Rahul Gandhi: ರಾಹುಲ್ ಗಾಂಧಿಗೆ 3 ವರ್ಷಗಳ ಕಾಲ ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ಅನುಮತಿ ನೀಡಿದ ದೆಹಲಿ ಕೋರ್ಟ್
ರಾಹುಲ್ ಗಾಂಧಿ ಮಾಡಿದ ಮನವಿಗೆ ಇಂದು (ಮೇ 26) ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಭಾಗಶಃ ಅನುಮತಿ ನೀಡಿದೆ. ನ್ಯಾಯಾಲಯ 3 ವರ್ಷಗಳ ಕಾಲ ಎನ್‌ಒಸಿ ನೀಡಿದೆ.
ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ತಮಗೆ ಹೊಸ ಸಾಮಾನ್ಯ ಪಾಸ್‌ಪೋರ್ಟ್ ನೀಡಲು ಎನ್‌ಒಸಿ (No Objection Certificate) ಕೋರಿ ದೆಹಲಿ ಕೋರ್ಟ್ಗೆ ಮನವಿ ಸಲ್ಲಿಸಿದ್ದರು, ಇದೀಗ ರಾಹುಲ್ ಗಾಂಧಿ ಮಾಡಿದ ಮನವಿಗೆ ಇಂದು (ಮೇ 26) ದೆಹಲಿಯ ರೂಸ್ ಅವೆನ್ಯೂ ಕೋರ್ಟ್ ಭಾಗಶಃ ಅನುಮತಿ ನೀಡಿದೆ. ನ್ಯಾಯಾಲಯ 3 ವರ್ಷಗಳ ಕಾಲ ಎನ್‌ಒಸಿ ನೀಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಿಂದ ಅನರ್ಹಗೊಂಡ ನಂತರ ಅವರ ಸಂಸದ ಸವಲತ್ತುಗಳನ್ನು ಕಳೆದುಕೊಂಡಿದ್ದರು, ಇದೀಗ ಮೂರು ವರ್ಷಗಳ ಕಾಲ ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ದೆಹಲಿ ನ್ಯಾಯಾಲಯ ಶುಕ್ರವಾರ ಅನುಮತಿ ನೀಡಿದೆ.
ರಾಹುಲ್ ಗಾಂಧಿ ಅವರು ತಮ್ಮ ಅನರ್ಹತೆಯ ನಂತರ ತಮ್ಮ ರಾಜತಾಂತ್ರಿಕ ಪಾಸ್ಪೋರ್ಟ್ನ್ನು ಸರ್ಕಾರಕ್ಕೆ ಒಪ್ಪಿಸಿದ ನಂತರ ಅವರು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಗಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಇದೀಗ ನ್ಯಾಯಲಯಕ್ಕೆ 10 ವರ್ಷಗಳ ಅನುಮತಿ ನೀಡಬೇಕು ಎಂದು ಮನವಿ ಮಾಡಿದ ರಾಹುಲ್ ಗಾಂಧಿ, ಇದಕ್ಕೆ ಒಪ್ಪದ ನ್ಯಾಯಲಯ 3 ವರ್ಷಗಳ ಕಾಲವಧಿಗೆ ಅನುಮತಿ ನೀಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