ಬಾಗಲಕೋಟೆ, ನವೆಂಬರ್ 13: ಅದು ಆ ಜಿಲ್ಲೆಯಲ್ಲಿ ರೈತರೆ ಹಣ ಹಾಕಿ ಆರಂಭಿಸಿದ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ. ಆ ಕಾರ್ಖಾನೆ (factory) ಅಧ್ಯಕ್ಷನ ಅಂದಾದರ್ಬಾರ್ ಕಂಡು ಕಾಣದಂತಿದ್ದ ಜನಪ್ರತಿನಿಧಿಗಳ ನಿರ್ಲಕ್ಷತನದಿಂದ ಅದು ದಿವಾಳಿ ಹಂತಕ್ಕೆ ತಲುಪಿದೆ. ಬಂದ್ ಆಗಿರುವ ಕಾರ್ಖಾನೆ ಪುನಃ ಆರಂಭಕ್ಕೆ ಸಚಿವರೊಬ್ಬರು ಮುಂದಾಗಿದ್ದಾರೆ. ಆದರೆ ಕಾರ್ಖಾನೆ ದಿವಾಳಿ ಹಂತ ತಲುಪೋದಕ್ಕೆ ನೀನು ಕಾರಣ ನಾನಲ್ಲ ಅಂತ ಹಾಲಿ, ಮಾಜಿ ಸಚಿವರ ಮಧ್ಯೆ ಟಾಕ್ ವಾರ್ ಶುರುವಾಗಿದೆ. ತನಿಖೆ ಮಾಡಿಸಿ ಎಂದು ಮಾಜಿ ಸಚಿವ ಸವಾಲು ಹಾಕಿದರೆ ಹಾಲಿ ಸಚಿವ ತನಿಖೆ ಮಾಡಿ ಯಾರೇ ಎಂತ ದೊಡ್ಡವರೆ ಇರಲಿ ಮಟ್ಟ ಹಾಕದೆ ಬಿಡೋದಿಲ್ಲ ಅಂತಿದ್ದಾರೆ. ಅಷ್ಟಕ್ಕೂ ಆ ಕಾರ್ಖಾನೆ ಯಾವುದು ಇಲ್ಲಿ ಸವಾಲು ಟಾಕ್ ವಾರ್ ನಡೆದಿದ್ದು
ಯಾರ ಮಧ್ಯೆ ಇಲ್ಲಿದೆ ನೋಡಿ ಡಿಟೇಲ್ಸ್ ಮುಂದೆ ಓದಿ.
ಬಾಗಲಕೋಟೆ ಮೂರು ನದಿಗಳು ಹರಿಯುವಂತಹ ಜಿಲ್ಲೆ. ಮೂರು ನದಿಗಳ ನೀರನ್ನು ಬಳಸಿಕೊಂಡು ರೈತರು ಪ್ರತಿಶತ 70 ರಷ್ಟು ಪ್ರಮಾಣದಲ್ಲಿ ಕಬ್ಬನ್ನು ಬೆಳೆಯುತ್ತಾರೆ. ಇದಕ್ಕಾಗಿ ಜಿಲ್ಲೆಯಲ್ಲಿ 13 ಸಕ್ಕರೆ ಕಾರ್ಖಾನೆಗಳು ಹುಟ್ಟಿಕೊಂಡಿವೆ. ಅದರಲ್ಲಿ 1994ರಲ್ಲಿ ರೈತರೇ ಕಟ್ಟಿಸಿದ ಸಕ್ಕರೆ ಕಾರ್ಖಾನೆ ಅಂದರೆ ರನ್ನ ಸಕ್ಕರೆ ಕಾರ್ಖಾನೆ ಜಿಲ್ಲೆಯ ಮುಧೋಳ ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಇರುವ ಈ ಕಾರ್ಖಾನೆ ಸಾಲದ ಸುಳಿಯಲ್ಲಿ ಸಿಲುಕಿ ದಿವಾಳಿ ಹಂತಕ್ಕೆ ಬಂದು ಇದೀಗ ಬಂದ್ ಆಗಿದೆ.
