ಬಾಗಲಕೋಟೆ: ಕರ್ನಾಟಕ ಹೈಕೋರ್ಟ್ (Karnataka High Court) ಶಾಲೆ- ಕಾಲೇಜುಗಳಲ್ಲಿ ಹಿಜಾಬ್ (Hijab) ಧರಿಸದಂತೆ ಆದೇಶ ನೀಡಿದೆ. ಆದರೆ ರಾಜ್ಯದ ಕೆಲ ವಿದ್ಯಾರ್ಥಿನಿಯರು ಧರ್ಮವೇ ಮುಖ್ಯವೆಂದು ಅಂತಿಮ ಪರೀಕ್ಷೆಗಳಿಗೂ ಹಾಜರಾಗುತ್ತಿಲ್ಲ. ಹೀಗಾಗಿ ಪ್ರಜ್ಞಾವಂತ ಮುಸ್ಲಿಂರವರು ಹಿಜಾಬ್ ವಿವಾದದ ಹಿನ್ನೆಲೆ ಪರೀಕ್ಷೆಗೆ ಗೈರಾಗದಂತೆ ತಿಳಿವಳಿಕೆ ಅಭಿಯಾನ ಶುರುಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಡುವ ಮೂಲಕ ಅಭಿಯಾನ ನಡೆಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಯುವಕ ಉಮರ್ ಫಾರುಕ್ ಅವರಿಂದ ವಿದ್ಯಾರ್ಥಿನಿಯರಿಗೆ ಜಾಗೃತಿ ಸಂದೇಶ ಸಾರುತ್ತಿದ್ದಾರೆ.
ಹಿಜಾಬ್ಗೆ ಅವಕಾಶ ಕೊಡಲಿಲ್ಲ ಅಂತ ಪರೀಕ್ಷೆ ಬರೆಯದೆ ವಾಪಸ್ ಬರಬೇಡಿ. ಸಾವಿರ, ಲಕ್ಷಾಂತರ ಶುಲ್ಕ ಕಟ್ಟಿರುತ್ತೀರಿ. ನಿಮಗೆ ಇಲ್ಲದನ್ನು ತಲೆಗೆ ತುಂಬುವವರು ಯಾರು ಆಮೇಲೆ ನಿಮ್ಮ ಹಿಂದೆ ಬರುವುದಿಲ್ಲ. ವರ್ಷಗಟ್ಟಲೆ ಓದಿರುತ್ತೀರಿ ಅದೆಲ್ಲ ಒಂದೇ ಸಮಯಕ್ಕೆ ವ್ಯರ್ಥ ಆಗಬಾರದು. ಪರೀಕ್ಷಾ ಕೇಂದ್ರದವರೆಗೂ ಹಿಜಾಬ್ ಧರಿಸಿ ಹೋಗಿ. ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಿರಿ. ನಿಮ್ಮ ಭವಿಷ್ಯಕ್ಕೆ ಸಹಾಯ ಮಾಡೋದು ನಿಮ್ಮ ಜ್ಞಾನ, ಶಿಕ್ಷಣ. ಇಲ್ಲದ್ದನ್ನು ಉಪದೇಶ ಮಾಡುವವರು ನಿಮ್ಮ ಹಿಂದೆ ಬರುವುದಿಲ್ಲ. ಮೊದಲು ಪರೀಕ್ಷೆ ಬರೆಯಿರಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಉಮರ್ ಫಾರುಕ್ ಹೇಳಿದ್ದಾರೆ.
ಹಿಜಾಬ್ ಬಗ್ಗೆ ಮುಂದೆ ಹೋರಾಟ ಮಾಡೋಣ. ಪರೀಕ್ಷೆ ಬರೆದು ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಿ ಎಂದು ಮುಸ್ಲಿಂ ವಿದ್ಯಾರ್ಥಿಗಳಿಗೆ ಉಮರ್ ಫಾರುಕ್ ಮನವಿ ಮಾಡಿದ್ದಾರೆ. ಇನ್ನು ಈ ಅಭಿಯಾನಕ್ಕೆ ಮುಸ್ಲಿಂ ಮಹಿಳಾ ಚಿಂತಕರು ಕೈ ಜೋಡಿಸಿದ್ದಾರೆ. ಇನ್ನು ಮಂಗಳೂರು ಮೂಲದ ಪರ್ಯಾನಾ ಆಶ್ರಪ್, ಸಿಹಾನಾ ಬಿಎಮ್ ಅವರು ಪರೀಕ್ಷೆಗೆ ಗೈರಾಗದಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ
ನೀವು ಕುಡಿಯುವ ನೀರು ನಿಮ್ಮ ದೇಹದ ತೂಕದ ಮೇಲೆ ಪರಿಣಾಮ ಬೀರುತ್ತದೆ; ಇಲ್ಲಿದೆ ತಜ್ಞರ ಸಲಹೆ