AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಯಾಕೋ ಏನೂ ತಿನ್ನೋದೇ ಬೇಡ ಅನಿಸುತ್ತಾ?; ಹಸಿವಾಗದಿರಲು ಕಾರಣ ಇಲ್ಲಿದೆ

ಹಸಿವಿನ ಕೊರತೆ ತುಂಬ ದಿನದವರೆಗೆ ಮುಂದುವರಿದರೆ ನೀವು ಜಾಗರೂಕರಾಗಿರಬೇಕು. ನಿಮ್ಮ ದೇಹದಲ್ಲಿನ ಹೆಚ್ಚಿನ ಒತ್ತಡ, ಕೆಲವು ದೀರ್ಘಕಾಲದ ನೋವು ಅಥವಾ ಅನಾರೋಗ್ಯದಂತಹ ವಿವಿಧ ವಿಷಯಗಳು ಹಸಿವಾಗದಿರುವುದಕ್ಕೆ ಕಾರಣವಿರಬಹುದು.

Health Tips: ಯಾಕೋ ಏನೂ ತಿನ್ನೋದೇ ಬೇಡ ಅನಿಸುತ್ತಾ?; ಹಸಿವಾಗದಿರಲು ಕಾರಣ ಇಲ್ಲಿದೆ
ಹಸಿವು
TV9 Web
| Updated By: ಸುಷ್ಮಾ ಚಕ್ರೆ|

Updated on:Mar 29, 2022 | 3:45 PM

Share

ಆಹಾರವು ನಮ್ಮ ದೇಹವನ್ನು ಕಾಪಾಡಿಕೊಳ್ಳಲು ಅಗತ್ಯವಾದ ವಸ್ತುವಾಗಿದೆ. ಆದರೆ, ಎಲ್ಲ ರೀತಿಯ ಆಹಾರವೂ ಎಲ್ಲರ ದೇಹಕ್ಕೂ ಹೊಂದಿಕೆಯಾಗುವುದಿಲ್ಲ. ಕೆಲವೊಬ್ಬರಿಗೆ ಒಂದೊಂದು ಆಹಾರ ಪದಾರ್ಥಗಳು ಇಷ್ಟವಾಗುವುದಿಲ್ಲ. ಇನ್ನು ಕೆಲವರಿಗೆ ಒಮ್ಮೊಮ್ಮೆ ಇಷ್ಟವಾಗುವ ಪದಾರ್ಥಗಳನ್ನು ಕೂಡ ತಿನ್ನಬೇಕು ಎನಿಸುವುದಿಲ್ಲ. ನಿಮಗೂ ಆಗಾಗ ಈ ರೀತಿ ಹಸಿವಾಗದಿರುವ ಸಮಸ್ಯೆ ಉಂಟಾಗುತ್ತದಾ? ಹಸಿವಾಗುವುದಕ್ಕೆ ಏನು ಮಾಡಬೇಕೆಂದು ಔಷಧಿಗಳನ್ನೆಲ್ಲ ತೆಗೆದುಕೊಳ್ಳುತ್ತಿದ್ದೀರಾ? ಅಥವಾ ಹೊಟ್ಟೆ ಸರಿಯಿಲ್ಲದಿರಬಹುದು ಎಂದು ಅದನ್ನು ನಿರ್ಲಕ್ಷ್ಯ ಮಾಡಿದ್ದೀರಾ? ಹಾಗಿದ್ದರೆ ಹಸಿವಿನ ಕೊರತೆಗೆ ಕಾರಣಗಳೇನೆಂಬ ಬಗ್ಗೆ ಇಲ್ಲಿದೆ ಮಾಹಿತಿ.

