ಐತಿಹಾಸಿಕ ನಾಡು ಬಾಗಲಕೋಟೆ ಜಿಲ್ಲೆಗೆ ವ್ಯಾಪಿಸಿದ ಸೆಂಗೋಲ್​ ನಂಟು: ವಿರುಪಾಕ್ಷ ದೇವಾಲಯದಲ್ಲಿ ರಾಜದಂಡ ಕಲಾಕೃತಿ

ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿರುವ ರಾಜದಂಡ (ಸೆಂಗೋಲ್) ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಆದರೆ ಇದೆಲ್ಲದ್ರ ಮಧ್ಯೆ ಈ ಸೆಂಗೋಲ್ ನಂಟು ಬಾಗಲಕೋಟೆ ಜಿಲ್ಲೆಗೆ ವ್ಯಾಪಿಸಿದೆ.

ಐತಿಹಾಸಿಕ ನಾಡು ಬಾಗಲಕೋಟೆ ಜಿಲ್ಲೆಗೆ ವ್ಯಾಪಿಸಿದ ಸೆಂಗೋಲ್​ ನಂಟು: ವಿರುಪಾಕ್ಷ ದೇವಾಲಯದಲ್ಲಿ ರಾಜದಂಡ ಕಲಾಕೃತಿ
ಸೆಂಗೋಲ್, ಸೆಂಗೋಲ್ ಪ್ರತಿರೂಪದ ಕಲಾಕೃತಿ
Follow us
ಗಂಗಾಧರ​ ಬ. ಸಾಬೋಜಿ
|

Updated on:May 27, 2023 | 8:07 PM

ಬಾಗಲಕೋಟೆ: ನೂತನ ಸಂಸತ್ ಭವನ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಸದ್ಯ ಸಂಸತ್ ಭವನದ ಆಕರ್ಷಣಾ ಕೇಂದ್ರ ಬಿಂದುವಾಗಿರುವ (ರಾಜದಂಡ) ಸೆಂಗೋಲ್ (Sengol) ಪ್ರತಿಷ್ಠಾಪನೆ ಇಡೀ ದೇಶದ ಗಮನ ಸೆಳೆದಿದೆ. ಹಾಗೆಯೇ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ವಿಶೇಷ ಅಂದ್ರೆ, ಸೆಂಗೋಲ್ ಪ್ರತಿರೂಪ ಒಂದು ಬಾಗಲಕೋಟೆ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವುದು ಮತ್ತಷ್ಟು ಆಸಕ್ತಿ ಜೊತೆಗೆ ಅಚ್ಚರಿ ಮೂಡಿಸಿದೆ. ಹಾಗಿದ್ರೆ (ರಾಜದಂಡ) ಸೆಂಗೋಲ್ ಎಂದರೇನು? ಬಾಗಲಕೋಟೆ ಜಿಲ್ಲೆಗೂ ಅದಕ್ಕೂ ಏನು ಸಂಬಂಧ ಈ ಒಂದು ವರದಿಯಲ್ಲಿದೆ.

ಐತಿಹಾಸಿಕ ತಾಣ, ವಿಶ್ವಪಾರಂಪರಿಕ ತಾಣಗಳಲ್ಲಿ ಒಂದಾದ ಪಟ್ಟದಕಲ್ಲು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ ಉಚ್ರಾಯ ಸ್ಥಿತಿಯಲ್ಲಿತ್ತು ಎಂಬುದಕ್ಕೆ ಇಲ್ಲಿ ಕೆತ್ತನೆಯಾದ ಕಲಾಕೃತಿಗಳೇ ಸಾಕ್ಷಿ. 7ನೇ ಶತಮಾನದಲ್ಲಿ ನಿರ್ಮಾಣವಾದ ಕಲಾಕೃತಿಗಳಲ್ಲಿ ಒಂದಾದ ಒಂದು‌ ಕಲಾಕೃತಿ ಸದ್ಯ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಪುಸ್ತಕ, ಕಡತಗಳನ್ನು ತಡಕಾಡಿ ಸೆಂಗೋಲ್​​ ವಿವರಗಳನ್ನು ಪತ್ತೆ ಹಚ್ಚಲು ಮೋದಿ ಸರ್ಕಾರ ತೆಗೆದುಕೊಂಡಿದ್ದು 2 ವರ್ಷಗಳು!

28ರಂದು ದೆಹಲಿಯಲ್ಲಿ ಪ್ರಧಾನಿ ಮೋದಿಯವರಿಂದ ನೂತನ ಸಂಸತ್ ಭವನ ಉದ್ಘಾಟನೆ ಗೊಳ್ಳಲಿದೆ. ಈ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿರುವ ರಾಜದಂಡ (ಸೆಂಗೋಲ್) ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಆದರೆ ಇದೆಲ್ಲದ್ರ ಮಧ್ಯೆ ಈ ಸೆಂಗೋಲ್ ನಂಟು ಬಾಗಲಕೋಟೆ ಜಿಲ್ಲೆಗೆ ವ್ಯಾಪಿಸಿದೆ.

