ಬಾಗಲಕೋಟೆ: ಜಿಲ್ಲೆಯ ನವನಗರ(Navanagar)ದಲ್ಲಿ ನಿನ್ನೆ(ಜೂ.21) ರಾತ್ರಿ 2 ಗುಂಪುಗಳ ಮಧ್ಯೆ ಘರ್ಷಣೆಯಾಗಿದ್ದು, ಘಟನೆ ಸಂಬಂಧ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ಬೈಕ್ ವೇಗವಾಗಿ ಓಡಿಸಿದ ವಿಚಾರಕ್ಕೆ ನಿನ್ನೆ ಎರಡು ಗುಂಪುಗಳ ನಡುವೆ ಜಗಳ ಶುರುವಾಗಿದ್ದು, ಬಳಿಕ ಪ್ರವೀಣ್ ದಲಭಂಜನ್ ಮನೆಯ ಮೇಲೆ ಕಲ್ಲೆಸೆದಿದ್ದರು. ಇದಾದ ನಂತರ ಹಿಂದು ಮುಸ್ಲಿಂ ಘರ್ಷಣೆಗೆ ತಿರುಗಿತು. ಘರ್ಷಣೆಯಲ್ಲಿ ಗಾಯಗೊಂಡ 7 ಜನರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಈ ಕುರಿತು ರಾತ್ರಿ ಹಿಂದುಪರ ಸಂಘಟನೆ ಕಾರ್ಯಕರ್ತರು ಧರಣಿ ನಡೆಸಿದ್ದರು. ಈ ವೇಳೆ ಪೊಲೀಸರ ಜೊತೆಗೂ ವಾಗ್ವಾದ ನಡೆದಿತ್ತು. ಈ ಹಿನ್ನಲೆ ಹಿಂದು ಹಾಗೂ ಮುಸ್ಲಿಂ ಕಡೆಯ ತಲಾ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಈ ಘಟನೆಯಿಂದ ಮುಂಜಾಗ್ರತ ಕ್ರಮವಾಗಿ 4 ಡಿಎಆರ್, 4 ಕೆಎಸ್ಆರ್ಪಿ ತುಕಡಿ, 4 ಡಿವೈಎಸ್ಪಿ, 6 ಸಿಪಿಐ, 15 ಪಿಎಸ್ಐ, 25 ಎಎಸ್ಐ ಸೇರಿ 160 ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಲಾಗಿದೆ. ಜೊತೆಗೆ ಜಿಲ್ಲಾಸ್ಪತ್ರೆ ಮುಂಭಾಗದಲ್ಲೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಮೂಲಕ ಬಾಗಲಕೋಟೆಯ ನವನಗರ ಬೂದಿ ಮುಚ್ಚಿದ ಕೆಂಡದಂತಿದೆ.
ಇದನ್ನೂ ಓದಿ:ಹೋಳಿ ಹಬ್ಬದ ನಿಮಿತ್ತ ಹಲಗೆ ಬಾರಿಸುವ ವಿಚಾರವಾಗಿ 2 ಕೋಮಿನ ಮಧ್ಯೆ ಗಲಾಟೆ
ಕೊಪ್ಪಳ: ಪಡಿತರ ಅಕ್ಕಿಯನ್ನ ಕಳ್ಳ ಸಾಗಣೆ ಮಾಡುತ್ತಿದ್ದವರನ್ನ ಜಿಲ್ಲೆಯ ಗಂಗಾವತಿ ನಗರದ ಎಪಿಎಂಸಿ ಬಳಿ ಪೊಲೀಸರು ಬಂಧಿಸಿದ್ದಾರೆ. ಹೌದು ಎರಡೂ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 250 ಕ್ವಿಂಟಾಲ್ ಕ್ಕಿಂತ ಹೆಚ್ಚು ಪಡಿತರ ಅಕ್ಕಿಯ ಸಮೇತ ವಾಹನವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಗಂಗಾವತಿಯಿಂದ ತಾವರಗೇರ ಪಟ್ಟಣಕ್ಕೆ ಸಾಗಣೆ ಮಾಡುವ ವೇಳೆ ಜಪ್ತಿ ಮಾಡಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