AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುಲಿಂಗೇಶ್ವರ ಮಠದಲ್ಲಿ ಭುಗಿಲೆದ್ದ ಭಕ್ತರ ಆಕ್ರೋಶ, ರಂಭಾಪುರಿ ಶ್ರೀ ಕಾರಿನ ಮೇಲೆ ಚಪ್ಪಲಿ ಎಸೆತ

ರಂಭಾಪುರಿ ಶ್ರೀ ಜಗದ್ಗುರು ಪೀಠದ ಶಾಖಾ ಮಠದ ಗುರುಲಿಂಗೇಶ್ವರ ಮಠಕ್ಕೆ ಗಂಗಾಧರ ಸ್ವಾಮೀಜಿ ಅವರನ್ನು ಪೀಠಾಧಿಪತಿಯನ್ನಾಗಿ ನೇಮಕ ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಅದು ತಾರಕಕ್ಕೇರಿದೆ. ಇದರಿಂದ ಆಕ್ರೋಶಗೊಂಡ ಭಕ್ತರು ರಂಭಾಪುರಿ ಶ್ರೀಗಳ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಅಲ್ಲದೇ ಅವರ ಕಾರಿನ ಮೇಲೆ ಚಪ್ಪಲಿ ಎಸೆದಿರುವ ಘಟನೆ ನಡೆದಿದೆ.

ಗುರುಲಿಂಗೇಶ್ವರ ಮಠದಲ್ಲಿ ಭುಗಿಲೆದ್ದ ಭಕ್ತರ ಆಕ್ರೋಶ, ರಂಭಾಪುರಿ ಶ್ರೀ ಕಾರಿನ ಮೇಲೆ ಚಪ್ಪಲಿ ಎಸೆತ
ರವಿ ಹೆಚ್ ಮೂಕಿ, ಕಲಘಟಗಿ
| Updated By: ರಮೇಶ್ ಬಿ. ಜವಳಗೇರಾ|

Updated on:Feb 17, 2024 | 3:06 PM

Share

ಬಾಗಲಕೋಟೆ (ಫೆಬ್ರವರಿ.17): ಜಿಲ್ಲೆಯ ಕಲಾದಗಿಯ ರಂಭಾಪುರಿ ಪಂಚಗೃಹ ಗುರುಲಿಂಗೇಶ್ವರ ಮಠದ(Kaladgi rambhapuri Gurulingeshwara Mutt,)  ಪೀಠಾಧಿಪತಿ ಆಯ್ಕೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಭಕ್ತರು ಹಾಗೂ ಸ್ವಾಮೀಜಿ ನಡುವಿನ ವಿವಾದ ತಾರಕಕ್ಕೇರಿದೆ. ವಿವಾದ ಕೋರ್ಟ್ ನಲ್ಲಿದ್ದಾಗಲೇ ಗಂಗಾಧರ ಸ್ವಾಮೀಜಿ, ಮಠಕ್ಕೆ ಸೇರಿದ ಹೊಲದ ಊಳುಮೆ ಮಾಡಿದ್ದಾರೆ. ಇದರಿಂದ ಭಕ್ತರ ಆಕ್ರೋಶದ ಕಟ್ಟೆ ಹೊಡೆದಿದ್ದು, ಕಲಾದಗಿ ಗುರುಲಿಂಗೇಶ್ವರ ಮಠದಲ್ಲಿ ಮಹಿಳಾ ಭಕ್ತರಾದಿಯಾಗಿ ಎಲ್ಲರೂ ಪ್ರತಿಭಟನೆಗಿಳಿದಿದ್ದಾರೆ. ಈ ವೇಳೆ ರಂಭಾಪುರಿ ಶ್ರೀ (rambhapuri  Seer)ಕಾರಿ ಮೇಲೆ ಮಹಿಳೆಯೋರ್ವರು ಚಪ್ಪಲಿ ಎಸೆದಿದ್ದಾರೆ.

