AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರಣಾಂತಿಕ ಹಲ್ಲೆಗೊಳಗಾದ ಯುವ ರೈತ ಮುಖಂಡನ ವಿರುದ್ಧವೇ FIR: ಮೂಲ ಆರೋಪಿಗಳ ಬಂಧನಕ್ಕೆ ಆಗ್ರಹ

ಚುನಾವಣೆಯುದ್ದಕ್ಕೂ ಬಿಜೆಪಿ ಅಭ್ಯರ್ಥಿ ಆಗಿದ್ದ ಮುರುಗೇಶ್ ನಿರಾಣಿ ವಿರುದ್ದ ಭಾಷಣ, ಸಾಮಾಜಿಕ ಜಾಲತಾಣದಲ್ಲಿ ಅವರ ಗಿಪ್ಟ್ ರಾಜಕಾರಣ ಬಗ್ಗೆ ಮಾತಾಡಿದ್ದಕ್ಕೆ ಓರ್ವ ಯುವ ರೈತ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಆತನ ವಿರುದ್ಧವೇ ಎಫ್​ಐಆರ್ ದಾಖಲಾಗಿರುವಂತಹ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದಲ್ಲಿ ಇದೀಗ ಬೆಳಕಿಗೆ ಬಂದಿದೆ.

ಮಾರಣಾಂತಿಕ ಹಲ್ಲೆಗೊಳಗಾದ ಯುವ ರೈತ ಮುಖಂಡನ ವಿರುದ್ಧವೇ FIR: ಮೂಲ ಆರೋಪಿಗಳ ಬಂಧನಕ್ಕೆ ಆಗ್ರಹ
ಯಲ್ಲಪ್ಪ ಹೆಗಡೆ, ರೈತ ಹೋರಾಟಗಾರ
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ|

Updated on:Sep 10, 2023 | 5:17 PM

Share

ಬಾಗಲಕೋಟೆ, ಸೆಪ್ಟೆಂಬರ್​​ 10: ಆತ ಓರ್ವ ಯುವ ರೈತ (farmer leader) ಮುಖಂಡ. ಕಳೆದ ಚುನಾವಣೆಯಲ್ಲಿ ರೈತಸಂಘದ ಬೆಂಬಲದೊಂದಿಗೆ ಚುನಾವಣೆಗೆ ನಿಂತಿದ್ದ. ಅದೇ ಕ್ಷೇತ್ರದಲ್ಲಿ ಪ್ರಭಲ ಅಭ್ಯರ್ಥಿ ಮಾಜಿ ಸಚಿವರ ಗಿಫ್ಟ್ ಪಾಲಿಟಿಕ್ಸ್ ಆಕ್ರಮದ ಬಗ್ಗೆ ಕಿಡಿಕಾರಿದ್ದ. ಇದರಿಂದ ಆತನ ಮೇಲೆ‌ ಹಲ್ಲೆಯಾಗಿತ್ತು. ಇದರಿಂದ ಜಿಲ್ಲಾದ್ಯಂತ ಪ್ರತಿಭಟನೆ ಕಹಳೆ‌ ಮೊಳಗಿದೆ.ಮಾಜಿ ಸಚಿವನ ವಿರುದ್ಧ ಆಕ್ರೋಶದ ಕಟ್ಟೆಯೊಡೆದಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಮಾರಣಾಂತಿಕ ಹಲ್ಲೆಗೊಳಗಾದವ ದೂರು ನೀಡುವ ಮೊದಲೇ ಆತನ ವಿರುದ್ಧವೇ ಎಫ್ ಐ ಆರ್ ಆಗಿದ್ದು ಈಗ ಬೆಳಕಿಗೆ ಬಂದಿದೆ.

ಹಲ್ಲೆಗೊಳಗಾದ ಯುವ ರೈತ ಮುಖಂಡನ ಹೆಸರು ಯಲ್ಲಪ್ಪ ಹೆಗಡೆ. ಈತ ಬೀಳಗಿ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದ. ಆದರೆ ಚುನಾವಣೆಯುದ್ದಕ್ಕೂ ಬಿಜೆಪಿ ಅಭ್ಯರ್ಥಿ ಆಗಿದ್ದ ಮುರುಗೇಶ್ ನಿರಾಣಿ ವಿರುದ್ದ ಭಾಷಣ, ಸಾಮಾಜಿಕ ಜಾಲತಾಣದಲ್ಲಿ ಅವರ ಗಿಫ್ಟ್ ರಾಜಕಾರಣ ಬಗ್ಗೆ ಮಾತಾಡಿದ್ದಕ್ಕೆ ಇಂತಹ ಸ್ಥಿತಿ ಬಂದಿದೆ. ಚುನಾವಣೆ ‌ಮುಗಿ‌ದ‌ ಮೇಲೆ ಯಲ್ಲಪ್ಪ ಹೆಗಡೆ ವಿರುದ್ದ ಮುರುಗೇಶ್ ನಿರಾಣಿ 5 ಕೋಟಿ ರೂ. ‌ಮಾನನಷ್ಟ ಲೀಗಲ್ ನೊಟೀಸ್ ಕಳಿಸಿದ್ದರು.