ಬಾದಾಮಿ ತಾಲೂಕಿನ ಪಟ್ಟದಕಲ್ಲು ಗ್ರಾಮದ ವಿರುಪಾಕ್ಷ ದೇವಾಲಯದ ಬಲ ಗೋಡೆಯ ಮೇಲೆ ಇದೇ (ರಾಜದಂಡ) ಸೆಂಗೋಲ್ ಪ್ರತಿರೂಪದ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ನೋಡೋದಕ್ಕೆ ಇದೀಗ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಹರಿದು ಬರುತ್ತಿದ್ದು, ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

ವಿರೂಪಾಕ್ಷ ದೇವಾಲಯದ ಬಲ ಗೋಡೆಯ ಮೇಲೆ ಕಲಾವಿದ ಕೆತ್ತಲ್ಪಟ್ಟ ಶಿವನ ಎಡಗೈಯಲ್ಲಿನ(ರಾಜದಂಡ) ಸೆಂಗೋಲ್​ಗೆ ಸಾಮ್ಯತೆ ಹೊಂದಿದೆ. ಕಲಾಕೃತಿಯಲ್ಲಿ ನಾಟ್ಯರೂಪದ ಚತುರ್ಭುಜದ ಶಿವನ ಎಡಗೈನಲ್ಲಿ ಸೆಂಗೋಲ್ ಕಾಣಬಹುದು.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಸೆಂಗೋಲ್​​ನ್ನು ವಾಕಿಂಗ್ ಸ್ಟಿಕ್​​ನಂತೆ ಪರಿಗಣಿಸಿದೆ: ಅಮಿತ್ ಶಾ

ಸೆಂಗೋಲ್ ಮೇಲೆ ನಂದಿಯ ಕೆತ್ತನೆಯಿದೆ. ಅಜ್ಞಾನದ ಸಂಕೇತವಾಗಿರುವ ಅಪಸ್ಮಾರ ಮೂರ್ತಿಯನ್ನ ನಾಶಪಡಿಸಿ, ದುಷ್ಟಶಕ್ತಿಯನ್ನ ಕಾಲಿನಿಂದ ನಿರ್ನಾಮ ಮಾಡುವ ರೂಪದಲ್ಲಿ ಶಿವನ ಮೂರ್ತಿಯ ಕಲಾಕೃತಿ ಕೆತ್ತನೆಯಾಗಿದೆ. ಚಾಲುಕ್ಯರಸ ಎರಡನೇ ವಿಕ್ರಮಾದಿತ್ಯನ ಕಾಲದಲ್ಲಿ ಕಟ್ಟಿಸಲಾಗಿದೆ. ಕಂಚಿಯ ಪಲ್ಲವರ ಜೊತೆ ಯುದ್ದ ಗೆದ್ದ ನೆನಪಿಗಾಗಿ 2ನೇ ವಿಕ್ರಮಾದಿತ್ಯನ ಮಹಾರಾಣಿ ಲೋಕಮಹಾದೇವಿ ಈ ವಿರುಪಾಕ್ಷ ದೇವಾಲಯ ಕಟ್ಟಿಸಿದ್ದು, ದೇವಾಲಯದಲ್ಲಿ ಈ ಕಲಾಕೃತಿ ಕಂಡು ಬಂದಿದೆ. ಈ ಒಂದು ರಾಜದಂಡಕ್ಕೆ ನಂದಿಧ್ವಜ ಅಂತಲೂ ಕರೆಯುತ್ತಾರೆ. ಸೆಂಗೋಲ್ 7ನೇ ಶತಮಾನದಲ್ಲಿ ಚಾಲನೆಯಲ್ಲಿತ್ತು ಅನ್ನೋದಕ್ಕೆ ಇದು ಸಾಕ್ಷಿಯಾಗಿದೆ.

ಸಂಸತ್ ನೂತನ ಭವನದ ರಾಜದಂಡ ಈಗ ಎಲ್ಲೆಡೆ ಸದ್ದು ಮಾಡುತ್ತಿದ್ದು, ಅದರ ರೂಪ ಚಾಲುಕ್ಯರ ರಾಜದಂಡಕ್ಕೆ ಸಾಮ್ಯತೆಯಿದ್ದು ಸ್ಥಳೀಯರಿಗೆ ಹೆಮ್ಮೆಯ ಗರಿ ಮೂಡಿದೆ.

ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:06 pm, Sat, 27 May 23

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