ಕಾಂಗ್ರೆಸ್ ಪಕ್ಷ ಸೆಂಗೋಲ್​​ನ್ನು ವಾಕಿಂಗ್ ಸ್ಟಿಕ್​​ನಂತೆ ಪರಿಗಣಿಸಿದೆ: ಅಮಿತ್ ಶಾ

Rashmi Kallakatta

|

Updated on:May 26, 2023 | 12:59 PM

ಭಾರತದ ಸ್ವಾತಂತ್ರ್ಯವನ್ನು ಸಂಕೇತಿಸಲು ತಮಿಳುನಾಡಿನ ಪವಿತ್ರ ಶೈವ ಮಠವು ಪಂಡಿತ್ ನೆಹರೂ ಅವರಿಗೆ ಪವಿತ್ರ ಸೆಂಗೋಲ್ ಅನ್ನು ನೀಡಿತು. ಆದರೆ ಅದನ್ನು ಕಾಂಗ್ರೆಸ್ ವಾಕಿಂಗ್ ಸ್ಟಿಕ್ ಎಂದು ಪರಿಗಣಿಸಿ ಮ್ಯಾಸಿಯಂನಲ್ಲಿರಿಸಿದೆ ಎಂದಿದ್ದಾರೆ. ಈಗ, ಕಾಂಗ್ರೆಸ್ ಮತ್ತೊಂದು ನಾಚಿಕೆಗೇಡಿನ ಕಾರ್ಯ ಮಾಡಿದೆ

ಕಾಂಗ್ರೆಸ್ ಪಕ್ಷ ಸೆಂಗೋಲ್​​ನ್ನು ವಾಕಿಂಗ್ ಸ್ಟಿಕ್​​ನಂತೆ ಪರಿಗಣಿಸಿದೆ: ಅಮಿತ್ ಶಾ
ಅಮಿತ್ ಶಾ

Follow us on

ಹೊಸ ಸಂಸತ್ ಭವನದಲ್ಲಿ ಸೆಂಗೋಲ್ (Sengol) ಇರಿಸುವ ಬಗ್ಗೆ ನಡೆಯುತ್ತಿರುವ ವಾಗ್ವಾದಗಳ ನಡುವೆ ಟ್ವೀಟ್ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಕಾಂಗ್ರೆಸ್​​​ಗೆ  (Congress)ತಿರುಗೇಟು ನೀಡಿದ್ದು, ಅವರು ಸೆಂಗೋಲ್ ಅಥವಾ ರಾಜದಂಡವನ್ನು ವಾಕಿಂಗ್ ಸ್ಟಿಕ್ ಮಟ್ಟಕ್ಕೆ ಇಳಿಸಿದ್ದಾರೆ. ಕಾಂಗ್ರೆಸ್ ಭಾರತೀಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ದ್ವೇಷಿಸುತ್ತಿರುವುದೇಕೆ? ಭಾರತದ ಸ್ವಾತಂತ್ರ್ಯವನ್ನು ಸಂಕೇತಿಸಲು ತಮಿಳುನಾಡಿನ ಪವಿತ್ರ ಶೈವ ಮಠವು ಪಂಡಿತ್ ನೆಹರೂ ಅವರಿಗೆ ಪವಿತ್ರ ಸೆಂಗೋಲ್ ಅನ್ನು ನೀಡಿತು. ಆದರೆ ಅದನ್ನು ಕಾಂಗ್ರೆಸ್ ವಾಕಿಂಗ್ ಸ್ಟಿಕ್ ಎಂದು ಪರಿಗಣಿಸಿ ಮ್ಯಾಸಿಯಂನಲ್ಲಿರಿಸಿದೆ ಎಂದಿದ್ದಾರೆ. ಈಗ, ಕಾಂಗ್ರೆಸ್ ಮತ್ತೊಂದು ನಾಚಿಕೆಗೇಡಿನ ಕಾರ್ಯ ಮಾಡಿದೆ. ಪವಿತ್ರ ಶೈವ ಮಠವಾದ ತಿರುವಡುತುರೈ ಅಧೀನಂ ಸ್ವತಃ ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಸೆಂಗೋಲ್‌ನ ಮಹತ್ವದ ಬಗ್ಗೆ ಮಾತನಾಡಿದೆ. ಆದರೆ ಕಾಂಗ್ರೆಸ್ ಅಧೀನರ ಇತಿಹಾಸವನ್ನು ಬೋಗಸ್ ಎಂದು ಕರೆಯುತ್ತಿದೆ, ಕಾಂಗ್ರೆಸ್ ಅವರ ನಡವಳಿಕೆಯನ್ನು ಪ್ರತಿಬಿಂಬಿಸಬೇಕಾಗಿದೆ ಎಂದಿದ್ದಾರೆ ಕೇಂದ್ರ ಗೃಹ ಸಚಿವ ಅಮಿತ್ ಶಾ.

