ರಾಜೀವ್ ಗಾಂಧಿ ವಸತಿ ನಿಗಮದ ನೋಡಲ್ ಅಧಿಕಾರಿ ಆತ್ಮಹತ್ಯೆಗೆ ಟ್ವಿಸ್ಟ್; ಆತ್ಮಹತ್ಯೆಗೆ ಅಸಲಿ ಕಾರಣ ಏನು ಗೊತ್ತಾ?

"ಉಸ್ಮಾನ್ ಪಾಷಾ ಎಂಬುವವರು ರಾಜೀವ್ ಗಾಂಧಿ ವಸತಿ ನಿಗಮ ಬೆಂಗಳೂರ ಕಚೇರಿಯಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ನನ್ನ ಕಡೆಯಿಂದ 30 ಲಕ್ಷ ಹಣ ಪಡೆದಿದ್ದಾರೆ. ಸಹಾಯಕ ಪ್ರಧಾನ ವ್ಯವಸ್ಥಾಪಕನಾದ ನನ್ನ ಹಾಗೂ ಕಚೇರಿಯ ಕೆಲವರ ವರ್ಗಾವಣೆ ಆಗಿದೆ.

ರಾಜೀವ್ ಗಾಂಧಿ ವಸತಿ ನಿಗಮದ ನೋಡಲ್ ಅಧಿಕಾರಿ ಆತ್ಮಹತ್ಯೆಗೆ ಟ್ವಿಸ್ಟ್; ಆತ್ಮಹತ್ಯೆಗೆ ಅಸಲಿ ಕಾರಣ ಏನು ಗೊತ್ತಾ?
ರಾಜೀವ್ ಗಾಂಧಿ ವಸತಿ ನಿಗಮದ ನೂಡಲ್ ಅಧಿಕಾರಿ ಆತ್ಮಹತ್ಯೆಗೆ ಟ್ವಿಸ್ಟ್
TV9kannada Web Team

