ ಏನು?
ಬಿಜೆಪಿ ಮೈನಸ್
ಕಾಂಗ್ರೆಸ್ ಮೈನಸ್ ಪಾಯಿಂಟ್
ಇಲ್ಲಿ ಪಂಚಮಸಾಲಿ ಗಾಣಿಗ , ಕುರುಬ ಮತಗಳು ನಿರ್ಣಾಯಕವಾಗಿದೆ. ಜಿಲ್ಲೆಯಲ್ಲಿ 2 ಲಕ್ಷ 12 ಸಾವಿರ ಪಂಚಮಸಾಲಿ ಮತಗಳಿವೆ. ಗಾಣಿಗ 1 ಲಕ್ಷ 12 ಸಾವಿರ ಇದೆ. ಕುರುಬ 2 ಲಕ್ಷ 42 ಸಾವಿರ ಮತಗಳು. ಕುರುಬ ಮತಗಳು ಬಹುತೇಕ ಕಾಂಗ್ರೆಸ್, ಪಂಚಮಸಾಲಿ ಮತಗಳು ಈ ಬಾರಿ ಸಮುದಾಯದ ಮೇಲಿನ ಅಭಿಮಾನದಿಂದ 60% ಪ್ರತಿಶತ ಕಾಂಗ್ರೆಸ್ ಅಭ್ಯರ್ಥಿ ಪಾಲಾಗಲಿವೆ. ಇನ್ನು ಗಾಣಿಗ ಮತದಾರರು ಪಕ್ಷ ಎಂದೂ ನೋಡದೆ ಸಮಾಜದ ಅಭ್ಯರ್ಥಿ ಮಾತ್ರ ಪರಿಗಣಿಸಿ 90% ರಷ್ಟು ಪಿಸಿ ಗದ್ದಿಗೌಡರ್ಗೆ ಮತ ಹಾಕುತ್ತಾರೆ. ಇಲ್ಲಿ ಪಂಚಮಸಾಲಿ 60% ಮತಗಳು ಬಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಗೆಲುವು ಬಹುತೇಕ ಫಿಕ್ಷ್ ಎನ್ನಲಾಗುತ್ತಿದೆ.
ಇದನ್ನೂ ಓದಿ:ಪ್ರಿಯಾಂಕಾ ಗಾಂಧಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ ಕಡಿಮೆ
ಸ್ವತಂತ್ರ ಭಾರತದ ಬಳಿಕ ದೇಶದಲ್ಲಿ 1951 ರಿಂದ ಸಾರ್ವತ್ರಿಕ ಚುನಾವಣೆ ಆರಂಭಗೊಂಡಿತು. ಬಾಗಲಕೋಟೆ ಲೋಕಸಭೆ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದವರು ರಾಮಣ್ಣ ಬಿದರಿ. ಆ ಬಳಿಕ ನಡೆದ 1957ರ ಚುನಾವಣೆಯಲ್ಲೂ ಕಾಂಗ್ರೆಸ್‌ನಿಂದ 2ನೇ ಬಾರಿ ಅವರೇ ಗೆದ್ದಿದ್ದರು. 1951 ರಿಂದ 2019ರ ವರೆಗೆ ಒಟ್ಟು 17 ಲೋಕಸಭೆ ಚುನಾವಣೆ ನಡೆದಿವೆ. 1962ರ ವರೆಗೆ ಬಾಗಲಕೋಟೆ ಕ್ಷೇತ್ರ, ವಿಜಯಪುರ ದಕ್ಷಿಣ ಲೋಕಸಭೆ ಕ್ಷೇತ್ರವಾಗಿತ್ತು. 1967ರ ಚುನಾವಣೆಯಲ್ಲಿ ಬಾಗಲಕೋಟೆ ಪ್ರತ್ಯೇಕ ಲೋಕಸಭೆ ಕ್ಷೇತ್ರವಾಗಿದ್ದು, ಆಗ ಕಾಂಗ್ರೆಸ್‌ನ ಎಸ್.ಬಿ. ಪಾಟೀಲ್ ಗೆದ್ದಿದ್ದರು. 1962, 1967 ಹಾಗೂ 1977 ಸೇರಿ ಒಟ್ಟು ನಾಲ್ಕು ಬಾರಿ ಸತತ ಗೆದ್ದ ದಾಖಲೆ ಎಸ್.ಬಿ. ಪಾಟೀಲರಿಗಿದೆ. ಆ ಬಳಿಕ 2004 ದಿಂದ ಈ ವರೆಗೆ ಬಿಜೆಪಿಯ ಪಿ.ಸಿ. ಗದ್ದಿಗೌಡರ ಇಲ್ಲಿಂದ ಸತತವಾಗಿ ಗೆಲ್ಲುತ್ತ ಬಂದಿದ್ದಾರೆ. ಇವರನ್ನು ಬಿಟ್ಟರೆ, ಈ ಕ್ಷೇತ್ರದಿಂದ ಎರಡಕ್ಕಿಂತ ಹೆಚ್ಚು ಬಾರಿ ಯಾರೂ ಗೆದ್ದಿಲ್ಲ.
