Sengol: “ಸೆಂಗೊಲ್” ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸುವ ಸಂಕೇತವಲ್ಲ, ಬಿಜೆಪಿ ವಿರುದ್ಧ ಕಿಡಿಕಾರಿದ ಜೈರಾಮ್ ರಮೇಶ್

New Parliament Opening; ಲಾರ್ಡ್ ಮೌಂಟ್‌ಬ್ಯಾಟನ್, ಸಿ ರಾಜಗೋಪಾಲಾಚಾರಿ ಮತ್ತು ಜವಾಹರಲಾಲ್ ನೆಹರು ಅವರು 'ಸೆಂಗೊಲ್' ಅನ್ನು ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸುವ ಸಂಕೇತವಾಗಿ ನೀಡಿದ್ದಾರೆ ಎಂಬುದುಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.

Sengol: ಸೆಂಗೊಲ್ ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸುವ ಸಂಕೇತವಲ್ಲ, ಬಿಜೆಪಿ ವಿರುದ್ಧ ಕಿಡಿಕಾರಿದ ಜೈರಾಮ್ ರಮೇಶ್
ಸಾಂದರ್ಭಿಕ ಚಿತ್ರ
Follow us
|

Updated on: May 26, 2023 | 12:24 PM

ದೆಹಲಿ: ಪ್ರಧಾನಿ ಮೋದಿ ಅವರು ಮೇ.28ಕ್ಕೆ ಉದ್ಘಾಟನೆ ಮಾಡಲಿರುವ ನೂತನ ಸಂಸತ್ತಿನ ಭಾಗವಾಗಿ ಸೆಂಗೊಲ್ (Sengol) ದಂಡದ ಬಗ್ಗೆ ಚರ್ಚೆಗಳು ನಡೆಯುತ್ತಿದೆ, ಇದೀಗ ಈ ವಿಚಾರವಾಗಿ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿಕೆಯನ್ನು ನೀಡಿದ್ದಾರೆ. ಲಾರ್ಡ್ ಮೌಂಟ್‌ಬ್ಯಾಟನ್, ಸಿ ರಾಜಗೋಪಾಲಾಚಾರಿ ಮತ್ತು ಜವಾಹರಲಾಲ್ ನೆಹರು ಅವರು ‘ಸೆಂಗೊಲ್’ ಅನ್ನು ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸುವ ಸಂಕೇತವಾಗಿ ನೀಡಿದ್ದಾರೆ ಎಂಬುದುಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಡೋಲು ಬಾರಿಸುವವರು ( ಅವರಿಗೆ ಬೆಂಬಲ ನೀಡುವವರು) ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಉದ್ದೇಶಕ್ಕಾಗಿ ವಿಧ್ಯುಕ್ತ ರಾಜದಂಡವನ್ನು ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಮೇ 28ರಂದು ಪ್ರಧಾನಿ ಮೋದಿ ಅವರಿಂದ ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸಿದ ನಂತರ ಲೋಕಸಭೆಯ ಸ್ಪೀಕರ್ ಅವರ ಕುರ್ಚಿಯ ಬಳಿ ‘ಸೆಂಗೊಲ್’ ಇಡಲಾಗುವುದು, ಈ ಕಾರ್ಯಕ್ರಮದಲ್ಲಿ 25 ರಾಜಕೀಯ ಪಕ್ಷಗಳು ಭಾಗವಹಿಸುತ್ತಿವೆ, ಆದರೆ ಕಾಂಗ್ರೆಸ್ ಸೇರಿದಂತೆ 20 ವಿರೋಧ ಪಕ್ಷಗಳು ಬಹಿಷ್ಕರಿಸುತ್ತಿವೆ.

ಇದನ್ನೂ ಓದಿ;Sengol: ನೂತನ ಸಂಸತ್ತಿನಲ್ಲಿ ಇರಿಸಲಾಗುವ ಅಧಿಕಾರ ಹಸ್ತಾಂತರ ಸೂಚಿಸುವ ‘ಸೆಂಗೋಲ್’ನ ಇತಿಹಾಸವೇನು?

