ಮೋದಿ ಸಾಹೇಬರು ಕುಮಾರಸ್ವಾಮಿನ್ನ ದೆಹಲಿಗೆ ಕರೆಸಿದ್ದರು: ಯಾಕೆ ಅಂತಾ ಹೇಳಿ? ಸಚಿವ ಅಶೋಕ್​ ಗೆ ಹೆಚ್.ಡಿ.ರೇವಣ್ಣ ತಾಕೀತು

ಮೋದಿ ಸಾಹೇಬರು ಹೇಳಲಿ. ಮೋದಿಯವರು ಕಳೆದ ವಿಧಾನಸಭೆ ಚುನಾವಣೆಗೆ ನಾಲ್ಕು ದಿನ ಮುಂಚೆ ಕುಮಾರಸ್ವಾಮಿ ಅವರನ್ನು ದೆಹಲಿಗೆ ಕರೆಸಿ ಕಾಂಗ್ರೆಸ್‌ನವರನ್ನು ನಂಬಬೇಡಿ. ನಾವು ಬೆಂಬಲ‌ ಕೊಡುತ್ತೇವೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿ ಎಂದಿದ್ದರು. ಅವರ ಮಾತು ಕೇಳಿದ್ದರೆ ಕುಮಾರಸ್ವಾಮಿ ಅವರೇ ಇಂದು ಮುಖ್ಯಮಂತ್ರಿ ಆಗಿರುತ್ತಿದ್ದರು.

ಮೋದಿ ಸಾಹೇಬರು ಕುಮಾರಸ್ವಾಮಿನ್ನ ದೆಹಲಿಗೆ ಕರೆಸಿದ್ದರು: ಯಾಕೆ ಅಂತಾ ಹೇಳಿ? ಸಚಿವ ಅಶೋಕ್​ ಗೆ ಹೆಚ್.ಡಿ.ರೇವಣ್ಣ ತಾಕೀತು
ಹೆಚ್ ಡಿ ರೇವಣ್ಣ
TV9kannada Web Team

| Edited By: Ayesha Banu

Jun 29, 2022 | 7:18 PM

ಹಾಸನ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಾಲು ಹಿಡಿಯೋದು ಒಂದು ಬಾಕಿಯಿತ್ತು ಎಂಬ ಕಂದಾಯ ಸಚಿವ ಆರ್.ಅಶೋಕ್(R Ashok) ಹೇಳಿಕೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ(HD Revanna) ತಿರುಗೇಟು ಕೊಟ್ಟಿದ್ದಾರೆ. ಮೋದಿ ಸಾಹೇಬರು ಹೇಳಲಿ. ಮೋದಿ ಕುಮಾರಸ್ವಾಮಿ ಅವರನ್ನು ದೆಹಲಿಗೆ ಕರೆಸಿ ನಾವು ಬೆಂಬಲ‌ ಕೊಡುತ್ತೇವೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿ ಎಂದಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

