9 Years Of PM Modi: ಸ್ಮಶಾನದಲ್ಲಿ ನಿಂತಿದ್ದ ಮೋದಿಗೆ ವಾಜಪೇಯಿ ಕರೆ ಮಾಡಿದ್ದೇಕೆ? ದೂರದರ್ಶನದ ಕ್ಯಾಮರಾಮೆನ್ ಪ್ರಾಣ ಉಳಿಸಿದ್ದು ಹೇಗೆ? ಕೆಲವು ಕುತೂಹಲಕಾರಿ ಸಂಗತಿಗಳು

ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರವು 9 ವರ್ಷಗಳನ್ನು ಪೂರೈಸಿದೆ, ಮೋದಿಯವರ ಜೀವನದ ಹಾದಿಯ ಕುರಿತ ಕೆಲವು ಕುತೂಹಲಕರ ಮಾಹಿತಿ ಇಲ್ಲಿದೆ.

9 Years Of PM Modi: ಸ್ಮಶಾನದಲ್ಲಿ ನಿಂತಿದ್ದ ಮೋದಿಗೆ ವಾಜಪೇಯಿ ಕರೆ ಮಾಡಿದ್ದೇಕೆ? ದೂರದರ್ಶನದ ಕ್ಯಾಮರಾಮೆನ್ ಪ್ರಾಣ ಉಳಿಸಿದ್ದು ಹೇಗೆ? ಕೆಲವು ಕುತೂಹಲಕಾರಿ ಸಂಗತಿಗಳು
ನರೇಂದ್ರ ಮೋದಿ-ವಾಜಪೇಯಿImage Credit source: The Print
Follow us
ನಯನಾ ರಾಜೀವ್
|

Updated on:May 26, 2023 | 2:43 PM

ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಸರ್ಕಾರವು 9 ವರ್ಷಗಳನ್ನು ಪೂರೈಸಿದೆ, ಮೋದಿಯವರ ಜೀವನದ ಹಾದಿಯ ಕುರಿತ ಕೆಲವು ಕುತೂಹಲಕರ ಮಾಹಿತಿ ಇಲ್ಲಿದೆ. ನರೇಂದ್ರ ದಾಮೋದರ್ ದಾಸ್ ಮೋದಿ ಅವರು ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ವಡ್ನಗರದಲ್ಲಿ 17 ಸೆಪ್ಟೆಂಬರ್ 1950 ರಂದು ಜನಿಸಿದರು. ಸ್ವಾತಂತ್ರ್ಯ ನಂತರ ಜನಿಸಿದ ದೇಶದ ಮೊದಲ ಪ್ರಧಾನಿ. 2001ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿಯಾದರು. 2014ರಲ್ಲಿ ಪ್ರಧಾನಿಯಾದರು. 2019ರಲ್ಲಿ ಮತ್ತೆ ಗೆದ್ದು ಸತತ ಎರಡನೇ ಬಾರಿಗೆ ಪ್ರಧಾನಿಯಾದರು. ಅವರಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ.

1. ಬಾಲ್ಯದಲ್ಲಿ, ಶಿಕ್ಷಕರು ನಾರಿಯಾ ಎಂದು ಕರೆದರೆ ಸ್ನೇಹಿತರು ಎನ್​ಡಿ ಎನ್ನುತ್ತಿದ್ದರು ನರೇಂದ್ರ ಮೋದಿಯವರ ಆರಂಭಿಕ ಶಿಕ್ಷಣ ವಡ್ನಗರದ BN ಹೈಸ್ಕೂಲ್‌ನಲ್ಲಿ ಮುಗಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ 9, 10, 11ನೇ ತರಗತಿಯಲ್ಲಿ ಸಂಸ್ಕೃತ ಕಲಿಸಿದ ಶಿಕ್ಷಕ ಪ್ರಹ್ಲಾದ್ ಪಟೇಲ್ ಸಂದರ್ಶನವೊಂದರಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ನಾನು ನರೇಂದ್ರನನ್ನು ನಾರಿಯಾ ಎಂದು ಕರೆಯುತ್ತಿದ್ದೆ. ತರಗತಿಯಲ್ಲಿ ಸತ್ಯವನ್ನು ಮಾತನಾಡಲು ಅವರು ಎಂದಿಗೂ ಹೆದರುತ್ತಿರಲಿಲ್ಲ. ಅವರು ಚೇಷ್ಟೆಯವರಾಗಿದ್ದರು, ಆದರೆ ಎಲ್ಲಾ ಶಿಕ್ಷಕರನ್ನು ಗೌರವಿಸುತ್ತಿದ್ದರು. ಬಾಲ್ಯದಲ್ಲಿ ನಮ್ಮ ಸ್ನೇಹಿತರೆಲ್ಲರೂ ಅವರನ್ನು ಎನ್‌ಡಿ ಎಂದು ಕರೆಯುತ್ತಿದ್ದರು. ಅವರು ಮುಖ್ಯಮಂತ್ರಿಯಾದಾಗಲೂ ಭೇಟಿಯಾಗಿದ್ದೇವೆ. ನಾನು ಅವರನ್ನು ಎನ್‌ಡಿ ಎಂದು ಕರೆದಾಗ ಅವರು ನಕ್ಕರು ಎಂದು ಪ್ರಧಾನಿಯವರ ಬಾಲ್ಯದ ಗೆಳೆಯ ಜಸೂದ್ ಹೇಳಿದ್ದಾರೆ.