| Edited By: Ayesha Banu

Jun 29, 2022 | 8:50 PM

ಬಾಗಲಕೋಟೆ: ಜಿಲ್ಲೆಯ ಮುಧೋಳ ನಗರದ ತಾಲೂಕು ಪಂಚಾಯತಿ ಆವರಣದ ಕೊಠಡಿಯೊಳಗೆ ನಿನ್ನೆ ಗುತ್ತಿಗೆಯಾಧಾರದ ನೌಕರ ಬಸಣ್ಣ ಪಟ್ಟೇದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಎಲ್ಲರಲ್ಲಿಯೂ ಬಹಳ ಅಚ್ಚರಿ ಜೊತೆಗೆ ಹಲವಾರು ಪ್ರಶ್ನೆ ಹುಟ್ಟು ಹಾಕಿತ್ತು. ಆತ್ಮಹತ್ಯೆಗೆ ಏನು ಕಾರಣ ಯಾರದ್ದಾದರೂ ಕಿರುಕುಳ ಇತ್ತಾ? ಕೌಟುಂಬಿಕ ಸಮಸ್ಯೆ ಏನಾದರೂ ಇತ್ತಾ ಎಂದು ಎಲ್ಲರೂ ತಮ್ಮೊಳಗೆ ಪ್ರಶ್ನೆ ಹಾಕಿಕೊಳ್ಳುತ್ತಿದ್ದರು. ಆದರೆ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟ. ಕಳೆದ ಏಳು ವರ್ಷದಿಂದ ವೇತನ ಆಗದಿರೋದು ,ಹುದ್ದೆ ಖಾಯಂ ಆಗದಿರೋದು. ಕುಟುಂಬ ನಿರ್ವಹಣೆ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಬಸಣ್ಣ ಪಟ್ಟೇದ ಪತ್ನಿ ಕವಿತಾ ಕೂಡ ಏಳು ವರ್ಷದಿಂದ ವೇತನ ಆಗಿಲ್ಲ, ಕೆಲಸ ಖಾಯಂ ಆಗಿಲ್ಲ ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು. ಆದರೆ ಇದೆಲ್ಲ ಕಾರಣದ ಜೊತೆಗೆ ಇದೀಗ ಮತ್ತೊಂದು ಹಣಕಾಸಿನ ವಿಚಾರ ಬಹಿರಂಗವಾಗಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಪರಿಶೀಲನೆ ವೇಳೆ ಸಿಕ್ಕ ಡೆತ್ ನೋಟ್ ಬಿಚ್ಚಿಟ್ತು ರಹಸ್ಯ ಬಸಣ್ಣ ಪಟ್ಟೇದ ರಾಯಚೂರು ಜಿಲ್ಲೆ ಲಿಂಗಸಗೂರ ತಾಲ್ಲೂಕಿನ ಚಿಕ್ಕಹೆಸರೂರು ಗ್ರಾಮದ ನಿವಾಸಿಯಾಗಿದ್ದು ಕಳೆದ ಹತ್ತು ವರ್ಷದಿಂದ ಮುಧೋಳ ನಗರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ನೋಡಲ್ ಅಧಿಕಾರಿಯಾಗಿ ಗುತ್ತಿಗೆಯಾಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಮನೆಗಳ ಜಿಪಿಎಸ್ ಸೇರಿದಂತೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರು. ಇನ್ನು ರಾಜೀವ್ ಗಾಂಧಿ ವಸತಿ ನಿಗಮದ ಬೆಂಗಳೂರು ಕಚೇರಿಯ “ಸಹಾಯಕ ಪ್ರಧಾನ ವ್ಯವಸ್ಥಾಪಕ ” ಉಸ್ಮಾನ್ ಪಾಷಾ ಎಂಬ ಮೇಲಾಧಿಕಾರಿ ಬಸಣ್ಣ ಪಟ್ಟೇದ ಬಳಿ 30 ಲಕ್ಷ ಸಾಲ ಪಡೆದಿದ್ದರಂತೆ. ನನ್ನ ಹಾಗೂ ಕಚೇರಿಯ ಕೆಲವರ ವರ್ಗಾವಣೆ ಆಗಿದೆ. ಅದನ್ನು ತಡೆಯಬೇಕಾದರೆ ಲಕ್ಷ ಲಕ್ಷ ಹಣ ಕೊಡಬೇಕಾಗಿದೆ. ಅದಕ್ಕಾಗಿ ನನಗೆ 30೦ ಲಕ್ಷ ಹಣ ಬೇಕು ಮರಳಿ ಕೊಡುತ್ತೇನೆ ಎಂದು ಬಸಣ್ಣ ಬಳಿ ಸಾಲ ಪಡೆದಿದ್ದರು. ಬಸಣ್ಣ ಪಟ್ಟೇದ ಪರಿಚಯಸ್ಥರ, ಸ್ನೇಹಿತರ ಕಡೆಯಿಂದ ಸಾಲ ಪಡೆದು 3೦ ಲಕ್ಷ ಹಣವನ್ನು ಉಸ್ಮಾನಾ ಪಾಷಾಗೆ ಕೊಟ್ಟಿದ್ದರಂತೆ. ಆದರೆ ಮರಳಿ ಕೇಳಿದಾಗ ನಂತರ ಕೊಡುತ್ತೇನೆ ಎಂದು ಹೇಳುತ್ತಿದ್ದೋರು ಇತ್ತೀಚೆಗೆ ಕೊಡೋದಿಲ್ಲ ಏನು ಮಾಡ್ಕೊಳ್ತಿಯಾ ಮಾಡಿಕೊ ಎಂದಿದ್ದರಂತೆ. ಇದರಿಂದ ಬಸಣ್ಣ ಪಟ್ಟೇದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹಂತಕರೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡ ಬಳಿಕ ವಿಚಾಛರಣೆ ನಡೆಸುವುದರಲ್ಲಿ ಏನರ್ಥವಿದೆ? ಕೆ ಎಸ್ ಈಶ್ವರಪ್ಪ

