ಬಾಗಲಕೋಟೆ, ಸೆ.10: ಬನಶಂಕರಿ ದೇವಿ ನಾಡಲ್ಲಿ ಜೂಜು ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ. ಪ್ರತಿ ದಿನ ಹಾಡಹಗಲೇ 50 ಲಕ್ಷದಿಂದ ಕೋಟಿ ವರೆಗೆ ಇಸ್ಪೀಟ್ (Gambling) ಅಂದರ್ ಬಾಹರ್ ದಂಧೆ ನಡೆಯುತ್ತಿದೆ. ತಿಂಗಳ ಕಮೀಷನ್ ಪಡೆದು ಕಂಡು ಕಾಣದಂತೆ ಪೊಲೀಸರಿದ್ದಾರೆ (Bagalkot Police) ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನಾಡಿನ ಶಕ್ತಿಪೀಠಗಳಲ್ಲಿ ಒಂದಾದ ಬನಶಂಕರಿ ದೇವಿ ದೇವಸ್ಥಾನದ ಪಕ್ಕದಲ್ಲಿರುವ ಶಿವಪುರ ಗುಡ್ಡದಲ್ಲಿ ಜೂಜು ದಂಧೆ ನಡೆಯುತ್ತಿದೆ. ಪವಿತ್ರ ದೇವಸ್ಥಾನದ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಬರ್ತಾರೆ. ಆದರೆ ಇಂತಹ ಪವಿತ್ರ ಸ್ಥಾನದಲ್ಲಿ ಅವ್ಯಾಹತವಾಗಿ ಜೂಜು ದಂಧೆ ನಡೆಯುತ್ತಿದೆ. ಗುಡ್ಡದಲ್ಲಿ ಒಂದು ಪೆಂಡಾಲ್ ಹಾಕಿ ಇಸ್ಪೀಟ್ ಆಡಿಸಲಾಗುತ್ತಿದೆ. ಮಧ್ಯಾಹ್ನ 2 ಗಂಟೆಯಿಂದ ಯಾವುದೇ ಅಳುಕಿಲ್ಲದೇ ಅಕ್ರಮ ದಂಧೆ ನಡೆಯುತ್ತಿದೆ. ಪೊಲೀಸರು ಕೂಡ ಈ ಕಡೆ ಸುಳಿಯುವುದಿಲ್ಲ. ಹೀಗಾಗಿ ಯಾವುದೇ ಭಯವಿಲ್ಲದೆ ಬೆಟ್ಟಿಂಗ್ ಕಟ್ಟಿ ಇಸ್ಪೀಟ್ ಆಡಲಾಗುತ್ತಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬನಶಂಕರಿ ದೇವಸ್ಥಾನದ ಪಕ್ಕದ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಶಿವಪುರ ಗ್ರಾಮದ ಶಿವಪುರ ಗುಡ್ಡದಲ್ಲಿ ಇದೇ ಗ್ರಾಮದ ಪಾಂಡು ಎಂಬ ವ್ಯಕ್ತಿ ಈ ಇಸ್ಪೇಟ್ ದಂಧೆಯನ್ನು ನಡೆಸುತ್ತಿದ್ದಾನೆ. ಯಾವ ಕ್ಯಾಸಿನೋಗೆ ಕಡಿಮೆ ಇಲ್ಲದಂತೆ ಇಸ್ಪೀಟ್ ದಂಧೆ ನಡೆಯುತ್ತಿದೆ. ಜೂಜುಕೋರರಿಗೆ ಪಾಂಡು ಮೀಟರ್ ಬಡ್ಡಿಯನ್ನೂ ನೀಡ್ತಾನೆ. ಅಷ್ಟೇ ಅಲ್ಲದೆ ಇಲ್ಲಿ ಇಸ್ಪೇಟ್ ಆಡಲು ಬೇರೆ ಬೇರೆ ಜಿಲ್ಲೆಗಳಿಂದ ಜನ ಬರ್ತಾರೆ. ಇಸ್ಪೀಟ್ ಆಡಲು ಬರುವ ಜನರನ್ನು ಕರೆಯಲು ಆಟೋ ವ್ಯವಸ್ಥೆ ಸಹ ಮಾಡಲಾಗಿದೆ. ನೂರಾರು ಜೂಜುಕೋರರು ಸೇರಿಕೊಂಡು ಭರ್ಜರಿಯಾಗಿ ಇಸ್ಪೇಟ್ ದಂಧೆ ನಡೆಸುತ್ತಿದ್ದಾರೆ. ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ರೂ, ಪೊಲೀಸ್ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಇದನ್ನೂ ಓದಿ: ಬಗೆದಷ್ಟು ಬಯಲಾಗುತ್ತಿದೆ ಮಂಡ್ಯ ಭ್ರೂಣ ಪತ್ತೆ, ಹತ್ಯೆ ಪ್ರಕರಣ; ಮತ್ತೆ ಮೂವರು ಅರೆಸ್ಟ್, 18ಕ್ಕೆ ಏರಿದ ಬಂಧಿತರ ಸಂಖ್ಯೆ
ನೀರು ಶುದ್ಧೀಕರಣಕ್ಕೆ ಬಳಸುವ ಕ್ಲೊರಿನ್ ಗ್ಯಾಸ್ ಸೋರಿಕೆಯಾಗಿ 20ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಎಪಿಎಂಸಿ ಬಳಿ ಅವಘಡ ಸಂಭವಿಸಿದೆ. ಉಸಿರಾಟ ತೊಂದರೆಯಿಂದ ಅಸ್ವಸ್ಥರು ಬಳಲುತ್ತಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಿ ಆಕ್ಸಿಜನ್ ಪೂರೈಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನೂ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಪುರಸಭೆ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