AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಕುಡಿಯುವ ನೀರು ನಿಮ್ಮ ದೇಹದ ತೂಕದ ಮೇಲೆ ಪರಿಣಾಮ ಬೀರುತ್ತದೆ; ಇಲ್ಲಿದೆ ತಜ್ಞರ ಸಲಹೆ

ಊಟದ ಮೊದಲು ನೀರು ಕುಡಿಯುವುದರಿಂದ ದೇಹಕ್ಕೆ ಒಳ್ಳೆಯದು. ಜತೆಗೆ ಇದರಿಂದ ಕಡಿಮೆ ಕ್ಯಾಲೊರಿಗಳನ್ನು ಸೇವಿಸಬಹುದು. ಊಟವನ್ನು ತಿನ್ನುವ ಮೊದಲು ನೀರು ಕುಡಿಯುವುದು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ದೇಹವು ಕೊಬ್ಬನ್ನು ಸಂಗ್ರಹಿಸದಂತೆ ನೋಡಿಕೊಳ್ಳುತ್ತದೆ.

ನೀವು ಕುಡಿಯುವ ನೀರು ನಿಮ್ಮ ದೇಹದ ತೂಕದ ಮೇಲೆ ಪರಿಣಾಮ ಬೀರುತ್ತದೆ; ಇಲ್ಲಿದೆ ತಜ್ಞರ ಸಲಹೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Mar 30, 2022 | 7:05 AM

Share

ನೀರು ಪ್ರಪಂಚದಾದ್ಯಂತ ಎಲ್ಲರಿಗೂ ಅಗತ್ಯವಾದದ್ದು. ಏಕೆಂದರೆ ಕುಡಿಯುವ ನೀರು (Water) ಅಸಂಖ್ಯಾತ ಪ್ರಯೋಜನಗಳನ್ನು ಹೊಂದಿದೆ. ಇದು ತೂಕ ಮತ್ತು ಆರೋಗ್ಯ(Health) ನಿರ್ವಹಣೆಯಲ್ಲಿ ಪ್ರಬಲ ಸಾಧನವಾಗಿದೆ. 50 ವರ್ಷ ದಾಟಿದವರು ಮತ್ತು ಅದಕ್ಕಿಂತ ಒಳಗಿನವರು ನೀರನ್ನು ಅತಿ ಹೆಚ್ಚು ಕುಡಿಯುವುದು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ನೀರು ಸಹಾಯ ಮಾಡುತ್ತದೆ. ಅಂತೆಯೇ ತೂಕವನ್ನು(Weight) ಕಳೆದುಕೊಳ್ಳುವಲ್ಲಿ ನೀರು ಸಹಾಯ ಮಾಡುತ್ತದೆ. ಇದಕ್ಕೆ ವೈಜ್ಞಾನಿಕ ಪುರಾವೆಗಳು ಇದೆ. ಆರೋಗ್ಯ ತಜ್ಞೆ ಶ್ರೀಮತಿ ಅನುಪಮಾ ಗಿರೋತ್ರಾ ಈ ಬಗ್ಗೆ ಮಾಹಿತಿ ನೀಡಿದ್ದು, ಊಟ ಮಾಡುವ 30 ನಿಮಿಷಗಳ ಮೊದಲು ನೀರು ಕುಡಿಯುವುದರಿಂದ ತೂಕ ಇಳಿಕೆಯಾಗುತ್ತದೆ ಎಂದು ತಿಳಿಸಿದ್ದಾರೆ. ಊಟ ಮಾಡುವ 30 ನಿಮಿಷಗಳ ಮೊದಲು ನೀರು ಕುಡಿಯಿರಿ

ಊಟದ ಮೊದಲು ನೀರು ಕುಡಿಯುವುದರಿಂದ ದೇಹಕ್ಕೆ ಒಳ್ಳೆಯದು. ಜತೆಗೆ ಇದರಿಂದ ಕಡಿಮೆ ಕ್ಯಾಲೊರಿಗಳನ್ನು ಸೇವಿಸಬಹುದು. ಊಟವನ್ನು ತಿನ್ನುವ ಮೊದಲು ನೀರು ಕುಡಿಯುವುದು ಅತಿಯಾಗಿ ತಿನ್ನುವುದನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ದೇಹವು ಕೊಬ್ಬನ್ನು ಸಂಗ್ರಹಿಸದಂತೆ ನೋಡಿಕೊಳ್ಳುತ್ತದೆ.

ನೀವು ಎಷ್ಟು ನೀರು ಸೇವಿಸಬೇಕು?

ನೀವು ದಿನಕ್ಕೆ ಸುಮಾರು 1.8 ಲೀಟರ್ ನೀರು ಕುಡಿಯಬೇಕು. ಜತೆಗೆ ವ್ಯಾಯಾಮ ಮಾಡಬೇಕು ಇದರಿಂದ ತೂಕ ಕಡಿಮೆಯಾಗುತ್ತದೆ. ನೀರು ಆಧಾರಿತ ತೂಕ ನಷ್ಟ ವಿಧಾನವೆಂದರೆ ನೀವು ಎದ್ದ ತಕ್ಷಣ ನೀರು ಕುಡಿಯಿರಿ. ಬೆಳಿಗ್ಗೆ ಒಂದು ಲೋಟ ನೀರು ಕುಡಿಯುವುದು ನಿಮ್ಮ ದೇಹವನ್ನು ಪುನರ್ಜಲೀಕರಣಗೊಳಿಸಲು ಮತ್ತು ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ದೈನಂದಿನ ದಿನಚರಿಯಲ್ಲಿ ನೀರನ್ನು ಹೇಗೆ ಸೇರಿಸುವುದು?