ಮೋದಿ ಸಾಹೇಬರು ಹೇಳಲಿ. ಮೋದಿಯವರು ಕಳೆದ ವಿಧಾನಸಭೆ ಚುನಾವಣೆಗೆ ನಾಲ್ಕು ದಿನ ಮುಂಚೆ ಕುಮಾರಸ್ವಾಮಿ ಅವರನ್ನು ದೆಹಲಿಗೆ ಕರೆಸಿ ಕಾಂಗ್ರೆಸ್‌ನವರನ್ನು ನಂಬಬೇಡಿ. ನಾವು ಬೆಂಬಲ‌ ಕೊಡುತ್ತೇವೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿ ಎಂದಿದ್ದರು. ಅವರ ಮಾತು ಕೇಳಿದ್ದರೆ ಕುಮಾರಸ್ವಾಮಿ ಅವರೇ ಇಂದು ಮುಖ್ಯಮಂತ್ರಿ ಆಗಿರುತ್ತಿದ್ದರು. ಇದು ಸುಳ್ಳಾದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಬಿಜೆಪಿ ಜೊತೆ ಒಪ್ಪಂದ ಮಾಡಿಕೊಳ್ಳಲು ಯಾರು ಅರ್ಜಿ ಹಾಕಿದ್ದರು. ಸೋನಿಯಾ ಗಾಂಧಿಯವರನ್ನು ಕೇಳಿದ್ದು ನಿಜ, ಯಾರ ಮನೆಗೂ ಹೋಗಿ ಯಾರ ಕಾಲು ಕಟ್ಟಿಲ್ಲ. ಸಿದ್ದರಾಮಯ್ಯ ಬೆಂಬಲ ಕೊಡಲ್ಲ ಅಂದ ಕೂಡಲೇ ಸುಮ್ಮನಾದೆವು. ಬಿಜೆಪಿ ಗೆಲ್ಲಬೇಕಾದರೆ ಕಾಂಗ್ರೆಸ್‌ನವರೇ ಕಾರಣ. ಹಾಸನಕ್ಕೆ ರಾಹುಲ್‌ಗಾಂಧಿ ಬಂದು ಎ ಟೀಂ ಬಿ ಟೀಂ ಎಂದು ಬಿಜೆಪಿ ಗೆಲ್ಸಿದ್ರು. ನಮ್ಮ ಪಕ್ಷದ ಶಾಸಕ ಶ್ರೀನಿವಾಸ್‌ಗೆ ಎಷ್ಟು ದುಡ್ಡು ಕೊಟ್ಟು ಖರೀದಿ ಮಾಡಿ ಓಟು ಹಾಕಿಸಿಕೊಂಡರು, ಯಾರು ಅವರ ಜೊತೆ ಮಾತನಾಡಿದ್ರು ಹೇಳಲಿ. ಸಮಯ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ನಾವು ಎಂದೂ ಅಧಿಕಾರಕ್ಕಾಗಿ ಆಸೆ ಪಟ್ಟಿಲ್ಲ. ಶಾಸಕರನ್ನು ಖರೀದಿ ಮಾಡಿ ಬಿಜೆಪಿ ಸರ್ಕಾರ ರಚನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಹೆಚ್ ಡಿ  ಕೋಟೆ  ಭೀಮನಕೊಲ್ಲಿಯ ಮಹದೇಶ್ವರ ಜಾತ್ರೆಯಲ್ಲಿ ಮಹಿಳೆಯರ ಕುಣಿತ ಖುಷಿ ನೀಡುತ್ತದೆ!

ಅದರ ಬದಲು ರಾಜರ ಕಾಲದ ರೀತಿ ನಾಮಿನೇಟ್ ಮಾಡದು ಒಳ್ಳೆಯದು. ಅಧಿಕಾರದಲ್ಲಿದ್ದ ಮಹಾರಾಷ್ಟ್ರ ಸರ್ಕಾರ ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ. ಗೋವಾ, ಮುಂಬೈ ಎಲ್ಲಾ ಕಡೆ ಕರೆದುಕೊಂಡು ಹೋಗುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗಲೂ ಶಾಸಕರನ್ನು ಕರೆದುಕೊಂಡು ಮುಂಬೈಗೆ ಹೋದರು. ಇದಕ್ಕೆಲ್ಲ ಸುಮ್ಮನೆ ದುಡ್ಡು ಖರ್ಚಾಗುತ್ತೆ. ಅದರ ಬದಲು ರಾಜರ ಕಾಲದ ರೀತಿ ನಾಮಿನೇಟ್ ಮಾಡಲಿ. ನಾಮಿನೇಟ್ ಮಾಡುವ ಅಧಿಕಾರವನ್ನು ರಾಜ್ಯಪಾಲರಿಗೆ ನೀಡಲಿ. ಚುನಾವಣೆ ಗೆಲ್ಲಲು ಹೊಲ‌, ಮನೆ ಮಾರಿಕೊಂಡು ಬೀದಿಗೆ ಬರ್ತಾರೆ ಕೆಲವರು ಎಂದು ಮಹಾರಾಷ್ಟ್ರ ಬೆಳವಣಿಗೆ ಬಗ್ಗೆ ರೇವಣ್ಣ ತೀವೃ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳು ಬರಲಿ. 40% ಕಮಿಷನ್ ಬಗ್ಗೆ ಸ್ಯಾಂಪಲ್‌ಗೆ ಒಂದೆರಡು ದಾಖಲೆ ಕೊಡ್ತಿನಿ. ದಾಖಲೆ‌ ಕೊಡಲು ಕೆಂಪಣ್ಣ ಹೆದರಬಹುದು, ನಾನು ಹೆದರಲ್ಲ, ದಾಖಲೆ ಕೊಡ್ತಿನಿ ಎಂದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada