ಬಾಗಲಕೋಟೆ: ಪೆಟ್ರೋಲ್, ಡೀಸೆಲ್​ಗೆ ನೀರು ಬೆರಕೆ! ಬಂಕ್ ಮಾಲೀಕರ ವಿರುದ್ಧ ಆಕ್ರೋಶ

| Updated By: ganapathi bhat

Updated on: Sep 24, 2021 | 3:19 PM

Bagalkot News: ಜಮಖಂಡಿ ಮೂಲದ ಸದಾನಂದ ಪಾಟೀಲ್ ಒಡೆತನದ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದ ಭಗವತಿ ಕ್ರಾಸ್ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್​ನಲ್ಲಿ ಘಟನೆ ಸಂಭವಿಸಿದೆ.

ಬಾಗಲಕೋಟೆ: ಪೆಟ್ರೋಲ್, ಡೀಸೆಲ್​ಗೆ ನೀರು ಬೆರಕೆ! ಬಂಕ್ ಮಾಲೀಕರ ವಿರುದ್ಧ ಆಕ್ರೋಶ
ಪೆಟ್ರೋಲ್, ಡೀಸೆಲ್​ಗೆ ನೀರು ಬೆರಕೆ!
Follow us on

ಬಾಗಲಕೋಟೆ: ಒಂದು ಕಡೆ ಪೆಟ್ರೋಲ್ ಡಿಸೆಲ್ ಬೆಲೆ ಗಗನಕ್ಕೆ ಏರಿದೆ. ಇಂಧನದ ಖರ್ಚು ವೆಚ್ಚದ ಭರಾಟೆಯಲ್ಲಿ ಗ್ರಾಹಕರು ಸಿಲುಕಿದ್ದಾರೆ. ಮತ್ತೊಂದೆಡೆ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಡೀಸೆಲ್​ನಲ್ಲಿ ನೀರು ಬೆರಕೆ ಮಾಡಲಾಗಿದೆ. ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಬಂಕ್ ಎದುರು ಜಮಾಯಿಸಿದ ಬೈಕ್ ಹಾಗೂ ಇತರ ವಾಹನ ಸವಾರರು ಬಂಕ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೆಟ್ರೋಲ್ ಹಾಗೂ ಡಿಸೇಲ್ ನಲ್ಲಿ ನೀರು ಮಿಕ್ಸ್ ಆಗಿದೆ ಎಂದು ಗ್ರಾಹಕರು ಸಿಟ್ಟಾಗಿದ್ದಾರೆ.

ಪೊಟ್ರೋಲ್ ಬಂಕ್ ಮಾಲೀಕರು ಹಾಗೂ ಸೇಲ್ಸ್ ಆಫಿಸರ್ ಜೊತೆ ಬಂಕ್ ಗ್ರಾಹಕರು ವಾಗ್ವಾದ ನಡೆಸಿದ್ದಾರೆ. ಇಂಡಿಯನ್ ಆಯಿಲ್ ಕಂಪನಿ ಸೇಲ್ಸ್ ಆಪಿಸರ್​ರನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಬಂಕ್‌ನಲ್ಲಿ ಸೇಲ್ಸ್ ಆಪಿಸರ್ ಕಾರು ತಡೆ ಹಿಡಿದಿಟ್ಟುಕೊಂಡ ಗ್ರಾಹಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹದಿನೈದು ದಿನದಿಂದ ನೀರು ಮಿಶ್ರಿತ ಡೀಸೆಲ್ ಪೆಟ್ರೋಲ್ ಬರುತ್ತಿದೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ.

ಜಮಖಂಡಿ ಮೂಲದ ಸದಾನಂದ ಪಾಟೀಲ್ ಒಡೆತನದ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದ ಭಗವತಿ ಕ್ರಾಸ್ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್​ನಲ್ಲಿ ಘಟನೆ ಸಂಭವಿಸಿದೆ.

