ರಂಜಾನ್ ಹಬ್ಬದ ದಿನವೇ ಎರಡು ಮುಸ್ಲಿಂ ಗುಂಪುಗಳ ಮಧ್ಯೆ ಘರ್ಷಣೆ; ಕಟ್ಟೆಚ್ಚರ ವಹಿಸಿದ ಕೊಳ್ಳೇಗಾಲ ಪೊಲೀಸರು
ಎರಡೂ ಗುಂಪುಗಳ ಯುವಕರು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರ ಬಂದಾಗ ಗಲಾಟೆ ಮಾಡಿಕೊಂಡಿದ್ದಾರೆ. ಈ ಹಿಂದಿನಿಂದಲೂ ಎರಡು ಗುಂಪುಗಳ ನಡುವೆ ದ್ವೇಷ ಇತ್ತು. ಇಂದು ಮಸೀದಿಯಿಂದ ಹೊರಬಂದು ಎದುರುಬದುರಾದಾಗ ಗಲಾಟೆ ಶುರುವಾಗಿದೆ.
ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಸಾಮಂದಗೇರಿಯಲ್ಲಿ ರಂಜಾನ್ ಹಬ್ಬದ ದಿನವೇ ಎರಡು ಮುಸ್ಲಿಂ ಗುಂಪುಗಳು ಬಡಿದಾಡಿಕೊಂಡಿವೆ. ಘರ್ಷಣೆಯಲ್ಲಿ 12 ಜನರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಲಿ ಮತ್ತು ಮಾಜಿ ನಗರಸಭಾ ಸದಸ್ಯರ ಬೆಂಬಲಿಗರ ನಡುವೆ ಈ ಗಲಾಟೆ ಏರ್ಪಟ್ಟಿದೆ. ಹಳೆ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ ಎಂದು ತಿಳಿದುಬಂದಿದೆ.
ನಗರಸಭಾ ಹಾಲಿ ಸದಸ್ಯ ನಾಸೀರ್ ಷರೀಫ್ (ಬಬ್ಲು) ಹಾಗೂ ಮಾಜಿ ಸದಸ್ಯ ಕಿಜರ್ ಬೆಂಬಲಿಗರ ನಡುವೆ ಬಡಿದಾಟಗಳು ನಡೆದಿವೆ. ಎರಡೂ ಗುಂಪುಗಳ ಯುವಕರು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರ ಬಂದಾಗ ಗಲಾಟೆ ಮಾಡಿಕೊಂಡಿದ್ದಾರೆ. ಈ ಹಿಂದಿನಿಂದಲೂ ಎರಡು ಗುಂಪುಗಳ ನಡುವೆ ದ್ವೇಷ ಇತ್ತು. ಇಂದು ಮಸೀದಿಯಿಂದ ಹೊರಬಂದು ಎದುರುಬದುರಾದಾಗ ಗಲಾಟೆ ಶುರುವಾಗಿದೆ. ಗುಂಪು ಘರ್ಷಣೆ ಸಮ್ಮುಖದಲ್ಲಿ ಕೊಳ್ಳೇಗಾಲ ಪೊಲೀಸರು ಮುಸ್ಲಿಂ ಬಡಾವಣೆಗಳಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
ದೇವನಹಳ್ಳಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ ಎಫಿಡ್ರಿನ್ ವಶಪಡಿಸಿಕೊಂಡಿದ್ದಾರೆ. 89.92 ಲಕ್ಷ ಮೌಲ್ಯದ 4.5 ಕೆಜಿ ಎಫಿಡ್ರಿನ್ ವಶಪಡಿಸಿಕೊಳ್ಳಲಾಗಿದೆ. ಆಸ್ಟ್ರೇಲಿಯಾದಿಂದ ಕೊರಿಯರ್ ಮೂಲಕ ರವಾನಿಸಿದ್ದ ಔಷಧ ಇದಾಗಿದೆ.
ಕಳೆದ ತಿಂಗಳು 29 ರಂದು ಕೊರಿಯರ್ ಮೂಲಕ ಏರ್ಪೋಟ್ ಗೆ ಎಫಿಡ್ರಿನ್ ಮಾದಕ ದ್ರವ್ಯ ಪಾರ್ಸಲ್ ಬಂದಿಳಿದಿತ್ತು. ಲೋ ಬ್ಲಡ್ ಪ್ರೆಷರ್ ಸೇರಿದಂತೆ ಮೆಡಿಕಲ್ ನಲ್ಲಿ ಉಪಯೋಗಿಸುವ ಎಫಿಡ್ರಿನ್ ಔಷಧವನ್ನು ಬಟ್ಟೆಗಳಲ್ಲಿ ಮರೆ ಮಾಚಿ ಖದೀಮರು ಕೋರಿಯರ್ ಮಾಡಿದ್ದರು. ಅನುಮಾನಗೊಂಡು ಪರಿಶೀಲಿಸಿದಾಗ ಎಫಿಡ್ರಿನ್ ಪತ್ತೆಯಾಗಿದೆ. ಕೊರಿಯರ್ ಪಾರ್ಸಲ್ ಕೊಡುವಾಗ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳಿಂದ ಇಂದು ಆರೋಪಿಯ ಬಂಧನ ಮಾಡಲಾಗಿದೆ.
Also Read: ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಭಿಮಾನ: ಮಗಳಿಗೆ ಮೋದಿ ಹೆಸರಿನಲ್ಲಿ ಮನೆ ಕಟ್ಟಿಸಿಕೊಟ್ಟ ರೈತ!
Published On - 9:03 pm, Tue, 3 May 22