2. ಸೇನೆಗೆ ಸೇರಲು ಬಯಸಿದ್ದರು ಪ್ರಧಾನಿ ಮೋದಿ ಬಾಲ್ಯದಿಂದಲೂ ದೇಶಭಕ್ತಿಯ ಮನೋಭಾವವನ್ನು ಹೊಂದಿದ್ದರು. ಅವರು ದೊಡ್ಡವರಾದ ಮೇಲೆ ಸೇನೆಗೆ ಸೇರಬೇಕೆಂದುಕೊಂಡಿದ್ದರು. ನರೇಂದ್ರ ಮೋದಿ ಅವರ ಅಧಿಕೃತ ವೆಬ್‌ಸೈಟ್ ಪ್ರಕಾರ, ಅವರು ಬಾಲ್ಯದಲ್ಲಿ ಜಾಮ್‌ನಗರದ ಸೈನಿಕ್ ಶಾಲೆಯಲ್ಲಿ ಓದಲು ಬಯಸಿದ್ದರು, ಆದರೆ ಹಣದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ಎಂಟನೇ ವಯಸ್ಸಿನಲ್ಲಿ ಮೋದಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸೇರಿದ್ದರು. 1978ರಲ್ಲಿ ಸಂಘದ ಪೂರ್ಣಪ್ರಮಾಣದ ಪ್ರಚಾರಕರಾದರು.

ಮತ್ತಷ್ಟು ಓದಿ: 9 Years Of PM Modi: ಹಿಂದೂ ದೇವಾಲಯಗಳನ್ನು ಪುನರುಜ್ಜೀವನಗೊಳಿಸುವ ಪ್ರಧಾನಿ ಮೋದಿ ಪ್ರಯತ್ನಗಳೆಡೆಗೆ ಒಂದು ನೋಟ

3. ಮದುವೆಗೆ ಆಹ್ವಾನಿಸದೆ ಹೋಗುತ್ತಿದ್ದರು ಬಾಲ್ಯದಲ್ಲಿ ಹಲವು ಬಾರಿ ಆಮಂತ್ರಣವಿಲ್ಲದಿದ್ದರೂ ಮದುವೆ ಹೋಗುತ್ತಿದ್ದರು, ಅಲ್ಲಿ ಜನರ ಬಟ್ಟೆಗಳಿಗೆ ಪಿನ್​ ಸಿಲುಕಿಸಿ ಓಡಿಬಂದುಬಿಡುತ್ತಿದ್ದರು, ಅಲ್ಲಿದ್ದವರು ನಕ್ಕು ನಕ್ಕು ಸುಸ್ತಾಗುತ್ತಿದ್ದರು.

4. ಮುಖ್ಯಮಂತ್ರಿಯಾದ ನಂತರವೂ ಅವರೇ ಬಟ್ಟೆ ಒಗೆಯುತ್ತಿದ್ದರು ಅಕ್ಟೋಬರ್ 7, 2001 ರಂದು ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಮುಖ್ಯಮಂತ್ರಿಯಾದ ಬಳಿಕವೂ ಅವರ ಬಟ್ಟೆಯನ್ನು ಅವರೇ ತೊಳೆದುಕೊಳ್ಳುತ್ತಿದ್ದರು.

