ಸಚಿವರಿಬ್ಬರ ನಾಮಪತ್ರ ಸಲ್ಲಿಕೆಗೆ ಇಂದು ಬಾಗಲಕೋಟೆಗೆ ಬೊಮ್ಮಾಯಿ: ಎಲ್ಲರ ಚಿತ್ತ ಕಿಚ್ಚ ಸುದೀಪ್ ​ನತ್ತ

ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಾ ಸಾಗುತ್ತಿದೆ. ಬಿಜೆಪಿ ,ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಸೇರಿದಂತೆ ಎಲ್ಲ ಪಕ್ಷದಲ್ಲೂ ಭರ್ಜರಿ ಪ್ರಚಾರ ಕಾರ್ಯ ಆರಂಭವಾಗಿದೆ. ಅದರಂತೆ ಇದೀಗ ಜಿಲ್ಲೆಯ ಪ್ರಭಾವಿ ನಾಯಕರುಗಳ ನಾಮಪತ್ರಸಲ್ಲಿಕೆಯನ್ನ ರೋಡ್​ ಶೋ ನಡೆಸುವ ಮೂಲಕ ಸಲ್ಲಿಸಲಿದ್ದಾರೆ. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಬರಲಿದ್ದು, ನಟ ಕಿಚ್ಚ ಸುದೀಪ್​ ಕೂಡ ಬರುವ ಸಾಧ್ಯತೆಯಿದೆ. ಈ ಮೂಲಕ ಮತದಾರರನ್ನ ಸೆಳೆಯುವ ಪ್ಲ್ಯಾನ್​ ಮಾಡಿದ್ದಾರೆ.

ಸಚಿವರಿಬ್ಬರ ನಾಮಪತ್ರ ಸಲ್ಲಿಕೆಗೆ ಇಂದು ಬಾಗಲಕೋಟೆಗೆ ಬೊಮ್ಮಾಯಿ: ಎಲ್ಲರ ಚಿತ್ತ ಕಿಚ್ಚ ಸುದೀಪ್ ​ನತ್ತ
ಸಿಎಂ ಬಸವರಾಜ ಬೊಮ್ಮಾಯಿ, ನಟ ಸುದೀಪ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on: Apr 18, 2023 | 8:27 AM

ಬಾಗಲಕೋಟೆ: ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಬಹುತೇಕ ಎಲ್ಲ ಪಕ್ಷಗಳು ತಮ್ಮ ನಾಯಕರುಗಳನ್ನ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದಾರೆ. ಅದರಂತೆ ಉಭಯ ಪಕ್ಷಗಳಿಂದ ನಾಮಪತ್ರ ಸಲ್ಲಿಕೆ ಕೂಡ ನಡೆಯುತ್ತಿದೆ. ಇದೀಗ ಜಿಲ್ಲೆಯ ಪ್ರಭಾವಿ ನಾಯಕರುಗಳಾದ ಮುಧೋಳ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ(Govind Karjol) ಹಾಗೂ ಬೀಳಗಿ ಬಿಜೆಪಿ ಅಭ್ಯರ್ಥಿ ಸಚಿವ ಮುರುಗೇಶ ನಿರಾಣಿ(Murugesh Nirani)ಇಂದು(ಏ.18) ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನಲೆ ಬೃಹತ್​ ರೋಡ್​ ಶೋ ಹಮ್ಮಿಕೊಂಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಹೆಲಿಕಾಪ್ಟರ್ ಮೂಲಕ 10.50 ಕ್ಕೆ ಜಿಲ್ಲೆಗೆ ಆಗಮಿಸಲಿದ್ದಾರೆ. ಜೊತೆಗೆ ಇದೇ ವೇಳೆ ನಟ ಕಿಚ್ಚ ಸುದೀಪ್(Sudeep) ಕೂಡ ಭಾಗಿಯಾಗುವ ಸಾಧ್ಯತೆಯಿದೆ.