ಸತತ 18 ದಿನಗಳ ಬಳಿಕ ಏರಿಕೆ ಕಂಡ ಡೀಸೆಲ್​ ಬೆಲೆ; ಪೆಟ್ರೋಲ್​ ಬೆಲೆ ಸ್ಥಿರ
ಇಂದು (ಸೆಪ್ಟೆಂಬರ್ 24, ಶುಕ್ರವಾರ) ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಪೆಟ್ರೋಲ್ ದರ (Petrol Price) ಸ್ಥಿರವಾಗಿಯೇ ಇದೆ. ಆದರೆ ಸತತ 18 ದಿನಗಳ ಬಳಿಕ ಡೀಸೆಲ್ ಬೆಲೆಯಲ್ಲಿ (Diesel Price) ಏರಿಕೆ ಕಂಡು ಬಂದಿದೆ. ಲೀಟರ್ ಡೀಸೆಲ್ ಬೆಲೆಯಲ್ಲಿ 20 ರಿಂದ 25 ಪೈಸೆ ಹೆಚ್ಚಳ ಮಾಡಲಾಗಿದೆ.

ಮುಂಬೈನಲ್ಲಿ ಡೀಸೆಲ್ ಬೆಲೆಯಲ್ಲಿ 22 ಪೈಸೆ ಹೆಚ್ಚಳವಾಗಿದ್ದು, ಲೀಟರ್ ಡೀಸೆಲ್ ಬೆಲೆ 96.41 ರೂಪಾಯಿ ಇದೆ. ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲವಾದ್ದರಿಂದ ಲೀಟರ್ ಪೆಟ್ರೋಲ್​ಗೆ 107.26 ರೂಪಾಯಿ ಇದೆ. ಅದೇ ರೀತಿ ದೆಹಲಿಯಲ್ಲಿ 20 ಪೈಸೆ ಹೆಚ್ಚಳದ ಬಳಿಕ ಲೀಟರ್ ಡೀಸೆಲ್ ದರ 88.82 ರೂಪಾಯಿಗೆ ಏರಿಕೆ ಆಗಿದೆ. ಲೀಟರ್ ಪೆಟ್ರೋಲ್ ದರ 101.19 ರೂಪಾಯಿ ಇದೆ.

ಕೊಲ್ಕತ್ತಾದಲ್ಲಿ ಲೀಟರ್ ಡೀಸೆಲ್ ಬೆಲೆಯಲ್ಲಿ 21 ಪೈಸೆ ಹೆಚ್ಚಳ ಮಾಡಲಾಗಿದೆ. ಆ ಬಳಿಕ ಲೀಟರ್ ಡೀಸೆಲ್ ಬೆಲೆ 91.92 ರೂಪಾಯಿಗೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಲೀಟರ್ ಪೆಟ್ರೋಲ್​ಗೆ 101.62 ರೂಪಾಯಿ ಇದೆ.

ಚೆನ್ನೈನಲ್ಲಿ ಲೀಟರ್ ಡೀಸೆಲ್ ದರದಲ್ಲಿ 20 ಪೈಸೆ ಹೆಚ್ಚಳ ಮಾಡಲಾಗಿದೆ. ಬಳಿಕ 93.46 ರೂಪಾಯಿಗೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಲೀಟರ್ ಪೆಟ್ರೋಲ್​ ದರ 98.96 ರೂಪಾಯಿ ಇದೆ. ಬೆಂಗಳೂರಿನಲ್ಲಿ ಲೀಟರ್ ಡೀಸೆಲ್ ದರ 94.27 ರೂಪಾಯಿ ಇದೆ. ಅದೇ ರೀತಿ ಲೀಟರ್ ಪೆಟ್ರೋಲ್ ದರ 104.70 ರೂಪಾಯಿ ಇದೆ. ಹೈದರಾಬಾದ್​ನಲ್ಲಿ ಲೀಟರ್ ಡೀಸೆಲ್ ದರ 96.92 ರೂಪಾಯಿಗೆ ಏರಿಕೆ ಆಗಿದೆ. ಲೀಟರ್ ಪೆಟ್ರೋಲ್ ದರ 105.26 ರೂಪಾಯಿ ಇದೆ.

ಇದನ್ನೂ ಓದಿ: Electric vs Petrol: ಮೈಲೇಜ್, ತಾಳಿಕೆ, ಪವರ್: ಎಲೆಕ್ಟ್ರಿಕ್ vs ಪೆಟ್ರೋಲ್- ಯಾವುದು ಒಳ್ಳೇದು?

ಇದನ್ನೂ ಓದಿ: Petrol Price Today: ಸತತ 18 ದಿನಗಳ ಬಳಿಕ ಏರಿಕೆ ಕಂಡ ಡೀಸೆಲ್​ ಬೆಲೆ; ಪೆಟ್ರೋಲ್​ ಬೆಲೆ ಸ್ಥಿರ!