ಇದನ್ನೂ ಓದಿ: ಸಿಎಂ ಆಗುವ ಎಲ್ಲ ಅರ್ಹತೆ ಇದೆ: ಪ್ರಸನ್ನಾನಂದ ಸ್ವಾಮೀಜಿ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು
ಈ ಕಾರ್ಖಾನೆ ಆರಂಭಿಸಬೇಕೆಂದು ರೈತರು, ಕಾರ್ಖಾನೆ ಕಾರ್ಮಿಕರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕಾರ್ಖಾನೆಯ ಈ ಹಿಂದಿನ ಅಧ್ಯಕ್ಷ ರಾಮಣ್ಣ ತಳೇವಾಡ ಅಂದಾದರ್ಬಾರ್ನಿಂದ ಕಾರ್ಮಿಕರ ವೇತನ ಬಾಕಿ. ಹೆಚ್ಎನ್ಟಿ ಸಾಲ. ವಿವಿಧ್ ಬ್ಯಾಂಕ್ನಲ್ಲಿ ಸಾಲ ಸೇರಿ 311 ಕೋಟಿ ರೂ. ನಷ್ಟದಲ್ಲಿ ಕಾರ್ಖಾನೆ ಇದೆ. ಸಾಲದ ಸುಳಿಯಲ್ಲಿ ಸಿಲುಕಿಸಿ ರಾಮಣ್ಣ ತಳೇವಾಡ ನೇತೃತ್ವದ ಆಡಳಿತ ಮಂಡಳಿ ರಾಜೀನಾಮೆ ನೀಡಿದೆ. ಇದೀಗ ಈ ಕಾರ್ಖಾನೆ ದಿವಾಳಿ ವಿಷಯ ಇಟ್ಟುಕೊಂಡು ಹಾಲಿ ಸಚಿವ ಆರ್ ಬಿ ತಿಮ್ಮಾಪುರ, ಮಾಜಿ ಸಚಿವ ಹಾಗೂ ಮಾಜಿ ಡಿಸಿಎಮ್ ಗೋವಿಂದ ಕಾರಜೋಳ ಮಧ್ಯೆ ಟಾಕ್ ವಾರ್ ಶುರುವಾಗಿದೆ.
ಇತ್ತೀಚೆಗೆ ಆರ್ಬಿ ತಿಮ್ಮಾಪುರ ವಿರುದ್ದ ಏಕವಚನದಲ್ಲಿ ಹರಿಹಾಯ್ದಿದ್ದ ಕಾರಜೋಳ, ತಿಮ್ಮಾಪುರ ಕಾರ್ಖಾನೆಯನ್ನು ನಾನು ಲಾಸ್ ಮಾಡಿದೇನೆ. 14 ಕೋಟಿ ರೂ. ಸಾಲ ಮಾಡಿದ್ದೇನೆ ಅಂತ ಆರೋಪ ಮಾಡಿದರು. ಈ ಬಗ್ಗೆ ಎರಡೆರಡು ಬಾರಿ ತನಿಖೆ ಮಾಡಿಸಲಾಗಿದೆ. ಈಗಲೂ ನಾನು ಹೇಳುತ್ತೇನೆ ನಿನಗೆ ತಾಕತ್ ಇದ್ರೆ ಕಾರ್ಖಾನೆ ಆರಂಭದಿಂದ ಹಿಡಿದು ಇಲ್ಲಿವರೆಗೂ ತನಿಖೆ ಮಾಡಿಸು ಎಂದು ಟೇಬಲ್ ತಟ್ಟಿ ಸವಾಲು ಹಾಕಿದ್ದರು.
ಕಾರಜೋಳ ಸವಾಲಿಗೆ ತಿರುಗೇಟು ನೀಡಿರುವ ಮುಧೋಳ ಶಾಸಕ ಹಾಗೂ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ, ಭರ್ಜರಿ ತಿರುಗೇಟು ನೀಡಿದ್ದಾರೆ. ನನಗೆ ಕಾರಜೋಳ ತರಹ ಏಕವಚನದಲ್ಲಿ ಮಾತಾಡಿ ಅಭ್ಯಾಸವಿಲ್ಲ. ಅಧಿಕಾರ ಇಲ್ಲದೆ ಕಾರಜೋಳ ಸ್ಥಿಮಿತ ಕಳೆದುಕೊಂಡಿದ್ದಾರೆ. ಏಕವಚನದಲ್ಲಿ ಮಾತಾಡುವ ಸಂಸ್ಕೃತಿ ನನ್ನದಲ್ಲ, ನಾನು ಮಾತಾಡಬಹುದು ಆದರೆ ನಾನು ಮಾತಾಡೋದಿಲ್ಲ. ನಾನು ಕಾರಜೋಳ ಸಾಹೇಬ ಅಂತಿನಿ ಕಾರಜೋಳ ಸಾಹೇಬ್ರೆ ಅಂತಿನಿ ಎನ್ನುತ್ತಲೇ ಟಾಂಗ್ ನೀಡಿದರು.