5. ವಾಜಪೇಯಿ ಅವರು ಕರೆ ಮಾಡಿದಾಗ ಮೋದಿ ಸ್ಮಶಾನದಲ್ಲಿದ್ದರು 2001 ರ ವಿಷಯ ಗುಜರಾತಿನಲ್ಲಿ ಆಗಿನ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಅವರ ಆರೋಗ್ಯ ಕ್ಷೀಣಿಸಲು ಪ್ರಾರಂಭಿಸಿತು. ಆಗ ನರೇಂದ್ರ ಮೋದಿ ಸಚಿವರಾಗಿದ್ದರು. ಆಗ ಪ್ರಧಾನಿಯಾಗಿದ್ದವರು ಅಟಲ್ ಬಿಹಾರಿ ವಾಜಪೇಯಿ. ಇದ್ದಕ್ಕಿದ್ದಂತೆ ಅಟಲ್ ಜಿ ಮೋದಿಗೆ ಕರೆ ಮಾಡಿದರು. ಆ ಸಮಯದಲ್ಲಿ, ಹಿರಿಯ ಕ್ಯಾಮರಾಮೆನ್​ ಗೋಪಾಲ್ ಬಿಶ್ತ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮೋದಿ ಸ್ಮಶಾನದ ಮೈದಾನದಲ್ಲಿದ್ದರು. ಅಟಲ್ ಜಿ ಕೇಳಿದ್ದರು ನೀವು ಎಲ್ಲಿದ್ದೀರಿ? ಇದಕ್ಕೆ ಉತ್ತರಿಸಿದ ಮೋದಿ, ನಾನು ಸ್ಮಶಾನದಲ್ಲಿದ್ದೇನೆ ಎಂದಿದ್ದರು, ಆಗ ವಾಜಪೇಯಿ ಅವರು ನೀವು ಸ್ಮಶಾನದಲ್ಲಿದ್ದೀರಿ, ಈಗ ನಾನು ನಿಮ್ಮೊಂದಿಗೆ ಏನು ಮಾತನಾಡಬೇಕು ಎಂದು ತಿಳಿಯುತ್ತಿಲ್ಲ ಸಂಜೆ ಟೀ ಕುಡಿಯಲು ಬನ್ನಿ, ನಂತರ ಮಾತನಾಡೋಣ ಎಂದಿದ್ದರು.

ಮೋದಿಯವರು ವಾಜಪೇಯಿ ಅವರನ್ನು ಭೇಟಿಯಾದಾಗ ತಮಾಷೆ ಮಾಡಿತ್ತಾ ದೆಹಲಿ ನಿಮ್ಮನ್ನು ದಪ್ಪ ಮಾಡಿಬಿಟ್ಟಿದೆ, ಹಾಗಾಗಿ ನೀವು ಗುಜರಾತ್​ಗೆ ಹೋಗಲೇಬೇಕು ಎಂದು ಹೇಳಿದ್ದರು. ಇದಾದ ನಂತರವೇ ಮೋದಿ ಗುಜರಾತ್ ಮುಖ್ಯಮಂತ್ರಿಯಾದರು. ಆಗ ಮೋದಿಯ ಅನುಭವದ ಬಗ್ಗೆ ಅಡ್ವಾಣಿ ಆತಂಕಗೊಂಡಿದ್ದರು ಎನ್ನಲಾಗಿದೆ. ಅದಕ್ಕೇ ಮೊದಲು ಮೋದಿಯವರನ್ನು ಉಪಮುಖ್ಯಮಂತ್ರಿ ಮಾಡಲು ಮುಂದಾಗಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೋದಿ ಸಾರಾಸಗಟಾಗಿ ನಿರಾಕರಿಸಿದರು. ಕಮಾಂಡ್ ಕೊಡಬೇಕಾದರೆ ಸಂಪೂರ್ಣವಾಗಿ ಕೊಡಬೇಕು, ಇಲ್ಲದಿದ್ದರೆ ಬೇರೆಯವರಿಗೆ ಕೊಡಿ ಎಂದರು. ಆದರೆ, ನಂತರ ಎಲ್ಲರೂ ಮೋದಿಯ ಮಾತನ್ನು ಒಪ್ಪಿದರು.

