ಬಾಗಲಕೋಟೆ: ಮಲಪ್ರಭಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಕ್ರಾಸ್ ಬಳಿಯ ಮಲಪ್ರಭಾ ನದಿಯಲ್ಲಿ ಈಜಲು ಹೋಗಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.
ಬಾಗಲಕೋಟೆ: ಜಿಲ್ಲೆಯ ಹುನಗುಂದ (Hungund) ತಾಲ್ಲೂಕಿನ ಕಮತಗಿ ಕ್ರಾಸ್ ಬಳಿಯ ಮಲಪ್ರಭಾ ನದಿಯಲ್ಲಿ (Malaprabha River) ಈಜಲು ಹೋಗಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಬಾಗಲಕೋಟೆ (Bagalkot) ನಿವಾಸಿ ಅಕ್ಷಯ್ ಕಂಠಿಮಠ(೨೪), ಕಮತಗಿ ನಿವಾಸಿ ವಿಜಯ್ ಅರುಟಗಿಮಠ(೨೫)ಮೃತ ಯುವಕರು. ನಿನ್ನೆ (ಏ.17) ನದಿಯಲ್ಲಿ ಈಜಲು ಹೋಗಿದ್ದ ವೇಳೆ ನಾಪತ್ತೆಯಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುನಗುಂದ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ನಡೆಸಿದ್ದರು. ರಾತ್ರಿ ಶವ ಪತ್ತೆಯಾಗಿವೆ. ಅಮೀನಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸ್ಟವ್ ರಿಪೇರಿ ಅಂಗಡಿಯಲ್ಲಿ ಸಿಲಿಂಡಲ್ ಸ್ಫೋಟ, ಓರ್ವನಿಗೆ ಗಾಯ
ಆನೆಕಲ್: ಸ್ಟವ್ ರಿಪೇರಿ ಅಂಗಡಿಯಲ್ಲಿ ಸಿಲಿಂಡಲ್ ಸ್ಫೋಟಗೊಂಡು ಓರ್ವ ಗಾಯಗೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಮುತ್ಯಾನಲ್ಲೂರು ಗ್ರಾಮದಲ್ಲಿ ನಡೆದಿದೆ. ಗಂಭೀರ ಗಾಯಗೊಂಡ ವ್ಯಕ್ತಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಹಿಳೆ ಪೋಟೋ ತಿರುಚಿ ಯೂಟ್ಯೂಬ್ನಲ್ಲಿ ಹಾಕಿದ ಕಿಲಾಡಿಗಳ ಬಂಧನ
ದಾವಣಗೆರೆ: ಮಹಿಳೆಯರ ಭಾವಚಿತ್ರಗಳನ್ನು ತಿರುಚಿ ಯೂಟ್ಯೂಬ್ನಲ್ಲಿ ಹಾಕಿ ಅವರ ವೈಯಕ್ತಿಕ ಖ್ಯಾತಿಗೆ ಹಾನಿಯುಂಟು ಮಾಡಿ, ತೇಜೋವಧೆ ಮಾಡುತ್ತಿದ್ದ ಇಬ್ಬರನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಗೊರವನಗುಡ್ಡ ತಾಂಡಾದ ಸುರೇಶ ಲಂಬಾಣಿ ಹಾಗೂ ದೊಂಬರಹಳ್ಳಿ ತಾಂಡಾದ ಜಯಕುಮಾರ್ ಬಂಧಿತರು.
ಇದನ್ನೂ ಓದಿ: ಕತ್ತು ಹಿಸುಕಿ, ಮಾರಕಾಸ್ತ್ರದಿಂದ ಹೊಡೆದು ಯುವಕನ ಕೊಲೆ; ಮೂವರು ಆರೋಪಿಗಳನ್ನ ಬಂಧಿಸಿದ ಪೊಲೀಸರು
ಏ.16ರಂದು ದಾವಣಗೆರೆ ತಾಲ್ಲೂಕಿನ ಯರಗುಂಟೆ ಗ್ರಾಮದ ಬಳಿ ಈ ಇಬ್ಬರು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ಬಂಧಿಸಿ ಮೊಬೈಲ್ ಜಪ್ತಿ ಮಾಡಿ ಪರಿಶೀಲಿಸಿದಾಗ ಈ ವಿಷಯ ಪತ್ತೆಯಾಗಿದೆ. ಇವರಿಬ್ಬರೂ ‘ಸೆಕೆಂಡ್ ಮ್ಯಾರೇಜ್ ಮ್ಯಾಟ್ರಿಮೋನಿ ಕನ್ನಡ’ ಚಾನಲ್‌ನಲ್ಲಿ ಹೆಚ್ಚಿನ ನೋಡುಗರನ್ನು (ವೀವರ್ಸ್) ಗಳನ್ನು ಗಳಿಸಿ ಹಣ ಸಂಪಾದನೆ ಉದ್ದೇಶದಿಂದ ಈ ಕೆಲಸ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ಡಿಸಿಆರ್‌ಬಿ ಡಿವೈಎಸ್ಪಿ ರೋಷನ್ ಜಮೀರ್ ಅವರ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆಯ ಪಿಐ ಮಂಜುನಾಥ್ ಬಿ ಹಾಗೂ ತಂಡ ದಾಳಿ ನಡೆಸಿ 5,500 ಮೌಲ್ಯದ 280 ಗ್ರಾಂ ಒಣ ಗಾಂಜಾವನ್ನು ವಶಪಡಿಸಿಕೊಂಡಿದೆ. ಆರೋಪಿಗಳ ಪತ್ತೆ ಕಾರ್ಯದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಸಿಬ್ಬಂದಿ ಗೋವಿಂದರಾಜ್, ಲೋಹಿತ್, ಕೊಟ್ರೇಶ್, ಉಮೇಶ್, ಲಿಂಗರಾಜು ಭಾಗವಹಿಸಿದ್ದರು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