ಪವಿತ್ರವಾದ ‘ಸೆಂಗೊಲ್’ ಅನ್ನು ಭಾರತದ ಮೊದಲ ಪ್ರಧಾನಿ ನೆಹರೂ ಅವರಿಗೆ ಉಡುಗೊರೆಯಾಗಿ ನೀಡಿದ ‘ಚಿನ್ನದ ಕೋಲು’ ಎಂದು ಕರೆದು ಅದನ್ನು ಮ್ಯೂಸಿಯಂನಲ್ಲಿ ಇರಿಸುವ ಮೂಲಕ ಕಾಂಗ್ರೆಸ್ ಹಿಂದೂ ಸಂಪ್ರದಾಯಗಳನ್ನು ಕಡೆಗಣಿಸಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ. ಭಾರತದ ಸ್ವಾತಂತ್ರ್ಯ ನೀಡುವ ಮುನ್ನ ನೆಹರೂ ಅವರಿಗೆ “ಪವಿತ್ರವಾದ ‘ಸೆಂಗೊಲ್’ ನ್ನು ಹಸ್ತಾಂತರಿಸಿದ್ದು, ಬ್ರಿಟಿಷರಿಂದ ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸುವ ಸಂಕೇತವಾಗಿ ಇದನ್ನೂ ನೀಡಲಾಗಿದೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವಿಯಾ ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್​ ಮಾಡಿದ ರಮೇಶ್, “ಈ ರಾಜದಂಡವನ್ನು ತಮಿಳುನಾಡಿನ ರಾಜಕೀಯಕ್ಕಾಗಿ ಬಳಸಲಾಗುತ್ತಿದೆ. ಪ್ರಧಾನಿ ಮೋದಿ ಮತ್ತು ಅವರ ಅವರ ಬೆಂಬಲಿಸುವವರು, ರಾಜಕೀಯಕ್ಕಾಗಿ, ಈ ವಿಚಾರವನ್ನು ತಿರುಚುತ್ತಿದ್ದಾರೆ. ಕೆಲವೊಂದು ಸತ್ಯಗಳನ್ನು ತಿಳಿಸುವುದು ಬಿಜೆಪಿಗೆ ಇಷ್ಟವಿಲ್ಲ, ಹಾಗಾಗಿ ಕಾಂಗ್ರೆಸ್​​ ಮಾಡಿ ಕೆಲಸಗಳಿಗೆ ತಾವು ಕ್ರೆಡಿಟ್​​​ ತೆಗೆದುಕೊಳ್ಳುತ್ತಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಹೊಸ ಸಂಸತ್ತಿನ ಉದ್ಘಾಟನೆಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ಬಿಜೆಪಿಯನ್ನು ಕಾಂಗ್ರೆಸ್​​ ವಕ್ತಾರ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

ಮದ್ರಾಸ್ ಪ್ರಾಂತ್ಯದ ಧಾರ್ಮಿಕ ಸಂಸ್ಥೆಯಿಂದ ಕಲ್ಪಿಸಲ್ಪಟ್ಟ ಮತ್ತು ಮದ್ರಾಸ್ ನಗರದಲ್ಲಿ (ಈಗ ಚೆನ್ನೈ) ರಚಿಸಲಾದ ಭವ್ಯವಾದ ರಾಜದಂಡವನ್ನು ಆಗಸ್ಟ್ 1947 ರಲ್ಲಿ ಜವಾಹರಲಾಲ್ ನೆಹರು ಅವರಿಗೆ ನೀಡಲಾಯಿತು ಎಂದು ಅವರು ಹೇಳಿದ್ದಾರೆ.

ಮೌಂಟ್‌ಬ್ಯಾಟನ್, ರಾಜಾಜಿ ಮತ್ತು ನೆಹರೂ ಈ ರಾಜದಂಡವನ್ನು ಭಾರತಕ್ಕೆ ಬ್ರಿಟಿಷ್ ಅಧಿಕಾರದ ವರ್ಗಾವಣೆಯ ಸಂಕೇತವೆಂದು ವಿವರಿಸುವ ಯಾವುದೇ ದಾಖಲಿತ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ಇನ್ನೂ ಕಾಂಗ್ರೆಸ್​​ ರಾಜಕೀಯ ವಿಚಾರಗಳಿಗಾಗಿ ರಾಷ್ಟ್ರಪತಿಗಳನ್ನು ಈ ಕಾರ್ಯದಿಂದ ದೂರು ಇಟ್ಟಿದೆ. ಇದು ಪ್ರಜಾಪ್ರಭುತ್ವದ ಮೇಲೆ ನೇರ ದಾಳಿ ಎಂದು ಹೇಳಿದೆ, ಕಾರಣಕ್ಕಾಗಿ ಕಾಂಗ್ರೆಸ್​​​ ಸೇರಿ, 20ಕ್ಕೂ ಹೆಚ್ಚು ವಿರೋಧ ಪಕ್ಷಗಳು ಈ ಕಾರ್ಯಕ್ರಮವನ್ನು ವಿರೋಧಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