ಸೆಂಗೋಲ್​​ಗೆ ಯಾವುದೇ ಪುರಾವೆಗಳಿಲ್ಲ ಎಂದ ಕಾಂಗ್ರೆಸ್

ಲಾರ್ಡ್ ಮೌಂಟ್‌ಬ್ಯಾಟನ್, ಸಿ ರಾಜಗೋಪಾಲಾಚಾರಿ ಮತ್ತು ಜವಾಹರಲಾಲ್ ನೆಹರು ಅವರು ಸೆಂಗೋಲ್ ಅನ್ನು ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸುವ ಸಂಕೇತ ಎಂದು ಬಣ್ಣಿಸಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಶುಕ್ರವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗರು ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಉದ್ದೇಶಕ್ಕಾಗಿ ರಾಜದಂಡವನ್ನು ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪವಿತ್ರವಾದ ಸೆಂಗೋಲ್​​ನ್ನು ಭಾರತದ ಮೊದಲ ಪ್ರಧಾನಿ ನೆಹರು ಅವರಿಗೆ ಉಡುಗೊರೆಯಾಗಿ ನೀಡಿದ ‘ಚಿನ್ನದ ಕೋಲು’ ಎಂದು ಕರೆದು ಅದನ್ನು ಮ್ಯೂಸಿಯಂನಲ್ಲಿ ಇರಿಸುವ ಮೂಲಕ ಕಾಂಗ್ರೆಸ್ ಹಿಂದೂ ಸಂಪ್ರದಾಯಗಳನ್ನು ಕಡೆಗಣಿಸಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ. ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ “ಈ ರಾಜದಂಡವನ್ನು ಈಗ ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಪ್ರಧಾನಿ ಮತ್ತು ಅವರ ಬೆಂಬಲಿಗರು ಬಳಸುತ್ತಿದ್ದಾರೆ. ಇದು ತಮ್ಮ ಉದ್ದೇಶಕ್ಕಾಗಿ ಸತ್ಯಗಳನ್ನು ತಿರುಚುವ ಬ್ರಿಗೇಡ್ ನ ಕೆಲಸ. ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಹೊಸ ಸಂಸತ್ತಿನ ಉದ್ಘಾಟನೆಗೆ ಏಕೆ ಅವಕಾಶ ನೀಡುತ್ತಿಲ್ಲ?

ಇದನ್ನೂ ಓದಿ:  Sengol ಸೆಂಗೊಲ್ ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸುವ ಸಂಕೇತವಲ್ಲ, ಬಿಜೆಪಿ ವಿರುದ್ಧ ಕಿಡಿಕಾರಿದ ಜೈರಾಮ್ ರಮೇಶ್

ಮದ್ರಾಸ್ ಪ್ರಾಂತ್ಯದ ಧಾರ್ಮಿಕ ಸಂಸ್ಥೆಯಿಂದ ಕಲ್ಪಿಸಲ್ಪಟ್ಟ ಮತ್ತು ಮದ್ರಾಸ್ ನಗರದಲ್ಲಿ (ಈಗ ಚೆನ್ನೈ) ರಚಿಸಲಾದ ಭವ್ಯವಾದ ರಾಜದಂಡವನ್ನು ಆಗಸ್ಟ್ 1947 ರಲ್ಲಿ ನೆಹರುಗೆ ನೀಡಲಾಯಿತು. ಆದರೆ ಮೌಂಟ್‌ಬ್ಯಾಟನ್, ರಾಜಾಜಿ ಮತ್ತು ನೆಹರು ಈ ರಾಜದಂಡವನ್ನು ಭಾರತಕ್ಕೆ ಬ್ರಿಟಿಷ್ ಅಧಿಕಾರದ ವರ್ಗಾವಣೆಯ ಸಂಕೇತವೆಂದು ವಿವರಿಸುವ ಯಾವುದೇ ದಾಖಲಿತ ಪುರಾವೆಗಳಿಲ್ಲ. ಹೀಗೆ ಹೇಳುವ ಎಲ್ಲ ವಾದಗಳು ಬೋಗಸ್ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Related Stories

Click on your DTH Provider to Add TV9 Kannada