ಪುಸ್ತಕ, ಕಡತಗಳನ್ನು ತಡಕಾಡಿ ಸೆಂಗೋಲ್ ವಿವರಗಳನ್ನು ಪತ್ತೆ ಹಚ್ಚಲು ಮೋದಿ ಸರ್ಕಾರ ತೆಗೆದುಕೊಂಡಿದ್ದು 2 ವರ್ಷಗಳು!
1947 ರ ಆಗಸ್ಟ್ 25 ರಂದು ಟೈಮ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನವು ಟರ್ನಿಂಗ್ ಪಾಯಿಂಟ್ ಆಗಿತ್ತು. ಇದು ತನ್ನ 'ವಿದೇಶಿ ಸುದ್ದಿ' ವಿಭಾಗದಲ್ಲಿ ಸೆಂಗೋಲ್ ಆಚರಣೆಯ ವಿವರವಾದ ವರದಿ ಪ್ರಕಟಿಸಿತ್ತು.
ಸೆಂಗೋಲ್ನ (Sengol) ಮಹತ್ವ ಮತ್ತು ‘ಸೆಂಗೋಲ್ ಹಸ್ತಾಂತರ ಸಮಾರಂಭದ’ ಸತ್ಯಾಸತ್ಯತೆಯನ್ನು ಸ್ಥಾಪಿಸಲು, ಟೈಮ್ ನಿಯತಕಾಲಿಕೆ (Time magazine) ಸೇರಿದಂತೆ 1947 ರ ಹಿಂದಿನ ಅಧಿಕೃತ ದಾಖಲೆಗಳು ಮತ್ತು ಮಾಧ್ಯಮ ಲೇಖನಗಳನ್ನು ನೋಡುವುದಕ್ಕೆ ನರೇಂದ್ರ ಮೋದಿ ಸರ್ಕಾರವು (Modi Government) ಬರೋಬ್ಬರಿ ಎರಡು ವರ್ಷ ತೆಗೆದುಕೊಂಡಿತು. ಆಗಸ್ಟ್ 14, 1947 ರ ರಾತ್ರಿ ಭಾರತಕ್ಕೆ ಅಧಿಕಾರದ ವರ್ಗಾವಣೆ ಮಾಡುವ ಸಂಕೇತವಾಗಿ ಸೆಂಗೋಲ್ ಹಸ್ತಾಂತರವಾಗಿತ್ತು ಎಂದು ಹೇಳಲಾಗುತ್ತಿದೆ.
2021 ರ ಮೇ 5 ರಂದು ತುಗ್ಲಕ್ ನಿಯತಕಾಲಿಕೆಯಲ್ಲಿ ಎಸ್ ಗುರುಮೂರ್ತಿ ಅವರು ಬರೆದ ಲೇಖನ ಸೆಂಗೋಲ್ ಬಗ್ಗೆ ಹೆಚ್ಚು ಕುತೂಹಲ ಹುಟ್ಟುವಂತೆ ಮಾಡಿದ್ದು. ಸೆಂಗೋಲ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ತಮಿಳು ಮಠಾಧೀಶರು ನೀಡಿದ ಸ್ವಾತಂತ್ರ್ಯದ ಸಂಕೇತವಾಗಿದೆ ಎಂದು ಈ ಲೇಖನದಲ್ಲಿದೆ. ಕೆಲವೇ ದಿನಗಳಲ್ಲಿ, ಖ್ಯಾತ ಶಾಸ್ತ್ರೀಯ ನೃತ್ಯಗಾರ್ತಿ ಡಾ ಪದ್ಮಾ ಸುಬ್ರಹ್ಮಣ್ಯಂ ಅವರು ಲೇಖನದ ಇಂಗ್ಲಿಷ್-ಅನುವಾದ ಆವೃತ್ತಿಯನ್ನು ಪ್ರಧಾನ ಮಂತ್ರಿ ಕಚೇರಿಗೆ ಕಳುಹಿಸಿದರು. ಸೆಂಗೊಲ್ ಪ್ರದಾನ ಮಾಡುವ, ಪವಿತ್ರ ಮತ್ತು ಐತಿಹಾಸಿಕ ಸಮಾರಂಭವನ್ನು ಸಾರ್ವಜನಿಕರಿಂದ ಮತ್ತು ಇತಿಹಾಸದಿಂದ ದೂರವಿಡಲಾಗಿದೆ. ಮೋದಿ ಸರ್ಕಾರವು 2021 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಇದನ್ನು ಸಾರ್ವಜನಿಕಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದರು.
