ರಾಷ್ಟ್ರಪತಿಯನ್ನು ಕಾಂಗ್ರೆಸ್ ಯಾವೆಲ್ಲ ರೀತಿಯಲ್ಲಿ ಅವಮಾನಿಸಿದೆ ಎಂಬುದಕ್ಕೆ ಪುರಾವೆ ಸಹಿತ ಟ್ವೀಟ್ ಮಾಡಿದ ಲೆಹರ್ ಸಿಂಗ್
ದ್ರೌಪದಿ ಮುರ್ಮು ಅವರಿಗೆ ಮತ ನೀಡಿದ್ದ ಒಡಿಶಾ ಕಾಂಗ್ರೆಸ್ ಶಾಸಕರಿಗೆ ಪಕ್ಷ ನೋಟಿಸ್ ನೀಡಿತ್ತು. ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಆಕೆ ಆಹ್ವಾನಿಸಿದ್ದ ಉಪಾಹಾರ ಕೂಟಕ್ಕೆ ಹಾಜರಾಗದೆ ಕಾಂಗ್ರೆಸ್ ಆಕೆಯನ್ನು ಅವಮಾನಿಸಿತ್ತು.
ಗೌರವಾನ್ವಿತ ರಾಷ್ಟ್ರಪತಿಗಳಿಗೆ ಬಿಜೆಪಿ (BJP) ಅವಮಾನ ಮಾಡುತ್ತಿದೆ ಎಂದು ಕಾಂಗ್ರೆಸ್ ಹುಸಿ ಕಣ್ಣೀರು ಸುರಿಸುತ್ತಿದೆ. ರಾಷ್ಟ್ರಪತಿ ಚುನಾವಣೆಗೆ (Presidential polls) ಅವರು(ಮುರ್ಮು)ಸ್ಪರ್ಧಿಸಿದಾಗ ಕಾಂಗ್ರೆಸ್ ಏನು ಮಾಡಿತ್ತು ಎಂಬುದರ ಇತಿಹಾಸ ಇಲ್ಲಿದೆ. ಮೊದಲಿಗೆ ಅವರು ಬುಡಕಟ್ಟು ಅಭ್ಯರ್ಥಿಯ ಅದ್ಭುತ ಆಯ್ಕೆಯ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ಲೆಹರ್ ಸಿಂಗ್ ಸಿರೋಯಾ (Lahar Singh Siroya) ಸರಣಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಅವರು ಯಾರನ್ನು ಕಣಕ್ಕಿಳಿಸಿದ್ದು ಗೊತ್ತಾ? ಯಶ್ವಂತ್ ಸಿನ್ಹಾ ಜೀ ಅವರನ್ನು. ಮುರ್ಮು (ಅವರಷ್ಟು) ಶ್ರೇಯಾಂಕ ಹೊಂದಿರುವ ಯಾರೊಬ್ಬರೂ ಅವರಲ್ಲಿ ಇರಲಿಲ್ಲ. ಕಾಂಗ್ರೆಸ್‌ನಲ್ಲಿ ಹೇಗಿದ್ದರೂ ಉನ್ನತ ವ್ಯಕ್ತಿ ಎಂದರೆ ಕುಟುಂಬಕ್ಕೆ ನಿಷ್ಠೆ. ಅವರು ಕುಟುಂಬವನ್ನು ಪ್ರಶ್ನಿಸಿದಾಗ ಅನೇಕ ಹಿರಿಯ ನಾಯಕರು ಕಾಂಗ್ರೆಸ್ ಪಕ್ಷವನ್ನು ತೊರೆಯಬೇಕಾಯಿತು.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಉಂಟು ಮಾಡಿದ ವಿವಾದದ ಬಗ್ಗೆ ಓದಿ. ಅವರನ್ನು ಕಾಂಗ್ರೆಸ್ ವಜಾಗೊಳಿಸಿದೆಯೇ? ಪಕ್ಷ ಅವರಿಗೆ ನೋಟಿಸ್ ನೀಡಿದೆಯೇ ಎಂದು ಟ್ವೀಟ್ ಮಾಡಿದ ಸಿಂಗ್, ಈ ಬಗ್ಗೆ ಎನ್ಡಿಟಿವಿ ಸುದ್ದಿ ಲಿಂಕ್ ಶೇರ್ ಮಾಡಿದ್ದಾರೆ.