ಹಸಿವಿನ ಕೊರತೆ ತುಂಬ ದಿನದವರೆಗೆ ಮುಂದುವರಿದರೆ ನೀವು ಜಾಗರೂಕರಾಗಿರಬೇಕು. ನಿಮ್ಮ ದೇಹದಲ್ಲಿನ ಹೆಚ್ಚಿನ ಒತ್ತಡ, ಕೆಲವು ದೀರ್ಘಕಾಲದ ನೋವು ಅಥವಾ ಅನಾರೋಗ್ಯದಂತಹ ವಿವಿಧ ವಿಷಯಗಳು ಹಸಿವಾಗದಿರುವುದಕ್ಕೆ ಕಾರಣವಿರಬಹುದು. ನೀವು ಸರಿಯಾಗಿ ತಿನ್ನದಿದ್ದರೆ, ನಿಮ್ಮ ದೇಹ ನಿಮ್ಮನ್ನು ದುರ್ಬಲಗೊಳಿಸುತ್ತದೆ. ಹೀಗಾಗಿ, ಹಸಿವಿನ ಕೊರತೆ ದೀರ್ಘಾವಧಿಯಲ್ಲಿ ನಿಮಗೆ ಹಾನಿ ಮಾಡುತ್ತದೆ. ಇನ್‌ಸ್ಟಾಗ್ರಾಮ್ ಪುಟದ ಪೋಸ್ಟ್ “ನ್ಯೂಟ್ರಿಷನ್ ಬೈ ಲವ್‌ನೀತ್” ಹಸಿವಿನ ಕೊರತೆಯ ಹಿಂದಿನ ಸಂಭವನೀಯ ಕಾರಣಗಳನ್ನು ಹಂಚಿಕೊಂಡಿದೆ.

ನಿಮ್ಮ ಹಸಿವಿನ ಕೊರತೆಯ ಹಿಂದಿನ ಕಾರಣಗಳು ಇಲ್ಲಿವೆ:

1) ಆತಂಕ: ನಿಮಗೆ ಆತಂಕವಾದಾಗ ಕೇಂದ್ರ ನರಮಂಡಲವು ಕೆಲವು ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಕಾರಣವಾಗುತ್ತದೆ. ಈ ಅನಗತ್ಯ ಒತ್ತಡದ ಹಾರ್ಮೋನುಗಳು ನಿಮ್ಮ ಜೀರ್ಣಕ್ರಿಯೆ, ಹಸಿವನ್ನು ನಿಧಾನಗೊಳಿಸುವುದು ಸೇರಿದಂತೆ ಹಲವು ವಿಧಗಳಲ್ಲಿ ನಿಮ್ಮ ಮೇಲೆ ಪರಿಣಾಮ ಬೀರುತ್ತವೆ.

2) ಖಿನ್ನತೆ: ಖಿನ್ನತೆಯು ನಿಮ್ಮ ಹಸಿವಿನ ಕೊರತೆಯ ಕಾರಣವಾಗಿರಬಹುದು. ಈ ಮಾನಸಿಕ ಆರೋಗ್ಯ ಸ್ಥಿತಿಯು ನಿಮ್ಮ ಮೆದುಳನ್ನು ಹೆಚ್ಚು ಕಾರ್ಟಿಕೊಟ್ರೋಪಿನ್ ಬಿಡುಗಡೆ ಮಾಡುವ ಅಂಶವನ್ನು (CRF) ಬಿಡುಗಡೆ ಮಾಡಲು ಪ್ರಚೋದಿಸುತ್ತದೆ. ಇದು ಒಂದು ರೀತಿಯ ಹಾರ್ಮೋನ್ ಆಗಿದ್ದು ಅದು ನಿಮಗೆ ಕಡಿಮೆ ಹಸಿವನ್ನುಂಟು ಮಾಡುತ್ತದೆ.

3) ಒತ್ತಡ: ಒತ್ತಡವು ಕೆಲವೊಮ್ಮೆ ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ. ಇದು ವಾಕರಿಕೆ ಮತ್ತು ಅಜೀರ್ಣದಂತಹ ದೈಹಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಅದು ನಿಮ್ಮ ಹಸಿವು ಅಥವಾ ಆಹಾರವನ್ನು ಸೇವಿಸುವ ಬಯಕೆಯನ್ನು ಅಡ್ಡಿಪಡಿಸುತ್ತದೆ.

4) ಅನಾರೋಗ್ಯ: ದೇಹದ ಆರೋಗ್ಯ ಸರಿಯಾಗಿ ಇರದಿದ್ದರೆ ಆಹಾರವನ್ನು ತಿನ್ನುವ ಬಯಕೆ ಸಂಪೂರ್ಣವಾಗಿ ಹೋಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ಹಸಿವಾಗುವುದು ಕಡಿಮೆಯಾಗುತ್ತದೆ. ಅನಾರೋಗ್ಯವಾಗಿದ್ದಾಗ ಬಿಡುಗಡೆಯಾಗುವ ಸೈಟೊಕಿನ್ ಎಂಬ ರಾಸಾಯನಿಕ ನಿಮ್ಮನ್ನು ಸುಸ್ತಾಗಿಸುತ್ತದೆ ಮತ್ತು ನಿಮಗೆ ಏನನ್ನೂ ತಿನ್ನಬೇಕು ಅನಿಸುವುದಿಲ್ಲ.