ಎರಡು ವರ್ಷಗಳ ಹುಡುಕಾಟ ಪ್ರಕ್ರಿಯೆ
ಇದು ಸೆಂಗೋಲ್ ನ ಮಹತ್ವವನ್ನು ಸ್ಥಾಪಿಸಲು ಹಳೆಯ ದಾಖಲೆಗಳು ಮತ್ತು ಮಾಧ್ಯಮ ವರದಿಗಳನ್ನು ಕೆದಕಲು ಪ್ರಧಾನಿ ಕಚೇರಿ ಮತ್ತು ಸಂಸ್ಕೃತಿ ಸಚಿವಾಲಯವನ್ನು ಪ್ರೇರೇಪಿಸಿತು. ಅಧಿಕಾರಿಗಳು ಪತ್ರಿಕೆಗಳು, ಗೌರವಾನ್ವಿತ ಲೇಖಕರ ಪುಸ್ತಕಗಳಿಂದ ವಿವರಗಳನ್ನು ಪಡೆದರು. ನೆಹರು ಅವರ ನಿವಾಸದಲ್ಲಿ ಸೆಂಗೋಲ್ ಪ್ರದಾನ ಮಾಡಿರುವ ಬಗ್ಗೆ ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಪರಿಶೀಲಿಸಿದರು. ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಅಧ್ಯಕ್ಷರಾದ ನೃಪೇಂದ್ರ ಮಿಶ್ರಾ ಅವರಿಗೆ ಈ ಸಮಾರಂಭದ ಕೆಲವು ಉಲ್ಲೇಖಗಳು ಅಥವಾ ಛಾಯಾಚಿತ್ರಗಳು ನೆಹರು ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿರುವ ನೆಹರು ಅವರ ಖಾಸಗಿ ಪತ್ರಿಕೆಗಳಲ್ಲಿ ಲಭ್ಯವಿದೆಯೇ ಎಂದು ಪರಿಶೀಲಿಸಲು ವಿನಂತಿಸಲಾಯಿತು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಸೆಂಗೋಲ್ನ್ನು ವಾಕಿಂಗ್ ಸ್ಟಿಕ್ನಂತೆ ಪರಿಗಣಿಸಿದೆ: ಅಮಿತ್ ಶಾ
ಏತನ್ಮಧ್ಯೆ, 1947 ರ ಆಗಸ್ಟ್ 25 ರಂದು ಟೈಮ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನವು ಟರ್ನಿಂಗ್ ಪಾಯಿಂಟ್ ಆಗಿತ್ತು. ಇದು ತನ್ನ ‘ವಿದೇಶಿ ಸುದ್ದಿ’ ವಿಭಾಗದಲ್ಲಿ ಸೆಂಗೋಲ್ ಆಚರಣೆಯ ವಿವರವಾದ ವರದಿ ಪ್ರಕಟಿಸಿತ್ತು. ನೃಪೇಂದ್ರ ಮಿಶ್ರಾ ಅವರು ಏಪ್ರಿಲ್ 26, 2022 ರಂದು ಬರೆದ ಪತ್ರದಲ್ಲಿ, ಪೆರ್ರಿ ಆಂಡರ್ಸನ್ ಅವರು ಬರೆದ ದಿ ಇಂಡಿಯನ್ ಎಲ್ಡಿಯಾಲಜಿ ಎಂಬ ಪುಸ್ತಕದ ವಿವರಗಳನ್ನು ಸರ್ಕಾರಕ್ಕೆ ನೀಡಿದರು.ಜೊತೆಗೆ ತೈ ಯೋಂಗ್ ತಾನ್ ಮತ್ತು ಜ್ಞಾನೇಶ್ ಕುಡೈಸ್ಯಾ ಅವರು ದಿ ಆಫ್ಟರ್‌ಮಾತ್ ಆಫ್ ಪಾರ್ಟಿಶನ್ ಇನ್ ಸೌತ್ ಏಷ್ಯಾ ಎಂಬ ಶೀರ್ಷಿಕೆಯ ಇನ್ನೊಂದು ಪುಸ್ತಕವನ್ನು ಉಲ್ಲೇಖಿಸಿದ್ದಾರೆ.
