ಬಾಗಲಕೋಟೆ, ನವೆಂಬರ್ 04: ಸಿಎಂ ಸಿದ್ದರಾಮಯ್ಯ ಮೇಲೆ ಸಚಿವರು, ಶಾಸಕರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು (Nalin Kumar Kateel) ಕಿಡಿಕಾರಿದ್ದಾರೆ. ಜಿಲ್ಲೆಯ ಬೀಳಗಿಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ವಿಶ್ವಾಸವಿಲ್ಲದ ಕಾರಣ ಬ್ರೇಕ್ಫಾಸ್ಟ್ ಮೀಟಿಂಗ್ ಕರೆದಿದ್ದಾರೆ. ರೈತರ ಪರವಾಗಿ, ಬರದ ಕುರಿತು ನಡೆದ ಸಭೆ ಅಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ರೈತರ ಶಾಪ ತಟ್ಟಿ ಆಂತರಿಕ ಜಗಳ ಜಾಸ್ತಿ ಆಗುತ್ತೆ. ಆ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದಲ್ಲಿ ಬರ ತಾಂಡವ, ಅಸಮಾಧಾನಿತ ಶಾಸಕರು ಬಿಜೆಪಿ ಬಾಗಿಲು ತಟ್ಟಿದ್ದಾರೆಂಬ ವಿಚಾರವಾಗಿ ಮಾತನಾಡಿದ ಅವರು, ನಮಗೆ ಇಂತಹ ಅನಿವಾರ್ಯತೆಗಳಿಲ್ಲ. ನಾವು ವಿರೋಧ ಪಕ್ಷದಲ್ಲಿ ಇರಿ ಎಂದು ಜನ ಆಶಿರ್ವಾದ ಮಾಡಿದ್ದಾರೆ. ನಾವು ಆ ಬಗ್ಗೆ ಹೋರಾಟಗಳನ್ನ ಮಾಡ್ತೀದ್ದಿವಿ. ಆದರೆ ಇವತ್ತು ಕಾಂಗ್ರೆಸ್ನಲ್ಲಿ ಆಪರೇಷನ್ ಹಸ್ತ ನಡಿಯುತ್ತಿದೆ. ನಲವತೈದು ಜನ ಗುಂಪುಗಾರಿಕೆ ಆಗಿದೆ. ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ತಂಡ, ಸಿದ್ದರಾಮಯ್ಯ ತಂಡ, ಪರಮೇಶ್ವರ್ ತಂಡ ಹಾಗೂ ಪ್ರಿಯಾಂಕ್ ಖರ್ಗೆ ತಂಡ. ಹೀಗೆ ಈ ತಂಡಗಳ ಒಳಗೆ ಆಪರೇಷನ್ ಹಸ್ತ ನಡೆಯುತ್ತಿದೆ ಎಂದರು.
ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನೋಡಿ ಯಾರಿಗೆ ಭಯ ಇರುತ್ತದೆ ಅವರು ಹೇಳುತ್ತಾರೆ. ಭಯ ಇಲ್ಲದಿದ್ದರೆ ಯಾಕೆ ಹೇಳಿಕೆ ಕೊಡಬೇಕು. ಯಾಕೆ ಕರೆದು ಕರೆದು ಹೇಳುತ್ತಾರೆ ನಾನೇ ಐದು ವರ್ಷ ಅಂತ. ಯಾಕೆಂದರೆ ಅವರಿಗೆ ಭಯ ಕಾಡುತ್ತಿದೆ. ಕಾಂಗ್ರೆಸ್ನಲ್ಲಿ ಅವರು ಹೊರಗಿನವರಾಗಿದ್ದಾರೆ. ನಾನು ಹೊರಗಿನವ ಎಂಬ ಭಾವನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ. ಆ ಆತಂಕದ ರಕ್ಷಣೆಗೋಸ್ಕರ ನಾನು ಸರಿಯಾಗಿ ಇದ್ದೇನೆ ಎಂದು ತೋರಿಸುವ ಪ್ರಯತ್ನ ಸಿದ್ದರಾಮಯ್ಯ ಮಾಡ್ತಿದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೊದಲು ಎನ್‌ಡಿಎನಿಂದ ಹೊರ ಬಂದು ಮಾತನಾಡಲಿ: ಹೆಚ್ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಡಿಕೆ ಶಿವಕುಮಾರ್
ಭಯ ಯಾಕೆ ಕಾಡ್ತಿದೆ ಅಂದರೆ. ಕಾಂಗ್ರೆಸ್ನವರು ಇವರನ್ನು ಯಾರು ಒಪ್ಪಿಕೊಳ್ಳುತ್ತಿಲ್ಲ. ಇವತ್ತು ಕಾಂಗ್ರೆಸ್ ನಲ್ಲಿ ಎರಡು ತಂಡ ಕೆಲಸ ಮಾಡುತ್ತಿದೆ. ಒಂದು ಹೊರಗಿನಿಂದ ಬಂದವರ ಕಾಂಗ್ರೆಸ್. ಇನ್ನೊಂದು ಮೊದಲಿಂದ ಇದ್ದ ಕಾಂಗ್ರೆಸ್. ಮೂಲ ನಿವಾಸಿಗಳು ಹಾಗೂ ಅನಿವಾಸಿ ಕಾಂಗ್ರೆಸ್ಸಿಗರ ಮಧ್ಯೆ ಸಿದ್ದರಾಮಯ್ಯ ಸಿಲುಕಿದ್ದಾರೆ ಎಂದರು.
ಜನವರಿ ತಿಂಗಳೊಳಗೆ ರಾಜ್ಯ ಸರ್ಕಾರ ಪತನವಾಗುತ್ತೆ. ಇದನ್ನು ನಾನು ಹೇಳುತ್ತಿಲ್ಲ, ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ನಾವು ಸಿಎಂ ಸಿದ್ದರಾಮಯ್ಯ ಗಟ್ಟಿಯಾಗಿರಲಿ ಅಂತಾ ಹೇಳ್ತೀವಿ. ಅವರೇ ಅವರ ಆಪರೇಷನ್ ಹಸ್ತದಿಂದ ಬೀಳುತ್ತಾರೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.