ರಂಭಾಪುರಿ ಶ್ರೀಗಳು ಬಾಗಲಕೋಟೆಯಿಂದ ಕಲಾದಗಿ ಮಾರ್ಗವಾಗಿ ಉದಗಟ್ಟಿ ಗ್ರಾಮಕ್ಕೆ ಅಡ್ಡಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಈ ವೇಳೆ ಭಕ್ತರು, ರಂಭಾಪುರಿ ಶ್ರೀ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಹಾಕಿ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ಈ ವೇಲೆ ಮಹಿಳಾ ಭಕ್ತೆಯೊರ್ವರು ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾಳೆ. ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಕಲಾದಗಿಯಲ್ಲಿ ರಂಭಾಪುರಿ ಶಾಖಾ ಮಠದ ದುರಸ್ತಿಗೆ ಕೆಲವರ ವಿರೋಧದ ವಿಚಾರದ ಬಗ್ಗೆ ಬಾಗಲಕೋಟೆಯಲ್ಲಿ ರಂಭಾಪುರಿ ಜಗದ್ಗುರು ಮಾತನಾಡಿದ್ದಯು, ಹೇಳಿಕೆ ನೀಡಿದ್ದು, ಆ ವಿಷಯ ಸಂಬಂಧ ಇಲ್ಲ, ಕಲಾದಗಿಯಲ್ಲಿ ನಮ್ಮ ಕಾರ್ಯಕ್ರಮ‌ ಇಲ್ಲ. ಕಲಾದಗಿಗೆ ನಾವು ಹೋಗುವುದೂ ಇಲ್ಲ. ಅಭಿವೃದ್ಧಿ ಮಾಡಿದ್ರೆ ಒಳ್ಳೆಯದಲ್ವಾ?. ನ್ಯಾಯಾಲಯದ ತೀರ್ಪು ಏನು ಕೊಡುತ್ತೆ ಅದೇ ಅಂತಿಮ. ಅಭಿವೃದ್ಧಿಗೆ ಕುಂಠಿತ ಮಾಡೋದು ಸರಿಯಲ್ಲ. ಧಾರ್ಮಿಕ ಸಂಸ್ಕೃತಿಯನ್ನು ಕೆಲವರು ಕೆಡಿಸುವ ಜನ ಇರ್ತಾರೆ. ಅಂತಹ ವಿಚಾರಗಳಿಗೆ ಅವಕಾಶ ಕೊಡಬಾರದು. ಅದು ರಂಭಾಪುರಿ ಶಾಖಾ ಮಠ ಆಗಿರೋದ್ರಿಂದ ಪೀಠದ ಜಗದ್ಗುರು ಅವರ ನಿರ್ಣಯವೇ ಅಂತಿಮ ಹೊರತು, ಬೇರೆಯವರ ಭಾವನೆಗಳಿಗೆ ಪುರಸ್ಕಾರ ಕೊಟ್ಟಿದ್ದೇ ಈ ಸಮಸ್ಯೆಗೆ ಕಾರಣ ಎಂದು ಸ್ವಾಮೀಜಿ ಹೇಳಿದ್ದಾರೆ.

ವಿವಾದ ಕೋರ್ಟ್ ನಲ್ಲಿದ್ದಾಗಲೇ ಗಂಗಾಧರ ಸ್ವಾಮೀಜಿ ಅವರಿಂದ ಮಠದ ದುರಸ್ತಿ ಮಠದ ಹೊಲದ ಊಳುಮೆಗೆ ಬಕ್ತರು ಆಕ್ರೋಶಗೊಂಡಿದ್ದು, ಗಂಗಾಧರ ಸ್ವಾಮೀಜಿ ಅವರನ್ನು ಮಠದೊಳಗೆ ಬಿಡುವುದಿಲ್ಲ ಎಂದು ಭಕ್ತರು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಠದ ಮುಂದೆ ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ಭಕ್ತ ಸಾವಳಿಗೆಪ್ಪ ಪಾಣಿಶೆಟ್ಟರ್ ಹೇಳುವುದೇನು?