ಬಾಗಲಕೋಟೆ ಜಿಲ್ಲೆಯ ಮತದಾರರು, ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರನ್ನು ಸೋಲಿಸಿ, ಯುವ ಹೋರಾಟಗಾರರಾಗಿದ್ದ ದಿ. ಸಿದ್ದು ನ್ಯಾಮಗೌಡರನ್ನು ಗೆಲ್ಲಿಸಿದ್ದರು. ವೀರೇಂದ್ರ ಪಾಟೀಲ್ರನ್ನು ಲೋಕಸಭೆಗೆ, ಹಾಲಿ ಸಿಎಂ ಸಿದ್ದರಾಮಯ್ಯ ಅವರನ್ನು ಬಾದಾಮಿ ವಿಧಾನಸಭೆ ಕ್ಷೇತ್ರದಿಂದ ಗೆಲ್ಲಿಸಿ, ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದವರು ಈ ಜಿಲ್ಲೆಯ ಮತದಾರರು.
1991 ರ ವರೆಗೆ ಸತತ ಕಾಂಗ್ರೆಸ್ ಪಕ್ಷವೇ ಇಲ್ಲಿಂದ ಗೆದ್ದಿತ್ತು. ಮೊದಲ ಬಾರಿಗೆ ಕಾಂಗ್ರೆಸ್ ಭದ್ರಕೋಟೆ ಛಿದ್ರಗೊಳಿಸಿ, ಅಹಿಂದ ಅಲೆಯಲ್ಲಿ ಗೆದ್ದವರು, ಬಾಗಲಕೋಟೆಯ ಹಾಲಿ ಶಾಸಕ ಎಚ್.ವೈ. ಮೇಟಿ. ಜನತಾ ದಳ ಸರಕಾರದಲ್ಲಿ ಅರಣ್ಯ ಸಚಿವರಾಗಿದ್ದಾಗಲೇ ಲೋಕಸಭೆಗೆ ಗೆದ್ದಿದ್ದರು. ಆ ಬಳಿಕ ಲೋಕಶಕ್ತಿ ಪಕ್ಷದ ಅಜಯಕುಮಾರ ಸರನಾಯಕ (ಬಿಜೆಪಿ-ಲೋಕಶಕ್ತಿ ಹೊಂದಾಣಿಕೆ), 1998 ರಲ್ಲಿ ಗೆದ್ದಿದ್ದರು. ಒಟ್ಟು ಈ ವರೆಗೆ ನಡೆದ 17 ಚುನಾವಣೆಯಲ್ಲಿ 11 ಬಾರಿ ಕಾಂಗ್ರೆಸ್, ತಲಾ ಒಂದು ಬಾರಿ ಜನತಾ ದಳ ಮತ್ತು ಲೋಕಶಕ್ತಿ ಗೆದ್ದಿದ್ದರೆ, ಸತತ ನಾಲ್ಕು ಬಾರಿ ಬಿಜೆಪಿ ಗೆಲ್ಲುತ್ತ ಬಂದಿದೆ.