ಇದಕ್ಕೆ ಟಾಂಗ್ ನೀಡಲು ಆಗಷ್ಟ್ 28 ರಂದು ಯಲ್ಲಪ್ಪ ಹೆಗಡೆ ಬೀಳಗಿಯಲ್ಲಿ ಭಿಕ್ಷಾಟನೆ ‌ಮಾಡಿ ಹಣ ಕೊಡೋಕೆ‌ ಮುಂದಾಗಿದ್ದ‌. ಮಾರ್ಗ ಮಧ್ಯೆ ಬೆಳಿಗ್ಗೆ 10:30 ಕ್ಕೆ ನಿರಾಣಿ ಕಾರ್ಖಾನೆ ಕಾರ್ಮಿಕರು ಕೋಲು ಗುಂಡಿನ‌ ಸೀಸಿನಿಂದ ಮಾರಣಾಂತಿಕ‌ ಹಲ್ಲೆ ಮಾಡಿದ್ದಾರೆ. ಆದರೆ ಹಲ್ಲೆ‌ಗೊಳಗಾದ ಯಲ್ಲಪ್ಪ ಹೆಗಡೆ ವಿರುದ್ದ ಅದೇ ದಿನ ಮದ್ಯಾಹ್ನ 2:30 ಕ್ಕೆ ಎಫ್​ಐಆರ್ ಹಾಕಲಾಗಿದೆ.

ಇದನ್ನೂ ಓದಿ: ಹಕ್ಕು ಪತ್ರ ನೀಡಲು ವಿಳಂಬ ಧೋರಣೆ, ಮೂಲ‌ ಮನೆ‌ ಬಿಟ್ಟು ಬಾರದ ಸಂತ್ರಸ್ತರು: ಸರ್ಕಾರಿ ಹಣ ನೀರಲ್ಲಿ ಹೋಮ

ಸಚಿವ ಮುರುಗೇಶ್ ‌ನಿರಾಣಿ ಅವರ ಗ್ರಾಮದ‌ ನಿವಾಸಿ ಹನುಮಂತ ಹಲಗಲಿ ಎಂಬುವರು ದೂರು ದಾಖಲಿಸಿದ್ದು ಇದೀಗ ಬೆಳಕಿಗೆ ಬಂದಿದೆ. ಯಲ್ಲಪ್ಪ ಹೆಗಡೆ ಮುರುಗೇಶ್ ನಿರಾಣಿ ಅವರ ಬಗ್ಗೆ ಸಾರ್ವಜನಿಕರ ದೃಷ್ಟಿಯಲ್ಲಿ ಹೆಸರು ಕೆಡಿಸುತ್ತಿದ್ದಾರೆ, ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎಫ್ ಐ ಆರ್‌‌ ಮಾಡಿದ್ದಾರೆ. ಈ ಮೂಲಕ ಹಲ್ಲೆ ಮಾಡಿ ಅವರ ಮೇಲೆಯೆ ಎಫ್ ಐ ಆರ್ ಮಾಡಿದ್ದು, ಸಾಮಾನ್ಯ ರೈತಮುಖಂಡ ಮೇಲೆ ಪ್ರಭಾವಿಗಳ ಆಟ ನಡೆದಿದೆ ಎಂಬ ಮಾತು ಕೇಳಿ ಬರುತ್ತಿದೆ. ಕಾನೂನು ಬಂಡವಾಳಶಾಹಿಗಳ ಪರ ಇದೆ. ಆದರೆ ನಾನು ಕಾನೂನು ಹಾಗೂ ಸೈದ್ದಾಂತಿಕ ಹೋರಾಟ. ಮಾಡುತ್ತೇನೆ ಎಂದು ಯಲ್ಲಪ್ಪ ಹೆಗಡೆ ತಿಳಿಸಿದರು.