  • ನೀರು, ಪುಡಿಮಾಡಿದ ಹಣ್ಣುಗಳು ಮತ್ತು ಬಾದಾಮಿ ಹಾಲಿನಿಂದ ಐಸ್ ಪಾಪ್​ಗಳನ್ನು ತಯಾರಿಸಿ.
  • ಮಲಗುವ ಮುನ್ನ ನಿಂಬೆ ಅಥವಾ ಗಿಡಮೂಲಿಕೆಗಳೊಂದಿಗೆ ಬಿಸಿನೀರನ್ನು ಕುಡಿಯಿರಿ.
  • ಬಾಯಾರಿಕೆಯನ್ನು ಹೆಚ್ಚಿಸಲು ನಿಮ್ಮ ಆಹಾರಕ್ಕೆ ಪುಡಿಮಾಡಿದ ಕೆಂಪು ಮೆಣಸು ಸೇರಿಸಿ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ.
  • ನೀರಿನ ಬಾಟಲಿಯನ್ನು ನಿಮ್ಮೊಂದಿಗೆ ಸದಾ ಒಯ್ಯಿರಿ.

ತಂಪು ಪಾನೀಯಗಳು ಅಥವಾ ಸೋಡಾದಂತಹ ಸಕ್ಕರೆ ಪಾನೀಯಗಳ ಬದಲಿಗೆ ನೀರನ್ನು ಹೆಚ್ಚಾಗಿ ಕುಡಿಯಿರಿ. ಪಾನೀಯಗಳು ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತವೆ. ಒಂದು ಕ್ಯಾನ್ ಕೋಲಾ 40 ಗ್ರಾಂ ಸಕ್ಕರೆ ಮತ್ತು 139 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದೆಲ್ಲಾ ಒಮ್ಮೆ ಕುಡಿಯಬಹುದು ಆದರೆ ಪ್ರತಿದಿನ ಸೇವಿಸುವುದು ಉತ್ತಮ ಅಭ್ಯಾಸ ಅಲ್ಲ.

ಹೆಚ್ಚು ನೀರು ಕುಡಿಯುವುದರಿಂದ ಆಗುವ ಇತರ ಪ್ರಯೋಜನಗಳು

ಜೀವಕೋಶಗಳ ಉತ್ಪಾದನೆ ಮತ್ತು ಉತ್ಪಾದಕತೆಯಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಇದು ಜೀವಕೋಶವನ್ನು ಆರೋಗ್ಯಕರವಾಗಿರಿಸುತ್ತದೆ. ಮೂತ್ರದ ರೂಪದಲ್ಲಿ ವಿಷವನ್ನು ಹೊರಹಾಕಲು ಮಾನವ ದೇಹಕ್ಕೆ ಸಹಾಯ ಮಾಡಲು ನೀರು ಹೆಚ್ಚು ಅಗತ್ಯವಿರುವ ಅಂಶವಾಗಿದೆ.

ಜಲಸಂಚಯನವು ನಿಮಗೆ ಹೊಳೆಯುವ ಚರ್ಮವನ್ನು ಉಡುಗೊರೆಯಾಗಿ ನೀಡುತ್ತದೆ. ಈ ಕಾರಣದಿಂದಾಗಿ ತ್ವಚೆಯ ಉತ್ಪನ್ನಗಳು ನೀರು ಆಧಾರಿತವಾಗಿರುವುದರಿಂದ ಅವುಗಳಲ್ಲಿ ಆರ್ಧ್ರಕ ಪರಿಣಾಮವನ್ನು ಬೀರುತ್ತವೆ.

ಇದನ್ನೂ ಓದಿ: ನಿಮ್ಮ ದೇಹಕ್ಕೆ ನೀರು ಬೇಕು ಎಂದು ತಿಳಿಯುವುದು ಹೇಗೆ? ನಿರ್ಜಲೀಕರಣದ ಅಪಾಯಗಳ ಬಗ್ಗೆ ಇಲ್ಲಿದೆ ಮಾಹಿತಿ

Skin Care: ತ್ವಚೆಯ ಸೌಂದರ್ಯಕ್ಕೆ ತೆಂಗಿನ ನೀರು ಉತ್ತಮ ಪರಿಹಾರ; ಅದರಿಂದ ಈ 5 ಸಮಸ್ಯೆಗಳು ದೂರವಾಗುತ್ತೆ!

Follow Us
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ನದಿಗೆ ಬಿದ್ದಿದ್ದ ಯುವತಿಯ ಪ್ರಾಣ ಉಳಿಸಿದ ಯುವಕ
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