1950 ರ ಡಿಎಫ್ ಕರಾಕಾ ಅವರ ಪುಸ್ತಕವನ್ನು ಸರ್ಕಾರವು ಕಂಡುಹಿಡಿದಿದೆ, ಇದು ಅಧಿಕಾರ ನಡೆಸುತ್ತಿದ್ದವರಿಂದ ಅಧಿಕಾರವನ್ನು ಪಡೆಯುವ ಸಾಂಪ್ರದಾಯಿಕ ಭಾರತೀಯ ವಿಧಾನದ ಸಂಕೇತವಾಗಿ ‘ಸೆಂಗೊಲ್’ ಅನ್ನು ತಂಜೂರಿನ ಪುರೋಹಿತರು ಹಸ್ತಾಂತರಿಸಿದ್ದಾರೆ ಎಂದು ದೃಢಪಡಿಸಿದರು.
ಸಮಾರಂಭಕ್ಕೆ ಸಂಬಂಧಿಸಿದಂತೆ ಸರ್ಕಾರವು ಕಂಡುಕೊಂಡ ಇತರ ಪುರಾವೆಗಳೆಂದರೆ ಡಿಸೆಂಬರ್ 1955 ರ ದಿನಾಂಕದ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹ, ಡೊಮಿನಿಕ್ ಲ್ಯಾಪಿಯರ್ ಮತ್ತು ಲ್ಯಾರಿ ಕಾಲಿನ್ಸ್ ಅವರ ಫ್ರೀಡಮ್ ಅಟ್ ಮಿಡ್ನೈಟ್ ಪುಸ್ತಕ ಮತ್ತು ಯಾಸ್ಮಿನ್ ಖಾನ್ ಅವರ ಪುಸ್ತಕ ಗ್ರೇಟ್ ಪಾರ್ಟಿಶನ್: ದಿ ಮೇಕಿಂಗ್ ಆಫ್ ಇಂಡಿಯಾ ಅಂಡ್ ಪಾಕಿಸ್ತಾನ.
ಇದನ್ನೂ ಓದಿ: ಸೆಂಗೋಲ್ ಇತಿಹಾಸ ಬೋಗಸ್ ಎಂದು ಹೇಳುವುದು, ನಮ್ಮ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವುದು ದುರದೃಷ್ಟಕರ: ತಿರುವವಡುತುರೈ ಅಧೀನಂ
1947 ರ ವಿವಿಧ ಮಾಧ್ಯಮ ವರದಿಗಳು ಇದನ್ನು ದೃಢಪಡಿಸಿದವು. ಡಿಎಂಕೆ ಸರ್ಕಾರವು ಪ್ರಕಟಿಸಿದ 2021-22ರ ಹಿಂದೂ ಧಾರ್ಮಿಕ ಮತ್ತು ದತ್ತಿಗಳ ನೀತಿ ಟಿಪ್ಪಣಿಯು 1947 ರ ‘ಸೆಂಗೋಲ್’ ಸಮಾರಂಭವನ್ನು ಸಹ ವಿವರಿಸಿದೆ. 2021-22ರಲ್ಲಿ ತಮಿಳುನಾಡು ಅಸೆಂಬ್ಲಿಗೆ ಡಿಎಂಕೆ ಸರ್ಕಾರವು ಮಂಡಿಸಿದ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
ಅಲಹಾಬಾದ್ ಮ್ಯೂಸಿಯಂನಲ್ಲಿ ದಶಕಗಳ ಕಾಲ ಅಸ್ಪಷ್ಟ ಸ್ಥಳದಲ್ಲಿ ಸಂರಕ್ಷಿಸಲಾಗಿದ್ದ 77 ವರ್ಷದ ಸೆಂಗೋಲ್ ಅನ್ನು ಸರ್ಕಾರ ಕೊನೆಗೂ ಪತ್ತೆ ಹಚ್ಚಿತು ಇದನ್ನು ಸಂಗ್ರಹಾಲಯದಲ್ಲಿ ನೆಹರು ಅವರ ‘ಗೋಲ್ಡನ್ ವಾಕಿಂಗ್ ಸ್ಟಿಕ್’ ಎಂದು ವರ್ಗೀಕರಿಸಿದೆ. ರಾಜದಂಡ ಅಥವಾ ಸೆಂಗೋಲ್ ಇದೀಗ ದೆಹಲಿಯ ನೂತನ ಸಂಸತ್ ಭವನದಲ್ಲಿ ತನ್ನ ಹೆಮ್ಮೆಯ ಸ್ಥಾನವನ್ನು ಕಂಡುಕೊಳ್ಳಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