The Congress is shedding false tears about BJP insulting the Hon’ble President. Here is a history of what the @INCIndia did & said when she contested the Presidential polls. First they put up a candidate against the brilliant choice of a tribal candidate by @narendramodi ji. 1/11
— Lahar Singh Siroya (@LaharSingh_MP) May 26, 2023
ರಿಪಬ್ಲಿಕ್ ವರ್ಡ್ ಡಾಟ್ ಕಾಮ್ ನಲ್ಲಿ ಪ್ರಕಟವಾದ ಸುದ್ದಿ ಲಿಂಕ್ ಶೇರ್ ಮಾಡಿದ ಸಿಂಗ್, ಕಾಂಗ್ರೆಸ್ ನಾಯಕ ಉದಿತ್ ರಾಜ್ ಏನು ಹೇಳಿದ್ದಾರೆ ಎಂಬುದನ್ನು ಓದಿ. ಯಾವ ದೇಶಕ್ಕೂ ಆಕೆಯಂಥಾ ರಾಷ್ಟ್ರಪತಿ ಸಿಗಬಾರದು ಎಂದಿದ್ದರು ಅವರು. ರಾಷ್ಟ್ರಪತಿ ಮುರ್ಮು ಅವರು ಅಭ್ಯರ್ಥಿಯಾದಾಗ ಅದನ್ನು ಪ್ರಶ್ನಿಸಿ ಕಾಂಗ್ರೆಸ್ ಚುನಾವಣಾ ಆಯೋಗದ ಮೊರೆ ಹೋಗಿತ್ತು. ಕಾಂಗ್ರೆಸ್ ನಾಯಕ ಆಕೆಯನ್ನು ಡಮ್ಮಿ ಎಂದು ಕರೆದಿದ್ದರು.ಅದರ ಲಿಂಕ್ ಇಲ್ಲಿದೆ ಎಂದು ಟ್ವೀಟ್ ಮಾಡಿದ ಸಿಂಗ್, ನಂತರದ ಟ್ವೀಟ್ ನಲ್ಲಿ ಮತ್ತೊಬ್ಬ ಕಾಂಗ್ರೆಸ್ ನಾಯಕರು ಆಕೆ ದುಷ್ಟ ತತ್ವ ಸಿದ್ಧಾಂತ ಪಕ್ಷದ ಪ್ರತಿನಿಧಿ ಎಂದು ಹೇಳಿದ್ದರು ಎಂದಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಸೆಂಗೋಲ್ನ್ನು ವಾಕಿಂಗ್ ಸ್ಟಿಕ್ನಂತೆ ಪರಿಗಣಿಸಿದೆ: ಅಮಿತ್ ಶಾ
ದ್ರೌಪದಿ ಮುರ್ಮು ಅವರಿಗೆ ಮತ ನೀಡಿದ್ದ ಒಡಿಶಾ ಕಾಂಗ್ರೆಸ್ ಶಾಸಕರಿಗೆ ಪಕ್ಷ ನೋಟಿಸ್ ನೀಡಿತ್ತು. ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಆಕೆ ಆಹ್ವಾನಿಸಿದ್ದ ಉಪಾಹಾರ ಕೂಟಕ್ಕೆ ಹಾಜರಾಗದೆ ಕಾಂಗ್ರೆಸ್ ಆಕೆಯನ್ನು ಅವಮಾನಿಸಿತ್ತು. ಆದಾಗ್ಯೂ, ರಾಹುಲ್ ಗಾಂಧಿಗೆ ಶಿಕ್ಷೆಯಾದಾಗ ಕಾಂಗ್ರೆಸ್ ನವರು ಮುರ್ಮು ಅವರ ಬಳಿ ಓಡೋಡಿ ಹೋಗಿದ್ದರು. ಕಾಂಗ್ರೆಸ್ ರಾಷ್ಟ್ರಪತಿ ಭವನವನ್ನು, ಪ್ರಧಾನಿ ನರೇಂದ್ರ ಮೋದಿಯನ್ನು ಅವಮಾನಿಸಿರುವುದರ ಬಗ್ಗೆ ಹೇಳುತ್ತಾ ಹೋದರೆ ಅದೊಂದು ದೊಡ್ಡ ಪುಸ್ತಕವಾಗಬಹುದು, ನಾನು ಇಲ್ಲಿ ನಿಲ್ಲಿಸುವೆ ಎಂದು ಲೆಹರ್ ಸಿಂಗ್ ಟ್ವೀಟ್ ಮುಗಿಸಿದ್ದಾರೆ.
Published On - 2:40 pm, Fri, 26 May 23