Made For Each Other: ವರ 3 ಅಡಿ, ವಧು ಐದೂವರೆ ಅಡಿ -ಬಾಗಲಕೋಟದಲ್ಲಿ ಬಲು ಅಪರೂಪದ ಜೋಡಿ ಮದುವೆಯಾದರು

| Updated By: ಆಯೇಷಾ ಬಾನು

Updated on: Feb 21, 2022 | 11:52 AM

ಗ್ರಾಮದ ಬಡಕುಟುಂಬ, ಪಾನ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಶಾಂತವ್ವ ಕುಂಬಾರ ಅವರ ಪುತ್ರ ಬಸವರಾಜ ಸಹ ಪಾನ್ ಶಾಪ್ ಇಟ್ಟುಕೊಂಡಿದ್ದಾನೆ. ಬಸವರಾಜ ಅವರು ವಯಸ್ಸಿಗೆ ತಕ್ಕಂತೆ ದೈಹಿಕವಾಗಿ ಬೆಳವಣಿಗೆ ಆಗಿಲ್ಲ. ಕುಬ್ಜ ದೇಹ ಹೊಂದಿದ್ದು, ಅಂದಾಜು ಮೂರು ಫೂಟ್ ಎತ್ತರ ಇದ್ದಾರೆ.

Made For Each Other: ವರ 3 ಅಡಿ, ವಧು ಐದೂವರೆ ಅಡಿ -ಬಾಗಲಕೋಟದಲ್ಲಿ ಬಲು ಅಪರೂಪದ ಜೋಡಿ ಮದುವೆಯಾದರು
Made For Earth Other: ವರ 3 ಅಡಿ, ವಧು ಐದೂವರೆ ಅಡಿ -ಬಾಗಲಕೋಟದಲ್ಲಿ ಬಲು ಅಪರೂಪದ ಜೋಡಿ ಮದುವೆಯಾದರು
Follow us on

ಬಾಗಲಕೋಟೆ: ಮದುವೆ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ ಅಂತಾರೆ. ಹಾಗೆಯೇ ಇಲ್ಲೊಂದು ಹಸೆಮಣೆ ಏರಿದ ಜೋಡಿಯನ್ನು ನೋಡಿದರೆ ಆ ನಾಣ್ಣುಡಿ ನಿಜ ಅನ್ಸುತ್ತೆ. ದಾಂಪತ್ಯ ಜೀವನದಲ್ಲಿ ಮುನ್ನೆಡೆಯಲು ಬೇಕಿರುವುದು ಬಾಹ್ಯ ಸೌಂದರ್ಯವಲ್ಲ, ಆಂತರಿಕ ಸೌಂದರ್ಯ ಎನ್ನುವುದನ್ನು ಈ ನವಜೋಡಿ ಸಾಕ್ಷಿಕರಿಸಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಕುಬ್ಜ ಯುವಕ ಹಾಗೂ ಅಂದಾಜು ಐದೂವರೆ ಅಡಿ ಎತ್ತರದ ಯುವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗ್ರಾಮದ ಬಡಕುಟುಂಬ, ಪಾನ್ ಶಾಪ್ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಶಾಂತವ್ವ ಕುಂಬಾರ ಅವರ ಪುತ್ರ ಬಸವರಾಜ ಸಹ ಪಾನ್ ಶಾಪ್ ಇಟ್ಟುಕೊಂಡಿದ್ದಾನೆ. ಬಸವರಾಜ ಅವರು ವಯಸ್ಸಿಗೆ ತಕ್ಕಂತೆ ದೈಹಿಕವಾಗಿ ಬೆಳವಣಿಗೆ ಆಗಿಲ್ಲ. ಕುಬ್ಜ ದೇಹ ಹೊಂದಿದ್ದು, ಅಂದಾಜು ಮೂರು ಫೂಟ್ ಎತ್ತರ ಇದ್ದಾರೆ. 28 ವಯಸ್ಸಿನ ಮಗನಿಗೆ ಮದುವೆ ಮಾಡಲು ತಾಯಿ ಶಾಂತವ್ವ ಅವರು ಕಳೆದ ಐದು ವರ್ಷಗಳಿಂದ ಕನ್ಯೆ ಹುಡುಕುತ್ತಿದ್ದರು. ಅದೇಕೋ ಏನೋ ಹುಡುಗಿ ಫಿಕ್ಸ್ ಆಗಿರಲಿಲ್ಲ. ಆದರೆ, ಬಸವರಾಜ ಕೈಹಿಡಿಯಲು ರುಕ್ಷ್ಮಿಣಿ ಕುಂಬಾರ ಒಪ್ಪಿ, ಹಸೆಮಣೆ ಏರಿದ್ದಾರೆ. ಇನ್ನು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಸವರಾಜಗೆ ಇದು ಎಲ್ಲಿಲ್ಲದ ಸಂಭ್ರಮ. ನಾವಿಬ್ಬರೂ ಒಪ್ಪಿ ಮದುವೆ ಆಗಿದ್ದೇವೆ. ಜೀವನ ಪೂರ್ತಿ ರುಕ್ಷ್ಮಿಣಿ ಜೊತೆ ಉತ್ತಮ ದಾಂಪತ್ಯ ಜೀವನ ನಡೆಸುವುದಾಗಿ ಬಸವರಾಜ ಹೇಳಿದರೆ, ಮಗನ ಮದುವೆ ಕಂಡು ತಾಯಿ ಶಾಂತವ್ವಗೂ ಅತೀವ ಸಂತಸವಾಗಿದೆ. ತನ್ನ ಜೀವ ಇರುವವರೆಗೂ ಮಗ ಹಾಗೂ ಸೊಸೆಯನ್ನು ಚೆನ್ನಾಗಿ ನೋಡಿಕೊಂಡು ಹೋಗ್ತೇನೆ ಎಂದು ಭಾವುಕರಾದರು.

ಅಪರೂಪದ ಮದುವೆಗೆ ಸಾಕ್ಷಿಯಾದ ಜನ

ಆಮಂತ್ರಣ ಇಲ್ಲದಿದ್ದರೂ ಮದುವೆಗೆ ಬಂದು ಹರಸಿದ ಜನ
ಇನ್ನು ಬಾದಾಮಿ ತಾಲೂಕಿನ ನೀಲಗುಂದ ಗ್ರಾಮದ 28 ವಯಸ್ಸಿನ ಯುವಕ ಬಸವರಾಜ ಕೈಹಿಡಿದ ರುಕ್ಷ್ಮಿಣಿ ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಗಣಿ ಗ್ರಾಮದವಳು. ಬಂಗಾರೆವ್ವ-ಮಲ್ಲಪ್ಪ ಕುಂಬಾರ ದಂಪತಿಯ ಪುತ್ರಿ. ಎರಡು ಕುಟುಂಬಗಳು ಒಪ್ಪಿ ಈ ಮದುವೆ ಫಿಕ್ಸ್ ಮಾಡಿದ್ದರು. ಇನ್ನು ರುಕ್ಷ್ಮಿಣಿಗೆ ಒಂದು ಕಣ್ಣಿನ ದೋಷ ಇದೆ. ಆದರೆ, ಬಸವರಾಜ ಮತ್ತು ರುಕ್ಷ್ಮಿಣಿ ಇಬ್ಬರು ಬಾಹ್ಯ ಸೌಂದರ್ಯಕ್ಕೆ ಜೋತು ಬೀಳದೆ ಆಂತರಿಕ ಸೌಂದರ್ಯ ಮೆಚ್ಚಿ ಪರಸ್ಪರ ಕೂಡಿ ಬಾಳಲು ನಿರ್ಧರಿಸಿದ್ದಾರೆ. ಇದಕ್ಕೆ ಎರಡು ಕುಟುಂಬಗಳು ಒಪ್ಪಿದ್ದು, ಎರಡು ಕಡೆಯ ಹಿರಿಯರು, ಆಪ್ತರು, ಸ್ನೇಹಿತ ವರ್ಗ ತುಂಬು ಮನಸ್ಸಿನಿಂದ ಹಾರೈಸಿದೆ. ವಿಶೇಷ ಅಂದ್ರೆ ಈ ಮದುವೆಗೆ ಎರಡು ಕುಟುಂಬಗಳು ಆಮಂತ್ರಣ ನೀಡಿದ್ದ ಜನರಿಗಿಂತಲೂ ಆಮಂತ್ರಣ ಇಲ್ಲದ ನೂರಾರು ಜನರು ಸಾಕ್ಷಿಯಾದರು.

“ಮದುವೆ ದೇವರೇ ಮೊದಲು ನಿಶ್ಚಯ ಮಾಡಿರುತ್ತಾರೆ. ನಾವು ಏನೆ ಮಾಡಿದರೂ ಅಂತವರ ಜೊತೆಗೆ ನಮ‌್ಮ ಮದುವೆ ಆಗಬೇಕೆಂದು ತೀರ್ಮಾನ ಆಗಿರುತ್ತದೆ. ಈ‌ ಜೋಡಿ ದೇವರು ಜೋಡಿಸಿದ ಜೋಡಿ ಇವರಿಗೆ ಒಳ್ಳೆಯದಾಗಲಿ” ಎಂದು ಬಸವರಾಜ ಸ್ನೇಹಿತ ಶಿವಕುಮಾರ ಹರಸಿದರು.

ಒಟ್ಟಾರೆ, ನೀಲಗುಂದ ಗ್ರಾಮದಲ್ಲಿ ಕುಬ್ಜ ಯುವಕ, ಒಂದು ಕಣ್ಣಿನ ದೋಷ ಇರುವ ಯುವತಿ ಪರಸ್ಪರ ಕೈಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಹ್ಯಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಶ್ರೇಷ್ಠ ಎಂದು ಭಾವಿಸಿ ಹಸೆಮಣೆ ಏರಿರುವ ಈ ಬಡಕುಟುಂಬದ ಜೋಡಿಯ ದಾಂಪತ್ಯ ಜೀವನ ಸುಖ ಸಂತೋಷದಿಂದ ಸಾಗಲಿ ಎನ್ನುವುದು ಎಲ್ಲರ ಆಶಯ.

ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ

ಇದನ್ನೂ ಓದಿ: ಹೊಸ ಪಿಂಚಣಿ ಯೋಜನೆಯನ್ನು ಯೋಜಿಸಿದೆ EPFO

Suryakumar Yadav: ಸ್ಫೋಟಕ ಅರ್ಧಶತಕ ಸಿಡಿಸಿದ ವೇಳೆ ವಿಚಿತ್ರವಾಗಿ ಸೆಲೆಬ್ರೇಷನ್ ಮಾಡಿದ ಸೂರ್ಯಕುಮಾರ್ ಯಾದವ್

Published On - 11:14 am, Mon, 21 February 22