ಬಾಗಲಕೋಟೆ: ಲೈನ್​ ದುರಸ್ತಿ ವೇಳೆ ವಿದ್ಯುತ್​ ಪ್ರವಹಿಸಿ ಲೈನ್​​ಮ್ಯಾನ್​ ಸಾವು

TV9 Digital Desk

| Edited By: ganapathi bhat

Updated on:Oct 13, 2021 | 8:55 PM

Bagalakote News: ಟ್ರಾನ್ಸ್​​ಫಾರ್ಮರ್​ ಅಳವಡಿಸುವಾಗ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಲೈನ್​ ಕ್ಲಿಯರ್ ಇಲ್ಲದೆ ಕಂಬ ಏರಿಸಿ ಗುತ್ತಿಗೆದಾರನ ಎಡವಟ್ಟಿನಿಂದ ಹೀಗೆ ಆಗಿದೆ ಎಂದು ತಿಳಿದುಬಂದಿದೆ. ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬಾಗಲಕೋಟೆ: ಲೈನ್​ ದುರಸ್ತಿ ವೇಳೆ ವಿದ್ಯುತ್​ ಪ್ರವಹಿಸಿ ಲೈನ್​​ಮ್ಯಾನ್​ ಸಾವು
ಸಾಂದರ್ಭಿಕ ಚಿತ್ರ
Follow us

ಬಾಗಲಕೋಟೆ: ಲೈನ್​ ದುರಸ್ತಿ ವೇಳೆ ವಿದ್ಯುತ್​ ಪ್ರವಹಿಸಿ ಲೈನ್​​ಮ್ಯಾನ್​ ಸಾವನ್ನಪ್ಪಿದ ದುರ್ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಚಿತ್ತರಗಿ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ಕಂಬದಲ್ಲೇ ಹೆಸ್ಕಾಂ ಗುತ್ತಿಗೆದಾರ ಕಾರ್ಮಿಕ ಸಾವನ್ನಪ್ಪಿದ್ದಾರೆ. ಚಿತ್ತರಗಿ ಗ್ರಾಮದಲ್ಲಿ 33 ವರ್ಷದ ಹನುಮಂತ ಮುಕಾಶಿ ಮರಣಿಸಿದ್ದಾರೆ. ಬಿ.ಎನ್. ಜಾಲಿಹಾಳ ಗ್ರಾಮದ ಹನುಮಂತ ಮುಕಾಶಿ ಮೃತ ದುರ್ದೈವಿ. ಟ್ರಾನ್ಸ್​​ಫಾರ್ಮರ್​ ಅಳವಡಿಸುವಾಗ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಲೈನ್​ ಕ್ಲಿಯರ್ ಇಲ್ಲದೆ ಕಂಬ ಏರಿಸಿ ಗುತ್ತಿಗೆದಾರನ ಎಡವಟ್ಟಿನಿಂದ ಹೀಗೆ ಆಗಿದೆ ಎಂದು ತಿಳಿದುಬಂದಿದೆ. ಹುನಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕೋಲಾರ: ವಿದ್ಯುತ್ ಸ್ಪರ್ಶಿಸಿ ಸೀಮೆ ಹಸು ಸಾವು ವಿದ್ಯುತ್ ಸ್ಪರ್ಷಿಸಿ ಸೀಮೆ ಹಸು ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆ ಕೆಜಿಎಫ್‌ ತಾಲ್ಲೂಕಿನ ಅಯ್ಯಪಲ್ಲಿ‌ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಂಜುಳಾ ಕುಮಾರ್​ಗೆ ಸೇರಿದ ಹಸು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದೆ. ಸೂಕ್ತ ಪರಿಹಾರ ಕಲ್ಪಿಸುವಂತೆ ಕುಟುಂಬದವರು ಮನವಿ ಮಾಡಿದ್ದಾರೆ. ಸುಮಾರು 60 ಸಾವಿರ ಬೆಲೆ ಬಾಳುವ ಸೀಮೆ ಹಸು ಸಾವನ್ನಪ್ಪಿದೆ.

ಇದನ್ನೂ ಓದಿ: ಒಂಟಿ ಸಲಗ ದಾಳಿಯಿಂದ ಜೈವಿಕ ಉದ್ಯಾನವನದ ಆನೆ ಸಾವು, ಅಧಿಕಾರಿಗಳ‌ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರ ಆರೋಪ

ಇದನ್ನೂ ಓದಿ: ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಗಲಕೋಟೆ ಯೋಧ ಸಾವು! ಇಂದು ಹುಟ್ಟೂರಿನಲ್ಲಿ ಅಂತ್ಯಸಂಸ್ಕಾರ

ತಾಜಾ ಸುದ್ದಿ

Related Stories

Click on your DTH Provider to Add TV9 Kannada