ಬಾಗಲಕೋಟೆ ಕ್ಷೇತ್ರ 1967 ಕ್ಕೂ ಮುಂಚೆ ವಿಜಯಪುರ ದಕ್ಷಿಣ ಲೋಕಸಭೆ ಕ್ಷೇತ್ರವಾಗಿತ್ತು. ದೇಶಕ್ಕೆ ಸ್ವತಂತ್ರ ಬಂದ ಬಳಿಕ ಇಲ್ಲಿಯವರೆಗೆ ಒಟ್ಟು 17 ಸಾರ್ವತ್ರಿಕ ಲೋಕಸಭೆ ಚುನಾವಣೆ ನಡೆದಿವೆ. ಈಗ ನಡೆಯಲಿರುವ ಚುನಾವಣೆ 18ನೇ ಲೋಕಸಭೆ ಚುನಾವಣೆ. ಕರ್ನಾಟಕ ಏಕೀಕರಣಗೊಂಡ ಬಳಿಕ ನಡೆದ ಲೋಕಸಭೆ ಚುನಾವಣೆಯ ಲೆಕ್ಕ ಹಿಡಿದರೆ, ಈ ವರೆಗೆ 16 ಚುನಾವಣೆ ನಡೆದಿವೆ.
ಕಳೆದ 17 ಲೋಕಸಭೆ ಚುನಾವಣೆಯಲ್ಲಿ ಅತಿಹೆಚ್ಚು ಬಾರಿ ಗೆದ್ದಿರುವುದು ಕಾಂಗ್ರೆಸ್. ರಾಮಣ್ಣ ಬಿದರಿಯಿಂದ ಹಿಡಿದು, ಪ್ರಸ್ತುತ ಪಿ.ಸಿ. ಗದ್ದಿಗೌಡರ ವರೆಗೂ ಲಿಂಗಾಯತ ನಾಯಕರು, ಈ ಕ್ಷೇತ್ರದ ಅಧಿಪತ್ಯ ಸಾಧಿಸಿದ್ದಾರೆ. ಆದರೆ, ಸತತ ನಾಲ್ಕು ಬಾರಿ ಗೆದ್ದು ಇತಿಹಾಸ ದಾಖಲಿಸಿದವರು ಎಸ್.ಬಿ. ಪಾಟೀಲ್ ಹಾಗೂ ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಈ ಇಬ್ಬರು ಮಾತ್ರ.
ಇದನ್ನೂ ಓದಿ:Lok Sabha Elections 2024: ಲೋಕಸಭೆ ಚುನಾವಣೆ; ಹೆಚ್ಚಿನ ಸಂಖ್ಯೆಯ ಮತದಾನಕ್ಕೆ ಪ್ರಧಾನಿ ಮೋದಿ ಕರೆ
8 ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಲಿಂಗಾಯತ (ಎಲ್ಲ ಉಪ ಪಂಗಡ ಸಹಿತ), ಮುಸ್ಲಿಂ ಹಾಗೂ ದಲಿತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿಯೇ ಕುರುಬ ಸಮಾಜದ ಎಚ್.ವೈ. ಮೇಟಿ ಅವರು ಒಮ್ಮೆ ಗೆದ್ದಿದ್ದು, ಬಿಟ್ಟರೆ ಈವರೆಗೆ ಇಲ್ಲಿಂದ ಗೆದ್ದವರು ಲಿಂಗಾಯತ ನಾಯಕರೇ. ಅದೇ ಕಾರಣಕ್ಕೆ, ಎಲ್ಲಾ ರಾಜಕೀಯ ಪಕ್ಷಗಳು, ಲಿಂಗಾಯತ ನಾಯಕರಿಗೆ ಟಿಕೆಟ್ ನೀಡುತ್ತಲೇ ಬಂದಿವೆ. ವಿಧಾನಸಭೆ ಚುನಾವಣೆಗಳು, ಉಪ ಜಾತಿಗಳ ಲೆಕ್ಕಾಚಾರದಲ್ಲಿ ನಡೆದರೆ, ಲೋಕಸಭೆ ಚುನಾವಣೆ, ಲಿಂಗಾಯತ ವರ್ಸಸ್ ಅಹಿಂದ ಲೆಕ್ಕಾಚಾರದಲ್ಲಿ ನಡೆಯುತ್ತ ಬಂದಿವೆ.
ಒಟ್ಟಿನಲ್ಲಿ ಅಭ್ಯರ್ಥಿಗಳು ಜಿದ್ದಿಗೆ ಬಿದ್ದು ಪ್ರಚಾರ ಮಾಡುತ್ತಿದ್ದರು ಅಂತಿಮ ತೀರ್ಪು ಮಾತ್ರ ಮತದಾರರ ಕೈಯಲ್ಲಿದೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:29 pm, Fri, 3 May 24