ಮಾರಣಾಂತಿಕ ಹಲ್ಲೆಗೊಳಗಾದ ಯಲ್ಲಪ್ಪ ಹೆಗಡೆ ವಿರುದ್ದ ಎಫ್ ಐ ಆರ್ ಆದರೆ, ಮಾಜಿ ಸಚಿವ ಮುರುಗೇಶ್ ನಿರಾಣಿ ಹಾಗೂ ಸಹೋದರ ಸಂಗಮೇಶ್ ನಿರಾಣಿ ವಿರುದ್ಧ ಸಂಜೆ 7 ರ ಬಳಿಕ ಎಫ್ ಐ ಆರ್ ಆಗಿದೆ. ಇನ್ನು ಹಲ್ಲೆ‌ ನಡೆಯುತ್ತಿದ್ದಂತೆ ಮುಧೋಳ‌ ನಗರದಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆದಿತ್ತು. ಈ ಕಾರಣಕ್ಕೆ ಕಾನೂನು ಸುವ್ಯವಸ್ಥೆ ಹದಗೆಡಬಾರದು ಅಂತ ಕಾಟಾಚಾರಕ್ಕೆ ಎಫ್ ಐ ಆರ್ ಆಗಿದೆ. ಆದರೆ ಯಾವ ಖಾಕಿ‌ ಕೂಡ ‌ಮುರುಗೇಶ್ ನಿರಾಣಿ ಹಾಗೂ ಸಂಗಮೇಶ್ ‌ನಿರಾಣಿ ಬಳಿ‌ಹೋಗಿಲ್ಲ. ಬಂಧಿಸುವ ಕಾರ್ಯ ‌ಮಾಡಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ಆ ದೇವತೆಯ ಸನ್ನಿಧಾನದಲ್ಲಿ ಸಿಗುವ ಅಂಬಲಿ ಪ್ರಸಾದ ಅಮೃತವಿದ್ದಂತೆ, ಸೇವಿಸಿದರೆ ರೋಗಗಳು ಮಾಯಾ; ಎಲ್ಲಿದೆ ದೇವಸ್ಥಾನ ಅಂತೀರಾ? ಇಲ್ಲಿದೆ ವಿವರ

ಯಲ್ಲಪ್ಪ ಹೆಗಡೆ ಮೇಲಿನ ಹಲ್ಲೆ ಖಂಡಿಸಿ‌ ಮುಧೋಳ ನಗರದಲ್ಲಿ ದಲಿತಪರ ಸಂಘಟನೆ, ರೈತ ಸಂಘಟನೆ ಕಾರ್ಯಕರ್ತರು ಹೋರಾಟ ‌ಮಾಡುತ್ತಲೇ ಬಂದಿದ್ದಾರೆ. ಬೀಳಗಿ ಕ್ರಾಸ್ ನಲ್ಲಿ ರೈತರು ರಸ್ತೆ ತಡೆದು ಅಂಗಡಿ ಮುಂಗಟ್ಟು ಬಂದ್ ಮಾಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಸಂಘಟನೆಗಳು ಹೋರಾಟ ‌ಮಾಡಿವೆ. ಜಿಲ್ಲಾದ್ಯಂತ ರೈತ ಸಂಘಟನೆ ಕನ್ನಡಪರ ಸಂಘಟನೆ, ವಿವಿಧ ಸಂಘಟನೆಗಳು ನಿರಾಣಿ ಬಂಧನಕ್ಕೆ‌ ಆಗ್ರಹ ಮಾಡಿ ಬೀದಿಗಿಳಿದಿವೆ. ಆದರೆ ಯಾವ ಪ್ರಯೋಜನ ‌ಕೂಡ ಆಗುತ್ತಿಲ್ಲ.

ಪೊಲೀಸರು ನಿರಾಣಿ ಕಾರ್ಖಾನೆಯ ೬ ಜನ ಕಾರ್ಮಿಕರನ್ನು ಬಂಧಿಸಿದ್ದಾರೆ. ಆಸ್ಪತ್ರೆಗೆ ಸಚಿವ ಆರ್ ಬಿ ತಿಮ್ಮಾಪುರ, ಕಾಗಿನೆಲೆ ತಿಂತಣಿ ಮಠದ‌ಸಿದ್ದರಾಮಾನಂದ ಶ್ರೀಗಳು ಭೇಟಿಯಾಗಿ ಘಟನೆ ಖಂಡಿಸಿದ್ದಾರೆ. ಇಂದು ಮಾಜಿ ಸಚಿವ ಹೆಚ್ ವಿಶ್ವನಾಥ ಯಲ್ಲಪ್ಪ ಹೆಗಡೆ ‌ಮೇಲಿನ‌ ಹಲ್ಲೆ ಖಂಡಿಸಿದರು. ನಿರಾಣಿ ಹೆಸರು ಹೇಳದೆ ಇದೊಂದು ರಾಜಕೀಯ ಹಲ್ಲೆ,ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದರು.

ಯುವ ರೈತನ ಮೇಲಿನ ಹಲ್ಲೆಯಿಂದ ‌ನಿರಾಣಿ ಬ್ರದರ್ಸ್ ವಿರುದ್ಧ ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಬಂಡಾಯವೆದ್ದಿದ್ದಾರೆ. ಆದರೆ ಈ ಬಗ್ಗೆ ನಿರಾಣಿ ಸಹೋದರರು ಎಲ್ಲೂ ಕೂಡ ಬಾಯಿ ಬಿಟ್ಟಿಲ್ಲ. ಈ‌ ಪ್ರಕರಣ ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತೊ‌ ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:16 pm, Sun, 10 September 23