ಜೊತೆಗೆ ಟೇಬಲ್ ತಟ್ಟಿ ತನಿಖೆ ಮಾಡೋದಕ್ಕೆ ಏನು ಸವಾಲು ಹಾಕಿದ್ದೀರಿ ನಾವು ಸಮಗ್ರ ತನಿಖೆ ಮಾಡಿಸುತ್ತೇವೆ. ಉನ್ನತಮಟ್ಟದ ತನಿಖೆ ಮಾಡಿಸಿ ಇದರಲ್ಲಿ ಎಂತವರೇ ಇದ್ದರೂ ಮಟ್ಟ ಹಾಕದೇ ಬಿಡೋದಿಲ್ಲ ಎಂದರು. ಜೊತೆಗೆ ಕಾರಜೋಳ ಅವಧಿಯಲ್ಲಿ ಕಾರ್ಖಾನೆ 1999-2000ನೇ ಇಸ್ವಿಯಲ್ಲಿ 1 ಕೋಟಿ 20 ಲಕ್ಷ ರೂ. ಹಾನಿಯಾಗಿದೆ. 2001 ರಲ್ಲಿ 3 ಕೋಟಿ ರೂ. ಸೇರಿದಂತೆ ಕಾರಜೋಳ ಅವಧಿಯಲ್ಲಿ 16 ಕೋಟಿ 70 ಲಕ್ಷ ರೂ. ಕಾರ್ಖಾನೆಗೆ ಹಾನಿಯಾಗಿದೆ. ಇದಕ್ಕೆ ದಾಖಲೆಗಳಿವೆ ಇದಕ್ಕೂ ಮೇಲಾಗಿ ಕಾರಜೋಳ ಅವರ ಕಾರು ಚಾಲಕ 2006 ರಿಂದ 2012 ರವರೆಗೆ ಕಾರ್ಖಾನೆಯಿಂದ ವೇತನ ಪಡೆದಿದ್ದಾನೆ.
ಜೊತೆಗೆ ಸರಕಾರದಿಂದಲೂ ವೇತನ ಪಡೆದಿದ್ದಾನೆ. ಈ ಬಗ್ಗೆ ನಾನು ಪ್ರಶ್ನೆ ಮಾಡಿದಾಗ ಹಣ ವಾಪಸ್ ಕಾರ್ಖಾನೆಗೆ ಕಟ್ಟಲಾಗಿದೆ. ಇದು ಕಾರ್ಖಾನೆ ಮೇಲೆ ಇವರ ಕಾಳಜಿ ತೋರಿಸುತ್ತದೆ ಎಂದರು.ಜೊತೆಗೆ ನಮ್ಮ ಸರಕಾರ 40 ಕೋಟಿ ಬ್ಯಾಂಕ್ ಸ್ಯುರಿಟಿ ಕೊಡಲು ಸಂಪುಟದಲ್ಲಿ ಒಪ್ಪಿಗೆ ನೀಡಿದೆ.ಆ ಮೂಲಕ ರನ್ನ ರೈತರ ಕಾರ್ಖಾನೆಯನ್ನು ಲೀಜ್ ಕೊಟ್ಟು ಪುನಃ ಆರಂಭಿಸುತ್ತೇವೆ.ಅದನ್ನು ಗುಜರಿಗೆ ಹೋಗಲು ಬಿಡೋದಿಲ್ಲ ಎಂದರು.
ಮುಧೋಳ ರಾಜಕಾರಣದಲ್ಲಿ ಅದರಲ್ಲೂ ಆರ್ಬಿ ತಿಮ್ಮಾಪುರ, ಗೋವಿಂದ ಕಾರಜೋಳ ರಾಜಕಾರಣದಲ್ಲಿ ರನ್ನ ರೈತರ ಕಾರ್ಖಾನೆ ಒಂದು ಭಾಗವಾಗಿಯೇ ಬಂದಿದೆ. ಆದರೆ ಕಾರಜೋಳ ಆಪ್ತ ರಾಮಣ್ಣ ತಳೇವಾಡ ಬ್ಯಾಂಕ್ ದಿವಾಳಿಗೆ ಪ್ರಮುಖ ಕಾರಣವಾಗಿದ್ದು, ಆತನ ಮೇಲೆ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಾತ್ರ ಯಾವುದೇ ಕ್ರಮ ಆಗುತ್ತಿಲ್ಲ ಎಂಬುದೇ ವಿಪರ್ಯಾಸ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.