New Traffic Guidelines: ಇನ್ಮುಂದೆ ನಿಮಗೆ ಟ್ರಾಫಿಕ್​ ಪೊಲೀಸರ ಕಿರಿಕಿರಿ ಇಲ್ಲ, ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಡಿಜಿ ಐಜಿಪಿ ಅಲೋಕ್ ಮೋಹನ್

|

Updated on: Jun 09, 2023 | 3:14 PM

ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸುವುದು ಕಂಡುಬಂದರೆ ಮಾತ್ರ ತಡೆಯಿರಿ. ಇಲ್ಲದಿದ್ರೆ ವಾಹನ ಸವಾರರನ್ನು ತಡೆಯಬೇಡಿ ಎಂದು ಡಿಜಿ ಐಜಿಪಿ ಅಲೋಕ್ ಮೋಹನ್ ಸಂಚಾರ ನಿಯಮಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ.

New Traffic Guidelines: ಇನ್ಮುಂದೆ ನಿಮಗೆ ಟ್ರಾಫಿಕ್​ ಪೊಲೀಸರ ಕಿರಿಕಿರಿ ಇಲ್ಲ, ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಡಿಜಿ ಐಜಿಪಿ ಅಲೋಕ್ ಮೋಹನ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ತುರ್ತಾಗಿ ಹೋಗುವ ಸಮಯದಲ್ಲಿ ಟ್ರಾಫಿಕ್​ ಪೊಲೀಸರು (Traffic Police) ವಾಹನ ಸವಾರರನ್ನು ತಡೆದು ನಿಲ್ಲಿಸುವುದರಿಂದ ಸವಾರರು ಕಿರಿಕಿರಿಯನ್ನು ಅನುಭವಿಸುತ್ತಾರೆ. ಈ ಸಂಬಂಧ ಜನರು ಟ್ರಾಫಿಕ್​ ಪೊಲೀಸರ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಇದರ ಕುರಿತಾಗಿ ವಾಹನ ಸವಾರರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ವಾಹನ ಸವಾರರು (Drivers) ಸಂಚಾರ ನಿಯಮ ಉಲ್ಲಂಘಿಸುವುದು (Traffic Rules) ಕಂಡುಬಂದರೆ ಮಾತ್ರ ತಡೆಯಿರಿ. ಇಲ್ಲದಿದ್ರೆ ವಾಹನ ಸವಾರರನ್ನು ತಡೆಯಬೇಡಿ ಎಂದು ಡಿಜಿ ಐಜಿಪಿ ಅಲೋಕ್ ಮೋಹನ್ (Alok Mohan) ಸಂಚಾರ ನಿಯಮಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ.

ಪೀಕ್ ಅವರ್ ಟ್ರಾಫಿಕ್ ಪ್ರಾರಂಭವಾಗುವ ಮೊದಲೇ ಸಂಚಾರಿ ಪೊಲೀಸರು ಆಯಾ ಸ್ಥಳಗಳಲ್ಲಿ ನಿಯೋಜಿಸಿಕೊಳ್ಳಬೇಕು. ಸಂಚಾರಿ ಪೊಲೀಸ್​ ಸಿಬ್ಬಂದಿ ದಟ್ಟಣೆಯ ಸಮಯಕ್ಕಿಂತ ಮೊದಲು ತಮ್ಮ ಗೊತ್ತುಪಡಿಸಿದ ಪ್ರದೇಶಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಈ ಹೊಸ ಕ್ರಮವು ರಿಯಲ್ ಟೈಮ್ನಲ್ಲಿ ಸಂಚಾರ ದಟ್ಟಣೆಯನ್ನು ತಡೆಗಟ್ಟಲು ಸಹಾಯ ಮಾಡಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Bengaluru News: ವಾಹನ ಚಾಲಕರೇ ಎಚ್ಚರ! ಟ್ರಾಫಿಕ್​ ರೂಲ್ಸ್​ ಬ್ರೇಕ್​​ ಮಾಡಿದ್ರೆ ಬೀಳುತ್ತೆ ಕ್ರಿಮಿನಲ್ ಕೇಸ್

ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು, ಸಂಚಾರಿ ಪೊಲೀಸರು ಸಾಧ್ಯವಾದಾಗಲೆಲ್ಲಾ ದೇಹಕ್ಕೆ ಧರಿಸಿರುವ ಕ್ಯಾಮೆರಾಗಳನ್ನು ಧರಿಸಿಕೊಳ್ಳಬೇಕು. ಈ ಕ್ರಮವು ವಿವಾದಗಳು ಅಥವಾ ದೂರುಗಳ ಪ್ರಕರಣಗಳಲ್ಲಿ ಸಾಕ್ಷ್ಯವನ್ನು ಒದಗಿಸುತ್ತವೆ.

ಅಲ್ಲದೇ, ಪಾರ್ಕಿಂಗ್ ಮಾಲು ನಿರ್ಬಂಧ ಇರುವ ಪ್ರದೇಶಗಳಲ್ಲಿ ನಿಲುಗಡೆ ಮಾಡುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ಅಂತಹ ಸಂದರ್ಭಗಳಲ್ಲಿ ವಾಹನಗಳನ್ನು ಕೂಡಲೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಸಹಾಯಕ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಮತ್ತು ಇತರ ಅಧಿಕಾರಿಗಳು ತಮ್ಮ ವಿವೇಚನೆಯ ಆಧಾರದ ಮೇಲೆ, ಅವರ ಅಧಿಕಾರದ ವ್ಯಾಪ್ತಿಯಲ್ಲಿ ಸಂಚಾರ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿದ್ದಾರೆ ಎಂದು ಡಿಜಿ ಐಜಿಪಿ ಅಲೋಕ್ ಮೋಹನ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