ಇನ್ನು ಬಾಗಲಕೋಟೆ ಏಳು ವಿಧಾನಸಭೆಗಳನ್ನು ಹೊಂದಿರುವ ಜಿಲ್ಲೆ, ಈಗಾಗಲೇ ಒಂದು ಕಡೆ ನಾಮಪತ್ರ ಭರಾಟೆ ಜೋರಾಗಿದೆ. ಇದರ ಜೊತೆಗೆ ಪ್ರಚಾರ ಕಾರ್ಯ ಕೂಡ ಅದ್ದೂರಿಯಾಗಿ ಸಾಗುತ್ತಿದೆ. ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ಭರ್ಜರಿ ರೋಡ್ ಶೋ, ಮೆರವಣಿಗೆಗಳ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಈ ಮಧ್ಯೆ ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರಾದ ಗೋವಿಂದ ಕಾರಜೋಳ ,ಮುರುಗೇಶ್ ನಿರಾಣಿ ಕೂಡ ಇಂದು(ಏ.18) ಶಕ್ತಿ ಪ್ರದರ್ಶನದ ಮೂಲಕ ನಾಮಪತ್ರ ಸಲ್ಲಿಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕರೆಸಿ ಮುಧೋಳ ನಗರದಲ್ಲಿ ಗೋವಿಂದ ಕಾರಜೋಳ ಬೃಹತ್ ರೋಡ್ ಶೋ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ. ಇದೆ ವೇಳೆ ನಟ ಕಿಚ್ಚ ಸುದೀಪ್ ರೋಡ್​ ಶೋಗಳಲ್ಲಿ ಭಾಗಿಯಾಗುವ ಸಾಧ್ಯತೆಯಿದ್ದು, ಸಿಎಂಗಿಂತ ಸುದೀಪ್ ಎಂಟ್ರಿ ಎಲ್ಲರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ:Karnataka Assembly Elections 2023: ವಿಧಾನ ಪರಿಷತ್​ನಲ್ಲಿ ಬಿಜೆಪಿಗೆ ಹೊಡೆತ ಕೊಟ್ಟ ವಿಧಾನಸಭೆ ಚುನಾವಣೆ

ನಟ ಕಿಚ್ಚ ಸುದೀಪ್​ ಜಿಲ್ಲೆಗೆ ಎಂಟ್ರಿ ಉದ್ದೇಶವೇನು?

ಈಗಾಗಲೇ ಸಿಎಂ ನಟ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಹೇಳಿದ್ದು, ಇದಕ್ಕೆ ಕಿಚ್ಚ ಕೂಡ ದನಿಗೂಡಿಸಿದ್ದು ಎಲ್ಲರಿಗೂ ಗೊತ್ತಿದೆ. ಹಾಗಾದರೆ ಸುದೀಪ್ ಕರೆಸುವುದರ ಹಿಂದೆ ಕಾರಜೋಳ ಹಾಗೂ ನಿರಾಣಿ ಒಂದೆ ಕಲ್ಲಿಗೆ ಎರಡು ಹಕ್ಕಿ ಹೊಡೆಯೋಕೆ ಪ್ಲಾನ್ ಮಾಡಿದ್ದಾರಾ?. ಹೌದು ಕಿಚ್ಚ ಸುದೀಪ್ ಉತ್ತರ ಕರ್ನಾಟಕ ಭಾಗದಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ನೊಂದು ಕಡೆ ಮುಧೋಳ ಕ್ಷೇತ್ರ ಎಸ್​.ಸಿ ಮೀಸಲು ಕ್ಷೇತ್ರವಾಗಿದೆ. ಇಲ್ಲಿ ಎಸ್​.ಟಿ 20 ಸಾವಿರ ಮತಗಳು ಎಸ್​.ಸಿ 53 ಸಾವಿರ ಮತ ಹೊಂದಿರುವ ಮುಧೊಳ ಕ್ಷೇತ್ರದಲ್ಲಿ ಪ್ರತಿಶತ 70 ರಷ್ಟು ಮತಗಳನ್ನು ಸೆಳೆಯಲು ಕಿಚ್ಚನನ್ನ ಕರೆಸಲಾಗುತ್ತಿದೆ ಎಂಬ ಮಾತುಗಳು ಗಟ್ಟಿಯಾಗಿ ಹರಿದಾಡುತ್ತಿವೆ.

ಈಗಾಗಲೇ ಕಿಚ್ಚನ ಬರುವಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್​ಗಳು ಹರಿದಾಡುತ್ತಿವೆ. ಇನ್ನು ಇಂದು 11 ಗಂಟೆಗೆ ಬಸವರಾಜ ಬೊಮ್ಮಾಯಿ ಜೊತೆ ಬರಲಿರುವ ಕಿಚ್ಚ ಮುಧೋಳ ಶಾಸಕ ಹಾಗೂ ಸಚಿವ ಗೋವಿಂದ ಕಾರಜೋಳ ರೋಡ್ ಶೋನಲ್ಲಿ ಸಿಎಂ ಜೊತೆ ಭಾಗಿಯಾಗಲಿದ್ದಾರೆ. ಇನ್ನು ನಂತರ ನಾಮಪತ್ರ ಸಲ್ಲಿಕೆ ವೇಳೆಯೂ ಹಾಜರಿರಲಿದ್ದು, ನಂತರ ಬೀಳಗಿ ಕ್ಷೇತ್ರಕ್ಕೆ ತೆರಳಿ ಬೀಳಗಿಯಲ್ಲಿ ಮುರುಗೇಶ್ ನಿರಾಣಿ ಪರ ರೋಡ್ ಶೋದಲ್ಲಿ ಭಾಗಿಯಾಗಿ ನಾಮಪತ್ರ ಸಲ್ಲಿಕೆ ವೇಳೆಯೂ ಕಿಚ್ಚ ಕಮಲ ಕಲಿಗಳ ಜೊತೆ ಇರಲಿದ್ದಾರೆ.