5) ಗರ್ಭಧಾರಣೆ: ಗರ್ಭಾವಸ್ಥೆಯಲ್ಲಿ ದೇಹವು ಬಹಳಷ್ಟು ಬದಲಾವಣೆಗಳಿಗೆ ಒಳಗಾಗುತ್ತದೆ. ಈ ಸ್ಥಿತಿಯು ಹಸಿವು ಕಡಿಮೆಯಾಗುವುದು, ಏನನ್ನು ನೋಡಿದರೂ ವಾಕರಿಕೆ ಬರುವುದು ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೆಲವು ಗರ್ಭಾವಸ್ಥೆಯ ಲಕ್ಷಣಗಳು, ವಾಕರಿಕೆ ಮತ್ತು ಎದೆಯುರಿ ಉಂಟುಮಾಡಬಹುದು. ಅದರ ಜೊತೆಗೆ, ಕೆಲವು ಆಹಾರಗಳ ಬಗ್ಗೆ ಅಸಹ್ಯವು ನಿಮ್ಮ ಹಸಿವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

6) ದೀರ್ಘಕಾಲದ ನೋವು: ದೀರ್ಘಕಾಲದ ನೋವಿನ ಪರಿಸ್ಥಿತಿಗಳು ದೇಹವನ್ನು ಹಲವು ವಿಧಗಳಲ್ಲಿ ತೊಂದರೆಗೊಳಿಸುತ್ತವೆ. ಕೆಲವು ಪರಿಸ್ಥಿತಿಗಳು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಋಣಾತ್ಮಕವಾಗಿ ಪರಿಣಾಮ ಬೀರುತ್ತವೆ ಮತ್ತು ನಿಮ್ಮ ಹಸಿವಿನ ಮೇಲೂ ಪರಿಣಾಮ ಬೀರುತ್ತವೆ.

7) ಔಷಧಿಗಳು: ಕೆಲವೊಮ್ಮೆ, ಔಷಧಿಗಳು ಕೆಲವು ಸಂಭಾವ್ಯ ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ. ಮತ್ತು ಇವುಗಳು ನಿಮ್ಮ ಹಸಿವಿನ ಭಾವನೆಯ ಮೇಲೆ ಪರಿಣಾಮ ಬೀರಬಹುದು.

8) ವಯಸ್ಸು: ಕಿರಿಯ ವಯಸ್ಸಿನವರು ತುಂಬಾ ಸಕ್ರಿಯ ಮತ್ತು ಶಕ್ತಿಯುತವಾಗಿರುತ್ತಾರೆ. ಆದರೆ ವಯಸ್ಸಾದ ನಂತರ ಜೀರ್ಣಾಂಗ ವ್ಯವಸ್ಥೆಯು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ. ಆದ್ದರಿಂದ ನಿಮಗೆ ಹಸಿವು ಕೂಡ ಕಡಿಮೆಯಾಗುತ್ತದೆ.

(ಸೂಚನೆ: ಈ ಸಲಹೆಗಳು ನಿಮಗೆ ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ಫ್ಯಾಮಿಲಿ ವೈದ್ಯರನ್ನು ಸಂಪರ್ಕಿಸಿ. ಇದು ಆಯಾ ವ್ಯಕ್ತಿಗಳ ಶರೀರದ ವಿಷಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಹೀಗಾಗಿ, ವೈದ್ಯರ ಸಲಹೆಯಿಲ್ಲದೆ ಯಾವುದೇ ನಿರ್ಧಾರಕ್ಕೆ ಬರಬೇಡಿ.)

ಇದನ್ನೂ ಓದಿ: Cumin for health: ಪ್ರತಿದಿನ ಜೀರಿಗೆ ಸೇವಿಸುವುದರಿಂದಾಗುವ ಆರೋಗ್ಯಕರ ಬದಲಾವಣೆ ಬಗ್ಗೆ ನಿಮಗೆಷ್ಟು ಗೊತ್ತು?

Health Tips: ಈ 5 ತರಕಾರಿಗಳಲ್ಲಿ ಅಡಗಿರುವ ಆರೋಗ್ಯಕರ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು?

Published On - 3:44 pm, Tue, 29 March 22

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್