ಮಠ ಭಕ್ತರಾದ ಸಾವಳಿಗೆಪ್ಪ ಪಾಣಿಶೆಟ್ಟರ್ ಎನ್ನುವರ ಟಿವಿ9ಗೆ ಪ್ರತಿಕ್ರಿಯಿಸಿ, ಕಲಾದಗಿ ಮಠ ಅಪಾರ ಆಸ್ತಿ ಹೊಂದಿದೆ. 60-70 ಎಕರೆ ಭೂಮಿ ಇದೆ. ಒಂದು ಶಿಕ್ಷಣ ಸಂಸ್ಥೆ ಇದ್ದು ಸಾಕಷ್ಟು ಅನುದಾನ ಸಹ ಇದೆ. ಹೀಗಾಗಿ ಈ ಆಸ್ತಿಯನ್ನು ಹೊಡೆಯಲು ರಂಭಾಪುರಿ ಶ್ರೀಗಳು ಹುನ್ನಾರ ಮಾಡಿದ್ದಾರೆ. ಅದಕ್ಕಾಗಿ ತಮ್ಮ ವಂಶಸ್ಥರನ್ನು ಮಠಕ್ಕೆ ನೇಮಕ ಮಾಡಿದ್ದಾರೆ. 2015ರಲ್ಲಿ ಲಿಂಗೈಕ್ಯರಾದ ಚಂದ್ರಶೇಖರ ಸ್ವಾಮೀಜಿ ಅವರ ಅಳಿಯ ಗಂಗಾಧರ ಸ್ವಾಮೀಜಿ ಅವರನ್ನ ಪೀಠಾಧಿಪತಿಯನ್ನಾಗಿ ನೇಮಕ ಮಾಡಿದ್ದಾರೆ. ಇದಕ್ಕೆ ನಮ್ಮ ವಿರೋಧ ವಿದೆ. ಈ ವಿವಾದ ಇದೀಗ ಕೋರ್ಟ್ ನಲ್ಲಿದ್ದು, ಸ್ವಾಮೀಜಿಗಳಿಗೆ ಕೇವಲ ಪೂಜೆ ಮಾಡುವುದಕ್ಕೆ ಮಾತ್ರ ಬಾಗಲಕೋಟೆ ಜಿಲ್ಲಾ ಕೋರ್ಟ್ ಅವಕಾಶ ನೀಡಿದೆ. ಅದರೆ ಗಂಗಾಧರ ಸ್ವಾಮೀಜಿ ಮಠದ ದುರಸ್ತಿ ಕಾರ್ಯ, ಮಠದ ಆಸ್ತಿ ಸಾಗುವಳಿ ಮಾಡುತ್ತಿದ್ದಾರೆ. ಅಲ್ಲದೇ ಭಕ್ತರಿಂದ‌ ಕಾಣಿಕೆ ಪಡೆಯುತ್ತಿದ್ದಾರೆ. ಮಠದ 17 ಲಕ್ಷದ ಕಾರನ್ನು ಕಣ್ಮರೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ರಂಭಾಪುರಿ ಶ್ರೀ ಹೇಳುವುದೇನು?

ಕಲಾದಗಿಯಲ್ಲಿ ರಂಭಾಪುರಿ ಶಾಖಾ ಮಠದ ದುರಸ್ತಿಗೆ ಕೆಲವರ ವಿರೋಧದ ವಿಚಾರದ ಬಗ್ಗೆ ಬಾಗಲಕೋಟೆಯಲ್ಲಿ ರಂಭಾಪುರಿ ಜಗದ್ಗುರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಆ ವಿಷಯ ಸಂಬಂಧ ಇಲ್ಲ, ಕಲಾದಗಿಯಲ್ಲಿ ನಮ್ಮ ಕಾರ್ಯಕ್ರಮ‌ ಇಲ್ಲ. ಕಲಾದಗಿಗೆ ನಾವು ಹೋಗುವುದೂ ಇಲ್ಲ. ಅಭಿವೃದ್ಧಿ ಮಾಡಿದ್ರೆ ಒಳ್ಳೆಯದಲ್ವಾ? ನ್ಯಾಯಾಲಯದ ತೀರ್ಪು ಏನು ಕೊಡುತ್ತೆ ಅದೇ ಅಂತಿಮ. ಅಭಿವೃದ್ಧಿಗೆ ಕುಂಠಿತ ಮಾಡುವುದು ಸರಿಯಲ್ಲ. ಧಾರ್ಮಿಕ ಸಂಸ್ಕೃತಿಯನ್ನು ಕೆಲವರು ಕೆಡಿಸುವ ಜನ ಇರುತ್ತಾರೆ. ಅಂತಹ ವಿಚಾರಗಳಿಗೆ ಅವಕಾಶ ಕೊಡಬಾರದು. ಅದು ರಂಭಾಪುರಿ ಶಾಖಾ ಮಠ ಆಗಿರುವುದರಿಂದ ಪೀಠದ ಜಗದ್ಗುರು ಅವರ ನಿರ್ಣಯವೇ ಅಂತಿಮ ಹೊರತು, ಬೇರೆಯವರ ಭಾವನೆಗಳಿಗೆ ಪುರಸ್ಕಾರ ಕೊಟ್ಟಿದ್ದೇ ಈ ಸಮಸ್ಯೆಗೆ ಕಾರಣ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:50 pm, Sat, 17 February 24