ಇದನ್ನೂ ಓದಿ:ರಾಜಕೀಯ ನಿವೃತ್ತಿ ಘೋಷಿಸಿದ ಕಾಂಗ್ರೆಸ್ ಹಿರಿಯ ನಾಯಕ ವಿಆರ್ ಸುದರ್ಶನ್

ಕಿಚ್ಚನ ಮೂಲಕ ಎಸ್​.ಸಿ, ಎಸ್​.ಟಿ ಮತಗಳಿಗೆ ಗಾಳ ಹಾಕಿದ್ದಾರಾ ಕೇಸರಿ ಕಲಿಗಳು

ಇನ್ನು ಬೀಳಗಿ ಕ್ಷೇತ್ರದಲ್ಲಿ ಎಸ್​.ಟಿ ವಾಲ್ಮೀಕಿ ಮತಗಳು ಸೇರಿ 33 ಸಾವಿರಕ್ಕೂ ಅಧಿಕ ಮತಗಳಿವೆ. ವೀರ ಸಿಂಧೂರ ಲಕ್ಷ್ಮಣ ಓಡಾಡಿದ ಬೀಳಗಿ ಕ್ಷೇತ್ರದಲ್ಲಿ ವಾಲ್ಮೀಕಿ ಮತದಾರರು ನಿರ್ಣಾಯಕರಾಗಿದ್ದಾರೆ. ಎಸ್​.ಸಿ ಮತಗಳು 30 ಸಾವಿರ ಇದ್ದು ಇಲ್ಲಿ ಸುದೀಪ್ ಮೂಲಕ ಆ ಮತಗಳನ್ನು ಕಮಲದ ತೆಕ್ಕೆಗೆ ತೆಗೆದುಕೊಳ್ಳುವ ಪ್ಲಾನ್ ನಿರಾಣಿಯದ್ದು, ಇದರ ಜೊತೆಗೆ ಬಾಗಲಕೋಟೆ ಜಿಲ್ಲಾದ್ಯಂತ ಎಸ್​.ಟಿ 1 ಲಕ್ಷ 25 ಸಾವಿರ ಮತಗಳು ಎಸ್.ಸಿ 2 ಲಕ್ಷ 65 ಸಾವಿರ ಮತಗಳಿದ್ದು, ಸುದೀಪ್​ ಜಿಲ್ಲೆಗೆ ಎಂಟ್ರಿ ಹೊಡೆದರೆ ಈ ಎಲ್ಲ ಮತಗಳು ಬಿಜೆಪಿ ಪಾಲಾಗಲಿವೆ ಎಂಬ ಲೆಕ್ಕಾಚಾರವಿದೆ.

ಒಟ್ಟಿನಲ್ಲಿ ಇಬ್ಬರು ಪ್ರಭಾವಿ ಸಚಿವರು ಪ್ರಬಲ ಬಿಜೆಪಿ ಅಭ್ಯರ್ಥಿಗಳು ಸಿಎಂ ಜೊತೆಗೆ ಕಿಚ್ಚನನ್ನು ಕರೆಸಿ ತಮ್ಮ ಪರ ಮತದಾರರನ್ನು ಸೆಳೆಯಲು ಮೆಗಾ ಪ್ಲಾನ್ ಮಾಡಿದ್ದಾರೆ. ಸುದೀಪ್ ಬರುವ ಕಾತುರ ಒಂದು ಕಡೆ, ಹಾಗೂ ಅವರ ಅಭಿಮಾನಿಗಳು ಹಾಗೂ ಎಸ್​.ಸಿ, ಎಸ್​ ಟಿ ಸಮುದಾಯದ ಮತದಾರರಲ್ಲಿ ಸಂಚಲನ ಮೂಡಿಸಿದ್ದು ಇದು ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತದೆ ಎಂದು ಫಲಿತಾಂಶವೇ ಉತ್ತರಿಸಬೇಕು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ವಿಪಕ್ಷ ನಾಯಕ ಅಶೋಕ ಮಾತಾಡುವ ವೈಖರಿ ವಿಷಾದಕರ: ಚಲುವರಾಯಸ್ವಾಮಿ
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಮಹಾರಾಷ್ಟ್ರದಲ್ಲಿ ಮಹಾವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ: ಪರಮೇಶ್ವರ್
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
ಫ್ಯಾಷನ್ ಪ್ಯಾಂಟಿಗೆ ಹೊಲಿಗೆ ಹಾಕಿದ್ದಕ್ಕೆ ಯುವಕ ಆತ್ಮಹತ್ಯೆಗೆ ಯತ್ನ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