ಬಾಗಲಕೋಟೆಯಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ರೈತ ಸ್ಥಳದಲ್ಲಿಯೇ ದುರ್ಮರಣ
ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈಯಲಾಗಿದೆ. ರಶೀದ್ ಚಿತ್ತಾಪುರ ಪಟ್ಟಣದ ಆಶ್ರಯ ಕಾಲೋನಿಯ ಮೊಹಮ್ಮದ್ ರಶೀದ್(25) ಹತ್ಯೆಗೊಳಗಾದ ಯುವಕ.

ವಿಜಯಪುರ: ಟ್ರ್ಯಾಕ್ಟರ್ ಪಲ್ಟಿಯಾಗಿ ಸ್ಥಳದಲ್ಲಿಯೇ ರೈತ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದೆ. ಗೊಳಸಂಗಿ ಗ್ರಾಮದ ಗ್ಯಾನುಬಾ ಸಾಳುಂಕೆ(48) ಮೃತ ರೈತ. ಶನಿವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ. ಕೂಡಗಿ ಎನ್ಟಿಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಸಿಪಿಐ ಸೋಮಶೇಖರ್ ಜುಟ್ಟಲ್, ಕೂಡಗಿ ಪಿಎಸ್ಐ ಡಿಎಂ ಸಂಗಾಪೂರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಯುವಕನ ಬರ್ಬರ ಹತ್ಯೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಯುವಕನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈಯಲಾಗಿದೆ. ರಶೀದ್ ಚಿತ್ತಾಪುರ ಪಟ್ಟಣದ ಆಶ್ರಯ ಕಾಲೋನಿಯ ಮೊಹಮ್ಮದ್ ರಶೀದ್(25) ಹತ್ಯೆಗೊಳಗಾದ ಯುವಕ. ದುಷ್ಕರ್ಮಿಗಳು ಕಳೆದ ರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸದ್ಯ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಕಟ್ಟೆಯಲ್ಲಿ ಮುಳುಗಿ ವ್ಯಕ್ತಿ ಸಾವು ನೆಲಮಂಗಲ: ಮೀನಿಗೆ ಬಲೆ ಹಾಕಲು ತೆರಳಿದ್ದಾಗ ವ್ಯಕ್ತಿ ಕಟ್ಟೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಶ್ಯಾಮಭಟ್ಟರಪಾಳ್ಯ ತಾವರೆಕಟ್ಟೆಯಲ್ಲಿ ಘಟನೆ ನಡೆದಿದೆ. ಹೆಸರಘಟ್ಟ ಗ್ರಾಮದ ಶೆಟ್ಟಾಳಪ್ಪ(50)ಮೃತ ದುರ್ದೈವಿ. ಅಗ್ನಿಶಾಮಕ ಅಧಿಕಾರಿ ಸಿದ್ದಹೊನ್ನಪ್ಪ ನೇತೃತ್ವದಲ್ಲಿ ಕಾರ್ಯಚರಣೆ ನಡೆಯುತ್ತಿದೆ. ಜೊತೆಗಾರ ನಾರಾಯಣಪ್ಪ ಕಣ್ಣೇದುರಲ್ಲೇ ಘಟನೆ ನಡೆದಿದೆ. ಇನ್ನು ಸ್ಥಳಕ್ಕೆ ಮತ್ತೊಂದು ಪೀಣ್ಯಾ ಅಗ್ನಿಶಾಮಕ ದಳದ ವಾಹನ ಆಗಮಿಸಿದೆ. ರಕ್ಷಣಾ ವಾಹನದ ರಬ್ಬರ್ ಬೋಟ್ ಬಳಸಿ ಸಿಬ್ಬಂದಿ ಕಾರ್ಯಚರಣೆ ನಡೆಸುತ್ತಿದೆ.
ಇದನ್ನೂ ಓದಿ
ರೈತರ ಪ್ರತಿಭಟನೆ ಅಂತ್ಯ: ಡಿಜೆ, ಹಾಡು ಕುಣಿತಗಳೊಂದಿಗೆ ಹರ್ಯಾಣ ,ಪಂಜಾಬ್ಗೆ ರೈತರ ಮೆರವಣಿಗೆ