6. ಆಹಾರದಲ್ಲಿ ಖಿಚಡಿ ಇಷ್ಟ ಮೋದಿ ಅವರು ಆಹಾರದಲ್ಲಿ ಖಿಚಡಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು, ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವ ಜನರು, ಅವರ ಜೀವನವು ತುಂಬಾ ಅನಿಯಮಿತವಾಗಿರುತ್ತದೆ. ಹಾಗಾಗಿ ಜನಜೀವನದಲ್ಲಿ ಕ್ರಿಯಾಶೀಲರಾಗಬೇಕಾದರೆ ಗಟ್ಟಿಯಾದ ಹೊಟ್ಟೆ ಇರಬೇಕು. ನನಗಾಗಿ ಯಾವುದೇ ವಿಶೇಷ ಆಹಾರವನ್ನು ನೀಡುವಂತೆ ನಾನು ಎಂದಿಗೂ ಜನರನ್ನು ಕೇಳಿಲ್ಲ. ನಾನು ಖಿಚಡಿಯನ್ನು ಪ್ರೀತಿಸುತ್ತೇನೆ, ಆದರೆ ನನಗೆ ಏನು ಸಿಕ್ಕರೂ ನಾನು ತಿನ್ನುತ್ತೇನೆ.

7. ದೂರದರ್ಶನದ ಕ್ಯಾಮರಾಮೆನ್​ ಜೀವ ಉಳಿಸಿದ್ದ ಮೋದಿ ಯೋಜನೆಯೊಂದಕ್ಕೆ ಚಾಲನೆ ನೀಡಲು ಪ್ರಧಾನಿ ಮೋದಿ ಗುಜರಾತ್‌ನ ಜಾಮ್‌ನಗರ ತಲುಪಿದ್ದರು. ಇದು ನೀರಾವರಿ ಯೋಜನೆಯಾಗಿದ್ದು, ಸೌರಾಷ್ಟ್ರದ ನೀರಿನ ಕೊರತೆಯನ್ನು ಪರಿಹರಿಸಿದೆ. ಆಗ ಒಂದು ಬಟನ್ ಒತ್ತಿ ಚಾಲನೆ ನೀಡಬೇಕಿತ್ತು, ಚಾಲನೆ ನೀಡಿದ ತಕ್ಷಣ ಅವರ ಕಣ್ಣು ಅಣೆಕಟ್ಟಿನ ಇನ್ನೊಂದು ಬದಿಗೆ ಹೋಯಿತು. ಇಲ್ಲಿ ದೂರದರ್ಶನದ ಕೆಲವು ಪತ್ರಕರ್ತರು ಮತ್ತು ಕ್ಯಾಮೆರಾಮೆನ್ ಕಾರ್ಯಕ್ರಮವನ್ನು ವರದಿ ಮಾಡಲು ಬಂದಿದ್ದರು. ಇದನ್ನು ಕಂಡ ಮೋದಿ ಕೂಗಾಡುತ್ತಾ ದೂರ ಸರಿಯುವಂತೆ ಹೇಳಿದರು. ಕ್ಯಾಮರಾಮನ್ ದೂರ ಸರಿಯುತ್ತಿದ್ದಂತೆಯೇ ಜೋರಾಗಿ ನೀರು ಹರಿಯಿತು. ಅವರ ಪ್ರಾಣ ಉಳಿಯಿತು.

8. ಗಾಳಿಪಟ ಹಾರಿಸುವುದು ಹಾಗೂ ನಟನೆ ಇಷ್ಟ ನರೇಂದ್ರ ಮೋದಿ ಅವರು ಗಾಳಿಪಟ ಹಾರಿಸುವುದನ್ನು ಇಷ್ಟಪಡುತ್ತಾರೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗಾಳಿಪಟ ಹಾರಿಸುವ ದೊಡ್ಡ ಹಬ್ಬವನ್ನು ಆಯೋಜಿಸುತ್ತಿದ್ದರು. ಅವರಿಗೆ ನಟನೆಯೂ ಇಷ್ಟ. ಶಾಲೆಯಲ್ಲಿ ಓದುವಾಗ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು.

9. ಲತಾ ಮಂಗೇಶ್ಕರ್ ಹಾಡುಗಳು ಇಷ್ಟ ಪ್ರಧಾನಿ ನರೇಂದ್ರ ಮೋದಿ ಅವರು ಚಲನಚಿತ್ರಗಳ ಬಗ್ಗೆ ಹೆಚ್ಚು ಒಲವು ಹೊಂದಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೂ ಅವರಿಗೆ ಲತಾ ಮಂಗೇಶ್ಕರ್ ಅವರ ಹಾಡೆಂದರೆ ಇಷ್ಟವಂತೆ.

10. ತುರ್ತು ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದಾಗ ನರೇಂದ್ರ ಮೋದಿಯವರು ಆರ್ ಎಸ್ ಎಸ್ ಪ್ರಚಾರಕರಾಗಿ ಸಾಕಷ್ಟು ಹೋರಾಟ ನಡೆಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:42 pm, Fri, 26 May 23

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