AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Earthquake: ಬಾಗಲಕೋಟೆಯಲ್ಲೂ ಭೂಕಂಪನ ಅನುಭವ; ಖಚಿತಪಡಿಸಿದ ಜಿಲ್ಲಾಡಳಿತ

ರಾತ್ರಿ 11.43 ರ ಸುಮಾರಿಗೆ ನಮಗೆ ಭೂಕಂಪನದ ಅನುಭವ ಆಗಿದೆ. ಹತ್ತರಿಂದ ಹನ್ನೆರಡು ಸೆಕೆಂಡುಗಳ ಕಾಲ ಭೂಕಂಪಿಸಿದ ಅನುಭವ ನಮಗೆ ಆಗಿದೆ. ರೋಲರ್ ಸಂಚರಿಸುವ ವೇಳೆ ಬರುವ ಶಬ್ದದ ಹಾಗೆ ಶಬ್ದ ಕೇಳಿಸಿದೆ.

Earthquake: ಬಾಗಲಕೋಟೆಯಲ್ಲೂ ಭೂಕಂಪನ ಅನುಭವ; ಖಚಿತಪಡಿಸಿದ ಜಿಲ್ಲಾಡಳಿತ
ಬಿರುಕು ಬಿಟ್ಟಿರುವ ಗೋಡೆ, ಭೂಕಂಪನದ ಅನುಭವವಾದ ಸ್ಥಳ
TV9 Web
| Updated By: sandhya thejappa|

Updated on:Sep 05, 2021 | 10:44 AM

Share

ಬಾಗಲಕೋಟೆ: ವಿಜಯಪುರ ಜಿಲ್ಲೆಯಾದ್ಯಂತ ಕಳೆದ ರಾತ್ರಿ 11.47ಕ್ಕೆ ಭೂಮಿ ಕಂಪಿಸಿದ (Earthquake) ಅನುಭವವಾಗಿದೆ. ಅದರಂತೆ ಬಾಗಲಕೋಟೆಯಲ್ಲೂ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ತಿಳಿದುಬಂದಿದೆ. ರಾತ್ರಿ 11.50ಕ್ಕೆ ಭೂಮಿ ಕಂಪಿಸಿದ ಅನುಭವಾಗಿದೆ ಎಂದು ಹೇಳಲಾಗುತ್ತಿದೆ. ಬಾಗಲಕೋಟೆ, ಜಮಖಂಡಿ ತಾಲೂಕಿನಲ್ಲಿ ಕಂಪನದ ಅನುಭವವಾಗಿದ್ದು, ಈ ಬಗ್ಗೆ ಬಾಗಲಕೋಟೆ ಜಿಲ್ಲಾಡಳಿತ ಖಚಿತಪಡಿಸಿದೆ. ಅಂಕಲಗಿ ಗ್ರಾಮದಲ್ಲಿ ಭೂಕಂಪನದ ಅನುಭವವಾದ ಹಿನ್ನೆಲೆ ಕೊಟ್ಟಿಗೆಯಲ್ಲಿ ದನಕರುಗಳು ಎದ್ದು ನಿಂತಿರುವುದು ತಿಳಿದುಬಂದಿದೆ. ಕೆ.ಎಲ್.ಬಿಲ್.ಕೇರಿ ಎಂಬುವರ ಕೊಟ್ಟಿಗೆಯಲ್ಲಿದ್ದ ಹಸುಗಳು ಭೂಕಂಪನ ಅನುಭವಕ್ಕೆ ದಿಢೀರನೆ ಎದ್ದು ನಿಂತಿದ್ದವು ಎಂಬ ಮಾಹಿತಿ ಲಭ್ಯವಾಗಿದೆ.

ನಿನ್ನೆ ರಾತ್ರಿ 11.43 ರ ಸುಮಾರಿಗೆ ನಮಗೆ ಭೂಕಂಪನದ ಅನುಭವ ಆಗಿದೆ. ಹತ್ತರಿಂದ ಹನ್ನೆರಡು ಸೆಕೆಂಡುಗಳ ಕಾಲ ಭೂಕಂಪಿಸಿದ ಅನುಭವ ನಮಗೆ ಆಗಿದೆ. ರೋಲರ್ ಸಂಚರಿಸುವ ವೇಳೆ ಬರುವ ಶಬ್ದದ ಹಾಗೆ ಶಬ್ದ ಕೇಳಿಸಿದೆ. 10ರಿಂದ 12 ಸೆಕೆಂಡ್‌ ಕಾಲ ಕಂಪನದ ಅನುಭವ ಆಗಿದೆ. ನಮ್ಮ ಮನೆಯ ಸದಸ್ಯರು ಹೊರಗೆ ಬಂದು ನಿಂತಿದ್ದೆವು. ಮಕ್ಕಳು, ಮನೆಮಂದಿ ಭಯಗೊಂಡಿದ್ದರು ಎಂದು ಬಾಗಲಕೋಟೆ ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಸಲೀಮ್ ಶೇಕ್ ತಿಳಿಸಿದ್ದಾರೆ. ಸಲೀಮ್ ಶೇಖ್ ಅವರ ಮನೆ ಗೋಡೆ ಮೇಲೆ ಚಿಕ್ಕದಾಗಿ ಬಿರುಕು ಕಾಣಿಸಿಕೊಂಡಿದೆ.

ವಿಜಯಪುರದಲ್ಲಿ ಕಂಪನದ ತೀವ್ರತೆ 3.9ರಷ್ಟು ದಾಖಲು ರಾತ್ರಿ 11.47ರ ಸುಮಾರಿಗೆ ವಿಜಯಪುರ ಸೇರಿದಂತೆ ಜಿಲ್ಲೆಯಾದ್ಯಂತ ಭೂಮಿ ಕಂಪಿಸಿದ ಅನುಭವ, ವಿಚಿತ್ರ ಶಬ್ದ ಎದುರಾಗಿದೆ. ಭಯದಿಂದ ಜನರು ತಮ್ಮ ಮನೆಗಳಿಂದ ಹೊರಗಡೆ ಓಡಿಬಂದಿದ್ದಾರೆ. 3 ರಿಂದ 4 ಸೆಕೆಂಡ್ ಕಾಲ ಭೂಮಿ‌ ನಡುಗಿದ ಅನುಭವವಾಗಿದ್ದು ಭೂಮಿಯಿಂದ ಕೇಳಿ‌ ಬಂದ ವಿಚಿತ್ರ ಶಬ್ದಕ್ಕೆ ಜನರಲ್ಲಿ ಭೀತಿ ಎದುರಾಗಿದೆ. ಸದ್ಯ ಗಣಿ, ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರೀಕ್ಷೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ

ನೈಜೀರಿಯಾ ಡ್ರಗ್ ಪೆಡ್ಲರ್​ನನ್ನು ಬಂಧಿಸಿದ ಸಿಸಿಬಿ, ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ವಶ

ಬೆಳಗಾವಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ ಮೊಹಮ್ಮದ್ ಜಮಾದಾರ್ ತಯಾರಿಸುವ ಗಣಪತಿ

(Earthquake experience in Bagalkot and District Administration confirmed the earthquake)

Published On - 10:39 am, Sun, 5 September 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!