ಒಂಟಿ ಸಲಗ ದಾಳಿಯಿಂದ ಜೈವಿಕ ಉದ್ಯಾನವನದ ಆನೆ ಸಾವು, ಅಧಿಕಾರಿಗಳ‌ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರ ಆರೋಪ

TV9 Digital Desk

| Edited By: Ayesha Banu

Updated on:Oct 13, 2021 | 6:28 PM

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃತ ಆನೆ ಕಳೆದ ಎರಡು ದಿನಗಳ ಹಿಂದೆಯೇ ನಾಪತ್ತೆಯಾಗಿದ್ದು ಇಂದು ಆನೆಯ ಕಳೆ ಬರಹ ಪತ್ತೆಯಾಗಿದೆ. ಆನೆಯ ಒಂದು ಸೊಂಡಿಲು ಮುರಿದಿದ್ದು ಕಾಡನೆ ಜೊತೆಗಿನ ಭೀಕರ ಘರ್ಷಣೆಯಿಂದ ಎತ್ತರದ ಬಂಡೆ ಮೇಲಿಂದ ಉದ್ಯಾನವನದ ಆನೆ ಬಿದ್ದು ಮೃತಪಟ್ಟಿದೆ ಎಂಬ ಮಾಹಿತಿ ಸಿಕ್ಕಿದೆ.

ಒಂಟಿ ಸಲಗ ದಾಳಿಯಿಂದ ಜೈವಿಕ ಉದ್ಯಾನವನದ ಆನೆ ಸಾವು, ಅಧಿಕಾರಿಗಳ‌ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರ ಆರೋಪ
ಬನ್ನೇರುಘಟ್ಟ ಜೈವಿಕ ಉದ್ಯಾನವನ

Follow us on

ಆನೇಕಲ್: ಒಂಟಿ ಸಲಗ ದಾಳಿಯಿಂದ ಜೈವಿಕ ಉದ್ಯಾನವನದ ಆರು ವರ್ಷದ ಗಂಡಾನೆ ಮೃತಪಟ್ಟ ಘಟನೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ. ಘಟನೆಗೆ ಅಧಿಕಾರಿಗಳ‌ ನಿರ್ಲಕ್ಷ್ಯವೇ ಕಾರಣ ಆನೆ ಸಾವು ಸಂಭವಿಸಿದ್ದು ಅಧಿಕಾರಿಗಳಿಂದ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃತ ಆನೆ ಶ್ರೀ ರಾಮುಲು ಕಳೆದ ಎರಡು ದಿನಗಳ ಹಿಂದೆಯೇ ನಾಪತ್ತೆಯಾಗಿದ್ದು ಇಂದು ಉಡಿಗೆ ಬಂಡೆ ಸಮೀಪದ‌ ಅರಣ್ಯ ಪ್ರದೇಶದಲ್ಲಿ ಆನೆಯ ಕಳೆ ಬರಹ ಪತ್ತೆಯಾಗಿದೆ. ಕಾಡನೆ ಜೊತೆಗಿನ ಭೀಕರ ಘರ್ಷಣೆಯಿಂದ ಎತ್ತರದ ಬಂಡೆ ಮೇಲಿಂದ ಉದ್ಯಾನವನದ ಆನೆ ಬಿದ್ದು ಮೃತಪಟ್ಟಿದೆ ಎಂಬ ಮಾಹಿತಿ ಸಿಕ್ಕಿದ್ದು ಆನೆಯ ಎಡ ದಂತ ಮುರಿದಿದ್ದು ಬಲದಂತಕ್ಕೂ ಪೆಟ್ಟು ಬಿದ್ದಿದೆ ಹಾಗೂ ದೇಹ ಉಬ್ಬಿದೆ. ಇನ್ನು ಕಾಡಾನೆ‌ಗಳು ಉದ್ಯಾನವನಕ್ಕೆ ಬರುತ್ತಿದ್ರೂ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಈ ಆನೆ ಮೃತಪಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ಸ್ಥಳಕ್ಕೆ ಬನ್ನೇರುಘಟ್ಟ ಉದ್ಯಾನವನದ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸ್ಥಳೀಯರು ಕೆಲ ದಿನಗಳಿಂದ ಇಲ್ಲಿಗೆ ಕಾಡನೆಗಳ ಗುಂಪು ಲಗ್ಗೆ ಇಟ್ಟಿದ್ದು ಹೊಲ, ಗದ್ದೆಗಳಲ್ಲಿಯೂ ಬೆಳೆಗಳನ್ನು ಹಾಳು ಮಾಡಿದೆ. ಅಲ್ಲದೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೂ ಕಾಡನೆಗಳು ಹೋಗುತ್ತಿದ್ದು ಉದ್ಯಾನವನದ ಆನೆಗಳ ಜೊತೆ ಕಾದಾಡುತ್ತಿವೆ. ಆದ್ರೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಆನೆ ಮೃತಪಟ್ಟಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಆನೆ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಡಾನೆ ಹಾಗೂ ಬನ್ನೇರುಘಟ್ಟ ಉದ್ಯಾನವನದ ಆನೆ ಮಧ್ಯೆ ಕಾಳಗ ನಡೆದು ಘರ್ಷಣೆ ವೇಳೆ ದೊಡ್ಡದಾದ ಎತ್ತರದ ಬಂಡೆ‌ ಮೇಲಿನಿಂದ ಆನೆ ಬಿದ್ದ ಮೃತಪಟ್ಟಿದೆ. ಅಲ್ಲದೆ ಇತ್ತೀಚೆಗೆ ಜಿರಾಫೆ ಕೂಡ ಕರೆಂಟ್ ಶಾಕ್ ಅವಘಡದಿಂದ ಸಾವನ್ನಪ್ಪಿತ್ತು.

ಇದನ್ನೂ ಓದಿ: ಆನೆ ದಾಳಿ: ಅರಣ್ಯ ಇಲಾಖೆ ಅಧಿಕಾರಿ ಸೇರಿ ಇಬ್ಬರ ಸಾವು.. ಎಲ್ಲಿ?

ತಾಜಾ ಸುದ್ದಿ

Related Stories

Click on your DTH Provider to Add TV9 Kannada