ಬಸಣ್ಣ ಪಟ್ಟೇದ ಬರೆದ ಡೆತ್ ನೋಟ್ನಲ್ಲಿ ಏನಿದೆ? “ಉಸ್ಮಾನ್ ಪಾಷಾ ಎಂಬುವವರು ರಾಜೀವ್ ಗಾಂಧಿ ವಸತಿ ನಿಗಮ ಬೆಂಗಳೂರ ಕಚೇರಿಯಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ನನ್ನ ಕಡೆಯಿಂದ 30 ಲಕ್ಷ ಹಣ ಪಡೆದಿದ್ದಾರೆ. ಸಹಾಯಕ ಪ್ರಧಾನ ವ್ಯವಸ್ಥಾಪಕನಾದ ನನ್ನ ಹಾಗೂ ಕಚೇರಿಯ ಕೆಲವರ ವರ್ಗಾವಣೆ ಆಗಿದೆ. ಅದನ್ನು ತಡೆಯಬೇಕಾದರೆ ಲಕ್ಷ ಲಕ್ಷ ಹಣ ಕೊಡಬೇಕಾಗಿದೆ. ಅದಕ್ಕಾಗಿ ನನಗೆ 30 ಲಕ್ಷ ಹಣ ಬೇಕು, ನಾನು ಆದಷ್ಟು ಬೇಗ ಮರಳಿ ಹಣ ಕೊಡುತ್ತೇನೆ ಎಂದಿದ್ದರು. ನಾನು ಪರಿಚಯಸ್ಥರು, ಸ್ನೇಹಿತರ ಕಡೆಯಿಂದ ಸಾಲ ಪಡೆದು 30 ಲಕ್ಷ ಹಣವನ್ನು ಉಸ್ಮಾನಾ ಪಾಷಾಗೆ ಕೊಟ್ಟಿದ್ದೆ. ಮರಳಿ ಕೇಳಿದಾಗ ನಂತರ ಕೊಡುತ್ತೇನೆ ಸ್ವಲ್ಪ ದಿನ ವೇಟ್ ಮಾಡಿ ಅಂತಿದ್ದರು. ಇತ್ತೀಚೆಗೆ ಕೊಡೋದಿಲ್ಲ ಏನು ಮಾಡ್ಕೊಳ್ತಿಯಾ ಮಾಡಿಕೊ ಎಂದಿದ್ದರು. ನನ್ನ ಸಾವಿಗೆ ಉಸ್ಮಾನ್ ಪಾಷಾ ಅವರೆ ಕಾರಣ” ಎಂದು ಡೆತ್ ನೋಟಲ್ಲಿ ಉಲ್ಲೇಖ ಮಾಡಿದ್ದಾರಂತೆ.

ಈ ಕಾರಣದಿಂದ 30 ಲಕ್ಷ ಸಾಲ ತೀರಿಸಲಾಗದೆ ಇನ್ನೊಂದು ಕಡೆ ಏಳು ವರ್ಷದಿಂದ ವೇತನವಿಲ್ಲ, ಕೆಲಸ ಖಾಯಂ ಆಗಿಲ್ಲ, ಕುಟುಂಬ ನಿರ್ವಹಣೆ ಜಂಜಾಟ ಈ ಎಲ್ಲ ಕಾರಣದಿಂದ ಬಸಣ್ಣ ಪಟ್ಟೇದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ಇದೀಗ ಮುಧೋಳ ಪೊಲೀಸರಿಗೆ ಸಿಕ್ಕಿದ್ದು, ಡೆತ್ ನೋಟ್ ಉಲ್ಲೇಖಿಸಿ ಪತ್ನಿ ಕವಿತಾ ಮುಧೋಳ ಠಾಣೆಯಲ್ಲಿ ಉಸ್ಮಾನ್ ಪಾಷಾ ವಿರುದ್ಧ ದೂರು ನೀಡಿದ್ದು ಎಫ್ ಐ ಆರ್ ದಾಖಲಾಗಿದೆ. ಪತ್ನಿ‌ ಮಕ್ಕಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಇದನ್ನೂ ಓದಿ: ಮೋದಿ ಸಾಹೇಬರು ಕುಮಾರಸ್ವಾಮಿನ್ನ ದೆಹಲಿಗೆ ಕರೆಸಿದ್ದರು: ಯಾಕೆ ಅಂತಾ ಹೇಳಿ? ಸಚಿವ ಅಶೋಕ್​ ಗೆ ಹೆಚ್.ಡಿ.ರೇವಣ್ಣ ತಾಕೀತು

ಒಟ್ಟಿನಲ್ಲಿ ಸರಕಾರದ ನಿರ್ಲಕ್ಷ್ಯ ಮೇಲಾಧಿಕಾರಿ ಕೈ ಕೊಟ್ಟ ಹಿನ್ನೆಲೆ ಒಂದು ಅಮಾಯಕ ಜೀವ ಬಲಿಯಾಗಿದ್ದು ದುರಂತ. ಇನ್ನು ಮೇಲಾಧಿಕಾರಿಗೆ ಕೊಟ್ಟ ಹಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ತಪ್ಪು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada