ಪದವೀಧರನಿಂದ ಕೃಷಿಯಲ್ಲಿ ಕ್ರಾಂತಿ; ಕೈ ಕೊಡುತ್ತಿದ್ದ ವಿದ್ಯುತ್​ಗೆ ಪರ್ಯಾಯವಾಗಿ ಸೌರಶಕ್ತಿಯ ಮೊರೆ

ಕರೆಂಟ್ ಮೇಲೆ ಅವಲಂಭಿತರಾಗದೆ ಸೊಲಾರ್ ಬಳಕೆ ಕಡೆ ರೈತರು ಮುಂದಾಗಬೇಕು. ಸೊಲಾರ್ ನಿರ್ವಹಣೆ ಕೂಡ ಕಡಿಮೆ ಒಂದು ಸಾರಿ ಅಳವಡಿಸಿದರೆ 30 ವರ್ಷ ಸೊಲಾರ್ ಬಳಸಬಹುದು ಎಂದು ರೈತ ಆನಂದ ಮೊಕಾಶಿ ಅಭಿಪ್ರಾಯಪಟ್ಟಿದ್ದಾರೆ.

ಪದವೀಧರನಿಂದ ಕೃಷಿಯಲ್ಲಿ ಕ್ರಾಂತಿ; ಕೈ ಕೊಡುತ್ತಿದ್ದ ವಿದ್ಯುತ್​ಗೆ ಪರ್ಯಾಯವಾಗಿ ಸೌರಶಕ್ತಿಯ ಮೊರೆ
ಆನಂದ ಮೊಕಾಶಿ
Follow us
TV9 Web
| Updated By: preethi shettigar

Updated on: Mar 16, 2022 | 3:21 PM

ಬಾಗಲಕೋಟೆ: ಆತ ಓರ್ವ ಪದವೀಧರ ರೈತ, ಯಾವುದೇ ಸರಕಾರಿ, ಖಾಸಗಿ ಕೆಲಸದ ಹಿಂದೆ ಓಡದೆ ಕೃಷಿ(Agriculture) ನಂಬಿ ಬದುಕು ಕಟ್ಟಿಕೊಂಡವರು. ಆದರೆ ಆತನಿಗೆ ನೀರಾವರಿ ಮಾಡೋದಕ್ಕೆ ಪದೇ ಪದೇ ಕರೆಂಟ್(current) ಕೈ ಕೊಡುತ್ತಿತ್ತು. ಇದಕ್ಕಾಗಿ ಆತ ಕಂಡುಕೊಂಡಿದ್ದು, ಸೂರ್ಯಶಕ್ತಿಯನ್ನು(Solar power). ಹಾಗಾದರೆ  ಆತ ಮಾಡಿದ್ದು ಏನು?ಆತನ ಕೃಷಿ ಹೇಗಿದೆ ಎಂಬ ಪ್ರಶ್ನೆಗೆ ಉತ್ತರ ಈ ವರದಿಯಲ್ಲಿದೆ ನೋಡಿ.

ರೈತರಿಗೆ ಕೃಷಿ ಮಾಡೋದಕ್ಕೆ ನೀರಾವರಿಗೆ ವಿದ್ಯುತ್​ ಬಹಳ ಮುಖ್ಯ. ಆದರೆ ವಿದ್ಯುತ್ ಕಣ್ಣುಮುಚ್ಚಾಲೆಯಿಂದ ರೈತರಿಗೆ ಸಮಯಕ್ಕೆ ಸರಿಯಾಗಿ ನೀರು ಹರಿಸಲು ಆಗೋದಿಲ್ಲ. ಇದರಿಂದ ಆನಂದ ಮೊಕಾಶಿ ಎಂಬ ಈ ರೈತ ಮೊರೆ ಹೋಗಿದ್ದು, ಸೊಲಾರ್ ಶಕ್ತಿ ಕಡೆಗೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಾಡಗಿ ಗ್ರಾಮದ ಆನಂದ ಒಟ್ಟು 20 ಎಕರೆ ಆಸ್ತಿ ಹೊಂದಿದ್ದಾರೆ. ಆದರೆ ಗ್ರಾಮದಲ್ಲಿ ಮೇಲಿಂದ ಮೇಲೆ ವಿದ್ಯುತ್​ ಕೈ ಕೊಡುತ್ತಿತ್ತು. ಈ ಕರೆಂಟ್ ಕಿರಿಕಿರಿಗೆ ಏನು ಮಾಡೋದು ಅಂತ ವಿಚಾರಿಸಿದಾಗ ಆನಂದ ಅವರಿಗೆ ಹೊಳೆದದ್ದು ಸೌರಶಕ್ತಿ. ಕೂಡಲೆ ಸೊಲಾರ್ ಬಗ್ಗೆ ಮಾಹಿತಿ ಪಡೆದ ಆನಂದ ಮೊಕಾಶಿ, ತಮ್ಮ ಹೊಲದಲ್ಲಿ ಹತ್ತು ಹೆಚ್​ಪಿ ಮೋಟರ್ ಸಾಮರ್ಥ್ಯದ ಸೌರಶಕ್ತಿ ಘಟಕ ಅಳವಡಿಸಿ ಕೃಷಿಯಲ್ಲಿ ಸೌರಶಕ್ತಿ ಬಳಸಿ ಯಶಸ್ಸು ಕಂಡಿದ್ದಾರೆ.

ಆನಂದ ಮೊಕಾಶಿ ಓರ್ವ ಬಿಕಾಮ್ ಪದವೀಧರನಾಗಿದ್ದು, ಯಾವುದೇ ಕೆಲಸ ಅರಸಿ ಹೋಗದೆ ಕೃಷಿಕರಾಗಿದ್ದಾರೆ. ಸ್ವಾವಲಂಬಿ ಬದುಕು ಕಂಡುಕೊಂಡ ಆನಂದ ಮೊಕಾಶಿ ಕೃಷಿಯಲ್ಲಿ ವಿಭಿನ್ನ ಪ್ರಯತ್ನ, ಪ್ರಯೋಗ ನಡೆಸುತ್ತಾ ಮಾದರಿಯಾಗಿದ್ದಾರೆ‌. ಸದ್ಯ ಹೊಲದಲ್ಲಿ ಹತ್ತು ಹೆಚ್​ಪಿ ಮೋಟರ್ ಸಾಮರ್ಥ್ಯದ ಸೊಲಾರ್ ಘಟಕ ಅಳವಡಿಸಿದ್ದು, ಘಟಕಕ್ಕೆ ಒಟ್ಟು ಎರಡು ಲಕ್ಷ ಖರ್ಚು ಮಾಡಿದ್ದಾರೆ‌. ಇದರಿಂದ ನಿತ್ಯ ನಾಲ್ಕರಿಂದ ಐದು ಎಕರೆಗೆ ನೀರು ಹರಿಸಬಹುದಾಗಿದೆ.

solar

ಸೊಲಾರ್ ಕೃಷಿ

ಸೊಲಾರ್ ಮೂಲಕ ಹೊಲದಲ್ಲಿ ಬೆಳೆದ ನಾಲ್ಕು ಎಕರೆ ಕಲ್ಲಂಗಡಿ, ಬದನೆಗೆ ನೀರುಣಿಸುತ್ತಾರೆ. ಕಲ್ಲಂಗಡಿ, ಬದನೆ ಮೂಲಕ ಇವರು ನಾಲ್ಕು ಎಕರೆಯಲ್ಲಿ ವರ್ಷಕ್ಕೆ ಖರ್ಚು ವೆಚ್ಚ ತೆಗೆದು ಆರು ಲಕ್ಷ ಆದಾಯ ಪಡೆಯುತ್ತಿದ್ದಾರೆ. ಆನಂದ ಮೊಕಾಶಿ ಅವರ ಸೊಲಾರ್ ಕೃಷಿ ಎಲ್ಲ ರೈತರನ್ನು ಸೆಳೆಯುತ್ತಿದ್ದು, ಆನಂದ ಅವರ ಪ್ರಯತ್ನ, ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕರೆಂಟ್ ಮೇಲೆ ಅವಲಂಭಿತರಾಗದೆ ಸೊಲಾರ್ ಬಳಕೆ ಕಡೆ ರೈತರು ಮುಂದಾಗಬೇಕು. ಸೊಲಾರ್ ನಿರ್ವಹಣೆ ಕೂಡ ಕಡಿಮೆ ಒಂದು ಸಾರಿ ಅಳವಡಿಸಿದರೆ 30 ವರ್ಷ ಸೊಲಾರ್ ಬಳಸಬಹುದು ಎಂದು ರೈತ ಆನಂದ ಮೊಕಾಶಿ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ ಕೃಷಿಯಲ್ಲಿ ಕೇವಲ ಒಂದೇ ದಾರಿಗೆ ಜೋತು ಬೀಳದೆ, ವಿಭಿನ್ನ ಹಾದಿ ಹಿಡಿಯೋದು ಯಶಸ್ಸಿಗೆ ದಾರಿ ಎಂದು ಹೇಳುತ್ತಾರೆ. ಅದೇ ರೀತಿ ಕೃಷಿಯಲ್ಲಿ ಸೊಲಾರ್ ಮೂಲಕ ಈ ರೈತ ಯಶಸ್ಸಿನ ಹಾದಿ ಹಿಡಿದಿದ್ದು ಇತರರಿಗೆ ಸ್ಪೂರ್ತಿಯಾಗಿದ್ದಾರೆ.

ವರದಿ: ರವಿ ಮೂಕಿ

ಇದನ್ನೂ ಓದಿ: ಶಾಂತವೇರಿ ಗೋಪಾಲಗೌಡರ ಹೆಸರಿನಲ್ಲಿ ಶ್ರೇಷ್ಠ ಕೃಷಿಕ, ಶ್ರೇಷ್ಠ ಶಾಸಕ ಎಂಬ ಎರಡು ಪ್ರಶಸ್ತಿ ಘೋಷಿಸಿದ ಸಿಎಂ ಬೊಮ್ಮಾಯಿ

ಕೃಷಿ ಪಂಪ್​ಸೆಟ್​ಗಳಿಗೆ ಹಗಲು 7 ತಾಸು ನಿರಂತರ ತ್ರಿಫೇಸ್​ ವಿದ್ಯುತ್ ನೀಡಲು ಇಂಧನ ಸಚಿವ ಸೂಚನೆ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು